Friday, 7th August 2020

 ಐಟಿ ಜಾಲದಲ್ಲಿ ಪರಂ

ಕಾಂಗ್ರೆೆಸ್ ನಾಯಕರ ಮೇಲಿನ ಐಟಿ ದಾಳಿ ಮುಂದುವರಿದಿದ್ದು, ಮಾಜಿ ಡಿಸಿಎಂ ಪರಮೇಶ್ವರ, ಕಾಂಗ್ರೆೆಸ್ ನಾಯಕ ಜಾಲಪ್ಪ ಅವರ ನಿವಾಸಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ ಅವರ ಮಾಲೀಕತ್ವದ ಸಿದ್ಧಾಾರ್ಥ ಶಿಕ್ಷಣ ಸಂಸ್ಥೆೆ, ಬೆಂಗಳೂರಿನ ನಿವಾಸ, ಅವರ ಸಹೋದರನ ನಿವಾಸ ಸೇರಿದಂತೆ ಅನೇಕ ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾಾರೆ. ಕೋಲಾರದಲ್ಲಿರುವ ಆರ್.ಎಲ್.ಜಾಲಪ್ಪ ಅವರ ನಿವಾಸ ಮತ್ತು ಕಚೇರಿ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆ ಸಂಗ್ರಹ ಮಾಡಿದ್ದಾಾರೆ. ಒಟ್ಟು 7 ಅಧಿಕಾರಿಗಳ ತಂಡ ಪರಮೇಶ್ವರ ಒಡೆತನದ ಸಿದ್ಧಾಾರ್ಥ ಶಿಕ್ಷಣ ಸಂಸ್ಥೆೆಗಳು, ಎಂಜಿನಿಯರಿಂಗ್, ಪದವಿ ಕಾಲೇಜು, ನೆಲಮಂಗಲದ ಸಿದ್ಧಾಾರ್ಥ ಮೆಡಿಕಲ್ ಕಾಲೇಜುಗಳ ಮೇಲೆ ದಾಳಿ ನಡೆಸಿದೆ.

ಸಿದ್ಧಾರ್ಥ ಶಿಕ್ಷಣ ಸಂಸ್ಥೆೆಯಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟು ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರಕಾರಿ ಸೀಟ್ ಹೊರತುಪಡಿಸಿ ಮ್ಯಾಾನೇಜ್‌ಮೆಂಟ್ ಕೋಟಾ ಇರುತ್ತದೆ. ಈ ಸೀಟ್‌ಗಳಿಗೆ ಕಾಲೇಜುಗಳು ಶುಲ್ಕ ವಿಧಿಸಬಹುದಾಗಿದ್ದು, ಇದರಲ್ಲಿ ಕೋಟ್ಯಂತರ ರು. ಅಕ್ರಮ ನಡೆದಿದೆ. ಅಷ್ಟೇೇ ಅಲ್ಲದೇ ತೆರಿಗೆ ಮರೆಮಾಚಲು ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ ಎನ್ನುವ ಆರೋಪದ ಹಿನ್ನೆೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

 

ಬಿಜೆಪಿ ದ್ವೇಷ ರಾಜಕಾರಣ: ಪ್ರತಿಭಟನೆ

ಬಿಜೆಪಿ ದ್ವೇಷದ ರಾಜಕೀಯದ ಭಾಗವಾಗಿ ಐಟಿ ದಾಳಿ ಮಾಡಿಸಿದೆ ಎಂದು ಆರೋಪಿಸಿ ದಲಿತ ಸೇನೆ ಸಂಘಟನಾಕಾರರು ಹಾಗೂ ಮಾಜಿ ಡಿಸಿಎಂ ಪರಮೇಶ್ವರ ಬೆಂಬಲಿಗರು ತುಮಕೂರಿನ ಸಿದ್ಧಾಾರ್ಥ ಎಂಜಿನಿಯರಿಂಗ್ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿ, ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆೆಸ್ ಮುಖಂಡರ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ ನಡೆಸುತ್ತಿಿರುವುದು ಖಂಡನೀಯ ಎಂದು ಜಿಲ್ಲಾಾ ಕಾಂಗ್ರೆೆಸ್ ಅಧ್ಯಕ್ಷ ರಾಮಕೃಷ್ಣ ಆಕ್ರೋೋಶ ವ್ಯಕ್ತಪಡಿಸಿದರು. ಈ ಬಗ್ಗೆೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ನಡೆದ ಅಧಿವೇಶನದಲ್ಲಿ ನೆರೆ ಪರಿಹಾರ ಕುರಿತಂತೆ ಯಾವುದೇ ವಿಷಯ ಪ್ರಸ್ತಾಾಪಿಸದಂತೆ ತಡೆಯುವ ಉದ್ದೇೇಶದಿಂದ ಮತ್ತು ದಿಕ್ಕು ತಪ್ಪಿಿಸುವ ಉದ್ದೇಶದಿಂದ ಈ ರೀತಿ ಐಟಿ ದಾಳಿ ನಡೆಸಲಾಗುತ್ತಿಿದೆ ಎಂದು ಆರೋಪಿಸಿದರು.

ಪರಮೇಶ್ವರ ಅವರಿಂದ ಮಾಹಿತಿ

ಐಟಿ ದಾಳಿ ವೇಳೆ ಕೊರಟಗೆರೆಯಲ್ಲಿದ್ದ ಮಾಜಿ ಡಿಸಿಎಂ ಪರಮೇಶ್ವರ ಅವರಿಂದ ಅಧಿಕಾರಿಗಳು ಸ್ಥಳಕ್ಕೆೆ ಆಗಮಿಸಿ ಮಾಹಿತಿ ಪಡೆದುಕೊಂಡರು. ಕೊರಟಗೆರೆ ಹೊರವಲಯದ ಜಂಪೇನಹಳ್ಳಿಿ ಕೆರೆ ಕೊಡಿ ಬಿದ್ದ ಹಿನ್ನೆೆಲೆಯಲ್ಲಿ ಬಾಗಿನ ಅರ್ಪಿಸುವ ಸಲುವಾಗಿ ಕೊರಟಗೆರೆಗೆ ಆಗಮಿಸಿದ ಮಾಜಿ ಉಪಮುಖ್ಯಮಂತ್ರಿಿ ಡಾ. ಜಿ.ಪರಮೇಶ್ವರ ಅವರನ್ನು, ಇನೋವಾ ಕಾರಿನಲ್ಲಿ ಬಂದ ಇಬ್ಬರು ಐಟಿ ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆೆ ಕೆರೆದುಕೊಂಡು ಹೋಗಿ ವಿಚಾರಣೆ ನಡೆಸಿದರು. ಅರ್ಧ ಗಂಟೆಯ ವಿಚಾರಣೆ ನಂತರ ಪರಮೇಶ್ವರ ಅವರ ಕಾರಿನಲ್ಲಿಯೇ ಒಬ್ಬ ಐಟಿ ಅಧಿಕಾರಿ ಕುಳಿತುಕೊಂಡು ಬೆಂಗಳೂರಿಗೆ ನಿವಾಸಕ್ಕೆೆ ಕರೆದುಕೊಂಡು ಹೋದರು.

 

ಜಾಲಪ್ಪ ಮೆಡಿಕಲ್ ಕಾಲೇಜ್‌ಗೆ ಐಟಿ ಶಾಕ್
ಕೇಂದ್ರ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಒಡೆತನದ ಇಲ್ಲಿನ ದೇವರಾಜ ಅರಸ್ ಮೆಡಿಕಲ್ ಕಾಲೇಜ್ ಹಾಗೂ ಸಂಬಂಧಿಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಮುಂಜಾನೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. 10 ಅಧಿಕಾರಿಗಳ ತಂಡವು ಗುರುವಾರ ಮುಂಜಾನೆ 5.30ಕ್ಕೆೆ ಎರಡು ಕಾರುಗಳಲ್ಲಿ ಆಗಮಿಸಿ ದಿಢೀರ್ ಎಂದು ಆಸ್ಪತ್ರೆೆ, ಕಾಲೇಜು ಹಾಗೂ ಗೆಸ್‌ಟ್‌ ಹೌಸ್‌ಗಳ ಮೇಲೆ ದಾಳಿ ನಡೆಸಿತು. ಹಣಕಾಸು ವ್ಯವಹಾರ, ಆದಾಯ ತೆರಿಗೆ ಪಾವತಿ ಕುರಿತಂತೆ ಮಾಹಿತಿ ಪಡೆದುಕೊಂಡಿದ್ದು, ತಡರಾತ್ರಿಿಯವರೆಗೂ ಪರಿಶೀಲನೆ ಮುಂದುವರಿದಿತ್ತು.

ಆಡಳಿತ ಕಚೇರಿ ವಶಕ್ಕೆೆ ಪಡೆದು ತಪಾಸಣೆ ಆರಂಭಿಸಿದ್ದು, ಕಂಪ್ಯೂೂಟರ್ ಡಾಟಾ ಮಾಹಿತಿ ಪಡೆದುಕೊಂಡಿದ್ದಾಾರೆ. ಅತಿಥಿ ಗೃಹದಲ್ಲಿದ್ದ ಆರ್.ಎಲ್.ಜಾಲಪ್ಪ ಅವರನ್ನು ಭೇಟಿ ಮಾಡಿದ ಅಧಿಕಾರಿಗಳು ವಿಚಾರಣೆ ನಡೆಸಿದರು. ಅಧಿಕಾರಿಗಳು ಕೇಳಿದ ಪ್ರಶ್ನೆೆಗಳಿಗೆ 95 ವರ್ಷದ ಜಾಲಪ್ಪ ಅವರು ಉತ್ತರಿಸಲು ವಿಫಲರಾದರು. ಕಿವಿ ಮತ್ತು ಕಣ್ಣು ಅಷ್ಟಾಾಗಿ ಸ್ಪಂದಿಸದ ಕಾರಣ ಅಧಿಕಾರಿಗಳ ಯಾವ ಪ್ರಶ್ನೆೆಗೂ ಉತ್ತರಿಸದ ಜಾಲಪ್ಪ ಅವರು ಮೌನಕ್ಕೆೆ ಶರಣಾಗಿದ್ದರು. ಐಟಿ ದಾಳಿ ಕುರಿತ ಪತ್ರಕರ್ತರ ಪ್ರಶ್ನೆೆಗಳಿಗೂ ಉತ್ತರಿಸಲು ನಿರಾಕರಿಸಿದರು. ಕಾಲೇಜಿನ ಉಸ್ತುವಾರಿ ಜಾಲಪ್ಪ ಪುತ್ರ ರಾಜೇಂದ್ರ ಅವರ ಕ್ಯಾಾಬೀನ್ ಬೀಗದ ಕೈ ದೊಡ್ಡಬಳ್ಳಾಾಪುರದಲ್ಲಿದ್ದ ಕಾರಣ ಅಧಿಕಾರಿಗಳೇ ಅಲ್ಲಿಗೆ ತೆರಳಿ ಕೀ ತಂದು ಆಫೀಸ್ ತೆರೆದು ಪರಿಶೀಲನೆ ನಡೆಸಿದರು. ದಾಳಿಯಿಂದಾಗಿ ಬಹುತೇಕ ಕಡೆ ಪ್ರವೇಶ ನಿರಾಕರಿಸಿದ ಕಾರಣ ರೋಗಿಗಳು ಹಾಗೂ ವೈದ್ಯಕೀಯ ವಿದ್ಯಾಾರ್ಥಿಗಳಿಗೆ ತೊಂದರೆ ಆಯಿತು. ಪೊಲೀಸರು ಬಿಗಿ ಬಂದೋಬಸ್‌ತ್‌ ಕೈಗೊಂಡಿದ್ದು, ಊಟವನ್ನೂ ಅಲ್ಲಿಗೆ ತರಿಸಿಕೊಂಡು ಸತತವಾಗಿ ತಪಾಸಣೆ ನಡೆಸುತ್ತಿಿದ್ದಾಾರೆ. ಕಾಲೇಜಿನ ಉನ್ನತ ಅಧಿಕಾರಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿದ್ಧಾರ್ಥ ಶಿಕ್ಷಣ ಸಂಸ್ಥೆೆಗಳ ಮೇಲೆ ಐಟಿ ದಾಳಿ ನಡೆದಿರುವ ಮಾಹಿತಿ ಬಂದಿದೆ. ಇದಕ್ಕೆೆ ನಮ್ಮ ಆಕ್ಷೇಪವಿಲ್ಲ. ಕಾನೂನು ನಿಯಮಬಾಹಿರವಾಗಿ ಏನಾದರೂ ನಡೆದಿದ್ದರೆ ಅಧಿಕಾರಿಗಳು ಕ್ರಮ ಜರುಗಿಸಲಿ ನಮ್ಮ ಅಭ್ಯಂತರವಿಲ್ಲ.
ಡಾ. ಜಿ.ಪರಮೇಶ್ವರ, ಮಾಜಿ ಡಿಸಿಎಂ

Leave a Reply

Your email address will not be published. Required fields are marked *