Saturday, 10th April 2021

ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ್ ಕಶ್ಯಪ್ , ವಿಕಾಸ್ ಬಹ್ಲ್’ಗೆ ಐಟಿ ’ಬಿಸಿ’

ನವದೆಹಲಿ : ನಟ ತಾಪ್ಸಿ ಪನ್ನು ಮತ್ತು ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ , ವಿಕಾಸ್ ಬಹ್ಲ್ ಅವರ ಆಸ್ತಿಪಾಸ್ತಿಗಳ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.

ಚಿತ್ರ ನಿರ್ಮಾಪಕ ವಿಕಾಸ್ ಬಹ್ಲ್ ಆಸ್ತಿಗಳನ್ನು ಸಹ ಶೋಧಿಸಲಾಗುತ್ತಿದೆ. ಮುಂಬೈ ಮತ್ತಿತರ ಕಡೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ಶೋಧಗಳು ಫ್ಯಾಂಟಮ್ ಫಿಲ್ಮ್ಸ್ ಗೆ ಸಂಬಂಧಿಸಿವೆ.

ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಫ್ಯಾಂಟಮ್ ಚಿತ್ರಗಳಲ್ಲಿ ನಟಿಸಿದ್ದಾರೆ. ತೆರಿಗೆ ವಂಚನೆ ಪ್ರಕರಣದಲ್ಲಿ ತಾಪ್ಸಿ, ಅನುರಾಗ್ ಮತ್ತು ವಿಕಾಸ್ ಅವರ ಆಸ್ತಿ ಮೇಲೆ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *