Monday, 13th July 2020

ಜಗತ್ತಿನ ಒಂಬತ್ತು ಪರಮಪಾತಕಿಗಳು

ಟಿ. ದೇವಿದಾಸ್

ವಿಶ್ವದ ಮಹಾನ್ ನಾಯಕರ ಬಗ್ಗೆೆ ತಕ್ಕಮಟ್ಟಿಿನ ಜ್ಞಾನ ಎಲ್ಲರಲ್ಲೂ ಇರುತ್ತದೆ. ಅಂತೆಯೇ ರಾಜ ಮಹಾರಾಜರ ವೈಭವವನ್ನು ಹಾಡಿಹೊಗಳುವ ಚರಿತ್ರೆೆಯ ಬಗ್ಗೆೆಯೂ. ಅವರನ್ನು, ಅವರ ಮಹಿಮೆಯನ್ನು ವೈಭವೀಕರಿಸಿ ಪಂಡಿತೋತ್ತಮರ ಬಗ್ಗೆೆಯೂ ಕೇಳಿರುತ್ತೇವೆ. ಆದರೆ ಜಗದ್ವಿಿಖ್ಯಾಾತ ಕೇಡಿಗರ, ರಕ್ಕಸ ರೂಪದ ಮನುಷ್ಯರ ಬಗ್ಗೆೆ ತಿಳಿದಿರುವುದು ಕಡಿಮೆಯೇ. ಅಂಥವರ ಹೆಸರು, ದೇಶ, ಕುಕೃತ್ಯಗಳ ಬಗ್ಗೆೆ ಮೇಲ್ನೋೋಟದ ವಿಚಾರಗಳು ಮಾತ್ರ ಗೊತ್ತಿಿರುತ್ತದೆ. ಆದರೆ ಮಾನವೀಯತೆ, ಕರುಣೆ ಅನುಕಂಪ ಎಂಬ ಪದದ ಅರ್ಥವೇ ಗೊತ್ತಿಿಲ್ಲದ ನರರೂಪದ ರಾಕ್ಷಸರ ಬಗ್ಗೆೆ ಅಷ್ಟಾಾಗಿ ಗೊತ್ತಿಿರುವುದಿಲ್ಲ. ನಾನೀಗ ಹೇಳಹೊರಟಿರುವುದು ಅಂಥ ಘಟಾನುಘಟಿ ಅಮಾನುಷರೂಪೀ ರಕ್ಕಸರ ಬಗ್ಗೆೆ. ಇವರು ಕೇವಲ ರಕ್ಕಸರಲ್ಲ, ಈ ಜಗತ್ತಿಿನ ಪರಮ ಪಾತಕಿಗಳು ಕೂಡ.

ತೈಮೂರ್ ಲಂಗ್: (1336-1405)

ಮಂಗೋಲಿಯಾದ ದೊರೆಯೀತ. ತುರ್ಕಿ ಬುಡಕಟ್ಟಿಿಗೆ ಸೇರಿದವನೀತ. ಕುಂಟನಾಗಿದ್ದರಿಂದ ಇವನಿಗೆ ಈ ಹೆಸರು ಬಳಕೆಯಲ್ಲಿದೆ. ರಷ್ಯಾಾದ ಟ್ರಾಾನ್ಸ್ ಆಕ್ಸಿಿಯಾನದ ಕೆಷ್ ಎಂಬ ಹಳ್ಳಿಿಯಲ್ಲಿ. ಮಂಗೋಲ್ ವಂಶಸ್ಥ. ತರಗಾಯ್ ಇಸ್ಲಾಾಂ ಮತವನ್ನು ಸ್ವೀಕರಿಸಿದ್ದ. ಜಗತ್ತನ್ನೇ ಇಸ್ಲಾಾಂ ಮತಕ್ಕೆೆ ಶರಣಾಗುವಂತೆ ಮಾಡುವ ಆಸೆಯನ್ನೂ ಹೊಂದಿದ್ದ. ಜೆಂಗಿಸ್ ಖಾನ್ ಕಟ್ಟಿಿದ ಸಾಮ್ರಾಾಜ್ಯ ಅನೇಕ ಸಣ್ಣಪುಟ್ಟ ರಾಜ್ಯಗಳಾಗಿ ಒಡೆದುಹೋಗಿತ್ತು. ಈ ಸನ್ನಿಿವೇಶ ತೈಮೂರಿನಿಗೆ ಹೇಳಿ ಮಾಡಿಸಿದಂತಿತ್ತು. 1336ರಿಂದ 1405ರವರೆಗೆ ಇವ ಬದುಕಿದ್ದ. ಓದಿಕೊಂಡವರಿಗೆ ಇವನ ಬಗ್ಗೆೆ, ಈತನ ಕ್ರೌೌರ್ಯದ ಬಗ್ಗೆೆ ವಿವರಿಸಬೇಕಿಲ್ಲ. ಪುಟದಷ್ಟು ಇವನ ದಂಡಯಾತ್ರೆೆಯ ವಿವರಗಳಿವೆ. ಯಾವ ರಾಕ್ಷಸನನ್ನೂ ನಾಚಿಸುವಂಥ ಹಿಂಸಾಪ್ರವೃತ್ತಿಿ ಇವನದು. ಈತನ ಹುಟ್ಟು ಸ್ವಭಾವದಲ್ಲೇ ಅನುಮಾನ ಎಂಬ ಭೂತದ ರೋಗವಾಗಿ ಅಂಟಿಕೊಂಡಿತ್ತು. ತನ್ನ ಸುತ್ತಲಿನ ರಾಜರುಗಳು, ಅಧೀನ ರಾಜರುಗಳ ಮೇಲೆ ಮಿತಿಯಿಲ್ಲದ ಅನುಮಾನ ಇವನಲ್ಲಿ ಮನೆಮಾಡಿತ್ತು. ರಾತ್ರೋೋರಾತ್ರೆೆ ತನ್ನ ಮೇಲೆ ಯಾರಾದರೂ ದಾಳಿ ಮಾಡಿ ದಂಗೆಯೆಬ್ಬಿಿಸಬಹುದೆಂಬ ಆತಂಕದ ಭಯವಿದ್ದ ಇವನಲ್ಲಿ ಅಸೂಯೆ ಸಹಜವೆಂಬಂತೆ ಹುಟ್ಟಿಿಕೊಂಡಿತ್ತು. ತನ್ನ ಅಪಾರ ಕಟ್ಟಿಿಕೊಂಡು ಈತ ಅವರ ಮೇಲೆ ಯುದ್ಧ ಮಾಡುತ್ತಿಿದ್ದ. ಎದುರಾಗಿ ಬಂದವರನ್ನು ಅಮಾನುಷವಾಗಿ ಕೊಂದು ಮುಗಿಸುತ್ತಿಿದ್ದ. ಅಕಸ್ಮಾಾತ್ ಇವನ ಸೆರೆಯಾಗಿದ್ದು ಗೊತ್ತಾಾಗಿಬಿಟ್ಟರೆ ಶತ್ರುಗಳು ಎದೆಯೊಡೆದು ಸತ್ತುಹೋಗುತ್ತಿಿದ್ದರು.
ಸಮರ್ ಖಂಡ್ ಅನ್ನು ತನ್ನ ರಾಜಧಾನಿಯನ್ನಾಾಗಿ ಮಾಡಿಕೊಳ್ಳಬೇಕೆಂಬ ಮಹದಾಸೆಯಿದ್ದ ಈತನಿಗೆ ಅಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಗೊತ್ತಾಾಗಿಯೂ ಆ ಕಾರ್ಯಕ್ಕೆೆ ಮುಂದುವರೆದಿದ್ದ. ಇದಕ್ಕಾಾಗಿ ತನ್ನ ಜೊತೆಗಾರರಲ್ಲಿ ಅಭಿಪ್ರಾಾಯ ಕೇಳುತ್ತಿಿದ್ದ. ಅವರಿಂದ ಪ್ರಾಾಮಾಣಿಕ ಉತ್ತರ ಬಯಸುತ್ತಿಿದ್ದ. ದೊರೆಯೇ ಕೇಳುತ್ತಿಿದ್ದಾನೆಂದುಕೊಂಡು ಇದ್ದುದನ್ನು ಇದ್ದ ಹಾಗೇ ಅವರೆಲ್ಲರೂ ಸರ್ಮ ಖಂಡ ಅಂಥ ಸುಂದರ ನಗರವೇನಲ್ಲ ಅಂದಾಕ್ಷಣ ತೈಮೂರನ ಮನಸ್ಸು ಕ್ಷೋಭೆಗೊಳಗಾಗುತ್ತಿಿತ್ತು. ವ್ಯಗ್ರನಾಗುತ್ತಿಿದ್ದ. ಮನಸಿನಲ್ಲೇ ಒಬ್ಬ ರಕ್ಕಸ ಸ್ವರೂಪ ಹುಟ್ಟಿಿಕೊಳ್ಳುತ್ತಿಿದ್ದ. ಬರೋಬ್ಬರಿ 69 ವರ್ಷಗಳ ಕಾಲ ಮಂಗೋಲಿಯಾ ಇವನ ಕೈಲಿತ್ತು. ದೆಹಲಿ ಸುತ್ತಮುತ್ತಲಿನ ಪ್ರಾಾಂತ್ಯಗಳ 80ಸಾವಿರಕ್ಕೂ ಹೆಚ್ಚು ಜನರನ್ನು ಕ್ರೂರವಾಗಿ ಕೊಂದಿದ್ದ. ತನ್ನಿಿಂದ ಸತ್ತವರ ತಲೆಬುರುಡೆಗಳನ್ನು ಅರಮನೆಯ ಗೋಪುರಗಳ ಮೇಲೆ ತೂಗುಹಾಕಿ ಸಾರ್ವಜನಿಕರ ಪ್ರದರ್ಶನಕ್ಕಿಿಡುತ್ತಿಿದ್ದ. ಈ ಬಗೆಯ ಅಮಾನುಷ ಅಸಹನೆಯ ಅವನಲ್ಲಿತ್ತು.

2. ಇವಾನ್-* ಐ್ಖ: (1547-1584)
1547ರಲ್ಲಿ ರಷ್ಯಾಾದ ಪ್ರಥಮ ಚಕ್ರವರ್ತಿ. ಸಂಕೀರ್ಣ ಸ್ವಭಾವದ ಮನುಷ್ಯ. ಬುದ್ದಿವಂತ, ದೈವಭಕ್ತ, ಕವಿಯಾಗಿದ್ದ. ಕ್ರೈಸ್ತ ಮತದ ಕಡು ಸಂಪ್ರದಾಯಸ್ಥನಾಗಿದ್ದ. ಆದರೆ, ಮಾನಸಿಕವಾಗಿ ಸ್ಥಿಿಮಿತವಿಲ್ಲದವ. ಹಿರಿಯ ಮಗನನ್ನೇ ಕೊಂದ ಕೀರ್ತಿಯೂ ಇವನಿಗಿದೆ. ತನ್ನ ಸೊಸೆ ಉಟ್ಟ ಬಟ್ಟೆೆ ಸರಿಯಿಲ್ಲವೆಂದು ಹೊಡೆದಿದ್ದ. ಸುದೀರ್ಘ 37ವರ್ಷಗಳ ನಿರಂಕುಶ ದೊರೆ. ಈ ನಿರಂಕುಶ ಮತಿಗೆ ಸಾಮ್ರಾಾಜ್ಯ ವಿಸ್ತರಿಸುವ ಹಂಬಲ. ನಾನೇ ಮೇಲು ಎಂಬ ಅಹಂ. ನನ್ನ ಮಾತನ್ನು ಎಲ್ಲರೂ ಒಪ್ಪಬೇಕೆಂಬ ವಿಚಿತ್ರವಾದ ಹಠ. ಬಹು ಮುಂಗೋಪಿ. ಬಂದಾಗ ಮೈಮೇಲೆ ಪ್ರಜ್ಞೆಯೇ ಇಲ್ಲದೆ ಮನಬಂದಂತೆ ಆದೇಶಗಳನ್ನು ಹೊರಡಿಸುತ್ತಿಿದ್ದ. ತನ್ನೆೆದುರಿಗೆ ಎಲ್ಲವನ್ನೂ ಈಡೇರಿಸುವಂತೆ ಆಗ್ರಹಿಸುತ್ತಿಿದ್ದ. 1570ರಲ್ಲಿ ತನ್ನ ಹಿಂಬಾಲಕರ ತಂಡವೊಂದನ್ನು ಕಟ್ಟಿಿ ಅವರನ್ನು ಚಕ್ರವರ್ತಿಯ ಅಂಗರಕ್ಷಕರೆಂದು ಘೋಷಿಸಿಬಿಟ್ಟ. ಆಪ್ರಿಿ ಚಿಂಕಿ(ಟ್ಟಜ್ಚಿ್ಞಿಜಿಜಿ)ಗಳೆಂದು ಕರೆದ. ಇವರು ಚಕ್ರವರ್ತಿಯನ್ನು ಬಿಟ್ಟು ಬೇರೆಯವರೊಂದಿಗೆ ಮಾತಾಡುವಂತಿರಲಿಲ್ಲ. ಯಾರೂ ಅವರನ್ನು ಪ್ರಶ್ನಿಿಸುವಂತಿರಲಿಲ್ಲ. ಚಕ್ರವರ್ತಿಯ ವಿರೋಧಿಗಳನ್ನು ಮುಲಾಜಿಲ್ಲದೆ ಎಳೆದು ತಂದು ಚಿತ್ರಹಿಂಸೆ ನೀಡಿ ಕೊಂದು ಹಾಕುವುದೇ ಇವರ ಮುಖ್ಯ ಕರ್ತವ್ಯ. ಈ ನಿರಂಕುಶಿ ಅದ್ಯಾಾವ ಮಟ್ಟದ ಕ್ರೂರಿಯೆಂದರೆ, ತನ್ನ ಅಧಿಕಾರದಲ್ಲಿ 7 ವರ್ಷಗಳ ಸುದೀರ್ಘ ಅವಧಿಯನ್ನು ಆತ ಎದುರಾಳಿಗಳನ್ನು ಬಗ್ಗು ಬಡಿಯಲೆಂದೇ ವಿನಿಯೋಗಿಸಿ ಬಿಟ್ಟ. 1565 ರಿಂದ 1572ರ ಈ ಅವಧಿಯಲ್ಲಿ ಇವನ ಸಾಮ್ರಾಾಜ್ಯದಲ್ಲಿ ಅದೆಷ್ಟೋೋ ಸಾವಿರ ಮಂದಿ ಅನಾಥರಂತೆ ಸತ್ತುಹೋದರು.
ಇವನೆಂಥ ತಿಕ್ಕಲು ಆಸಾಮಿಯೆಂದರೆ, ಸಿಟ್ಟಿಿನ ಭರದಲ್ಲಿ ತನ್ನ ಉತ್ತರಾಧಿಕಾರಿಯಾಗಬೇಕಾದ ತನ್ನ ಮಗನನ್ನೇ ಭೀಕರವಾಗಿ ಮನೆಯಲ್ಲೇ ಕೊಂದುಬಿಟ್ಟ. ತನ್ನ ಈ ಹೇಯಕೃತ್ಯಕ್ಕೆೆ ಅನಂತರ ನೂರಾರು ಜನರ ಸಮ್ಮುಖದಲ್ಲಿ ಕಾಟಾಚಾರಕ್ಕೆೆ ಪಶ್ಚಾಾತ್ತಾಾಪದ ಮಾತುಗಳನ್ನಾಾಡುತ್ತಿಿದ್ದ. ಇದಾಗಿ ಸ್ವಲ್ಪವೇ ಕ್ಷಣದಲ್ಲಿ ಯಾವುದೋ ಕಾರಣಕ್ಕಾಾಗಿ ಈ ಚಕ್ರವರ್ತಿಗೆ ದಿರ್ಢೀ ಸಿಟ್ಟು ಬರುತ್ತಿಿತ್ತು. ತನ್ನೆೆದುರು ನಿಂತು ವಾದಿಸುವವರನ್ನು ಕೊಂದು ಮುಗಿಸುತ್ತಿಿದ್ದ ಕ್ಷಣದಲ್ಲಿ! ಎಲ್ಲೆ ಮೀರಿದ ರಾಕ್ಷಸನಂತೆ ಕ್ರೌೌರ್ಯವನ್ನು ತೋರುತ್ತಿಿದ್ದ ಇವಾನ್ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಇತಿಹಾಸ ಅಭಿಪ್ರಾಾಯ ಪಟ್ಟಿಿದ್ದಾರೆ. ಅದು ಕಾರಣವಾಗಿ ಅವನಿಂದ ಈ ರೀತಿಯ ಅನಾಗರಿಕ ವರ್ತನೆ ವ್ಯಕ್ತವಾಗುತ್ತಿಿತ್ತು ಎನ್ನುತ್ತಾಾರೆ. ಇವನ ಸಾವು ಅತ್ಯಂತ ವಿಚಿತ್ರವಾಗಿದೆ. ಚೆಸ್ ಆಡುವಾಗ ಪಾರ್ಶ್ವವಾಯು ಆಗಿ 28ನೆಯ ಮಾರ್ಚ್ 1584 ರಲ್ಲಿ ಸತ್ತನೆಂದು ಇತಿಹಾಸ ಹೇಳುತ್ತದೆ. ಎಂಟು ಹೊಂದಿದ್ದ ಮಹಾಪುರುಷನೀತ.

3. ಜೋಸೆಫ್ ಸ್ಟಾಾಲಿನ್:

(1922-1953) 1929 ರಿಂದ 1952 ರವರೆಗಿನ ರಷ್ಯಾಾದ ಏಕಮೇವಾದ್ವಿಿತೀಯ ನಾಯಕ. ರಷ್ಯಾಾದ ಗೋರಿಯೆಂಬಲ್ಲಿ ಬಡ ಮನೆತನದಲ್ಲಿ ಹುಟ್ಟಿಿದವ. ಕಮ್ಯುನಿಸ್‌ಟ್‌ ಪಾರ್ಟಿ ಸದಸ್ಯ. ಇವನನ್ನು ಜನ ವೀರ, ಧೀರ, ಹೊಸತನದ ಅಧಿಕಾರದ ಹರಿಕಾರ ಎಂದೇ ಬಣ್ಣಿಿಸಿದ್ದಾರೆ. ಸೋವಿಯತ್ ರಷ್ಯಾಾವನ್ನು ಒಂದುಗೂಡಿಸಿದ್ದು ಇವನ ಹಿರಿಮೆ. ನಂಬರ್ ವನ್ ರಾಜನೀತಿಜ್ಞ. ಇವನ ಅಧಿಕಾರದ ಅವಧಿಯಲ್ಲೇ ಸಾಮಾಜಿಕ ಕ್ರಾಾಂತಿಯಾಯಿತು ಎಂಬಂಥ ಸುಳ್ಳುಸುಳ್ಳೇ ಸಾಲುಗಳನ್ನು ನಾವು ಚರಿತ್ರೆೆಯಲ್ಲಿ ಓದಿದ್ದೇವೆ. ಬದಿಗಿಟ್ಟು ಈತನ ದರ್ಬಾರಿನ ವೈಭವವನ್ನು ಸ್ವಲ್ಪ ನೋಡೋಣ.
ರಷ್ಯಾಾದ ಎಲ್ಲ ರಂಗದಲ್ಲಿಯೂ ದಿಢೀರ್ ತರಬೇಕೆಂದು ಸ್ಟಾಾಲಿನ್ ಬಯಸಿದ್ದು ನಿಜವೇ ಆದರೂ ಇವನೊಳಗೆ ಒಬ್ಬ ಭಯಾನಕ ಕ್ರೂರಿಯಡಗಿದ್ದ. ಬಹುಮಂದಿಗೆ ಈತನ ಅಂತರಂಗದ ಬಗ್ಗೆೆ ಗೊತ್ತೇ ಇರಲಿಲ್ಲ. ಬಹಿರಂಗ ವೇದಿಕೆಯಲ್ಲಿ ನಿಂತು ಭಾಷಣ ಮಾಡುತ್ತಿಿದ್ದ ಸ್ಟಾಾಲಿನ್ ತನ್ನ ತತ್ತ್ವ, ಸಿದ್ಧಾಾಂತವನ್ನು ಒಪ್ಪದವರನ್ನು ಸ್ವಲ್ಪವೂ ಕರುಣೆಯಿಲ್ಲದೆ ಸೆರೆಗೆ ನೂಕುತ್ತಿಿದ್ದ. ಕೈದಿಗಳನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿಿದ್ದ. ತನಗೆ, ತನ್ನ ಆಡಳಿತದ ಬಗ್ಗೆೆ ಟೀಕಿಸಿದವರಿಗೆ ದೇಶಭ್ರಷ್ಟ ಎಂದು ಹಚ್ಚುತ್ತಿಿದ್ದ. ಅವರ ಆಸ್ತಿಿ ಪಾಸ್ತಿಿ, ಮನೆಮಠಗಳನ್ನು ವಶಪಡಿಸಿಕೊಂಡು ದೇಶಭ್ರಷ್ಟಗೊಳಿಸುತ್ತಿಿದ್ದ. ಹೀಗೆ 20 ದಶಲಕ್ಷಕ್ಕೂ ಮಿಕ್ಕಿಿದ ಜನರನ್ನು ದೇಶದಿಂದಲೇ ಹೊರಹಾಕಿದ ಮಹಾಪುರುಷನೀತ. ಇವನ ಆಡಳಿತವನ್ನು ಟೀಕಿಸಿದರೆಂಬ ಒಂದೇ ಒಂದು ಕಾರಣಕ್ಕೆೆ ಜೀವಮಾನ ಪರ್ಯಂತ 10ದಶಲಕ್ಷಕ್ಕೂ ಹೆಚ್ಚು ಮಂದಿಯನ್ನು ಕೈದಿಗಳನ್ನಾಾಗಿ ಮಾಡಿದ. ಅವರೆಲ್ಲ ಕೊನೆಯಲ್ಲಿ ಅನಾಥರಂತೆ ಸತ್ತುಹೋದರು. ಇತಿಹಾಸಕಾರರಿಂದ ಉಕ್ಕಿಿನಮನುಷ್ಯ ಎಂದೇ ಕರೆಸಿಕೊಂಡ ಸ್ಟಾಾಲಿನ್ ಎಂಥ ಕಲ್ಲು ಹೃದಯದವನು ಎಂದರೆ ಅವನಿಂದಾಗಿ ಸತ್ತುಹೋದ ಅದೆಷ್ಟೋೋ ಜನರಿಗೆ ಅಂತ್ಯಸಂಸ್ಕಾಾರಕ್ಕೂ ಗತಿಯಿಲ್ಲದೆ ಹೋಯಿತು. ಚರಿತ್ರೆೆಯ ಕ್ರೌೌರ್ಯದ ಪುಟವೊಂದು ಇವನಿಂದ ಬರೆಯಲ್ಪಟ್ಟಿಿತು. ನಮ್ಮ ರಾಷ್ಟ್ರಪತಿ ರಾಧಾಕ್ರಷ್ಣನ್ ರಷ್ಯಾಾಕ್ಕೆೆ ಭೇಟಿ ಕೊಟ್ಟಿಿದ್ದು ಇವನ ಅವಧಿಯಲ್ಲೇ. ತನ್ನೊೊಳಗೂ ಮನುಷ್ಯತ್ವ ಇದೆಯೆಂದು ಕಂಬನಿಯಿಟ್ಟು ಅವರೊಂದಿಗೆ ಮಾತಾಡಿದವನೂ ಇವನೇ. ರಾಧಾಕ್ರಷ್ಣನ್ ಅವರು ಅವನ ಹೆಗಲ ಮೇಲೆ ಕೈಯಿಟ್ಟು, ಕಳಿಂಗ ಯುದ್ಧಾಾನಂತರ ಅಶೋಕನಂತ ನೀನು ಒಳ್ಳೆೆಯ ಮನುಷ್ಯನಾಗಬಹುದು ಎಂದಿದ್ದರು.

4. ಹಿಟ್ಲರ್:

(1889- 1945) ಹುಟ್ಟಿಿದ್ದು ಆಸ್ಟ್ರಿಿಯಾದ ಲಿಂಝ್ ನಲ್ಲಿ. ಸಮಸ್ತ ಮನುಕುಲ ಕಂಡ ಕ್ರೂರಿಯೆಂದರೆ ಕ್ರೂರಿಯೀತ. ಜಗತ್ತಿಿಗೇ ಅಮಾನುಷ ಪದವನ್ನು ಪರಿಚಯಿಸಿದವ. ನಿರ್ದಯ, ನಿಷ್ಠುರ ಸ್ವಭಾವಗಳಿಂದ ಜಗತ್ತನ್ನೇ ನಡುಗಿಸಿದವನು. ಜಗದ ಏಕೈಕ ಸಾರ್ವಭೌಮನಾಗಬೇಕೆಂಬ ಅದಮ್ಯ ಕನಸು ಕಂಡ ಇವನಿಮನದ ಪ್ರಪಂಚದ ಮಹಾಯುದ್ಧಗಳು ಸಂಭವಿಸಿದವು. ಅಮಾನವೀಯ ಮೌಲ್ಯಗಳ ಗುಣಗಳನ್ನು ಹೊಂದಿರುವ ಇವನಲ್ಲಿ ಮನುಷ್ಯತ್ವಕ್ಕೆೆ ಸ್ವಲ್ಪವೂ ಜಾಗವಿರಲಿಲ್ಲ. ಜರ್ಮನಿಗೆ ಮಾತ್ರವಲ್ಲ, ವಿಶ್ವಕ್ಕೆೆ ಸರ್ವಾಧಿಕಾರಿಯಾಗಬೇಕೆಂಬ ಮಹತ್ತ್ವಾಕಾಂಕ್ಷೆಯ ಹಿಟ್ಲರ್ ವೈಭವದ ದರ್ಬಾರು ನಡೆಸಿದ್ದು ಕೇವಲ 12 ವರ್ಷಗಳು ಮಾತ್ರ. ಈ ಕಿರು ಅವಧಿಯಲ್ಲೇ ಶತ ಸಹಸ್ರವರ್ಷಗಳವರೆಗೆ ಮನುಷ್ಯಸಂಕುಲವೇ ಮರೆಯಲಾಗದ ಬೀಭತ್ಸವೆನಿಸಿದ ಕ್ರೌೌರ್ಯವನ್ನು, ವಿರಾಟ್ ದರ್ಶನವನ್ನು ಪ್ರದರ್ಶಿಸಿಬಿಟ್ಟ ಭೂಪನಿವ. ಸಲಿಂಗಕಾಮಿ ಆಗಿದ್ದನೆನ್ನುವುದು ಬಹಿರಂಗವಾದ ಸತ್ಯ. ಇದನ್ನು ಅನುಮಾನಿಸಿದವರೂ ಇದ್ದಾರೆ. ಅದೇ ಸಮಯಕ್ಕೆೆ ಸಲಿಂಗಕಾಮಕ್ಕೆೆ ಅದೆಷ್ಟೋೋ ಜನರನ್ನು ಬಳಸಿಕೊಂಡ ನಿದರ್ಶನಗಳು ಚರಿತ್ರೆೆಯ ಪುಟಗಳಲ್ಲಿ ಕಾಣಸಿಗುತ್ತವೆ.
ಈ ಭೂಮಿಯಲ್ಲಿ ಜರ್ಮನ್ನರು ಮಾತ್ರ ಶ್ರೇಷ್ಠರು. ಮಿಕ್ಕವರು ಜರ್ಮನ್ನರ ಸೇವೆಗೆಂದೇ ಹುಟ್ಟಿಿದವರು ಎಂಬುದು ಕಠಿಣವಾದ ಧ್ಯೇಯವಾಗಿತ್ತು. ಯುದ್ಧದಲ್ಲಿ ಸೆರೆಸಿಕ್ಕವರನ್ನು ಚಿತ್ರ ವಿಚಿತ್ರವಾದ ಹಿಂಸೆಗೆ ಗುರಿಪಡಿಸಿ ವಿಕೃತಾನಂದವನ್ನೂ ಮನರಂಜನೆಯನ್ನೂ ಇವನು ಅನುಭವಿಸುತ್ತಿಿದ್ದನಂತೆ ಎಂದು ಇತಿಹಾಸ ಹೇಳುತ್ತದೆ. ತನ್ನ ಗುಲಾಮರನ್ನಾಾಗಿ ಅವರನ್ನು ಬಳಸಿಕೊಳ್ಳುತ್ತಿಿದ್ದ. ಈತನ ಅಧಿಕಾರದಲ್ಲಿ ಶತ ಹೆಣ್ಣುಮಕ್ಕಳ ಹತ್ಯೆೆಯಾಯಿತು. ಇವನಿಗೆ ಲೆಕ್ಕ ಸಿಗದಷ್ಟು ಸ್ತ್ರೀಯರನ್ನು ಮಾನಭಂಗ ಮಾಡಿದವನೀತ. ವ್ಯವಸ್ಥಿಿತವಾಗಿ ಮಹಾನಗರವನ್ನು ಲೂಟಿ ಇವನ ಕಾಲದಲ್ಲಿ ಆಗಿಹೋಯಿತು. ಜಗತ್ತು ಸೃಷ್ಟಿಿಯಾದ ದಿನದಿಂದ ಇಲ್ಲಿಯವರೆಗೆ ಹಿಟ್ಲರ್ನಂಥ ಮಹಾಧೂರ್ತ, ಕ್ರೂರಿ ಹುಟ್ಟಲಿಲ್ಲವೆಂದರೆ ಅತಿಶಯೋಕ್ತಿಿಯೆನಿಸುವುದಿಲ್ಲ. ಪುರಾಣಗಳಲ್ಲಿ ಓದುವ ನರಕಾಸುರ, ತಾರಕಾಸುರ, ಮಹಿಷಾಸುರರ ಸಾಲಿಗೆ ಇವನನ್ನು ಸೇರಿಸಬಹುದೇನೋ! ಯಾವ ರಕ್ಕಸನಿಗೂ ಇವನು ಸರಿಸಾಟಿಯಾದಾನು, ಮೀರಿದವನೂ ಆದಾನು ಎಂಬಷ್ಟು ಇವನ ಕ್ರೌೌರ್ಯದ ಪರಾಕಾಷ್ಠೆೆಯಿತ್ತು. ಹಿಟ್ಲರ್ ನೀಡುತ್ತಿಿದ್ದ ಹಿಂಸೆಯ ಶಿಕ್ಷೆಗಳು ನರಕದಲ್ಲೂ ಇರುವುದಿಲ್ಲವೆಂದು ಅನಿಸುತ್ತದೆ. ಇವನ ಜರ್ಮನಿ ಒಬ್ಬ ದೇಶಪ್ರೇಮಿಯನ್ನು ಕಳೆದುಕೊಂಡಿತು ಅಂತ ಜರ್ಮನಿಯ ಚರಿತ್ರೆೆಯಲ್ಲಿ ದಾಖಲಾಯಿತು. ಹಿಟ್ಲರನ ವೈಯಕ್ತಿಿಕ ಬದುಕಿನ ಕುರಿತು ಅನೇಕ ವಿಚಿತ್ರ ಸಂಗತಿಗಳು ಚಾಲ್ತಿಿಯಲ್ಲಿವೆ.

5. ಮಾವೋ-ತ್ಸೆೆ-ತುಂಗ್: (893-1976)
ಜಗತ್ತಿಿಗೆ ಸರ್ವಾಧಿಕಾರಿಯಾಗಲು ಹೊರಟಿರುವ ಚೀನಾದ ಮಹಾಪುರುಷನೀತ. ಚೀನಾ ಪಾಲಿಗೆ ಇವನು ಅವತಾರ ಪುರುಷನೂ ಮಹಾಪುರುಷನೂ ಆಗಿದ್ದಾನೆ. ಬಹು ದೊಡ್ಡ ಕನಸುಗಾರನಿವ. ಮಹಾನಾಯಕ ಕೂಡ. ಕ್ರಾಾಣ್ತಿಿಕಾರಿ, ಕವಿ, ರಾಜಕೀಯ ಸಿದ್ಧಾಾಂತವಾದಿ. ಪೀಪಲ್ಸ್ ರಿಪಬ್ಲಿಿಕ್ ಆಫ್ ಚೀನಾದ ಸಂಸ್ಥಾಾಪಕ. ಸಾಯುವವರೆಗೂ ಕಮ್ಯುನಿಸ್‌ಟ್‌ ಪಕ್ಷದ ಅಧ್ಯಕ್ಷನಾಗಿದ್ದ. ಸಾಧಿಸಿಯೇ ತೋರಿಸಿದ ಮಹಾ ಛಲದಂಕಮಲ್ಲ. ಚೀನಾದ ಕಮ್ಯುನಿಸ್ಟರಿಗೆ ಈತ ಸಾಕ್ಷಾತ್ ದೇವರೇ ಆಗಿದ್ದವ. ಇವ ಮಾತನ್ನು ವೇದವಾಕ್ಯ ಎಂದು ನಂಬಿ ಬಾಳಿದ ಅಸಂಖ್ಯ ಜನರಿದ್ದರು. 1949 ರಿಂದ 1976 ರವರೆಗೆ ಚೀನಾದ ನಿರಂಕುಶ ಸರ್ವಾಧಿಕಾರಿಯಾಗಿದ್ದ ಈ ಮಹಾಶಯನಿಗೆ ಅನುಯಾಯಿಗಳ ದೊಡ್ಡ ದಂಡೇ ಇತ್ತು. ಇಂದಿಗೂ ಮಾವೋವಾದಿಗಳು ಇದ್ದಾರೆ.
ಸ್ವದೇಶೀ ಉತ್ಪನ್ನಗಳ ಬಳಸಿ, ವಿದೇಶೀ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬ ಮಾತನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತಂದವನು ಈತ. ವಿದೇಶೀ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಿಯೇ ಬಿಟ್ಟಿಿದ್ದ. ಎಲ್ಲ ನಿರಂಕುಶ ಸರ್ವಾಧಿಕಾರಿಯಂತೆ ಇವನಿಗೂ ತಾನೇ ಅಧಿನಾಯಕ, ಸರ್ವಶ್ರೇಷ್ಠ, ಪ್ರಶ್ನಾಾತೀತ ಮಹಾನ್ ನಾಯಕನೆಂಬ ಅಹಂಕಾರವಿತ್ತು. ಈ ಅಹಂಕಾರದಿಂದಾಗಿ ಇವನು ಎಲ್ಲರನ್ನೂ, ಕೊನೆಯಲ್ಲಿ ತನ್ನ ನೆರಳನ್ನೂ ಅನುಮಾನಿಸುವ ಸ್ಥಿಿತಿಯನ್ನು ತಲುಪಿಬಿಟ್ಟಿಿದ್ದ. ಈ ಸ್ಥಿಿತಿಯಲ್ಲಿದ್ದಾಗಲೇ ತನ್ನ ಮೂಗಿನ ನೇರಕ್ಕೆೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿಿದ್ದ. ಅವುಗಳನ್ನು ಯಾರಾದರೂ ಟೀಕಿಸಿದರೆ ಸಾಕು, ಸಾವಿರಾರು ಮಂದಿಯ ಮುಂದೆಯೇ ಚಿತ್ರಹಿಂಸೆ ನೀಡುತ್ತಿಿದ್ದ. ಇಂಥ ದುರಹಂಕಾರಿಗೆ ಅದೇಕೋ ಕೈಗಾರಿಕಾ ಕ್ರಾಾಂತಿ ಮಾಡಿಬಿಡಬೇಕೆಂಬ ತಲುಬು ಹುಟ್ಟಿಿತು. ರಾಷ್ಟ್ರದಲ್ಲಿರುವ ಯವಕರು ಕಾರ್ಖಾನೆಗಳಲ್ಲಿ ಉದ್ಯೋೋಗ ಮಾಡಬೇಕೆಂದು ಫರ್ಮಾನು ಹೊರಡಿಸಿಯೇ ಬಿಟ್ಟ. ಆದರೆ, ಯಾವ ಪರಿಜ್ಞಾನವೂ ತರಬೇತಿಯೂ ಇಲ್ಲದ ಯವಕರು ಕಾರ್ಖಾನೆಗಳಲ್ಲಿ ಹೇಗೆ ಕೆಲಸ ಮಾಡಿಯಾರು? ಕೊನೆಯ ಪಕ್ಷ ತರಬೇತಿಯನ್ನಾಾದರೂ ಈ ಭೂಪ ನೀಡಬೇಕಿತ್ತು ತಾನೆ? ಪರಿಣಾಮ ಕೆಟ್ಟದೇ ಆಯಿತು. ಅದೆಷ್ಟೋೋ ಯವಕರು ಯಂತ್ರಕ್ಕೆೆ ಸಿಕ್ಕಿಿ ಕೈಕಾಲು ಕಳೆದುಕೊಂಡರು. ಜೀವವನ್ನೂ ಕಳೆದುಕೊಂಡರು. ಇಂಥವರನ್ನು ಮಾವೋ ಎಂಬ ದುರಹಂಕಾರಿ ನಿರ್ಲಕ್ಷ್ಯ ಮಾಡಿದ. ಈ ದುರಂತವನ್ನು ಕಂಡು ಕೆಲವರು ಮನೆಯಲ್ಲೇ ಉಳಿದರು. ಈ ವಿಚಾರ ಕಿವಿಗೆ ಬಿತ್ತು. ಅಂಥವರನ್ನು ಹೆಡೆಮುರಿ ಕಟ್ಟಿಿಸಿ ಸೆರೆಮನೆಗೆ ತಳ್ಳಿಿದ. ಚಿತ್ರಹಿಂಸೆ ನೀಡಿದ. ಅನ್ನ ಆಹಾರ ಕೊಡದೆ ಕಾಡಿದ. ತನ್ನನ್ನು ಕಾಣಲು ಬಂದವರ ಹಲ್ಲು ಮುರಿಯಲು ಸೈನಿಕರಿಗೆ ಹೇಳಿದ. ಕೈಗಾರಿಕಾ ಕ್ರಾಾಂತಿಯ ಹೆಸರಲ್ಲಿ ಮೂವತ್ತು ಲಕ್ಷಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡರು. ಈ ಅಸಾಮಾನ್ಯನ ಕ್ರೌೌರ್ಯದ ಪರಮಾವಧಿ ಅದ್ಯಾಾವ ಮಟ್ಟಿಿನದು ಎಂದು ಊಹಿಸಲಸಾಧ್ಯ!
ಇವನನ್ನು ಕುರಿತು ಕಮ್ಯುನಿಸಂ ಮನೋಧರ್ಮದ ವಿಚಾರವಾದಿಗಳು, ಲೇಖಕರು, ಬರಹಗಾರರು, ಚಿಂತಕರು ಲೇವಡಿ ಮಾಡಿದರು, ಟೀಕಿಸಿದರು, ವ್ಯಂಗ್ಯ ಚೀನಾದ ದೌರ್ಭಾಗ್ಯವನ್ನು ಕುರಿತು ಪದ್ಯಗಳನ್ನು ಬರೆದರು. ಕಥೆಗಳನ್ನು ಬರೆದರು. ನಾಟಕಗಳನ್ನು ಬರೆದು ಮಾವೋನನ್ನು ಅಣಕಿಸಿದರು. ಆರಂಭದಲ್ಲಿ ಮಾವೋ ಸೈಲೆಂಟಾಗಿದ್ದ. ಆದರೆ, ಅವನೊಳಗಿನ ದುರಹಂಕಾರ ಇಂಥವರನ್ನು ಹಿಂಸಿಸಲು ಉದ್ದೀಪಿಸಿತು. ಅಂಥವರನ್ನೆೆಲ್ಲಾ ಹುಡುಕಿ ಹುಡುಕಿ ಎಳೆದು ತಂದು ದೇಶದ್ರೋಹದ ಆಪಾದನೆ ಹೊರಿಸಿ ಸೆರೆಗೆ ತಳ್ಳಿಿದ. ಜೈಲಿನಲ್ಲೂ ಇವನ ವಿರುದ್ಧ ಪ್ರತಿರೋಧಗಳನ್ನು ಅವರು ಮಾಡಿದರು. ಹಿಂದೆ ಮುಂದೆ ನೋಡದೆ ಅವರನ್ನೆೆಲ್ಲಾ ಈ ಭೂಪತಿ ಮಹಾಶಯ ಮುಗಿಸಿಯೇ ಬಿಟ್ಟ. ಇದೆಂಥಾ ಬಗೆಯ ಕ್ರೂರತನ ನೋಡಿ! ಇವನನ್ನು ಮರೆಯೋದುಂಟೆ? ಕನ್ನಡದ ಪ್ರಸಿದ್ಧ ಕವಿಗಳೊಬ್ಬರು ಇವನನ್ನು ಕುರಿತು ಕವನವನ್ನೂ ಬರೆದಿದ್ದಾರೆ. ಮಾವೋನಂಥವರು ಚೀನಾದಲ್ಲಿ ಸಾಕಷ್ಟು ಮಂದಿ ಅಧಿಕಾರರೂಢ ನಿರಂಕುಶಿಗಳು ಬಂದು ಹೋಗಿರಬಹುದು, ಹೋಗಬಹುದು. ಆದರೆ, ಮಾವೋನನ್ನು ಚೀನಾದ ಚರಿತ್ರೆೆ, ಅಷ್ಟೇ ಅಲ್ಲ ಜಗತ್ತಿಿನ ಚರಿತ್ರೆೆಯೂ ಮರೆಯುವುದಿಲ್ಲ! ಅಂಥ ದುಷ್ಟ , ದುರುಳ ವ್ಯಕ್ತಿಿತ್ವ ಮಾವೋನದು. ವರ್ತಮಾನದ ಅಧ್ಯಕ್ಷನೂ ಇವನಿಗೇನೂ ಕಡಿಮೆಯಿಲ್ಲದವನೇ!

6. ಇದಿ ಅಮೀನ್: (1925-2003)
ನೋಡುವುದಕ್ಕೆೆ ಸಾಕ್ಷಾತ್ ದಾನವ ಪ್ರತಿರೂಪದಂತೆ ಕಾಣುವ ಇದಿ ಅಮೀನ್ ಉಗಾಂಡಾದ 1971 ರಿಂದ 1979 ರವರೆಗೆ ಇವನ ಆಡಳಿತವನ್ನು ಉಗಾಂಡಾ ಅನುಭವಿಸಿತು. ಇವನು ಉಗಾಂಡಾದ ಅಧ್ಯಕ್ಷನಾಗಿದ್ದಾಗಲೇ ಸೌದಿ ಅರೇಬಿಯಾದಲ್ಲಿ ಒಂದು ಭೂತಬಂಗಲೆಯಂಥ ಅರಮನೆಯನ್ನು ಕಟ್ಟಿಿಕೊಂಡು ಅಲ್ಲೇ ವಾಸವಾಗಿದ್ದ. ಒಂದು ರಾಷ್ಟ್ರದ ಅಧ್ಯಕ್ಷನಾಗಿ ತಾನೇನು ಮಾಡಬೇಕೆಂಬ ಪರಿಜ್ಞಾನವಿಲ್ಲದ ಈತ ಆನೆ ನಡೆದದ್ದೇ ದಾರಿಯೆಂಬಂತೆ ಆಡಳಿತ ಮಾಡಿದವ. ಹೊಗಳು ಭಟ್ಟರೆಂದರೆ ಇವನಿಗಿಷ್ಟ. ಅದಕ್ಕಾಾಗಿ ಅಂಥವರನ್ನೆೆಲ್ಲಾ ತನ್ನ ಸುತ್ತಲೂ ಕಟ್ಟಿಿಕೊಂಡ. ತನ್ನ ಸುತ್ತಲೂ ಚಾಡಿಕೋರರನ್ನೂ ಬೆಳೆಯಲು ಬಿಟ್ಟ. ಇಬ್ಬರ ಮಾತನ್ನೂ ಕೇಳಿಯೇ ಅಧಿಕಾರದ ದವಲತ್ತು ತನ್ನ ಆಡಳಿತವನ್ನು ವಿರೋಧಿಸಿ ತನ್ನದೇ ಪ್ರಜೆಗಳು ದಂಗೆಯೆದ್ದಿದ್ದಾರೆಂಬ ಒಂದೇ ಒಂದು ಅನುಮಾನದಿಂದ ಮೂರು ಲಕ್ಷಕ್ಕೂ ಅಧಿಕ ಪ್ರಜೆಗಳನ್ನು ಕೊಂದೇ ಮುಗಿಸಿದ ಪರಮಪಾಪಿಯಿವ. ಇದನ್ನು ಪ್ರಶ್ನಿಿಸಿದವರನ್ನೂ ಆಕ್ಷೇಪಿಸಿದವರನ್ನೂ ರಾತ್ರೋೋರಾತ್ರಿಿ ಬಂಧಿಸಿ ಕತ್ತಲಕೋಣೆಯಲ್ಲಿ ತುರುಕಿದ. ದೇಶದ್ರೋಹದ ಆಪಾದನೆ ಹೊರಿಸಿ ಅವರಲ್ಲೇನಕರನ್ನು ಗಡೀಪಾರು ಮಾಡಿದ. ಹೀಗೆ ತನ್ನ ಪೌರುಷವನ್ನು ವಿಕ್ರತವಾಗಿ ಪ್ರದರ್ಶಿಸಿದ ತಿಕ್ಕಲು ಆಸಾಮಿಯಿವ.
ಉಗಾಂಡಾದಲ್ಲಿ ಏಷಿಯಾ ಮೂಲದ ವ್ಯಾಾಪಾರಿಗಳಿದ್ದರು. ಅವರೆಲ್ಲಾ ತನ್ನ ವಿರುದ್ಧ ಪಿತೂರಿ ಮಾಡುತ್ತಿಿದ್ದಾರೆಂದು ಚಾಡಿಕೋರರು ಹೇಳಿದ ಮಾತನ್ನು ನಂಬಿದ ಆಸಾಮಿ ಅರವತ್ತು ಸಾವಿರ ಹೆಚ್ಚು ವ್ಯಾಾಪಾರಿಗಳನ್ನು ದೇಶದಿಂದಲೇ ಓಡಿಸಿಬಿಟ್ಟ. ಈ ಸಂದರ್ಭದಲ್ಲೇ ಪ್ರಾಾಕೃತಿಕ ಅಸಮತೋಲನದಿಂದಾಗಿ ಉಗಾಂಡಾಕ್ಕೆೆ ಎರಡು ವರ್ಷ ಮಳೆಯಿಲ್ಲದೆ ಭೀಕರ ಕ್ಷಾಮವಡರಿತು. ಜನರು ಅನ್ನವಿಲ್ಲದೆ ತತ್ತರಿಸಿಹೋದರು. ಜೀವ ಕಳೆದುಕೊಂಡರು. ತನ್ನ ದೇಶಕ್ಕೆೆ ಹೋಗಿ ಅಧ್ಯಕ್ಷನಾಗಿ ಮಾಡಬೇಕಾದ ಕರ್ತವ್ಯ ಬಿಡಿ, ಸೌದಿಯಲ್ಲಿ ಕುಳಿತಾದರೂ ತನ್ನ ಪ್ರಜೆಗಳ ಕ್ಷೇಮವನ್ನು ವಿಚಾರಿಸಬೇಕಿದ್ದ ಈ ವಿಲಕ್ಷಣ ಪುರುಷ ಅದನ್ನೂ ಮಾಡದೆ, ನಾನು ದೇವರೊಂದಿಗೆ ಮಾತನಾಡುತ್ತೇನೆ ಎಂದು ಹೊಸ ಅವತಾರ ಆರಂಭಿಸಿದ! ಇವನ ಈ ನಾಟಕದಿಂದ ಉಗಾಂಡಾವೆಂಬ ಪುಟ್ಟದೇಶ ದಿನಗಳೆದಂತೆ ಬರ್ಬಾದಾಗುತ್ತಾಾ ಹೋಯಿತು. ಕಾಲಗತಿಯ ಪ್ರವಾಹಕ್ಕೆೆ ಸಿಕ್ಕು ಮಾಡಿದ ಪಾಪದಿಂದ ತಪ್ಪಿಿಸಿಕೊಳ್ಳಲು ಸಾಧ್ಯವೇ ಇಲ್ಲವೆಂಬಂತೆ 2003 ರಲ್ಲಿ ಇದಿ ಅಮೀನ್ ಸತ್ತುಹೋದ. ಉಗಾಂಡಾದ ಪ್ರಜೆಗಳು ಈ ಮಹಾಶಯ ಸತ್ತಾಾಗ ಕಣ್ಣೀರು ಸುರಿಸಲಿಲ್ಲ. ನಿರುಂಬಳತೆಯನ್ನು ಅನುಭವಿಸಿದರು. ಕಳೆದುಕೊಂಡ ನೆಮ್ಮದಿಯನ್ನು ಪಡೆದರು. ನಿಟ್ಟುಸಿರುಬಿಟ್ಟರು. ಪುಟ್ಟ ರಾಷ್ಟ್ರ ಅನುಭವಿಸಬಹುದಾದ ಯಾತನೆಗೆ ಪೂರ್ಣವಿರಾಮ ಸಿಕ್ಕಿಿದಂತಾಯಿತು.

7. ಪಾಲ್ ಪಾಟ್: (1925-1998)
ಕಾಂಬೋಡಿಯಾದ ಮಾರ್ಕ್‌ಸ್‌‌ವಾದಿ ಪ್ರಬಲ ಸಂಘಟನೆಯ ಮುಖಂಡನೀತ. ಪಿತ್ರಾಾರ್ಜಿತ ಆಸ್ತಿಿಯೆಂಬಂತೆ ಕಾಂಬೋಡಿಯಾಕ್ಕೆೆ ಇವನೇ ಅರಸನಾದ. ತನ್ನ ಸಂಗಡವಿರುವವರಿಗೆ ಚಿತ್ರಹಿಂಸೆ ನೀಡಿ ಅದರಲ್ಲೇ ಸಂತೋಷವನ್ನು ಮನರಂಜನೆಯನ್ನು ಅನುಭವಿಸುವ ಇವನದು ವಿಕೃತದಲ್ಲಿ ವಿಕೃತವಾದ ಮನಸ್ಸು. ತನ್ನ ವಿರುದ್ಧ ಮಾತನಾಡುವವರನ್ನು, ತನಗೆ ಇಷ್ಟವಾಗದವರನ್ನು ತನ್ನ ಜೀತದಾಳುಗಳನ್ನಾಾಗಿ ಮಾಡಿಕೊಳ್ಳುತ್ತಿಿದ್ದ ಈತ ಹೊಲಗದ್ದೆಗಳಲ್ಲಿ ದುಡಿಯಲು ಅವರನ್ನು ಅಟ್ಟುತ್ತಿಿದ್ದ. ಹೊತ್ತುಗೊತ್ತೆೆನ್ನದೆ ಅವರು ರಕ್ತ ಬೆವರು ರೂಪದಲ್ಲಿ ಹರಿಯುವವರೆಗೂ ಅವರನ್ನು ದುಡಿಸಿಕೊಳ್ಳುತ್ತಿಿದ್ದ. ಹಾಗೆ ದುಡಿಯುತ್ತಿಿರುವವನ್ನು ಕೊಲ್ಲಿಸಿ ಅದೇ ಜಮೀನಿನಲ್ಲಿ ಹೂತುಹಾಕುತ್ತಿಿದ್ದ! ಒಂದೊಂದು ಕೊಲೆಯನ್ನು ಕಂಡಾಗಲು ಸಂಭ್ರಮಿಸುವ ಈತ, ಯಾರನ್ನೇ ಆಗಲಿ ನೀಡಿಯೇ ಕೊಲ್ಲಬೇಕೆಂದು ಕಡ್ಡಾಾಯ ಆದೇಶವನ್ನು ಹೊರಡಿಸಿದ್ದ!
ಕೇವಲ ನಾಕೇ ನಾಕು ವರ್ಷಗಳ ಕಾಲ (1975-79) ಕಾಂಬೋಡಿಯಾದ ಸರ್ವಾಧಿಪತಿಯಾಗಿದ್ದ ಈ ಮಹಾಶಯ ಎರಡು ದಶಲಕ್ಷ ಜನರನ್ನು ಚಿತ್ರಹಿಂಸೆ ನೀಡಿಯೇ ಕೊಲ್ಲಿಸಿದ ಕೀರ್ತಿಗೆ ಭಾಜನನಾದವ. ಅದೆಂಥಾ ರೀತಿಯ ಅಮಾನುಷತೆ ಇವನಲ್ಲಿರಬೇಕು ಹೇಳಿ! ಮನೆಯಲ್ಲೇ ಸತಹೋದ ಇವನ ಸಾವಿನ ಕಾರಣ ಇನ್ನೂ ತಿಳಿದು ಬಂದಿಲ್ಲ

8. ಸದ್ದಾಂ ಹುಸೇನ್: (1937-2006)
1937ರಿಂದ 2006 ರವರೆಗೆ ಇರಾನಿನ 5 ನೇ ಅಧ್ಯಕ್ಷನಾಗಿ ಸದ್ದು ಮಾಡಿ ನಡುಗಿಸಿದವ ಈ ಸದ್ದಾಂ ಹುಸೇನ್ ಅಬ್‌ದ್‌ ಅಲ್-ಮಜೀದ್ ಅಲ್ ತಿಕ್ರಿಿತಿ. ತಿಕ್ರಿಿತಿ ಎಂಬ ಬುಡಕಟ್ಟು ಕುರುಬ ವೃತ್ತಿಿಯ ಜನಾಂಗಕ್ಕೆೆ ಸೇರಿದವನೀತ. 2006, ಡಿಸೆಂಬರ್ 30ರಂದು ಅಂದರೆ ಕೇವಲ ಹನ್ನೆೆರಡೂವರೆ ವರ್ಷದ ಹಿಂದೆ ಅಬ್ಬೇಪಾರಿಯಂತೆ ಗಲ್ಲುಶಿಕ್ಷೆಗೆ ಗುರಿಯಾಗಿ ಹೋದವನಿವ. ಯಾವಾಗ ಈತ ಅಮೇರಿಕಾದ ಕಣ್ಣಿಿಗೆ ಬಿದ್ದನೋ ಅಂದೇ ಇವನ ಅಂತ್ಯದ ಆರಂಭವೂ ಆಗಿತ್ತು. ಆ ದಿನವೂ ಬಂದೇ ಬಿಟ್ಟಿಿತು. ಅದೊಂದು ದಿನ ಅಮೆರಿಕದ ಯೋಧರ ಕೈಗೆ ಸಿಕ್ಕಿಿದ ಇವನನ್ನು ಸಾವು ಬಂದಿತು. ಆಲ್ ಖೈದಾ ಸಂಬಂಧ, ಸಮೂಹ ನಾಶಕ ಶಸ್ತ್ರಾಾಸ್ತ್ರಗಳನ್ನು ಹೊಂದಿರುವ, ಭಯೋತ್ಪಾಾದನೆಗೆ ಕುಮ್ಮಕ್ಕು ನೀಡಿದನೆಂಬ ಅಮೆರಿಕದ ಸರ್ಕಾರ ಇವನನ್ನು ಮರಣದಂಡನೆಗೆ ಗುರಿಯಾಗಿಸಿತು. ಈ ಸುದ್ದಿ ಜಗತ್ತಿಿನಾದ್ಯಂತ ಪಸರಿಸಿತು. ಅದೆಷ್ಟೋೋ ದೇಶಗಳು ಇವನ ಪರವಾಗಿ ಮಾತಾಡಿಕೊಂಡರು. ಮರುಗಿದರು. ಸರ್ವಾಧಿಕಾರಿಯಾಗಿ ಮೆರೆದ ಈತನಿಗೆ ಇಂಥ ದುರಂತ ಸಾವು ಬರಬಾರದಿತ್ತೆೆಂದು ಅಲವತ್ತುಕೊಂಡರು. ಆದರೆ, ಇವನದ್ದೇ ಇರಾಕಿನ ಜನ ಮಾತ್ರ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಹಾದಿಬೀದಿಯಲ್ಲಿ ಸಿಹಿ ಹಂಚಿ, ಮದ್ದುಗಳನ್ನು ಸುಟ್ಟು, ತಮಗಂಟಿಕೊಂಡ ಅನಿಷ್ಟ ಉತ್ಸಾಾಹದಲ್ಲಿ ಮುಳುಗೆದ್ದರು.
ನಮ್ಮ ದೇಶದಲ್ಲಿರುವ ಗೋವಾ, ಮಣಿಪುರ, ಕೇರಳದಂಥ ಪುಟ್ಟರಾಜ್ಯಗಳಂತೆ ಇರುವ ಇರಾಕ್ ವಿಶ್ವದಲ್ಲಿ ಹೆಸರನ್ನು ಗಳಿಸದ್ದು ತನ್ನಲ್ಲಿರುವ ಅಪಾರವಾದ ತೈಲಸಂಪನ್ಮೂಲದಿಂದ. ಇಡೀ ಜಗತ್ತೇ ತನ್ನೆೆದುರು ನತಮಸ್ತಕವಾಗಿ ಮಂಡಿಯೂರಲೇಬೇಕು ಎಂಬುದು ಯಾವಾಗ ಈ ಮಹತ್ವಾಾಕಾಂಕ್ಷೆಯ, ದುರಹಂಕಾರದ, ವಿಕೃತ ಸ್ವಭಾವದ ಸರ್ವಾಧಿಕಾರಿಗೆ ಗೊತ್ತಾಾಯಿತೋ ಆಗಲೇ ಇವನು ಅಮೆರಿಕದಂಥ ಬಲಿಷ್ಠವಾದ ಖಂಡಕ್ಕೇ ಸೆಡ್ಡುಹೊಡೆದು ನಿಂತ ದುರಾಕ್ರಮಿಯೀತ. ಒಂದು ಸಂದರ್ಭದಲ್ಲಿ ಕ್ರಾಾಂತಿಕಾರಿ ಅರಬ್ ಸಮಾಜವಾದಿ ಬಾತ್ ಪಕ್ಷದ ಸದಸ್ಯನಾಗಿದ್ದ ಇವ ಅದೇ ಇರಾಕಿನ ಮುಖ್ಯಸ್ಥ ಮತ್ತು ಸರ್ವಾಧಿಕಾರಿಯಾದ. ಪೆಟ್ರೋೋಲಿಯಂ ಮತ್ತು ಡೀಸೆಲ್ಲನ್ನೇ ಬಂಡವಾಳ ಮಾಡಿಕೊಂಡು ಹಾರಾಡಲು ಹೋರಾಡಲು ಸುರುವಿಟ್ಟುಕೊಂಡ. ಸ್ವಭಾವತಃ ಇವನಲ್ಲಿ ಕ್ರೌೌರ್ಯ ಅಂತರ್ಗತವಾಗಿತ್ತು. ತನ್ನನ್ನು ವಿರೋಧಿಸುವವರು ಬದುಕಿರಲೇಬಾರದು ಎಂಬ ಮನೋಪ್ರವೃತ್ತಿಿಯ ಇವನಲ್ಲಿ ಅತ್ಯಂತ ಅಮಾನುಷ ರೀತಿಯ ನಿರ್ಧಾರಗಳಿದ್ದವು. ವ್ಯಕ್ತಿಿಸ್ವಾಾತಂತ್ರ್ಯದ ವಿರೋಧಿಯಾಗಿದ್ದವನಿವನು. ಯಾರನ್ನೇ ಈತ ಅನುಮಾನಿಸಿದರೂ ಕ್ಷಣಮಾತ್ರದಲ್ಲಿ ಅವರನ್ನು ಕೊಂದು ಮುಗಿಸುತ್ತಿಿದ್ದ. ತನ್ನಾಾಡಳಿತದ ವಿರುದ್ಧ ಮಾತನಾಡಿದರು ಎಂಬ ಒಂದೇ ಕಾರಣಕ್ಕೆೆ ಇರಾಕಿನ ಕರ್ದಿಷ್ ನ 20ಸಾವಿರಕ್ಕೂ ಅಧಿಕ ಜನರನ್ನು ಸದ್ದಾಂ ಕೊಲ್ಲಿಸಿದ. ಇವನ ಮತ್ತು ಜೀವಿತಾವಧಿಯಲ್ಲಿ ನಡೆದ ಸಾಮೂಹಿಕ ಕೊಲೆಗೆ ಲೆಕ್ಕವೇ ಇಲ್ಲ. ಯಾರನ್ನೂ ನಂಬದ ಇವ ಹುಚ್ಚು ಹುಂಬ. ಮೇಲೆಬಿದ್ದು ಸೇಡನ್ನು ದ್ವೇಷವನ್ನಾಾಗಿಸಿಕೊಂಡು ಆಕ್ರಮಣ, ಅತೀಕ್ರಮಣ ಮಾಡುತ್ತಿಿದ್ದ. 1937ರಿಂದ 2006ರವರೆಗೆ ಬದುಕಿದ ಈ ಮಹಾರಥಿಯ ಜೀವನಯಾನ ನಮ್ಮ ಕಾಲದ ಕುತೂಹಲ. ಇವನನ್ನು ಟಿವಿಯಲ್ಲಿ ನೋಡಿಯೇ ಭೀತಗೊಂಡವರಿದ್ದಾರೆಂದರೆ ಇವನದ್ದೆಂಥಾ ಮನುಷ್ಯರೂಪವಿರಬೇಕೆಂದು ಊಹಿಸಿ!
ವ್ಯಕ್ತಿಿಯ ವಿಕ್ಷಿಪ್ತತೆಯೇ ರಾಷ್ಟ್ರಗಳನ್ನು ಉರಿದು ಭಸ್ಮ ಮಾಡಿದ್ದಕ್ಕೆೆ ಹಿಟ್ಲರ್, ಸ್ಟಾಾಲಿನ್, ಟಿಟೊ, ಇದೀ ಅಮೀನ್, ಗದ್ದಾಫಿ, ಸದ್ದಾಂ ಹುಸೇನರಂಥ ಕ್ರೂರ ಸಮಕಾಲೀನ ಜಗತ್ತಿಿನ ಇತಿಹಾಸದಲ್ಲಿ ಕಾಣುತ್ತವೆ. ಮುಷರ‌್ರಫ್‌ರಂಥವರು ಕಾರ್ಗಿಲ್ ತರದ ಯುದ್ಧೋೋನ್ಮಾಾದಕ್ಕೆೆ ಕಾರಣರಾಗುತ್ತಾಾರೆ. ರಾಷ್ಟ್ರಗಳ ರಕ್ಷಣೆಗೆ ಸೈನ್ಯದ ಅಗತ್ಯವಿದ್ದದ್ದೇ ಆದರೂ ಯಾವ ರಾಷ್ಟ್ರವೂ ಯುದ್ಧದ ಹಂಬಲದಿಂದಲೇ ಸೈನ್ಯಬಲವನ್ನು ಹೊಂದುವುದು, ಬಲಪಡಿಸುವುದನ್ನು ನಿರಂತರವಾಗಿ ಮಾಡಲಾರದು. ಯುದ್ಧದ ಉನ್ಮಾಾದವೇ ನಾಶವಾದರೆ ಸೈನ್ಯಬಲವನ್ನು ಹೆಚ್ಚಿಿಸಿಕೊಳ್ಳುವ ಬದಲು ಜನರ ಬದುಕನ್ನು ಚೆನ್ನಾಾಗಿರುವಂತೆ ನೋಡಿಕೊಳ್ಳಲು ಸಾಧ್ಯ. ಬದುಕಿಗೆ ಬೇಕಾದ ಮೂಲ ಅಗತ್ಯಗಳನ್ನು ಪೂರೈಸಿಕೊಳ್ಳಲು ಶಿಕ್ಷಣ, ತನ್ಮೂಲಕ ಮುಂತಾದ ಉದ್ಯೋೋಗಗಳನ್ನು ಸಾಧಿಸಿಕೊಂಡು ರಾಷ್ಟ್ರಗಳು ಸರ್ವಾಂಗೀಣ ಉತ್ಕರ್ಷವನ್ನು ಕಾಣಬಹುದು. ಸಣ್ಣಪುಟ್ಟ ಬಡರಾಷ್ಟ್ರಗಳನ್ನು ಎತ್ತರಕ್ಕೆೆ ತರುವಲ್ಲಿ ಉಳಿದ ಸಿರಿವಂತ ರಾಷ್ಟ್ರಗಳು ಕೈಬಲಗೊಳಿಸಿದರೆ ಜಗತ್ತು ಶಾಂತಿ, ನೆಂಮದಿಯಿಂದ ಬದುಕಲು ನಾಂದಿಯಾಗುತ್ತದೆ.

9. ಕಿಮ್ ಜಾನ್ ಉಂಗ್:
2011 ರಿಂದ ಉತ್ತರ ಕೊರಿಯಾದ ನಿರಂಕುಶ ಸರ್ವಾಧಿಕಾರಿಯಾಗಿ ವರ್ತಮಾನದ ಜಗತ್ತಿಿನ ನರರಕ್ಕಸನಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾಾತನಾದವನು ಈ ಕಿಮ ಜಾನ್ ಉಂಗ್. ನಮ್ಮ ನಡುವೆಯೇ ದೈತ್ಯ ಪಿಶಾಚಿಯಂತೆ ಕಾಣುತ್ತಿಿರುವವನು. 2012 ರವರೆಗೆ ಉತ್ತರ ಕೊರಿಯಾದ ಕಾರ್ಮಿಕರ ಪಕ್ಷದ ಚೇರಮನ್ ಆಗಿದ್ದನು. ಇವನ ಅಪ್ಪ ಕಿಮ ಜಾಂಗ್ ಅಜ್ಜ ಕೋ ಯಂಗ್ ಹುಯ್. ಕಿಮ್ ಸೆಕೆಂಡ್ ಸುಂಗ್ ನ ಮೊಮ್ಮಗನೇ ಕಿಮ್ ಜಾನ್ ಉನ್. ಈ ಕಿಮ್ ಸೆಕೆಂಡ್ ಸುಂಗ್ ಉತ್ತರ ಕೊರಿಯಾದ ಸಂಸ್ಥಾಾಪಕ ಮತ್ತು ಮೊದಲ ನಾಯಕ. ಕಿಮ್ ಜಾನ್ ವಿಶ್ವದ ಎರಡನೇ ಅತಿ ಕಿರಿಯ ನಾಯಕ. 1983ರ ಜನೆವರಿ 8 ರಂದು ಉತ್ತರ ಕೊರಿಯಾದ ಪ್ರೋೋಂಯಾಂಗದಲ್ಲಿ ಹುಟ್ಟಿಿದ ಇವನ ಬಗ್ಗೆೆ ಹಲವು ಪ್ರತೀತಿಗಳಿವೆ. ನಿರಂಕುಶ ಮನೆತನದಲ್ಲಿ ಹುಟ್ಟಿಿ ಬೆಳೆದ ಇವನಲ್ಲಿ ಹಿರಿಯರ ಗುಣಸ್ವಭಾವಗಳೇ ಪಡಿಯಚ್ಚಾಾಗಿವೆ. ಸರಿಯೆನಿಸದ ಯಾರನ್ನೂ, ಯಾವುದನ್ನೂ ಉಳಿಸಿದ ಇವ ಅಮೆರಿಕ, ರಷ್ಯಾಾದಂಥ ದೊಡ್ಡ ದೊಡ್ಡ ರಾಷ್ಟ್ರಗಳಿಗೆ ಖಂಡಾಂತರ ಕ್ಷಿಪಣಿಗಳನ್ನು, ಅಣ್ವಸ್ತ್ರಗಳನ್ನು ಉಡಾಯಿಸಿ ಬಿಡುತ್ತೇನೆಂದು ಪದೇಪದೇ ಹೆದರಿಸುತ್ತಾಾ ಇರುವುದನ್ನು ನಾವೆಲ್ಲಾ ನೋಡಿದ್ದೇವೆ. ಈಗಲೂ ಅಮೆರಿಕದೊಂದಿಗೆ ಕಾಲುಕೆರೆದು ಯುದ್ಧಕ್ಕೆೆ ಸಿದ್ಧವಾಗಿ ನಿಂತಿರುವ ಇವನನ್ನು ಚೀನಾ ಮರೆಯಲ್ಲೇ, ಕೆಲವೊಮ್ಮೆೆ ನೇರವಾಗಿ ಜಾಗತಿಕವಾಗಿ ಬೆಂಬಲಿಸುತ್ತದೆ. ಕಾರಣ ಚೀನಾ ಕೂಡ ಯುದ್ಧಪಿಪಾಸು ರಾಷ್ಟ್ರವೇ ಆಗಿದೆ. ತಾನೊಬ್ಬನೇ ಜಗತ್ತಿಿನ ಏಕೈಕ ನಿರಂಕುಶ ಪ್ರಭುವಾಗಬೇಕೆಂಬ ಅದಮ್ಯವಾದ ನೀಚ ಮಹತ್ವಾಾಕಾಂಕ್ಷೆಯುಳ್ಳ ರಾಷ್ಟ್ರವದು.
ಇವನಲ್ಲೂ ಕ್ರೌೌರ್ಯವೆಂಬುದು ಪಿತ್ರಾಾರ್ಜಿತವಾಗಿ ಮಡುಗಟ್ಟಿಿದೆ. ತನ್ನ ಮಾವನನ್ನು, ವೈಯಕ್ತಿಿಕ ವಿಶೇಷಾಧಿಕಾರಿಯನ್ನು ಕೊಂದಿದ್ದಾನೆಂಬ ಅಪಕೀರ್ತಿಯೂ ಇವನ ಮೇಲಿದೆ. ಮೊನ್ನೆೆ ಮೊನ್ನೆೆ ತನ್ನ ಕಾರ್ಯದರ್ಶಿಯನ್ನು ಕೊಂದಿದ್ದಾನೆಂಬ ವರದಿ ಮಾಧ್ಯಮಗಳಲ್ಲಿತ್ತು. ತನ್ನಂತೆ ಕೇಶ ಶೃಂಗಾರವನ್ನು ಎಲ್ಲರೂ ಮಾಡಿಕೊಳ್ಳಬೇಕೆಂಬ ಫರ್ಮಾನು ಹೊರಡಿಸಿದ ವಿಚಿತ್ರ ವ್ಯಕ್ತಿಿಯಿವ! ನಾಗರಿಕ ಸಭ್ಯ ಸಮಾಜದಲ್ಲಿ ಬದುಕುವುದಕ್ಕೆೆ ಇವನಿಗೆ ಅದ್ಯಾಾವ ಎಂಗಲಿನಲ್ಲೂ ಅರ್ಹತೆಗಳೇ ಕಾಣಿಸುವುದಿಲ್ಲ!
ಕೊನೆಯ ಮಾತು: ಅಂಥ ಸಿರಿವಂತ ಹಿನ್ನೆೆಲೆಯ ಕುಟುಂಬದಲ್ಲಿ ಜನಿಸಿ, ದೇಶದ ಪ್ರಧಾನಿಯನ್ನೇ ಅಪ್ಪನನ್ನಾಾಗಿಯೂ ಪಡೆದು, ಕಾಲಗತಿಯಲ್ಲಿ ಅಪ್ಪನಂತೆಯೇ ಪ್ರಧಾನಿಯಾದ ಇಂದಿರಾಜಿಯವರಿಗೆ ಅವರ ಕೊನೆಯ ದಿನಗಳಲ್ಲಿ ಒಂದು ಬಗೆಯ ವಿಚಿತ್ರವಾದ ಏಕಾಂಗಿತನದ ಖಿನ್ನತೆ ಆವರಿಸಿತ್ತೆೆಂದು ಅವರ ನಿಕಟವರ್ತಿಗಳೇ ಬರೆದಿದ್ದಾರೆ. ಅಧಿಕಾರ, ಅಂತಸ್ತು, ಸಂಪತ್ತು, ಪದವಿ, ಸ್ಥಾಾನಮಾನ, ಕೀರ್ತಿ, ಅಹಂಕಾರ, ದುಡ್ಡು ಇವ್ಯಾಾವುದೂ ಮನುಷ್ಯನ ಬದುಕನ್ನು, ಭಾವವನ್ನು ಎಲ್ಲಾ ಸಂದರ್ಭ-ಸನ್ನಿಿವೇಶಗಳಲ್ಲೂ ಜತನವಾಗಿ ಇಡುತ್ತದೆಂಬುದು ಸುಳ್ಳು ಎಂಬುದನ್ನು ಚರಿತ್ರೆೆ ನಮಗೆ ಕಲಿಸುತ್ತಲೇ ಇದೆ. ಆದರೆ, ನಾವು ಮಾತ್ರ ಕಲಿಯುತ್ತಲೇ ಇಲ್ಲ!

Leave a Reply

Your email address will not be published. Required fields are marked *