Friday, 24th September 2021

ಶಿಕ್ಷಣದ ಜವಾಬ್ದಾರಿ ಪಡೆದ ಜಪಾನಂದಾ ಸ್ವಾಮೀಜಿ

ಕತ್ತಲೆಯಲ್ಲಿ ಅರಳಿದ ವಿದ್ಯಾರ್ಥಿಗೆ ನೆರವಿನ ಹಸ್ತ.. ಕಾರ್ಮಿಕರಿಗೆ ವಸತಿ ನೀಡಿದ ಭರವಸೆ ನೀಡಿ ಮಧುಗಿರಿ ಎಸಿ

ಪಾವಗಡ ರಾಮಕೃಷ್ಣ ಆಶ್ರಮದಿಂದ ೧೫ಕುಟುಂಬಗಳಿಗೆ ಆಹಾರಕಿಟ್ ಮತ್ತು ಟಾರ್ಪಲ್ ವಿತರಣೆ

ಕೊರಟಗೆರೆ: ತೀತಾ ಜಲಾಶಯದ ಸಮೀಪದ ಸೀರೆಯ ಗುಡಾರದಲ್ಲಿ ಮೂಲಸೌಕರ್ಯ ಇಲ್ಲದೇ ವಾಸಿಸುತ್ತೀರುವ ಅಲೆಮಾರಿ ಕಾರ್ಮಿಕ ಕುಟುಂಬದ ಇಬ್ಬರು ವಿದ್ಯಾರ್ಥಿನಿಯರ ವ್ಯಾಸಂಗದ ಸಂಪೂರ್ಣ ಜವಾಬ್ದಾರಿ ನನ್ನದಾಗಿದೆ ಎಂದು ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಪೀಠಾಧಿಪತಿ ಜಪಾನಂದ ಮಹಾರಾಜ್ ಸ್ವಾಮೀಜಿ ಭರವಸೆ ನೀಡಿದರು.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ತೀತಾ ಕೆರೆ ಅಂಗಳದಲ್ಲಿ ವಾಸಿಸುತ್ತೀರುವ ಅಲೆಮಾರಿ ಕಾರ್ಮಿಕ ರಿಗೆ ಆಹಾರದ ಕಿಟ್ ಮತ್ತು ಟಾರ್ಪಲ್ ವಿತರಿಸಿ ಮಾತನಾಡಿದರು.

ಬೆಳಕು ಇಲ್ಲದೇ ಕತ್ತಲೆಯಲ್ಲೇ ಕಳಿತು ಶೇ.೮೫ಕ್ಕೂ ಅಧಿಕ ಅಂಕ ಪಡೆದಿರುವ ಲಕ್ಷಿö್ಮÃ ಮತ್ತು ಗಂಗಾಶ್ರೀ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅವಶ್ಯಕತೆ ಇರುವ ಪುಸ್ತಕ, ಬ್ಯಾಗು, ಸಮಾವಸ್ತç ಮತ್ತು ಶಾಲೆಯ ಶುಲ್ಕದ ಜವಾಬ್ದಾರಿ ಪಾವಗಡದ ಶ್ರೀರಾಮಕೃಷ್ಣ ಆಶ್ರಮ ನೋಡಿಕೊಳ್ಳಲಿದೆ. ತೀತಾ ಜಲಾಶಯದ ಸಮೀಪ ವಾಸಿಸುತ್ತೀರುವ ೧೫ಕುಟುಂಬಗಳಿಗೆ ಪಾವಗಡದ ಶ್ರೀರಾಮಕೃಷ್ಣ ಆಶ್ರಮದಿಂದ ಆಹಾರದ ಕಿಟ್ ಮತ್ತು ಟಾರ್ಪಲ್ ವ್ಯವಸ್ಥೆ ಮಾಡಲಾಗಿದೆ. ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಹೆಣ್ಣು ಮಕ್ಕಳ ವ್ಯಾಸಂಗಕ್ಕೆ ಹತ್ತಾರು ಯೋಜನೆಗಳನ್ನು ನೀಡಿದೆ. ನಿಜವಾದ ಪಲಾನುಭವಿಗೆ ಇನ್ನೂ ತಲುಪದಿರುವುದೇ ನಮಗೆ ನೋವು ತಂದಿದೆ. ಬಡವರಿಗೆ ಸಹಾಯಹಸ್ತ ನೀಡುವಾಗ ಅಧಿಕಾರಿವರ್ಗ ಎಚ್ಚೇತ್ತುಕೊಂಡು ಕೆಲಸ ಮಾಡಬೇಕಿದೆ. ಸರಕಾರ ಕೂಡ ಇಂತಹ ಕುಟುಂಬಗಳ ಮೇಲೆ ಹೆಚ್ಚಿನ ಕಾಳಜಿ ವಹಿಸಿ ತ್ವರಿತವಾಗಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಒತ್ತಾಯ ಮಾಡಿದರು.

ಮಧುಗಿರಿ ಎಸಿ ಭೇಟಿ ಪರಿಶೀಲನೆ..

ಅಲೆಮಾರಿ ಕಾರ್ಮಿಕರ ವಿಶೇಷ ವರದಿ ಪ್ರಕಟವಾದ ಬೇನ್ನಲ್ಲೆ ಮಧುಗಿರಿ ಎಸಿ ಸೋಮಪ್ಪ ಕಡಕೋಳ ತೀತಾ ಜಲಾಶಯಕ್ಕೆ ಬೇಟಿ ನೀಡಿ ಕಾರ್ಮಿಕರ ಅಳಲು ಆಲಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ನಂತರ ಮಧುಗಿರಿ ಕಚೇರಿಯಲ್ಲಿ ಕೊರಟಗೆರೆ ಕಂದಾಯ ಇಲಾಖೆ, ಸಮಾಜ ಕಲ್ಯಾಣ, ತಾಪಂ ಇಓ ಮತ್ತು ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧಿಕಾರಿಗಳ ಸಭೆ ನಡೆಸಿ ಅಂಕಿಅAಶದ ಮಾಹಿತಿ ಪಡೆದು ತ್ವರಿತವಾಗಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

***

ಅಲೆಮಾರಿ ಕಾರ್ಮಿಕರ ವಸತಿಗಾಗಿ ಹುಲೀಕುಂಟೆ ಗ್ರಾಮದ ಸರ್ವೆ ನಂ.೩೧ರಲ್ಲಿ ೧ಎಕರೇ ಜಾಗ ನಿಗಧಿ ಪಡಿಸಿ ೧೯ನಿವೇಶನದ ರೂಪುರೇಷು ಸಿದ್ದವಾಗಿದೆ. ಕೊರಟಗೆರೆ ವ್ಯಾಪ್ತಿಯ ಅಲೆಮಾರಿ ಕಾರ್ಮಿಕರ ಅಂಕಿಅAಶದ ಮಾಹಿತಿ ಪಡೆದಿದ್ದೇನೆ. ತಹಶೀಲ್ದಾರ್ ಮತ್ತು ತಾಪಂ ಇಓ ಜೊತೆಗೂಡಿ ತಕ್ಷಣ ನಿವೇಶನ ಹಂಚಿಕೆಗೆ ಸಿದ್ದತೆ ಮಾಡಿಕೊಳ್ಳಲು ಸೂಚಿಸಿದ್ದೇನೆ.

ಸೋಮಪ್ಪ ಕಡಕೋಳ. ಎಸಿ. ಮಧುಗಿರಿ

ನಮ್ಮ ದೇಶ ಗಗನಯಾನ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಆದರೇ ಮೂಲ ಸೌಲಭ್ಯ ಇಲ್ಲದೇ ಇಂತಹ ಕುಟುಂಬ ಇನ್ನೂ ಇರುವುದೇ ನಮ್ಮ ದುರ್ದೈವ. ಬಡಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಪ್ರಮುಖ ಕರ್ತವ್ಯ. ಬಡಮಕ್ಕಳ ವ್ಯಾಸಂಗಕ್ಕೆ ಪಾವಗಡದ ಶ್ರೀರಾಮಕೃಷ್ಣ ಆಶ್ರಮ ಸದಾ ಜೊತೆಯಾಗಿ ಇರಲಿದೆ.

ಜಪಾನಂಧಾ ಮಹಾರಾಜ್. ಶ್ರೀರಾಮಕೃಷ್ಣ ಆಶ್ರಮ. ಪಾವಗಡ

Leave a Reply

Your email address will not be published. Required fields are marked *