Monday, 3rd October 2022

ಫೆಬ್ರವರಿ 7ರಿಂದ ಸಾಗರದ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಆರಂಭ

ಶಿವಮೊಗ್ಗ : ಸಾಗರದ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಫೆಬ್ರವರಿ 7-2023 ಮಂಗಳವಾರದಿಂದ ಆರಂಭಗೊಳ್ಳಲಿದೆ.

ಒಂಭತ್ತು ದಿನಗಳ ಕಾಲ ಜಾತ್ರೆ ನಡೆಯಲಿದೆ. ಇದು ವಿಶೇಷವಾಗಿ ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ ಬಲು ಅದ್ದೂರಿ ಯಿಂದ ಜರುಗುತ್ತದೆ. 27-12-22 ರಲ್ಲಿ ಮರ ಕಡಿಯುವ ದಿನ ಇರುತ್ತದೆ. 31-1-23 ರಂದು ಅಂಕಿ ಹಾಕುವ ದಿನಾಂಕವನ್ನ ನಿಗದಿ ಪಡಿಸಲಾಗಿದೆ. ಶಿವಮೊಗ್ಗ ಸೇರಿದಂತೆ ಸಾಗರದ ಸುತ್ತಮುತ್ತಲ ಪ್ರದೇಶಗಳಿಂದ ಜನಸಾಗರವೆ ಈ ಜಾತ್ರೆಗೆ ಹರಿದುಬಂದಿರುತ್ತದೆ.