Tuesday, 11th August 2020

ಜಯದ ಓಟ ಮುಂದುವರಿಸಿದ ಲಯನ್‌ಸ್‌

ವಾರಿಯರ್ಸ್‌ಗೆ ಸೋಲು ಸಿದ್ಧಾಥ್ ಅರ್ಧ ಶತಕ ವ್ಯರ್ಥ ಪವನ್ ಮಿಂಚಿನ ಬ್ಯಾಾಟಿಂಗ್‌ ಪ್ರದೀಪ್, ಶರತ್‌ಗೆ 3 ವಿಕೆಟ್

 

ಮಾಜಿ ಚಾಂಪಿಯನ್‌ಸ್‌ ಮೈಸೂರು ವಾರಿಯರ್ಸ್ ವಿರುದ್ಧ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಿಂಚಿದ ಶಿವಮೊಗ್ಗ ಲಯನ್‌ಸ್‌ ತಂಡ 14 ರನ್ ಅಂತರದಲ್ಲಿ ಜಯ ಗಳಿಸುವ ಮೂಲಕ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ನ 8 ನೇ ಆವೃತ್ತಿಯಲ್ಲಿ ತನ್ನ ಜಯದ ಓಟವನ್ನು ಮುಂದುವರಿಸಿದೆ.


166 ರನ್ ಗಳ ಬೃಹತ್ ಮೊತ್ತ ಬೆಂಬತ್ತಿಿದ ಮೈಸೂರು ವಾರಿಯರ್ಸ್, ಶಿವಮೊಗ್ಗದ ಸ್ಪಿಿನ್ ಹಾಗೂ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿ 152 ರನ್ ಗಳಿಸುವಷ್ಟರಲ್ಲಿ ತನ್ನೆೆಲ್ಲ ವಿಕೆಟ್ ಕಳೆದುಕೊಂಡಿತು. ಕೆ. ವಿ. ಸಿದ್ದಾರ್ಥ್ 77 ರನ್ ಗಳಿಸಿ ದಿಟ್ಟ ಹೋರಾಟ ನೀಡಿದರೂ ತಂಡವನ್ನು ಸೋಲಿನಿದಿಂದ ಪಾರು ಮಾಡಲಾಗಲಿಲ್ಲ.
ಶಿವಮೊಗ್ಗ ಲಯನ್‌ಸ್‌ ಪರ ಟಿ. ಪ್ರದೀಪ್ ಹಾಗೂ ಎಚ್. ಎಸ್. ಶರತ್ ತಲಾ ಮೂರು ವಿಕೆಟ್ ಪಡೆದು ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕ ಅಭಿಮನ್ಯು ಮಿಥುನ್, ಹಾಗೂ ಎಸ್.ಪಿ ಮಂಜುನಾಥ್ ತಲಾ ಎರಡು ವಿಕೆಟ್ ಪಡೆದರು.
ಶಿವಮೊಗ್ಗ ಲಯನ್‌ಸ್‌ ಪರ ಪವನ್ ದೇಶಪಾಂಡೆ ಗಳಿಸಿದ 53 ರನ್ ಜಯದಲ್ಲಿ ಪ್ರಮುಖವಾಯಿತು. ಶಿವಮೊಗ್ಗ ಸತತ ಎರಡನೇ ಜಯ ಗಳಿಸಿದರೆ, ಮೈಸೂರು ಮೊದಲ ಪಂದ್ಯದಲ್ಲಿ ಅಂಕ ಹಂಚಿಕೊಂಡು ಈಗ ಮತ್ತೊೊಂದು ಸೋಲಿನ ಆಘಾತ ಅನುಭವಿಸಿತು.

ಶಿವಮೊಗ್ಗ ಸವಾಲಿನ ಮೊತ್ತ:
ಕರ್ನಾಟಕ ಪ್ರೀಮಿಯರ್ ಲೀಗ್ ನ 8 ನೇ ಆವೃತ್ತಿಿಯ ನಾಲ್ಕನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್‌ಸ್‌ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಮುಖಾಮುಖಿಯಾದವು. ಟಾಸ್ ಸೋತು ಬ್ಯಾಾಟಿಂಗ್‌ಗೆ ಇಳಿದ ಲಯನ್‌ಸ್‌ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆೆ 166 ರನ್ ಗಳಿಸಿ ದಿಟ್ಟ ಸವಾಲೊಡ್ಡಿಿತು.
ಟಾಸ್ ಸೋತು ಬ್ಯಾಾಟಿಂಗ್ ಗೆ ಇಳಿದ ಶಿವಮೊಗ್ಗದ ಪರ ಮೊದಲ ಪಂದ್ಯದ ಹೀರೋ ನಿಹಾಲ್ ಉಳ್ಳಾಾಲ್ ಕೇವಲ 28 ರನ್ ಗಳಿಸಿ ನಿರ್ಗಮಿಸಿರವುದು ತಂಡದ ರನ್ ಗಳಿಕೆಯ ಮೇಲೆ ಕಡಿವಾಣ ಹಾಕಿದಂತಾಯಿತು. ಸ್ಫೋೋಟಕ ಬ್ಯಾಾಟಿಂಗ್ ಪ್ರದರ್ಶಿಸಬಲ್ಲ ಅರ್ಜುನ್ ಹೊಯ್ಸಳ ಕೂಡ 28 ರನ್ ಗೆ ತೃಪ್ತಿಿಪಟ್ಟರು. 17 ಎಸೆತಗಳನ್ನು ಎದುರಿಸಿದ ಉಳ್ಳಾಾಲ್ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಆತ್ಮವಿಶ್ವಾಾಸದ ಆಟ ಆರಂಭಿಸಿದ್ದರು. ಆದರೆ ವೈಶಾಖ್ ವಿಜಯ್ ಕುಮಾರ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಿಸಿದರು. ಹುಬ್ಬಳ್ಳಿಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲೂ ಉಳ್ಳಾಾಲ್ ಅಜೇಯ 88 ರನ್ ಸಿಡಿಸಿ ಜಯದ ರೂವಾರಿ ಎನಿಸಿದ್ದರು.

ಶಿವಮೊಗ್ಗ ತಂಡ ಸವಾಲಿನ ಮೊತ್ತ ಗಳಿಸುವಲ್ಲಿ ಪವನ್ ದೇಶಪಾಂಡೆ ಅವರ ಆಕರ್ಷಕ ಅರ್ಧ ಶತಕ ಪ್ರಮುಖ ಪಾತ್ರ ವಹಿಸಿತು. 42 ಎಸೆತಗಳನ್ನೆೆದುರಿಸಿದ ದೇಶಪಾಂಡೆ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಅಮೂಲ್ಯ 53 ರನ್ ಗಳಿಸಿ ಪ್ರಸಕ್ತ ಕೆಪಿಎಲ್ ನಲ್ಲಿ ವೈಯಕ್ತಿಿಕ ಮೊದಲ ಅರ್ಧ ಶತಕ ದಾಖಲಿಸಿದರು. ಶಿವಮೊಗ್ಗ ತಂಡದ ಇತರ ಬ್ಯಾಾಟ್ಸಮನ್ ಗಳು ಲಗುಬಗನೇ ವಿಕೆಟ್ ಒಪ್ಪಿಿಸಿದರೂ ಹೆಚ್ಚು ಹೆಚ್ಚು ಚೆಂಡುಗಳನ್ನು ವ್ಯಯ ಮಾಡಲಿಲ್ಲ. ಶಿವಮೊಗ್ಗದ ಇನ್ನಿಿಂಗ್‌ಸ್‌‌ನಲ್ಲಿ 6 ಸಿಕ್ಸರ್ ಹಾಗೂ 16 ಬೌಂಡರಿ ಸೇರಿತ್ತು.

ಮೈಸೂರು ವಾರಿಯರ್ಸ್ ಪರ ವೈಶಾಖ್ ವಿಜಯ್ ಕುಮಾರ್ ಎರಡು ವಿಕೆಟ್ ಗಳಿಸಿದರೂ ನಾಲ್ಕು ಓವರ್ ಗಳಲ್ಲಿ 41 ರನ್ ನೀಡಿ ದುಬಾರಿ ಬೌಲರ್ ಎನಿಸಿದರು. ದೇವಯ್ಯ, ಅನಿರುಧ್ ಜೋಶಿ, ವೆಂಕಟೇಶ್ ಹಾಗೂ ಸಿದ್ದಾರ್ಥ್ ತಲಾ ಒಂದು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್
ಶಿವಮೊಗ್ಗ ಲಯನ್‌ಸ್‌ 166/7 (20)
ಪವನ್ ದೇಶ್‌ಪಾಂಡೆ 53
ಅರ್ಜುನ್ ಹೊಯ್ಸಳ 28
ನಿಹಾಲ್ ಉಲ್ಲಾಳ್ 28
ಬೌಲಿಂಗ್: ವೈಶಾಖ್ ವಿಜಯ್ ಕುಮಾರ್ 41 ಕ್ಕೆೆ 2, ಕೆ. ಸಿದ್ಧಾಾರ್ಥ್ 4 ಕ್ಕೆೆ 1

ಮೈಸೂರು ವಾರಿಯರ್ಸ್: 152(19.2)
ಕೆ.ಸಿದ್ಧಾಾರ್ಥ್-77
ಅನಿರುಧ್ ಜೋಶಿ-26
ಬೌಲಿಂಗ್: ಪ್ರದೀಪ್ 22 ಕ್ಕೆೆ 3, ಎಚ್.ಎಸ್ ಶರತ್ 36 36 ಕ್ಕೆೆ 3, ಎಸ್.ಪಿ ಮಂಜುನಾಥ್ 17 ಕ್ಕೆೆ 2, ಅಭಿಮನ್ಯು ಮಿಥುನ್ 34 ಕ್ಕೆೆ 2

Leave a Reply

Your email address will not be published. Required fields are marked *