Monday, 9th December 2019

ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ ಆಗ್ರಹ ಸಿಎಂ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳ…

ಕೇಂದ್ರ ವಿಶೇಷ ಪ್ಯಾಕೇಜ್ ಘೋಷಿಸಲು

ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿ ಪರಿಸ್ಥಿತಿ ಹಿನ್ನಲೆಯಲ್ಲಿ ಶಾಸಕನಾಗಿ ನನ್ನ ಒಂದು ತಿಂಗಳ ಸಂಬಳ ಹಾಗೂ ಸಿದ್ದಾರ್ಥ ಶಿಕ್ಷಣ 10 ಲಕ್ಷ ರುಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿಡಾ. ಜಿ.ಪರಮೇಶ್ವರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ನೆರೆ ಪರಿಸ್ಥಿಿತಿ ವಿಪರೀತವಾಗಿದ್ದು, ತುರ್ತು ಪರಿಸ್ಥಿಿತಿ ನಿರ್ಮಾಣವಾಗಿದೆ. ಈ ಪರಿಸ್ಥಿಿತಿ ನಿಭಾಯಿಸಲು ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರಕಾರವೇ ಇಲ್ಲ. ಪ್ರಧಾನಿ ಅಥವಾ ಕೇಂದ್ರ ಗೃಹ ಸಚಿವರು ಕೂಡಲೇ ರಾಜ್ಯದಲ್ಲಿ ನೆರೆ ಪರಿಸ್ಥಿಿತಿಯನ್ನು ವೈಮಾನಿಕ ಸಮೀಕ್ಷೆ ನಡೆಸಿ, 10 ಸಾವಿರ ಕೋಟಿ ರು. ಮೊತ್ತದ ವಿಶೇಷ ಪ್ಯಾಾಕೇಜ್ ಮಾಡಬೇಕು. ಜತೆಗೆ ಕೇಂದ್ರದಿಂದ ತಂಡ ಆಗಮಿಸಿ ಸೂಕ್ತ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.


ಕಾಂಗ್ರೆೆಸ್‌ನ ಎಲ್ಲ ಶಾಸಕರು ನೆರೆ ಸಂತ್ರಸ್ತರಿಗೆ ಒಂದು ತಿಂಗಳ ಸಂಬಳ ನೀಡಬೇಕು. ನಮ್ಮ ಮೆಡಿಕಲ್ ಕಾಲೇಜಿನಿಂದ ಚಿಕಿತ್ಸೆೆಗೆ ತಂಡ ಕಳುಹಿಸಲು ನಾವು ತಯಾರಿದ್ದೇವೆ. ಈ ಸರಕಾರವು ಹೇಗೆ ಕೆಲಸ ಮಾಡುತ್ತಿಿದೆ ಎಂದು ಗಮನಿಸುತ್ತೇನೆ ಎಂದು ಹೇಳಿದರು.
ಕಾನೂನು ಬಾಹಿರವಾಗಿ ಏನೇ ತೀರ್ಮಾನವಾದರೂ ಅದನ್ನು ಜನರ ಗಮನಕ್ಕೆೆ ತರುತ್ತೇವೆ. ನಮ್ಮ ಸರಕಾರ ಯಾವುದೇ ಕಾನೂನು ಬಾಹಿರ ಮಾಡಿಲ್ಲ. ಬಿಬಿಎಂಪಿಯ ಕೌನ್ಸಿಿಲ್‌ನಲ್ಲೂ ಬಿಜೆಪಿ ಸದಸ್ಯರು ಇದ್ದಾರೆ. ಅವರು ಒಪ್ಪಿಿ ಕಳುಹಿಸಿದ ಬಜೆಟ್ ಅನ್ನೇ ನಾವು ಒಪ್ಪಿಿದ್ದೇವೆ. 13,500 ಸಾವಿರ ಕೋಟಿ ರುಪಾಯಿ ಇದ್ದ ಬಜೆಟ್ ಅನ್ನು ಕಡಿಮೆ ಮಾಡಿದ್ದೇವೆ. ಆದರೆ ಅವರು ಯಾಕೆ ತಡೆಹಿಡಿದಿದ್ದಾರೆ ಗೊತ್ತಿಿಲ್ಲ ಎಂದರು.

.

Leave a Reply

Your email address will not be published. Required fields are marked *