Sunday, 3rd July 2022

ಜ್ಞಾನವಾಪಿ ಮತ್ತು 1991ರ ಆ ಕಾಯಿದೆ

ವೀಕೆಂಡ್ ವಿತ್‌ ಮೋಹನ್

ಮೋಹನ್ ವಿಶ್ವ

camohanbn@gmail.com

ಒಂದೆಡೆ ಇಸ್ಲಾಮಿಕ್ ದಂಗೆಕೋರರು ಮಂದಿರಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿದ್ದರು. ಬ್ರಿಟಿಷರ ಮೂಲಕ ಕಾಲಿಟ್ಟಂಥ ಮಿಷನರಿ ಗಳು ದೇಶದ ಮೂಲೆ ಮೂಲೆಗಳಲ್ಲಿ ಭೂಮಿಯ ಒಡೆಯರಾಗುವ ಮೂಲಕ ಚರ್ಚ್ ನಿರ್ಮಾಣದಲ್ಲಿ ತೊಡಗಿದರು.

ಕಾಶಿ ವಿಶ್ವನಾಥನ ಸನ್ನಿಧಿಯ ಶಿವನ ದೇಗುಲದ ಮೇಲೆ ನಿರ್ಮಾಣವಾಗಿರುವ ‘ಜ್ಞಾನವಾಪಿ’ ಮಸೀದಿ ಈಗ ವಿವಾದದ ಕೇಂದ್ರಬಿಂದುವಾಗಿದೆ. ಮಸೀದಿ ಯೊಳಗಿನ ಶೃಂಗಾರ ಗೌರಿ, ಗಣೇಶ, ನಂದಿ ಮೂರ್ತಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ಐವರು ಮಹಿಳೆಯರು ಸಲ್ಲಿಸಿದ್ದಂಥ ಅರ್ಜಿಯನ್ನು ಸ್ವೀಕರಿಸಿದ ವಾರಾಣಸಿ ನ್ಯಾಯಾಲಯ ಮಸೀದಿಯ ಸಮೀಕ್ಷೆ ನಡೆಸಲು ಸಮಿತಿಯೊಂದನ್ನು ರಚಿಸಿ ಸಮೀಕ್ಷೆ ಕೈಗೆತ್ತಿಕೊಳ್ಳಲು ಹೇಳಿತ್ತು.

ಈಗ ಸಮೀಕ್ಷೆ ಮುಗಿದಿದ್ದು ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಿದೆ. ಅತ್ತ ಸಮೀಕ್ಷೆ ಕಾರ್ಯಕ್ಕೆ ತಡೆಯಾಜ್ಞೆ ಕೋರಿ ಮುಸ್ಲಿಂ ಸಂಘಟನೆಗಳು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿವೆ. ಈ ಮಧ್ಯೆ ಸಮೀಕ್ಷೆಯ ವೇಳೆ ಮಸೀದಿಯೊಳಗೆ ‘ಶಿವಲಿಂಗ’ ಪತ್ತೆಯಾಗಿರುವ ವಿಷಯ ತಿಳಿದು ಬಂದಿದೆ. ಅಲ್ಲಿಗೆ ಔರಂಗಜೇಬನು ಶಿವ ದೇವಾ ಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದ ನೆಂಬುದು ಬಹುತೇಕ ಖಾತ್ರಿಯಾಯಿತು. ಎಂದಿನಂತೆ ಜಾತ್ಯತೀತ ತೆಯ ಸೋಗಿನಲ್ಲಿ ಮುಸಲ್ಮಾನರ ಪರ ನಿಲ್ಲುವ ಒಂದಷ್ಟು ಗಂಜಿ ಗಿರಾಕಿಗಳು ಶಿವಲಿಂಗ ಪತ್ತೆಯಾಗಿರುವುದರ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ.

ಬೆಟ್ಟದ ಮೇಲೆ ಪ್ರಾಣಿಯ ಸತ್ತ ದೇಹವೊಂದನ್ನು ಕಂಡರೆ ಹದ್ದುಗಳು ಮುಗಿಬೀಳುವಂತೆ, ಗಂಜಿ ಗಿರಾಕಿಗಳು ತಮ್ಮ ಇಂದಿನ ನಿತ್ಯ ಕರ್ಮಗಳನ್ನು ಚಾಲ್ತಿಯಲ್ಲಿರಿಸಿದ್ದಾರೆ. ನ್ಯಾಯಾಲಯ ಶಿವಲಿಂಗ ಸಿಕ್ಕ ಜಾಗವನ್ನು ಸುರಕ್ಷತಾ ದೃಷ್ಟಿಯಿಂದ ಸೀಲ್ ಮಾಡಲು ಹೇಳಿದೆ. ಅತ್ತ ಮಸೀದಿಯೊಳಗೆ ಮುಸಲ್ಮಾನರು ನಮಾಜ್ ಕೂಡ ಮಾಡಬಹುದೆಂದು ಹೇಳಿದೆ. ಶತಾಯ ಗತಾಯ ಸಮೀಕ್ಷೆಯನ್ನು ನಿಲ್ಲಿಸಬೇಕೆಂದು ಕಮ್ಯುನಿಸ್ಟ್ ಮಿತ್ರಕೂಟ ಎಲ್ಲಿಲ್ಲದ ಪ್ರಯತ್ನ ಮಾಡಿತು, ಆದರೆ ಸಮೀಕ್ಷೆ ಮುಗಿದಿದ್ದು ವಿಚಾರಣೆ ಬಾಕಿಯಿದೆ.

ಅಯೋಧ್ಯೆಯ ರಾಮ ಮಂದಿರ ಧ್ವಂಸ ಪ್ರಕರಣದಲ್ಲಿ ತೀರ್ಪು ಬಂದ ನಂತರ ಭಾರತದ ಇತರ ಮಂದಿರ ಧ್ವಂಸ ಪ್ರಕರಣಗಳು ಹೊರಬಂದು ಇಸ್ಲಾಮಿಕ್ ದಾಳಿಕೋರರ ಬಣ್ಣ ಬಯಲಾಗಿ ಮಂದಿರಗಳು ಪುನರ್ ನಿರ್ಮಾಣವಾಗುತ್ತದೆಯೆಂಬ ಭಯ ಕೆಲವರನ್ನು ಕಾಡುತ್ತಿದೆ. ರಾಮ ಮಂದಿರ ಧ್ವಂಸಗೊಳಿಸಿ ಕಟ್ಟಿದ್ದಂಥ ಬಾಬ್ರಿ ಮಸೀದಿಯನ್ನು 1991ರಲ್ಲಿ ಕೆಡವಿದ ನಂತರ, ಕಾಂಗ್ರೆಸ್ ತನ್ನ ಸಾಬರವೋಟಿಗೆ ಪೆಟ್ಟು ಬಿದ್ದಿದ್ದನ್ನು ಅರಿತು ‘ಪೂಜಾ ಸ್ಥಳ (ವಿಶೇಷ) ಕಾಯಿದೆ ೧೯೯೧’ನ್ನು ಜಾರಿಗೆ ತಂದಿತು.

ಅತ್ತ ದೇಶದ ಆರ್ಥಿಕತೆಯನ್ನು ಅಧಪತನಕ್ಕೆ ತಂದಿದ್ದ ಕಾಂಗ್ರೆಸ್ ಲಂಡನ್‌ನಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ತಂದು ದೇಶ ನಡೆಸಿತ್ತು. ಹಿಂದೆ ಮುಂದೆ ಯೋಚಿಸದೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ಬರುತ್ತದೆಯೆಂಬ ಅಲ್ಪ ಜ್ಞಾನವಿಲ್ಲದೆ ನೂತನ ಕಾಯಿದೆಯನ್ನು ಕಾಂಗ್ರೆಸ್ ಜಾರಿಗೆ ತಂದಿತ್ತು. ಈ ಕಾಯಿದೆ ಯನ್ವಯ ಆಗಸ್ಟ್ 15, 1947ರಂದು ದೇಶದಲ್ಲಿರುವ ಪ್ರತಿಯೊಂದು ಧಾರ್ಮಿಕ ಕೇಂದ್ರವು, ಆ ದಿನದಂದು ತನ್ನ ಧಾರ್ಮಿಕ ಆರಾಧನೆಯನ್ನು ನಡೆಸುತ್ತಿರುವ ರೀತಿಯಲ್ಲಿಯೇ ನಡೆಸಿಕೊಂಡು ಹೋಗಬೇಕು. ಜತೆಗೆ ಇನ್ನು ಮುಂದೆ ಯಾರೂ ಕೂಡ ಒಂದು ಧಾರ್ಮಿಕ ಪಂಗಡದ ಕ್ಷೇತ್ರವನ್ನು
ಮತ್ತೊಂದು ಧಾರ್ಮಿಕ ಪಂಗಡದ ಧಾರ್ಮಿಕ ಕ್ಷೇತ್ರವನ್ನಾಗಿ ಬದಲಾಯಿಸಬಾರದು.

ಸರಳವಾಗಿ ಹೇಳಬೇಕೆಂದರೆ ಮಂದಿರ ಕೆಡವಿ ಮಸೀದಿ ಕಟ್ಟಿದ್ದರೆ ಮಸೀದಿಯೇ ಮುಂದುವರಿಯಬೇಕು,ಪುನಃ ಮಂದಿರ ನಿರ್ಮಾಣವಾಗಬಾರದು. ಈ ಕಾಯಿದೆ ಎಲ್ಲ ಧರ್ಮದವರಿಗೆ ಅನ್ವಯವಾದರೂ ಸಹ, ಇದರ ನೇರ ಪರಿಣಾಮ ಹಿಂದೂ ಧರ್ಮದ ಮೇಲೆ ಬೀಳುತ್ತದೆ. ಯಾಕೆಂದರೆ ಇತಿಹಾಸದಲ್ಲಿ ಮಸೀದಿ ಕೆಡವಿ ದೇವಸ್ಥಾನ ಕಟ್ಟಿದ ಉದಾಹರಣೆ ಇಲ್ಲ. ಎಡೆಯೂ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ. ನ್ಯಾಯಾ ಲಯದ ತೀರ್ಪುಗಳ ವಿರುದ್ಧವೇ ಕಾಯಿದೆಗಳನ್ನು ಮಂಡಿಸಿರುವ ಕಾಂಗ್ರೆಸ್ಸಿಗೆ ಪೂಜಾ ಸ್ಥಳ (ವಿಶೇಷ) ಕಾಯಿದೆ ೧೯೯೧ ಏನು ಹೊಸತಾಗಿರಲಿಲ್ಲ.

ಒಂದೆಡೆ ಇತಿಹಾಸದಲ್ಲಿ ಇಸ್ಲಾಮಿಕ್ ದಂಗೆಕೋರರು ಮಂದಿರಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿದ್ದರು. ನಂತರ ಬ್ರಿಟಿಷರ ಮೂಲಕ ಭಾರತಕ್ಕೆ ಕಾಲಿಟ್ಟಂಥ ಕ್ರಿಶ್ಚಿಯನ್ ಮಿಷನರಿಗಳು ಸದ್ದಿಲ್ಲದೆ ದೇಶದ ಮೂಲೆ ಮೂಲೆಗಳಲ್ಲಿ ಸಾವಿರಾರು ಎಕರೆ ಭೂಮಿಯ ಒಡೆಯರಾಗುವ ಮೂಲಕ ಚರ್ಚ್ ನಿರ್ಮಾಣ ಕಾರ್ಯದಲ್ಲಿ ತೊಡಗಿದರು. ದೇಶದ ಕಠಿಣ ಸ್ಥಳಗಳಲ್ಲಿ ತಮ್ಮ ಚರ್ಚ್ ನಿರ್ಮಾಣ ಕಾರ್ಯ ಮಾಡುವುದನ್ನು ಮಿಷನರಿಗಳು ಬಿಡಲಿಲ್ಲ. ಕ್ರಿಶ್ಚಿ
ಯನ್ ಧರ್ಮವನ್ನು ಭಾರತೀಕರಣ ಮಾಡುವ ಮೂಲಕ ತಮ್ಮ ಚರ್ಚುಗಳ ನಿರ್ಮಾಣ ಶೈಲಿಯನ್ನೇ ಬದಲು ಮಾಡಿದರು.

ಮಂದಿರಗಳ ಮೇಲಿನ ಗೋಪುರಗಳು ಕ್ರಿಶ್ಚಿಯನ್ ಚರ್ಚುಗಳ ಮೇಲೆ ಕಂಡು ಬಂದವು. ನವರಾತ್ರಿಯ ಬೊಂಬೆಗಳ ನಡುವೆ ಏಸು ಕ್ರಿಸ್ತ ಕಂಡು ಬಂದ, ಮಂದಿರದ ಗೋಪುರದಲ್ಲಿ ಕ್ರಾಸ್ ಚಿಹ್ನೆ ಕಂಡು ಬಂತು, ಚರ್ಚುಗಳ ಮುಂದೆ ಹಿಂದೂ ದೇವಾಲಯದ ಗರುಡ ಕಂಬಗಳು ಬಂದವು, ಕಂಬದ ತುದಿ ಯಲ್ಲಿ ಕ್ರಾಸ್ ಚಿಹ್ನೆ ಕಂಡು ಬಂತು, ಸದ್ದಿಲ್ಲದೆ ಮಿಷನರಿಗಳ ಅಕ್ರಮ ಮತಾಂತರದ ಮೂಲಕ ಮನೆ ಮನೆಗೆ ಹಿಂದೂ ದೇವರುಗಳ ಪೂಜಾ ವಿಧಿ
ವಿಧಾನವೇ ಬದಲಾಗಿ ಹೋಯಿತು.

1991ರ ಕಾಯ್ದೆಯಡಿಯಲ್ಲಿ ೧೯೪೭ರಲ್ಲಿ ಅಸ್ತಿತ್ವದಲ್ಲಿದ್ದಂಥ ಧಾರ್ಮಿಕ ಕೇಂದ್ರಗಳ ಮೂಲ ಬದಲಾವಣೆಗಳಾಗಬಾರದೆಂಬ ತಿದ್ದುಪಡಿ ಮಾಡಿದ ಕಾಂಗ್ರೆಸ್ ಪಕ್ಷ, ಕ್ರಿಶ್ಚಿಯನ್ ಧರ್ಮದ ಭಾರತೀಕರಣದ ಬಗ್ಗೆ ಏನು ಹೇಳಲಿಲ್ಲ? ನಾವ್ಯಾರು ಬಾಬರ್, ಔರಂಗಜೇಬನನ್ನು ನೋಡಿಲ್ಲ. ಆದರೆ ಸ್ವಾತಂತ್ರ್ಯಾ ನಂತರ ಕ್ರಿಶ್ಚಿಯನ್ ಧರ್ಮದ ಭಾರತೀಕರಣವನ್ನು ನೋಡಿದ್ದೀವಲ್ಲ? ಕೇವಲ ಧಾರ್ಮಿಕ ಕೇಂದ್ರಗಳ ಬದಲಾವಣೆಯನ್ನು ಮಾತ್ರ ಯಾಕೆ
ಈ ಕಾಯ್ದೆಯಡಿಯಲ್ಲಿ ಸೇರಿಸಲಾಯಿತು? ಬದಲಾಗಿ ಕ್ರಿಶ್ಚಿಯನ್ ಧರ್ಮದ ಭಾರತೀಕರಣವನ್ನೂ ಸಹ ಸೇರಿಸಬಹುದಿತ್ತು. ಆದರೆ ಸೇರಿಸಲಿಲ್ಲ ಯಾಕೆಂದರೆ ಅಲ್ಪಸಂಖ್ಯಾತರ ಹೆಸರಿನಲ್ಲಿ ಕ್ರಿಶ್ಚಿಯನ್ ಮತಗಳು ಕಾಂಗ್ರೆಸ್ಸಿಗೆ ಬೇಕಿತ್ತು. ಎಗ್ಗಿಲ್ಲದೆ ಮತಾಂತರಗಳು ನಡೆಯುತ್ತಿದ್ದರೂ ಸಹ ಅದರ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ಕಾಂಗ್ರೆಸ್ ಮಾಡುವುದಿಲ್ಲ.

ಕ್ರಿಶ್ಚಿಯನ್ ಮತಾಂತರಿಗಳ ಕುತಂತ್ರ ಬಯಲಾದರೆ ತಮ್ಮ ಮತಬ್ಯಾಂಕಿಗೆ ಹೊಡೆತ ಬೀಳುತ್ತದೆಂಬ ಕಾರಣಕ್ಕಾಗಿ ಕಾಂಗ್ರೆಸ್ ಮತಾಂತರ ನಿಯಂತ್ರಣ
ಕಾಯಿದೆಯನ್ನೂ ವಿರೋಧಿಸುತ್ತಿದೆ. ವಿಪರ್ಯಾಸವೆಂದರೆ ಅತ್ತ ಇಸ್ಲಾಮಿಕ್ ದಾಳಿಕೋರರಿಂದ, ಇತ್ತ ಕ್ರಿಶ್ಚಿಯನ್ ಮತಾಂತರಿಗಳಿಂದ ಸಂಕಷ್ಟಕ್ಕೆ ಸಿಲುಕಿದ್ದು ಹಿಂದೂ ಧರ್ಮ. 1991ರಲ್ಲಿ ಜಾರಿಗೆ ಬಂದ ಈ ಕಾಯಿದೆಯಲ್ಲಿ ಒಂದೇ ವಿನಾಯಿತಿಯನ್ನು ನೀಡಲಾಗಿದೆ. ಪುರಾತತ್ವ ಅಡಿಯಲ್ಲಿ
ಬರುವ ಪುರಾತನ ಅಥವಾ ಐತಿಹಾಸಿಕ ಸ್ಮಾರಕಗಳ ವಿಚಾರಣೆಗಳನ್ನು ನಡೆಸಬಹುದು.

ಜ್ಞಾನವಾಪಿ ಮಸೀದಿಯಲ್ಲಿ ದೊರಕಿರುವ ಶಿವಲಿಂಗವನ್ನು ಪುರಾತತ್ವ ಇಲಾಖೆ ಐತಿಹಾಸಿಕ ಸ್ಮಾರಕದ ಭಾಗವೆಂದು ಘೋಷಿಸಬಹುದಾಗಿದೆ. ಒಂದು ಸ್ಥಳವನ್ನು ಪುರಾತತ್ವ ಇಲಾಖೆಯಡಿಯಲ್ಲಿ ಘೋಷಿಸಬೇಕಾದರೆ ಕನಿಷ್ಠ 100 ವರ್ಷಗಳಷ್ಟು ಹಳೆಯದ್ದಾಗಿರಬೇಕು. ಮಸೀದಿಯಲ್ಲಿ ಸಿಕ್ಕ ಶಿವಲಿಂಗ 100 ವರ್ಷಕ್ಕಿಂತಲೂ ಹಳೆಯದಾಗಿದೆ. ಮಸೀದಿಯ ಗೋಡೆಗಳ ಮೇಲೆ ಕಾಣಸಿಗುವ ಮಂದಿರದ ಕುರುಹುಗಳ ಆಧಾರದ ಮೇಲೆ ಪುರಾತತ್ವ ಇಲಾಖೆ ನಿರ್ಧರಿಸ ಬಹುದು. ಕಾಶ್ಮೀರದ ಅನಂತ್‌ನಾಗ್ ಜಿಯಲ್ಲಿರುವ ಮಾರ್ಥಂಡ ದೇವಸ್ಥಾನದಲ್ಲಿ ಇತ್ತೀಚೆಗೆ ಜಮ್ಮು ಕಾಶ್ಮೀರದ ರಾಜ್ಯಪಾಲರು ಪೂಜೆಯನ್ನು ನೆರವೇರಿಸಿದರು. ರಾಜ್ಯಪಾಲರು ಪೂಜೆ ನಡೆಸುವ ಮುನ್ನ ಪುರಾತತ್ವ ಇಲಾಖೆಯ ಅನುಮತಿ ಪಡೆಯಬೇಕಿತ್ತೆಂದು ಇಲಾಖೆಯು ಹೇಳಿತು. ಪುರಾತತ್ವ ಇಲಾಖೆಯಡಿಯಲ್ಲಿ ಬರುವ ಐತಿಹಾಸಿಕ ಸ್ಥಳಗಳಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲು ಇಲಾಖೆ ಅನುಮತಿ ಬೇಕೆಂಬುದಾದರೆ, ಮುಂದೊಂದು ದಿನ ಜ್ಞಾನವಾಪಿ ಮಸೀದಿ ಪುರಾತತ್ವ ಇಲಾಖೆಯಡಿಯಲ್ಲಿ ಸೇರಿದರೆ, ಅಲ್ಲಿ ನಮಾಜ್ ಮಾಡಲು ಅವಕಾಶ ನೀಡದ ಪರಿಸ್ಥಿತಿಯೂ ಎದುರಾಗಬಹುದು.

ಪೂಜಾ ಸ್ಥಳ (ವಿಶೇಷ) ಕಾಯಿದೆ 1991ನ್ನು ಸಂವಿಧಾನದ ಚೌಕಟ್ಟಿನಲ್ಲಿ ರಚಿಸಲಾಗಿಲ್ಲವೆಂಬ ಮಾತುಗಳು ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಿವೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಕಾಯಿದೆಯ ಅಸ್ತಿತ್ವವನ್ನು ಪ್ರಶ್ನಿಸಿ ೨೦೨೧ರಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿ ಇನ್ನೂ ವಿಚಾರಣೆ ಯ ಹಂತದಲ್ಲಿದೆ. ಸಂವಿಧಾನದಲ್ಲಿ ಜಾತ್ಯತೀತವೆಂಬ ಪದವನ್ನು ಸೇರಿಸಿದ ಮೇಲೆ ಧರ್ಮಾತೀತವಾಗಿ ಕಾನೂನುಗಳನ್ನು ರಚಿಸಬೇಕು. ಆದರೆ ಈ ಕಾಯಿದೆ ಕೇವಲ ಒಂದು ಧರ್ಮದ ಪರವಾಗಿರುವುದು ಕಂಡುಬಂದಿದೆ. ಈ ಕಾಯಿದೆಯಿಂದ ಭಾರತದ ಬಹುಸಂಖ್ಯಾತ ಹಿಂದೂಗಳ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತಿದೆಯೆಂಬ ಚರ್ಚೆಗಳು ನಡೆಯುತ್ತಿವೆ.

ಬಹುಸಂಖ್ಯಾತ ಹಿಂದೂಗಳು ತಮ್ಮ ಪುರಾತನ ಧಾರ್ಮಿಕ ಸ್ಥಳಗಳ ಮೇಲಾದಂಥ ದಾಳಿಗಳ ವಿರುದ್ಧ ಧ್ವನಿ ಎತ್ತದಂತೆ ಮಾಡಲು ತಂದಿರುವ ಕಾಯಿದೆ
ಇದಾಗಿದೆ. ಇತಿಹಾಸದದಂಥ ದಾಳಿಗಳ ವಿರುದ್ಧ ಧ್ವನಿ ಎತ್ತದಿದ್ದರೆ ಭವಿಷ್ಯದಲ್ಲಿ ಹಿಂದೂ ದೇವಾಲಯಗಳನ್ನು ರಕ್ಷಿಸುವವರು ಯಾರೆಂಬ ಪ್ರಶ್ನೆ ಮೂಡುತ್ತಿದೆ? ಮುಸಲ್ಮಾನರ ವಿಷಯದಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವ ಗಂಜಿ ಗಿರಾಕಿಗಳು, ಹಿಂದೂಗಳ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುವುದಿಲ್ಲ. ಇಸ್ಲಾಮಿಕ್ ದಾಳಿಕೋರರು ಭಾರತಕ್ಕೆ ಬರುವ ಮುಂಚೆ ಯಹೂದಿಗಳು ಬಂದಿದ್ದರು, ಅವರೆಂದಿಗೂ ಭಾರತದ ಮಂದಿರವನ್ನು ಮುಟ್ಟಿರಲಿಲ್ಲ.

ಜಗತ್ತಿನ ದೇಶಗಳು ಯಹೂದಿಗಳನ್ನು ಕೈಬಿಟ್ಟರೂ, ಭಾರತ ಮಾತ್ರ ಅವರ ಕೈ ಹಿಡಿಯಿತು. ಒಂದು ದೇಶದ ಸಂಸ್ಕೃತಿಯನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಾಳುಮಾಡಬಹುದು. ಇಸ್ಲಾಮಿಕ್ ದಾಳಿಕೋರರು ದೈಹಿಕವಾಗಿ ತಮ್ಮ ದಾಳಿಗಳ ಮೂಲಕ ಭಾರತದ ಸಂಸ್ಕೃತಿಯನ್ನು ಹಾಳು ಮಾಡಿ ದರೆ, ಕ್ರಿಶ್ಚಿಯನ್ ಮಿಷನರಿಗಳು ಮತಾಂತರದಿಂದ ಹಾಳುಮಾಡಿದ್ದಾರೆ. ಸಾರ್ವಜನಿಕ ಧಾರ್ಮಿಕ ಸ್ಥಳಗಳ ಮೇಲಾದಂಥ ದಾಳಿಯಿಂದ ಮಂದಿರಗಳ ಪುನರ್ ನಿರ್ಮಾಣವಾಗಬೇಕಿದೆ, ಜತೆಗೆ ಮನೆ ಮನೆಯಲ್ಲಿ ಹಿಂದೂ ಸಂಸ್ಕೃತಿಯ ಮೇಲೆ ಮತಾಂತರದಿಂದುಂಟಾಗಿರುವ ದಾಳಿಯ ರಕ್ಷಣೆಯೂ ಆಗಬೇಕಿದೆ.