Tuesday, 26th May 2020

ಪತ್ರಕರ್ತನಿಗೆ ಸಂಪಾದಕ ಸ್ಥಾನಕ್ಕಿಂತ ಮಿಗಿಲಾದ ಗೌರವ ಇಲ್ಲ!

ಒಬ್ಬ ಅಥವಾ ಪತ್ರಕರ್ತ ಏಕಾಏಕಿ ರಾಜಕಾರಣಿಯ ಪಡಸಾಲೆ ಸೇರಿಬಿಟ್ಟರೆ, ಬಹಳ ಬೇಸರವಾಗುವುದು ಅವನನ್ನು ಅಷ್ಟು ವರ್ಷಗಳ ಕಾಲ ಹಿಂಬಾಲಿಸಿದ ಓದುಗರಿಗೆ!

ಪತ್ರಕರ್ತರಿಗೆ ಯಾರಾದರೂ GO To Hell ಅಂತ ಬೈದರೆ, ತಕ್ಷಣ Hell ಗೆ ಹೋಗಲು ಸಾಧ್ಯವಾಗುವುದಾದರೆ ಅದರಂಥ ಅದ್ಭುತ ಇನ್ನೊೊಂದಿಲ್ಲವಂತೆ. ಕಾರಣ ನರಕದಲ್ಲಿ ಸಿಗುವಷ್ಟು ಸ್ಟೋೋರಿಗಳು ಬೇರೆಲ್ಲೂ ಸಿಗುವುದಿಲ್ಲವಂತೆ. ಅದೇ ಯಾರಾದರೂ ಪತ್ರಕರ್ತರನ್ನು ಸ್ವರ್ಗಕ್ಕೆೆ ಕಳಿಸಿದರೆ ಹೆಚ್ಚೆೆಂದರೆ ಅಲ್ಲಿ ಆತನಿಗೆ ಭಾನುವಾರದ ಪುರವಣಿಗೆ ಮುಖಪುಟ ಲೇಖನಕ್ಕೆೆ ಒಂದು ವಸ್ತು ಪತ್ರಕರ್ತರು ಇರಬೇಕಾದ ಜಾಗ ನರಕವೇ ಹೊರತು ಸ್ವರ್ಗವಲ್ಲ. ಒಂದು ವೇಳೆ ಒಬ್ಬ ಕ್ರಿಿಯಾಶೀಲ ಪತ್ರಕರ್ತನನ್ನು ಪ್ರಧಾನಿ ಅಥವಾ ಮುಖ್ಯಮಂತ್ರಿಿಯ ಮಾಧ್ಯಮ ಕಾರ್ಯದರ್ಶಿಯನ್ನಾಾಗಿ ನೇಮಿಸಿದರೆ ಏನಾಗುತ್ತದೆ? ಅಲ್ಲಿಗೆ ಅವನಲ್ಲಿರುವ ಪತ್ರಕರ್ತನನ್ನು ಕತ್ತು ಹಿಡಿದು ಸಾಯಿಸಿದಂತಾಗುತ್ತದೆ. ಅಲ್ಲಿಗೆ ಒಂದು ಅಧ್ಯಾಾಯ ಮುಗಿದಂತಾಗುತ್ತದೆ. ಪತ್ರಕರ್ತ ಕೆಟ್ಟು ಎಲ್ಲಿ ಬೇಕಾದರೂ ಸೇರಬಹುದು. ಆದರೆ ಅಧಿಕಾರದ ಅಂತಃಪುರವನ್ನು ಮಾತ್ರ ಸೇರಬಾರದು.

ಕಾರಣ ಆತ ಜನ್ಮೇಪಿ ಸೇರಬೇಕಾದ ಜಾಗ ಅದಲ್ಲ. ಅಧಿಕಾರಕ್ಕೂ ಪತ್ರಕರ್ತನಿಗೂ ಸೇರಿ ಬರುವುದೇ ಇಲ್ಲ. ಯಾವಾಗ ಅಧಿಕಾರದ ಪಡಸಾಲೆಯಲ್ಲಿ ನೆರಳು ಕಂಡುಕೊಳ್ಳುತ್ತಾಾನೋ, ಅಂದು ಅಲ್ಲಿ ಅವನ ಸಮಾಧಿ ಆದ ಹಾಗೆ. ಆತ ಮತ್ತೆೆಂದೂ ಮೊದಲಿನ ವರ್ಚಸ್ಸು, ಧಿಮಾಕು, ಧೀಮಂತತನ ಪ್ರದರ್ಶಿಸಲಾರ. ಆತ ಯಾವ ರಾಜಕಾರಣಿಯ ಚಾಕರಿ ಮಾಡಿದ್ದನೋ ಅವನ ಸೇವಕನಾಗಿ, ಹಂಗಿನ ಅರಮನೆಯ ದಾಸನಾಗಿ ಇರುವುದರಲ್ಲಿ ಆನಂದ ಕಾಣುತ್ತಾಾನೆಯೇ ಹೊರತು ಪತ್ರಕರ್ತನ ನಿರ್ಭೀತತನ, ಧಾಡಸಿತನ, ನೇರವಂತಿಕೆಯೆಲ್ಲ ಮಡಚಿಟ್ಟ ಹಾಸಿಗೆಯಂತೆ ನಾಗಂತಿಕೆ ಸೇರಿರುತ್ತದೆ.

ಪತ್ರಕರ್ತ ಮತ್ತು ಅಧಿಕಾರದಲ್ಲಿರುವ ರಾಜಕಾರಣಿ ಎಷ್ಟು ಹತ್ತಿಿರ ಇರಬೇಕು ಎಂದು ಒಮ್ಮೆೆ ಪತ್ರಕರ್ತ ಪೊತೆನ್ ಜೋಸೆಫ್ ಅವರನ್ನು ಕೇಳಿದರಂತೆ ಅದಕ್ಕೆೆ ಅವರು ಹೇಳಿದ್ದು – ‘ಪತ್ರಕರ್ತರು ರಾಜಕಾರಣಿಗಳಿಗೆ ಎಂದೂ ಹತ್ತಿಿರ ಇರಲೂಬಾರದು ಮತ್ತು ಹತ್ತಿಿರವಾಗಲೂಬಾರದು.’ ‘ಹಾಗಾದರೆ ಪತ್ರಕರ್ತರು ರಾಜಕಾರಣಿಗಳಿಂದ ಎಷ್ಟು ದೂರ ಇರಬೇಕು?’ ಎಂದು ಅವರನ್ನು ಕೇಳಿದಾಗ, ಪೊತೆನ್ ಜೋಸೆಫ್ ಹೇಳಿದ್ದು – ‘ಎಷ್ಟು ಸಾಧ್ಯವೋ ಅಷ್ಟು ದೂರ ಇರಬೇಕು.’ ಪ್ರತಿದಿನ ರಾಜಕಾರಣಿಗಳನ್ನು ಭೇಟಿ ಮಾಡಿ ಮಾಡಿ ಇಬ್ಬರ ಮಧ್ಯೆೆ ಒಂದು ರೀತಿಯ ಸಲುಗೆ, ಅನ್ಯೋೋನ್ಯ ಸ್ನೇಹ ಬೆಳೆಯುತ್ತದೆ. ಯಾರಿಗೂ ಸಿಗದ ತನಗೇ ಸಿಗಲಿ ಎಂಬ ಕಾರಣಕ್ಕೆೆ ಪತ್ರಕರ್ತನಾದವನು ರಾಜಕಾರಣಿಯ ಸಾಮೀಪ್ಯ ಬಯಸುತ್ತಾಾನೆ. ಈ ಅನ್ಯೋೋನ್ಯತೆಯಿಂದ ಯಾರಿಗೂ ಸಿಗದ ಸುದ್ದಿ ತನಗೆ ಮಾತ್ರ ಸಿಗುತ್ತದೆ ಎಂಬ ಭ್ರಮೆಯಲ್ಲಿ ಇರುವಂತೆ ರಾಜಕಾರಣಿ ಮಾಡುತ್ತಾಾನೆ ಎಂಬ ಸಂಗತಿ ಪತ್ರಕರ್ತನಿಗೆ ಕೊನೆಗೂ ಗೊತ್ತಾಾಗುವುದಿಲ್ಲ.

ಈ ಕಾರಣಕ್ಕೇ ರಾಜಕಾರಣಿಗೆ ಹತ್ತಿಿರವಾಗಬಾರದು. ಅದರಲ್ಲೂ ಪತ್ರಕರ್ತನಾಗಿಯೇ ರಾಜಕಾರಣಿಯ ಹಿಂದೆ ಹೋಗಬಾರದು. ತನ್ನ ಹಿಂದೆ ರಾಜಕಾರಣಿ ಬರುವಂಥ ವ್ಯಕ್ತಿಿತ್ವವನ್ನು ಬೆಳೆಸಿಕೊಂಡರೆ ಮಾತ್ರ ಅಂಥ ಅನ್ಯೋೋನ್ಯತೆಯಲ್ಲಿ ಸುದ್ದಿ ಸಿಗಲು ಸಾಧ್ಯ. ಇಲ್ಲವಾದರೆ ರಾಜಕಾರಣಿಯ ಮರ್ಜಿ ಕಾಯುವುದಷ್ಟೇ ಪತ್ರಕರ್ತನ ಕೆಲಸವಾಗುತ್ತದೆ. ಆಗ ಆತ ತನ್ನ ಮತ್ತು ವೃತ್ತಿಿ ಘನತೆಯನ್ನು ಅಡ ಇಟ್ಟು ಅಲ್ಲಿಗೆ ಹೋಗಿರುತ್ತಾಾನೆ. ಒಮ್ಮೆೆ ನೀವು ಈ ರೀತಿ ಅಡ ಇಡುವವರು ಎಂಬುದು ಗೊತ್ತಾಾದರೆ ಯಾವಜ್ಜೀವ ಅಡ ಇಟ್ಟಿಿದ್ದನ್ನು ವಾಪಸ್ ಪಡೆಯಲು ಆಗುವುದಿಲ್ಲ. ರಾಜಕಾರಣಿಯ ಜತೆ ಸಂಪರ್ಕ ಇರುವುದು ತಪ್ಪಲ್ಲ, ಆದರೆ ಇದು ಸಂಬಂಧವಾಗಿ ಅಥವಾ ಸಖ್ಯವಾಗಿ ಪರಿವರ್ತನೆ ಆಗಲು ಬಿಡಬಾರದು. ಸಂಪರ್ಕದಲ್ಲಿ ಬೆಳೆದ ಬಳ್ಳಿಿ ಬೆಳೆಯುತ್ತಾಾ ಸಂಬಂಧಕ್ಕೆೆ ಥಳಕು ಹಾಕುವುದಕ್ಕೆೆ ಬಿಡಬಾರದು. ಪರಸ್ಪರರು ವೈರಿಗಳಲ್ಲ. ಆ ರೀತಿ ವರ್ತಿಸಬೇಕಿಲ್ಲ.

ಬ್ರಿಿಟನ್ನಿಿನಲ್ಲಿ ಎಪ್ಪತ್ತರ ದಶಕದವರೆಗೂ ಒಂದು ಸಂಪ್ರದಾಯವಿತ್ತು. ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ಪ್ರಧಾನಿ ಹಾಗೂ ಪತ್ರಕರ್ತರು ಮುಖಾಮುಖಿಯಾದಾಗ, ಹಿರಿಯ ಪತ್ರಕರ್ತ ಎದ್ದು ನಿಂತು ತನ್ನ ಸಹೋದ್ಯೋೋಗಿಗಳೆಲ್ಲರ ಪರವಾಗಿ, ‘ಇಷ್ಟು ದಿನ ನಾವಿಬ್ಬರೂ ಅನ್ಯೋೋನ್ಯವಾಗಿದ್ದೆವು. ಇನ್ನು ಮುಂದೆ ನಾವು ಪತ್ರಕರ್ತರು ಮತ್ತು ನೀವು ಪ್ರಧಾನಿ. ನಿಮ್ಮನ್ನು ಟೀಕಿಸುವ ನಮ್ಮ ಹಕ್ಕನ್ನು ಗೌರವಿಸಿ, ನಮ್ಮ ಹಕ್ಕನ್ನು ಸಂಪೂರ್ಣವಾಗಿ ಚಲಾಯಿಸುವುದನ್ನು ಒಪ್ಪಿಿಕೊಳ್ಳಿಿ’ ಎಂದು ಹೇಳುತ್ತಿಿದ್ದ. ಅಲ್ಲಿ ‘ಹಾಯ್ ಜಾನ್’, ‘ಹಾಯ್ ಟೋನಿ’ ಎಂದು ಕರೆಯುತ್ತಿಿದ್ದ ಪತ್ರಕರ್ತರು, ಆತ ಅಧಿಕಾರದಿಂದ ಕೆಳಗಿಳಿಯುವ ತನಕ ಮಿಸ್ಟರ್ ಜಾನ್, ಮಿಸ್ಟರ್ ಪ್ರೈಮ್ ಮಿನಿಸ್ಟರ್, ಮಿಸ್ಟರ್ ಟೋನಿ ಎಂದು ಸಂಬೋಧಿಸುತ್ತಿಿದ್ದರು. ಇದು ಇಂದಿನಿಂದ ಪತ್ರಕರ್ತರು ಮತ್ತು ಅಧಿಕಾರದಲ್ಲಿರುವವರ ನಡುವೆ ಒಂದು ಗೋಡೆ ನಿರ್ಮಾಣವಾದುದರ ಸಂಕೇತ ಎಂದು ಪರಿಗಣಿಸುತ್ತಿಿದ್ದರು. ಇದು ಅಧಿಕಾರದಲ್ಲಿರುವ ರಾಜಕಾರಣಿ ಜತೆ ಪತ್ರಕರ್ತರು ಒಂದು ಅಂತರ ಕಾಪಾಡಿಕೊಳ್ಳಬೇಕು ಎಂಬುದರ ದ್ಯೋೋತಕವಾಗಿತ್ತು.

ಇತ್ತೀಚೆಗೆ ಪ್ರಧಾನಿ ಕಾರ್ಯಾಲಯದಲ್ಲಿ ಸುಮಾರು ಇಪ್ಪತ್ತೆೆರಡು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಕೆಲಸ ಮಾಡಿದ, ಕನ್ನಡಿಗ ಎಚ್.ವೈ.ಶಾರದಾ ಪ್ರಸಾದ ಅವರು ‘ದಿ ಏಶಿಯನ್ ಏಜ್’ ಪತ್ರಿಿಕೆಯಲ್ಲಿ ಬರೆದ * ಏಟಡಿ ಋ್ಠ್ಚಿ ಈಜಿಠ್ಞ್ಚಿಛಿ ಐ ಟಟ ಋ್ಠ್ಚಿ ಜಿಠಿ ಜ್ಞಿಿಜಿಠಿಛ್ಟಿಿ ಎಂಬ ಲೇಖನ ಓದುತ್ತಿಿದ್ದೆ. ಪತ್ರಕರ್ತರೆಲ್ಲ ಓದಲೇ ಬೇಕಾದ ಲೇಖನವಿದು. ಶಾರದಾ ಪ್ರಸಾದ ಅವರು ‘ಫ್ರೀ ಪ್ರೆೆಸ್ ಜರ್ನಲ್’ ಮತ್ತು ‘ಇಂಡಿಯನ್ ಎಕ್‌ಸ್‌‌ಪ್ರೆೆಸ್ ’ ಪತ್ರಿಿಕೆಯಲ್ಲಿ ಬಹಳ ವರ್ಷಗಳ ಕಾಲ ಉಪ ಸಂಪಾದಕರಾಗಿ, ಸುದ್ದಿ ಸಂಪಾದಕರಾಗಿ ಕೆಲಸ ಮಾಡಿದವರು. ನಂತರ ಸರಕಾರದ ಯೋಜನಾ ಆಯೋಗ ಪ್ರಕಟಿಸುತ್ತಿಿದ್ದ ‘ಯೋಜನಾ’ ಪತ್ರಿಿಕೆಯ ಸಂಪಾದಕರಾದರು. ಆ ಸಂದರ್ಭದಲ್ಲಿ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸಂಪರ್ಕಕ್ಕೆೆ ಬಂದರು. ಇಂದಿರಾ ಅವರು ಶಾರದಾ ಪ್ರಸಾದ ಅವರ ಕೆಲಸವನ್ನು ಪ್ರತ್ಯಕ್ಷವಾಗಿ ಬಲ್ಲವರಾಗಿದ್ದರು. ಒಂದು ದಿನ ಶಾರದಾ ಪ್ರಸಾದ ಅವರಲ್ಲಿ ‘ನೀವು ನನ್ನ ಪತ್ರಿಿಕಾ ಕಾರ್ಯದರ್ಶಿಯಾಗಿ ಕೆಲಸ ಮಾಡಬಹುದಾ?’ ಎಂದು ಕೇಳಿದರಂತೆ. ಸಾಮಾನ್ಯವಾಗಿ ಪ್ರಧಾನಿ ಅವರಿಂದ ಇಂಥ ಕೋರಿಕೆ ಬಂದಾಗ ಯಾರೂ ಇಲ್ಲ ಎನ್ನುವುದಿಲ್ಲ ಮತ್ತು ಸ್ಥಳದಲ್ಲಿಯೇ ಸೂಚಿಸಿ ಬಿಡುತ್ತಾಾರೆ. ಪ್ರಧಾನಿ ಕಾರ್ಯಾಲಯ (ಪಿಎಂಒ) ದಲ್ಲಿ ಕೆಲಸ ಮಾಡುವುದೆಂದರೆ ಸಾಮಾನ್ಯದ ಸಂಗತಿಯೇನಲ್ಲ. ನಸೀಬು ಚೆನ್ನಾಾಗಿರುವವರಿಗೆ ಮಾತ್ರ ಅಂಥ ಲಾಟರಿ ಹೊಡೆಯುವುದು.

ಆದರೆ ಶಾರದಾ ಪ್ರಸಾದ ಒಂದು ವಾರ ಸಮಯಾವಕಾಶ ಕೇಳಿದರಂತೆ. ಒಂದು ವಾರ ಸಾಕಷ್ಟು ಯೋಚಿಸಿದರಂತೆ. ಸ್ವತಃ ಪ್ರಧಾನಿ ಇಂದಿರಾ ಗಾಂಧಿ ಅವರೇ ಕೇಳಿದ್ದಾರೆ ಎಂದ ಮೇಲೆ ಒಪ್ಪಿಿಕೊಳ್ಳಬಹುದು. ಆದರೆ ನನ್ನ ಮುಂದಿನ ಜೀವನವೇನು? ಇಷ್ಟು ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ ಮಾಡಿದ್ದೇನೆ, ಆ ವೃತ್ತಿಿಯ ಜತೆಗಿನ ಸಂಬಂಧ ಏನು? ಇಂದಿರಾ ಗಾಂಧಿ ಅಧಿಕಾರದಿಂದ ಕೆಳಗಿಳಿದ ನಂತರ ನನ್ನ ಮುಂದಿನ ಮಾರ್ಗ ಯಾವುದು? ಪತ್ರಕರ್ತನಾಗಿ ನನ್ನ ಅಸ್ತಿಿತ್ವವೇನು?.. ಈ ಎಲ್ಲಾ ಸಂಗತಿಗಳ ಬಗ್ಗೆೆ ಸುದೀರ್ಘವಾಗಿ ಯೋಚಿಸಿದರಂತೆ. ಕೊನೆಗೆ ಅವರು ನೋಟ್‌ಸ್‌ ಮಾಡಿಕೊಂಡರಂತೆ – ‘ಒಮ್ಮೆೆ ರಾಜಕಾರಣಿಯ ಜತೆ ಕೆಲಸ ಮಾಡಿದ ನಂತರ ನಾನು ಯಾವುದೇ ಕಾರಣಕ್ಕೂ ಪತ್ರಕರ್ತನಾಗಿ ಕೆಲಸ ಮಾಡಕೂಡದು. ರಾಜಕಾರಣಿಯ ಜತೆ ಕೆಲಸ ಮಾಡುವಾಗ ಪತ್ರಕರ್ತನಾಗಿ ಗಳಿಸಿದ ಅನುಭವ ಸಹಕಾರಿ ಆಗಬಹುದು. ಆದರೆ ಅಂತರಂಗದಲ್ಲಿ ಪತ್ರಕರ್ತನಾದವನು ಹೋಗಿರುತ್ತಾಾನೆ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಇನ್ನು ಮುಂದೆ ಪತ್ರಿಿಕೆಗಳಲ್ಲಿ ಕೆಲಸ ಮಾಡಬಾರದು. ಇಂದಿಗೆ ನನ್ನೊೊಳಗಿನ ಪತ್ರಕರ್ತ ಸತ್ತು ಹೋದ.’

ಈ ನಿರ್ಧಾರದೊಂದಿಗೆ ಅವರು ಇಂದಿರಾ ಗಾಂಧಿ ಅವರಿಗೆ ಪತ್ರಿಿಕಾ ಕಾರ್ಯದರ್ಶಿಯಾಗಿ ಸೇರಿಕೊಂಡರು. ಅದಾದ ಬಳಿಕ ಮೊರಾರ್ಜಿ ದೇಸಾಯಿ, ಪುನಃ ಇಂದಿರಾ ಗಾಂಧಿ ಮತ್ತು ನಂತರ ರಾಜೀವ ಗಾಂಧಿ ಅವರಿಗೆ ಪತ್ರಿಿಕಾ ಕಾರ್ಯದರ್ಶಿಯಾಗಿದ್ದರು. ಇಪ್ಪತ್ತೆೆರಡು ವರ್ಷಗಳ ಕಾಲ ಪ್ರಧಾನಿ ಕಾರ್ಯಾಲಯದಲ್ಲಿದ್ದಾಗ, ಪತ್ರಿಿಕಾ ಕಚೇರಿಗಳ ಕಡೆ ಮುಖ ಹಾಕಲಿಲ್ಲ. ಪ್ರಧಾನಿ ಹೊರ ಬಂದ ನಂತರ ಯಾವ ಪತ್ರಿಿಕೆಗೂ ಎಡತಾಕಲಿಲ್ಲ. ಅವರು ಪತ್ರಿಿಕೆಗಳಿಗೂ ಬರೆಯಬಾರದು ಎಂದು ನಿರ್ಧರಿಸಿದ್ದರು. ಆದರೆ ಎಂ.ಜೆ.ಅಕ್ಬರ್ ಅವರ ಒತ್ತಾಾಯಕ್ಕೆೆ ಮಣಿದು ಸುಮಾರು ಎರಡು ವರ್ಷಗಳ ಕಾಲ ‘ಏಶಿಯನ್ ಏಜ್’ ಪತ್ರಿಿಕೆಗೆ ಬರೆದರು. ಆದರೆ ಶಾರದಾ ಪ್ರಸಾದ ಅವರ ಹೆಚ್ಚುಗಾರಿಕೆ ಏನೆಂದರೆ ಅವರು ಪ್ರಧಾನಿ ಕಾರ್ಯಾಲಯದಲ್ಲಿದ್ದಾಗ, ಪತ್ರಕರ್ತರಂತೆ ಇದ್ದರು. ಅಲ್ಲಿಂದ ಹೊರ ಬಂದ ನಂತರ ಬುದ್ಧಿಿಪೂರ್ವಕವಾಗಿ ನೇಪಥ್ಯಕ್ಕೆೆ ಸರಿದರು. ಒಂದು ಒಂದು ಸಲ ಗಾಂಧಿ ಕುಟುಂಬದ ಬಗ್ಗೆೆ ಹೊಗಳಲೂ ತೆಗಳಲೂ ಇಲ್ಲ. ಆ ಕುಟುಂಬದ ವಕ್ತಾಾರಿಕೆಯನ್ನೂ ಮಾಡಲಿಲ್ಲ. ಆ ವಿಷಯವನ್ನು ಎಂದೂ ಟಚ್ ಮಾಡಲೇ ಇಲ್ಲ.

‘ಅಧಿಕಾರದ ಅಂತಃಪುರದೊಳಗೆ ಇದಷ್ಟು ಹೊತ್ತು ನಿಮ್ಮೊೊಳಗಿನ ಪತ್ರಕರ್ತ ಚೀರುತ್ತಾಾ, ಸಾಯುತ್ತಾಾ ಇರುತ್ತಾಾನೆ. ಅವನನ್ನು ಬದುಕಿಸುವುದು ಬಹಳ ಕಷ್ಟದ ಕೆಲಸ. ಆದರೆ ಬಹಳ ಪತ್ರಕರ್ತರು ಬದುಕಿಸುವ ಪ್ರಯತ್ನ ಮಾಡಿ ವಿಫಲರಾಗುತ್ತಾಾರೆ. ಒಮ್ಮೆೆ ಅಧಿಕಾರದ ಗರ್ಭ ಗುಡಿಯೊಳಗೆ ಹೋಗಿ ಬಂದ ನಂತರ ಪುಣ್ಯಕ್ಕಿಿಂತ ಪಾಪವೇ ಹೆಚ್ಚು ಮೆತ್ತಿಿಕೊಳ್ಳುತ್ತವೆ. ಈ ಎಚ್ಚರಿಕೆಯಿಂದ ಕೆಲಸ ಮಾಡಿದರೂ ಅದರಿಂದ ಸಾಧ್ಯವಿಲ್ಲ’ ಎಂದು ಶಾರದಾ ಪ್ರಸಾದ ಹೇಳುತ್ತಿಿದ್ದರು. ಆದರೆ ಅವರಿಗೆ ಅಂಥ ಯಾವ ಪಾಪವೂ ಅಂಟಿಕೊಳ್ಳಲಿಲ್ಲ. ಇಂದಿಗೂ ಪ್ರಧಾನಿ ಮತ್ತು ಮುಖ್ಯಮಂತ್ರಿಿಯ ಪತ್ರಿಿಕಾ ಅಥವಾ ಮಾಧ್ಯಮ ಕಾರ್ಯದರ್ಶಿ ಹೇಗೆ ಕೆಲಸ ಮಾಡಬೇಕು ಮತ್ತು ಹೇಗೆ ವ್ಯಕ್ತಿಿತ್ವ ಕಾಪಾಡಬೇಕು ಎಂಬುದಕ್ಕೆೆ ಶಾರದಾ ಪ್ರಸಾದರಂಥ ಇನ್ನೊೊಬ್ಬ ಆದರ್ಶ ವ್ಯಕ್ತಿಿ ಇಲ್ಲ.

ಪತ್ರಕರ್ತ ಸಂಜಯ ಬಾರು ಅವರು ಪ್ರಧಾನಿ ಡಾ.ಮನಮೋಹನ ಸಿಂಗ್ ಅವರಿಗೆ ಮಾಧ್ಯಮ ಕಾರ್ಯದರ್ಶಿಯಾಗಿದ್ದರು. ಡಾ.ಸಿಂಗ್ ಅವರಿಗೆ ಬಾರು ಬಹಳ ವರ್ಷಗಳಿಂದ ಪರಿಚಿತರು. ಅವರಿಗೂ ಶಾರದಾ ಪ್ರಸಾದ ಅವರೇ ಆದರ್ಶ. ಪ್ರಧಾನಿ ಅವರ ಮಾಧ್ಯಮ ಕಾರ್ಯದರ್ಶಿ ಹೇಗಿರಬೇಕು ಎಂಬುದಕ್ಕೆೆ ಅವರಿಗಿಂತ ಉತ್ತಮ ವ್ಯಕ್ತಿಿ ಸಿಗಲಿಕ್ಕಿಿಲ್ಲ ಎಂದು ಬಾರು ಬರೆದುಕೊಂಡಿದ್ದಾರೆ. ಆದರೆ ಅವರು ತಮ್ಮ ಪದವಿಯಿಂದ ನಿರ್ಗಮಿಸುವ ಹೊತ್ತಿಿಗೆ ಅತ್ಯಂತ ವಿವಾದಾತ್ಮಕ ವ್ಯಕ್ತಿಿ ಆಗಿದ್ದರು. ಅವರು ಬರೆದ *‘ಅ್ಚ್ಚಜಿಛ್ಞಿಿಠ್ಝಿ ್ಟೃಜಿಞಛಿ ಜ್ಞಿಿಜಿಠಿಛ್ಟಿಿ’ ತೀವ್ರ ವಿವಾದಕ್ಕೆೆ ಕಾರಣವಾಯಿತು. ಅದನ್ನಾಾಧರಿಸಿ ಸಿನಿಮಾ ಸಹ ಬಂತು. ಇನ್ನು ಮುಂದೆ ಬಾರು ಅಂಕಣ ಬರೆದುಕೊಂಡಿರಬಹುದೇ ಹೊರತು ಯಾವ ಪತ್ರಿಿಕಾ ಮಾಲೀಕನೂ ಸಂಪಾದಕನನ್ನಾಾಗಿ ನೇಮಿಸಿಕೊಳ್ಳಲಿಕ್ಕಿಿಲ್ಲ.

ಸಾಮಾನ್ಯವಾಗಿ ಪತ್ರಕರ್ತರು ತಮ್ಮ ನಿವೃತ್ತಿಿಯ ಅಂಚಿನಲ್ಲಿದ್ದಾಗ ಅಥವಾ ನಿವೃತ್ತರಾದ ನಂತರ ಇಂಥ ಅಸೈನ್‌ಮೆಂಟ್‌ಗಳನ್ನು ಒಪ್ಪಿಿಕೊಳ್ಳುತ್ತಾಾರೆ. ಇನ್ನು ತಮ್ಮ ವೃತ್ತಿಿ ಬದುಕಿನಲ್ಲಿ ಹೆಚ್ಚಿಿನ ಅಥವಾ ಮಹತ್ತರವಾದ ಸ್ಥಾಾನ-ಮಾನ, ಅವಕಾಶ ಸಿಗಲಿಕ್ಕಿಿಲ್ಲ ಎಂದು ಭಾವಿಸಿದವರು ಮುಖ್ಯಮಂತ್ರಿಿ ಅಥವಾ ಪ್ರಧಾನಿ ಅವರ ಪತ್ರಿಿಕಾ/ಮಾಧ್ಯಮ ಕಾರ್ಯದರ್ಶಿಯಾಗಿ ಅಥವಾ ಸಲಹೆಗಾರರಾಗಿ ಸೇರುತ್ತಾಾರೆ. ಈ ರೀತಿ ಸೇರುವುದು ಅಲ್ಲಿ ತನಕ ತಾವು ಸಾಧಿಸಿದ ವೃತ್ತಿಿ ಗರಿಮೆಗೆ ತಿಲಾಂಜಲಿ ಇಟ್ಟಂತೆ ಎಂಬ ಎಚ್ಚರಿಕೆ ಮತ್ತು ಅಪಾಯದ ಇರಲೇಬೇಕು. ಇದು ನಿಜವೂ ಹೌದು. ಬಹಳ ಪತ್ರಕರ್ತರು ಮಾಡುವ ಪ್ರಮಾದವೂ ಇದೇ. ಅಷ್ಟು ವರ್ಷಗಳ ತನಕ ಕಾಪಾಡಿಕೊಂಡಿದ್ದ ನಿಷ್ಪಕ್ಷಪಾತತನ, ವೃತ್ತಿಿ ಪಾವಿತ್ರ್ಯವೆಲ್ಲ ಒಂದೇ ಸಲಕ್ಕೆೆ ನೀರಿನಲ್ಲಿ ಹೋಮ ಮಾಡಿಬಿಡುತ್ತಾಾರೆ. ಅಧಿಕಾರ ಅಥವಾ ಇನ್ನಿಿತರ ಪ್ರಲೋಭನೆಗಳಿಂದ ರಾಜಕಾರಣದ ಪಡಸಾಲೆಯನ್ನು ಸೇರಿಬಿಡುತ್ತಾಾರೆ. ಅಲ್ಲಿ ರಾಜಕಾರಣಿಗಳ ಚಾಕರಿ ಮಾಡಿಕೊಂಡಿರುತ್ತಾಾರೆ. ಅದಕ್ಕಿಿಂತ ಹೆಚ್ಚಾಾಗಿ ತಾವೇ ರಾಜಕಾರಣಿಗಳ ದಳ್ಳಾಾಳಿಗಳಂತೆ, ವಕ್ತಾಾರರಂತೆ ವರ್ತಿಸಲಾರಂಭಿಸುತ್ತಾಾರೆ.

ಅಲ್ಲಿಗೆ ಅವರ ಪತ್ರಿಿಕೋದ್ಯಮ ಬದುಕು ಮೂರಾಬಟ್ಟೆೆ ಆದಂತೆ. ಇದನ್ನು ಮಾಡಲು ಪತ್ರಿಿಕೋದ್ಯಮ ಮಾಡಬೇಕಿರಲಿಲ್ಲ. ವರ್ಷಗಳ ಕಾಲ ಪತ್ರಕರ್ತರಾಗಿ ಕೆಲಸ ಮಾಡಬೇಕಿರಲಿಲ್ಲ. ಒಬ್ಬ ಪತ್ರಕರ್ತ ಎಂದೂ ದ್ವೀಪವಲ್ಲ. ಒಬ್ಬ ಸಂಪಾದಕ ನಡುಗಡ್ಡೆೆಯಲ್ಲ. ಆತ ತನ್ನ ಸುತ್ತ ತನಗರಿವಿಲ್ಲದಂತೆ ಅಪಾರ ಸಂಖ್ಯೆೆಯ ಅಭಿಮಾನಿಗಳನ್ನು, ಅನುಯಾಯಿಗಳನ್ನು ಹೊಂದಿರುತ್ತಾಾನೆ. ಪತ್ರಕರ್ತನನ್ನು ಅನುಕರಿಸುವ ಓದುಗರಿರುತ್ತಾಾರೆ. ಸಂಪಾದಕರನ್ನು ಅನುಸರಿಸುವ ಜನರಿರುತ್ತಾಾರೆ. ಒಬ್ಬ ಸಂಪಾದಕನೋ, ಪತ್ರಕರ್ತನೋ ಎಂದಿಗೂ ಓದುಗನ ಕಣ್ಣಲ್ಲಿ ಸಣ್ಣವರಾಗಬಾರದು. ಆದರ್ಶಮಯ ಬದುಕನ್ನು ಬದುಕಲು ಸಾಧ್ಯವಾಗದಿದ್ದರೂ ನಾವು ಬರೆದಂತಾದರೂ ಬದುಕಬೇಕು. (ಕುಮಾರಸ್ವಾಾಮಿ ಎರಡು ಮದುವೆಯಾಗಿದ್ದನ್ನು ಟೀಕಿಸಲಿ, ಆದರೆ ಹಾಗೆ ಟೀಕಿಸುವಾಗ ತಾವೂ ಕಟ್ಟಿಿಕೊಂಡಿರಬಾರದು.)

ಒಬ್ಬ ಸಂಪಾದಕ ಅಥವಾ ಪತ್ರಕರ್ತ ಏಕಾಏಕಿ ರಾಜಕಾರಣಿಯ ಪಡಸಾಲೆ ಸೇರಿಬಿಟ್ಟರೆ, ಬಹಳ ಬೇಸರವಾಗುವುದು ಅವನನ್ನು ಅಷ್ಟು ವರ್ಷಗಳ ಕಾಲ ಹಿಂಬಾಲಿಸಿದ ಓದುಗರಿಗೆ! ಓದುಗರು ಇದ್ದಕ್ಕಿಿದ್ದಂತೆ ಪೆಚ್ಚಾಾಗಿಬಿಡುತ್ತಾಾರೆ. ಅವರಿಗೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದು ಗೊತ್ತಾಾಗುವುದಿಲ್ಲ. ಇದು ಅರುಣ್ ಶೌರಿ ಹಠಾತ್ತನೆ ಬಿಜೆಪಿ ಸೇರಿದಾಗ ಅನೇಕರಿಗೆ ಹೀಗೆ ಆಗಿತ್ತು. ಬರೆದರೆ ಶೌರಿ ಥರ ಬರೆಯಬೇಕು ಎಂದು ಅಂದುಕೊಂಡವರಿಗೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ದೇಶ ಕಂಡ ಅಪರೂಪದ ತನಿಖಾ ಪತ್ರಕರ್ತ ಜನಪ್ರಿಿಯತೆಯ ಉತ್ತುಂಗದಲ್ಲಿದ್ದಾಗ ಅವರ ರಾಜಕೀಯ ಪ್ರವೇಶ ಅನೇಕರಿಗೆ ನುಂಗಲಾರದ ತುತ್ತಾಾಗಿತ್ತು. ಶೌರಿ ಬಿಜೆಪಿಯನ್ನೂ ಸೇರಿದರು, ವಾಜಪೇಯಿ ಸರಕಾರದಲ್ಲಿ ಮಂತ್ರಿಿಯೂ ಆದರು. ಇಷ್ಟು ವರ್ಷಗಳ ಕಾಲ ಅವರು ಒಂದು ತತ್ತ್ವ, ಸಿದ್ಧಾಾಂತಗಳಿಗೆ ಹೋರಾಡಿದ್ದು ಕೊನೆಗೆ ಇಷ್ಟಕ್ಕೇನಾ ಎಂದು ಅನೇಕರಿಗೆ ಅನಿಸಿದ್ದರೆ ಆಶ್ಚರ್ಯವಿಲ್ಲ.

ತಮ್ಮ ಅಪಾರ ಅಭಿಮಾನಿಗಳಲ್ಲಿ ಅವರು ಭ್ರಮನಿರಸನ ಹುಟ್ಟಿಿಸಿಬಿಟ್ಟರು. ಮಂತ್ರಿಿಯಾಗಿ ಮಾಡಿದ್ದು ಅಷ್ಟಕ್ಕಷ್ಟೇ. ಹೇಳಿಕೊಳ್ಳುವಂಥ ಘನಾಂದಾರಿ ಕೆಲಸವನ್ನೇನೂ ಅವರು ಮಾಡಲಿಲ್ಲ. ಅವರ ರಾಜಕಾರಣವೂ ತೀರಾ * ಚ್ಟ್ಠಿಿಠಿ ಆಗಿ ಅದಕ್ಕಿಿಂತ ಮೊದಲೇ ಪತ್ರಕರ್ತ ‘ಶೌರಿ’ ಸತ್ತು ಹೋಗಿದ್ದರು!

ಪತ್ರಕರ್ತ ರಾಜಕೀಯ ಪಡಸಾಲೆ ಸೇರಿದರೆ ಆಗುವ ಸಮಸ್ಯೆೆಯೇ ಇದು. ರಾಜಕಾರಣಿಯ ಜತೆ ಸಂಪರ್ಕ ಹೊಂದಿರುವುದು ಬೇರೆ, ಸಂಬಂಧ ಬೆಸೆಯುವುದು ಬೇರೆ, ರಾಜಕಾರಣಿಯ ಜತೆಯೇ ಸೇರಿಕೊಳ್ಳುವುದು ಬೇರೆ. ಪ್ರಜಾವಾಣಿ ಖ್ಯಾಾತ ಸಂಪಾದಕರಾಗಿದ್ದ ಟಿ.ಎಸ್. ರಾಮಚಂದ್ರರಾಯರು (ಟಿಯೆಸ್ಸಾಾರ್) ಅಂದಿನ ಮುಖ್ಯಮಂತ್ರಿಿಗಳಾದ ದೇವರಾಜ ಆರಸ ಅವರಿಗೆ ತೀರಾ ಆಪ್ತರಾಗಿದ್ದರು. ಆದರೆ ಟೀಕಿಸುವ ಸಂದರ್ಭ ಬಂದಾಗಲೆಲ್ಲ ರಾಜಿ ಮಾಡಿಕೊಂಡವರಲ್ಲ. ತಮ್ಮ ಪ್ರಖ್ಯಾಾತ ‘ಛೂಬಾಣ’ ಅಂಕಣದಲ್ಲಿ ಮುಖ್ಯಮಂತ್ರಿಿಗಳನ್ನು ್ಣವಾಗಿ ಟೀಕಿಸುತ್ತಿಿದ್ದರು.

ಒಮ್ಮೆೆ ಅರಸು ಅವರು ತಮ್ಮ ಸಲಹೆಗಾರರಾಗಿ ಬರುವಂತೆ ಟಿಯೆಸ್ಸಾಾರರರನ್ನು ಕರೆದಿದ್ದರು. ಆದರೆ ಟಿಯೆಸ್ಸಾಾರ್ ಅದನ್ನು ಒಪ್ಪಿಿಕೊಳ್ಳಲಿಲ್ಲ. ಸರಕಾರದ ಹೊರಗಿದ್ದೇ ಅರಸು ಅವರಿಗೆ ಸಲಹೆಗಳನ್ನು ನೀಡುತ್ತಿಿದ್ದರು. ಅರಸು ಎಷ್ಟೇ ವರಾತ ಮಾಡಿದರೂ ಟಿಯೆಸ್ಸಾಾರ್ ಒಪ್ಪಲಿಲ್ಲ. ಗರ್ಲ್‌ಫ್ರೆೆಂಡ್ ಆಗಿರುವುದಕ್ಕೂ, ಮದುವೆಯಾಗಿ ಹೆಂಡತಿಯಾಗುವುದಕ್ಕೂ ಸಾಕಷ್ಟು ವ್ಯತ್ಯಾಾಸ ಇದೆ ಎಂಬುದು ಅವರಿಗೆ ಗೊತ್ತಿಿತ್ತು. ಹೀಗಾಗಿ ಒಪ್ಪಲಿಲ್ಲ.

ಹಾಗಂತ ಅರಸು ಅವರ ಸಾಮೀಪ್ಯವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಟಿಯೆಸ್ಸಾಾರ್ ನಿಧನರಾಗುವಾಗ ಅವರ ಮನೆಯಲ್ಲಿದ್ದ ಕೈ ಕಿತ್ತುಹೋದ, ಮುರಿದು ಹೋದ ಕುರ್ಚಿಗಳು ಅವರ ಮತ್ತು ಅರಸು ಗೆಳೆತನದ ನಿಷ್ಠುರತೆಯ ಮೂಕ ಸಾಕ್ಷಿಗಳಾಗಿದ್ದವು. ಇಂದಿಗೂ ಕನ್ನಡ ಪತ್ರಿಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಟಿಯೆಸ್ಸಾಾರ್ ಹೆಸರಿನಲ್ಲಿ ಪ್ರಶಸ್ತಿಿ ಕೊಡುತ್ತಾಾರೆ. ರಾಜಕೀಯ ಮತ್ತು ಪತ್ರಿಿಕೋದ್ಯಮ ಮಧ್ಯೆೆ ಎಷ್ಟು ಅಂತರ ಕಾಪಾಡಬೇಕು ಎಂಬುದಕ್ಕೆೆ ಅವರು ಉತ್ತಮ ನಿದರ್ಶನ.

ಇಲ್ಲಿ ಖ್ಯಾಾತನಾಮ ಪತ್ರಕರ್ತ ಖಾದ್ರಿಿ ಶಾಮಣ್ಣ ಅವರನ್ನು ನೆನಪಿಸಿಕೊಳ್ಳಬೇಕು. ಖಾದ್ರಿಿ ಅವರು ಪತ್ರಕರ್ತರಾಗಿದ್ದಾಗಲೇ ರಾಜಕೀಯದಲ್ಲಿ ಕ್ರಿಿಯಾಶೀಲರಾಗಿದ್ದರು. 1951ರ ಲೋಕಸಭಾ ಚುನಾವಣೆಯಲ್ಲಿ ಸೋಷಿಯಲ್ಟ್‌ಿ ಪಾರ್ಟಿಯಿಂದ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆೆಸ್ಸಿಿನ ಸಿ.ಆರ್.ಬಸಪ್ಪ ಅವರ ವಿರುದ್ಧ ಸೆಣಸಿ ಸೋತಿದ್ದರು. ಖಾದ್ರಿಿ ಅವರ ರಾಜಕೀಯ ಒಲವು-ನಿಲುವುಗಳೇನೇ ಇದ್ದರೂ ಜನ ಅವರನ್ನು ಇಷ್ಟಪಟ್ಟಿಿದ್ದು ಒಬ್ಬ ಧೀಮಂತ ಪತ್ರಕರ್ತ ಎನ್ನುವ ಕಾರಣಕ್ಕೆೆ. ಸಂಪಾದಕೀಯ ಬರಹದ ಮೂಲಕವೇ ಕನ್ನಡದ ಮನೆಮಾತಾದವರು ಖಾದ್ರಿಿ. ಸಾಮಾನ್ಯವಾಗಿ ಪತ್ರಿಿಕೆಗಳಲ್ಲಿ ಅಷ್ಟಾಾಗಿ ಓದದ ಸಂಪಾದಕೀಯ ಬರಹವನ್ನು ಎಲ್ಲರ ಗಮನಸೆಳೆಯುವಂತೆ ಮಾಡಿದವರು ಅವರು. ಖಾದ್ರಿಿ ಶಾಮಣ್ಣ ಅವರು ನಿರ್ಭೀತ ಪತ್ರಿಿಕೋದ್ಯಮಕ್ಕೆೆ ಹೆಸರಾದವರು.

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಿ ಆಗಿದ್ದಾಗ ಖಾದ್ರಿಿ ಕರ್ನಾಟಕ ವಿಧಾನ ಪರಿಷತ್ತಿಿನ ಸದಸ್ಯರಾಗಿ ನೇಮಿಸಿದರು. ಖಾದ್ರಿಿ ಅವರು ಅದಕ್ಕೆೆ ಅರ್ಹರಾಗಿದ್ದರು. ಆದರೆ ಎಡವಟ್ಟಾಾಗಿದ್ದೇನೆಂದರೆ, ಖಾದ್ರಿಿ ಅವರು ತಮ್ಮ ಪತ್ರಿಿಕೆಯನ್ನು ಹೆಗಡೆ ಅವರ ಗುಣಗಾನಕ್ಕೆೆ ಮೀಸಲಾಗಿಟ್ಟುಬಿಟ್ಟರು. ಹೆಗಡೆ ಏನೇ ಮಾಡಲಿ, ಹೇಳಲಿ, ಅದು ಮುಖಪುಟ ಸುದ್ದಿಯಾಗುತ್ತಿಿತ್ತು. ಇದು ಹೆಗಡೆ ಅವರ ಕರವಸ್ತ್ರ ಎಂದು ಓದುಗರು ಮಾತಾಡಿಕೊಳ್ಳುವ ಹಂತ ತಲುಪಿತು. ಪತ್ರಿಿಕೆಯ ಪ್ರಸಾರವೂ ಕುಸಿಯಿತು. ಎಮ್ಮೆೆಲ್ಸಿಿ ಪದವಿ ಕರುಣಿಸಿದ್ದಕ್ಕಾಾಗಿ ಖಾದ್ರಿಿ ಅವರು ತಮ್ಮೆೆಲ್ಲ ಘನತೆಯನ್ನು ಹೆಗಡೆ ಅವರಿಗೆ ಗಿರವಿ ಇಡಬೇಕಿರಲಿಲ್ಲ ಓದುಗರು ಮಾತಾಡಿಕೊಳ್ಳುವಂತಾಯಿತು. ಖಾದ್ರಿಿ ಅವರು ಅಲ್ಲಿಯವರೆಗೆ ಕಾಯಕವಾಗಿ ನೆರವೇರಿಸಿಕೊಂಡ ಬಂದ ನಿರ್ಭೀತ ಮತ್ತು ನಿಷ್ಪಕ್ಷಪಾತ ಪತ್ರಿಿಕೋದ್ಯಮಕ್ಕೆೆ, ಈ ರಾಜಕೀಯ ಭಿಕ್ಷೆಯಿಂದಾಗಿ ಎಲ್ಲೋ ಕಳಂಕ ತಟ್ಟಿಿತು. ಇಂಥ ಪ್ರಲೋಭನೆಗಳಿಗೆ ಮಣಿಯುವ ಸಂಪಾದಕರು ಖಾದ್ರಿಿ ಅವರನ್ನು ನೋಡಿ ಎಚ್ಚೆೆತ್ತುಕೊಳ್ಳಬೇಕು.

ಆತ ಯಾವ ಪತ್ರಿಿಕೆಯ ಸಂಪಾದಕನೇ ಆಗಿರಬಹುದು, ಅದರ ಪ್ರಸಾರ ಎಷ್ಟೇ ಇರಬಹುದು, ಅವನ ಪಾಲಿಗೆ ಅವನ ಪತ್ರಿಿಕೆಯ ಸಂಪಾದಕ ಸ್ಥಾಾನಕ್ಕಿಿಂತ ಮಿಗಿಲಾದ ಮತ್ತೊೊಂದು ದೊಡ್ಡ ಸ್ಥಾಾನ ಇರಲು ಸಾಧ್ಯವೇ ಇಲ್ಲ. ಅದೇ ಪರಮ ಭೂಷಣವಾದುದು. ಸಂಪಾದಕ ಸ್ಥಾಾನವೆಂಬುದು ಅತಿ ದೊಡ್ಡ ಗೌರವ. ಆ ಸ್ಥಾಾನದ ಮುಂದೆ ಉಳಿದುದೆಲ್ಲವೂ ಚಿಕ್ಕವೇ. ಇನ್ನು ನಿಗಮ, ಮಂಡಳಿ, ಅಕಾಡೆಮಿ ಸ್ಥಾಾನಗಳೆಲ್ಲ ಯಾವ ಮರದ ತೊಪ್ಪಲು?!

Leave a Reply

Your email address will not be published. Required fields are marked *