Sunday, 3rd July 2022

ಕೆ.ಎಲ್‌ ರಾಹುಲ್‌’ಗೆ ಗಾಯ, ಸೂರ್ಯಕುಮಾರ್’ಗೆ ಸ್ಥಾನ

ಕಾನ್ಪುರ: ಆರಂಭಿಕ ಆಟಗಾರ ಕೆ.ಎಲ್‌ ರಾಹುಲ್‌ ಅವ್ರಿಗೆ ಗಾಯವಾಗಿದ್ದು, ಸರಣಿ ಟೆಸ್ಟ್‌ನಿಂದ ಹೊರ ಉಳಿಯಲಿದ್ದಾರೆ.

ಈ ಮೂಲಕ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ನ.25ರಿಂದ ನಡೆಯಲಿದ್ದು, ಅದಕ್ಕೂ ಮುನ್ನವೇ ಟೀಂ ಇಂಡಿಯಾ ಗೆ ಅಘಾತವಾಗಿದೆ.

ಬಿಸಿಸಿಐ, ಭಾರತದ ಟೆಸ್ಟ್ ತಂಡದಲ್ಲಿ ಕೆಎಲ್ ರಾಹುಲ್ ಬದಲಿಗೆ ಸೂರ್ಯ ಕುಮಾರ್ ಯಾದವ್’ಗೆ ಸ್ಥಾನ ನೀಡಲಾಗಿದೆ. ಕೆಎಲ್ ರಾಹುಲ್ ಮುಂಬರುವ ನ್ಯೂಜಿಲ್ಯಾಂಡ್ ವಿರುದ್ಧದ 2 ಪಂದ್ಯಗಳ ಪೇಟಿಎಂ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ’ ಎಂದಿದೆ. ಬಿಸಿಸಿಐ

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಅನುಭವಿಗಳು ಮೊದಲ ಟೆಸ್ಟ್ʼನಲ್ಲಿ ಟೀಮ್ ಇಂಡಿಯಾದ ಭಾಗ ವಾಗಿರುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಮುಂಬೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ʼನಲ್ಲಿ ಕೊಹ್ಲಿ ತಂಡವನ್ನ ಸೇರಿಕೊಳ್ಳಲಿದ್ದು, ರೋಹಿತ್ ಶರ್ಮಾʼಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.