Tuesday, 26th May 2020

ಕಟ್ಟಕಡೆಯ ಆ ಗಂಡು ಘೇಂಡಾ ಮೃಗವೂ ಕಣ್ಮುಂದೇ ಕಣ್ಮರೆಯಾಯಿತು!

ನೂರೆಂಟು ವಿಶ್ವ

ಇತ್ತೀಚೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಜತೆ ರಾತ್ರಿ ಮಾಡುತ್ತಾಾ ಒಂದಷ್ಟು ಲೋಕಾಭಿರಾಮವಾಗಿ ಮಾತಾಡುವ ಅವಕಾಶ ಸಿಕ್ಕಿತ್ತು. ರಾಜಕೀಯ, ದೈನಂದಿನ ವಿದ್ಯಮಾನ, ಮಂತ್ರಿ ಖಾತೆ ಈ ಎಲ್ಲಾ ವಿಷಯಗಳನ್ನು ಬದಿಗಿಟ್ಟು ಬೇರೆಯ ವಿಷಯಗಳತ್ತ ನಮ್ಮ ಮಾತುಕತೆ ಸಾಗಿತ್ತು. ಅವರು ಪ್ರತಿನಿಧಿಸುತ್ತಿರುವ ಮುಧೋಳ ಕ್ಷೇತ್ರದ ಆಚೆಗೂ ಪ್ರಸಿದ್ಧವಾಗಿರುವ, ದೇಶದೆಲ್ಲೆಡೆ ಅದರಲ್ಲೂ ವಿಶೇಷವಾಗಿ ಪೊಲೀಸ್ ಮತ್ತು ಮಿಲಿಟರಿಯಲ್ಲೂ ಲೋಕಪ್ರಿಿಯವಾಗಿರುವ ಮುಧೋಳ ನಾಯಿಯ ಬಗ್ಗೆೆಯೂ ನಮ್ಮ ಮಾತುಕತೆ ವಿಸ್ತರಿಸಿಕೊಂಡಿತು.

ಹೆಸರೇ ಸೂಚಿಸುವಂತೆ ಮುಧೋಳ ನಾಯಿಯ ನೈಜ ತಳಿ ಸಿಗುವುದು ಮುಧೋಳದಲ್ಲಿ ಮಾತ್ರ. ಅಲ್ಲಿ ತಳಿ ಸಂಕರ ನಡೆಯುತ್ತಿಿದೆ. ಸುಮಾರು ಆರು ನೂರು ಕುಟುಂಬಗಳು ಈ ತಳಿಯ ನಾಯಿಯನ್ನು ಕಾಪಾಡಿ, ಬೆಳೆಸಿ, ಅಭಿವೃದ್ಧಿಿಪಡಿಸಿ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಈ ನಾಯಿ ತಳಿ ಸಂಶೋಧನೆ ಮತ್ತು ಅಭಿವೃದ್ಧಿಿಗೆ ಸರಕಾರ ಐದು ಕೋಟಿ ರುಪಾಯಿ ವೆಚ್ಚದಲ್ಲಿ ಒಂದು ಕೇಂದ್ರವನ್ನು ಸ್ಥಾಾಪಿಸಿದೆಯಂತೆ. ಇದರಿಂದ ಪಕ್ಕಾಾ ತಳಿಯನ್ನು ಸಂರಕ್ಷಿಸಿ, ಉಳಿಸಿಕೊಳ್ಳಲು ಮತ್ತು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಿದೆ.

ಒಂದು ವೇಳೆ ಇದನ್ನು ಮಾಡದಿದ್ದರೆ, ಆ ಊರಿನಲ್ಲೊಂದೇ ಅಭಿವೃದ್ಧಿಿ ಪಡಿಸುತ್ತಿಿದ್ದಿದ್ದರೆ, ಬೆರಕೆ (ಕ್ರಾಾಸ್ ಬೀಡಿಂಗ್) ಆ ತಳಿಯ ನಾಯಿಯ ಸ್ವರೂಪವೇ ಬದಲಾಗಿ ಹೋಗುತ್ತಿಿತ್ತು. ಒಂದು ವೇಳೆ ಆ ರೀತಿ ಆಗಿದ್ದಿದ್ದರೆ, ನಾವು ಇಂದು ನೋಡುವ ಮುಧೋಳ ನಾಯಿ, ಮೂಲ ಮುಧೋಳ ನಾಯಿ ಆಗಿರುತ್ತಿಿರಲಿಲ್ಲ. ಜಾತಿ ನಾಯಿಗೂ, ನಾಯಿ ಜಾತಿಗೂ ಬಹಳ ವ್ಯತ್ಯಾಾಸವಿದೆ. ಜಾತಿ ನಾಯಿಯನ್ನು ಮೂಲ ಸ್ವರೂಪದಲ್ಲಿ ಕಾಪಾಡುವುದು ಬಹಳ ಮುಖ್ಯ. ಇಲ್ಲದಿದ್ದರೆ ಕ್ರಾಾಸ್ ಬ್ರೀಡಿಂಗಿನಿಂದ ಅದರ ತಳಿ ವೈಶಿಷ್ಟ್ಯಗಳೇ ಹಾಳಾಗಿ ಹೋಗುತ್ತದೆ. ಇಂದು ಮುಧೋಳ ನಾಯಿ ತನ್ನ ಮೂಲ ಗುಣ, ಲಕ್ಷಣ, ಪ್ರಭೇದವನ್ನು ಉಳಿಕೊಂಡಿದ್ದರೆ ಅದಕ್ಕೆೆ ಈ ಕಾಳಜಿಯೇ ಕಾರಣ. ಒಂದು ಸಲ ಕ್ರಾಾಸ್ ಬ್ರೀಡಿಂಗ್ ಆದರೆ, ಮೂಲ ತಳಿಯಿಂದ ಪ್ರತ್ಯೇಕಗೊಂಡು ಅದರ ಗುಣ-ಲಕ್ಷಣಗಳೇ ಬದಲಾಗಿ ಹೋಗಬಹುದು. ಆಗ ಪುನಃ ಮೂಲ ತಳಿಯನ್ನು ಕಾಣುವುದು ಬಹಳ ಕಷ್ಟ. ಎಷ್ಟೆೆಂದರೂ ಮಿಶ್ರ ತಳಿ ಮಿಶ್ರತಳಿಯೇ.

ಆದರೆ ಮುಧೋಳ ನಾಯಿ ಇನ್ನು ನೂರಾರು ವರ್ಷ ಕಳೆದರೂ ತನ್ನ ಮೂಲ ತಳಿಯನ್ನು ಸಂರಕ್ಷಿಸಿಕೊಳ್ಳುವುದು ನಿಶ್ಚಿಿತ. ಮುಧೋಳದ ‘ಶ್ವಾಾನ ಸಂಶೋಧನಾ ಮತ್ತು ಅಭಿವೃದ್ಧಿಿ ಕೇಂದ್ರ’ದಲ್ಲಿ ಒಂದೇ ಹುಟ್ಟಿಿದ ಮರಿಗಳು ದೊಡ್ಡದಾದ ನಂತರ, ಬೇರೆ ತಂದೆ-ತಾಯಿಗಳಿಂದ ಹುಟ್ಟಿಿದ ತಳಿಗಳಿಂದಲೇ ಸಂತಾನೋತ್ಪತ್ತಿಿ ಮಾಡುವಷ್ಟು ಎಚ್ಚರ ವಹಿಸಲಾಗುತ್ತಿಿದೆಯಂತೆ. ಅಷ್ಟರಮಟ್ಟಿಿಗೆ ಆ ನಾಯಿಯ ‘ಒರಿಜಿನಲ್’ ತಳಿಯನ್ನು ಸಂರಕ್ಷಿಸುವ ಪ್ರಯತ್ನ ನಡೆಯುತ್ತಿಿದೆ. ಒಂದು ವೇಳೆ ಈ ಕ್ರಮ ಕೈಗೊಳ್ಳದಿದ್ದರೆ, ಮುಧೋಳ ನಾಯಿಯ ಮೂಲಸ್ವರೂಪ ಎಂದೋ ಕೆಟ್ಟುಹೋಗುತ್ತಿಿತ್ತು. ನನಗೆ ಅಂದು ಕಾರಜೋಳ ಅವರ ಈ ಚಿಂತನೆ ಮತ್ತು ಕಳಕಳಿ ಬಗ್ಗೆೆ ಬಹಳ ಖುಷಿ ಆಯಿತು. ಇಲ್ಲದಿದ್ದರೆ ಇಡೀ ಜಗತ್ತಿಿನಲ್ಲಿಯೇ ಅಪರೂಪವಾಗಿರುವ ಮತ್ತು ಮುಧೋಳದಲ್ಲಿ ಮಾತ್ರ ಈ ಬೇಟೆ ನಾಯಿಯ ತಳಿಯೇ ನಿರ್ವಂಶವಾಗುತ್ತಿಿತ್ತು, ಇಲ್ಲವೇ ಮಿಶ್ರತಳಿಯಿಂದಾಗಿ ಅದರ ಸ್ವಂತಿಕೆಯೇ ಹೊರಟುಹೋಗುತ್ತಿಿತ್ತು.

ಮೊನ್ನೆೆ ನಾನು ಅಜರ್‌ಬೈಜಾನ್‌ಗೆ ಹೋದಾಗ, ಅಲ್ಲಿನ ವಿಶೇಷ ಜೇನುಹುಳುಗಳ ಬಗ್ಗೆೆ ಓದುತ್ತಿಿದ್ದೆ. ಅಲ್ಲಿನ ಸರಕಾರ ಪ್ರತಿ ವರ್ಷ ಜೇನುಹುಳುಗಳ ಬಗ್ಗೆೆ ಬಹಳ ಕಾಳಜಿ ತೆಗೆದುಕೊಂಡಿದೆ. ಜಗತ್ತಿಿನಲ್ಲಿ ಎಲ್ಲೂ ಸಿಗದ ಅಪರೂಪದ ಜೇನುಹುಳುಗಳು ಆಲ್ಲಿವೆಯಂತೆ. ಪ್ರತಿ ವರ್ಷ ಐದುನೂರಕ್ಕೂ ಹೆಚ್ಚು ಕೋಟಿ ರುಪಾಯಿ ಹಣ ಖರ್ಚು ಮಾಡಿ, ವಿವಿಧ ಹೂವುಗಳು ಮತ್ತು ಹಣ್ಣುಗಳು ಬಿಡುವ ಅರಣ್ಯವನ್ನು ಒಂದು ವೇಳೆ ಈ ಜೇನ್ನೊೊಣಗಳ ಸಂತತಿ ಕಣ್ಮರೆಯಾದರೆ ಇಡೀ ದೇಶದ ಕೃಷಿ ಮೇಲೆ ತೀವ್ರ ಪರಿಣಾಮ ಬೀರುವುದರಿಂದ ಅವುಗಳ ಸಂರಕ್ಷಣೆಗೆ ಸರಕಾರವೇ ಮುಂದಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ ಮೂವತ್ತಕ್ಕೂ ವಿವಿಧ ಜಾತಿಯ ಜೇನ್ನೊೊಳಗಳು ಕಣ್ಮರೆಯಾದ ಬಳಿಕ, ಅಲ್ಲಿನ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ ನಂತರ ಸರಕಾರ ಎಚ್ಚೆೆತ್ತುಕೊಂಡಿತು. ಜೇನ್ನೊೊಣಗಳಿಲ್ಲದೇ ಯಾವ ಕೃಷಿಯೂ ಸಾಧ್ಯವಿಲ್ಲ, ಕೃಷಿಗೆ ಮೂಲಾಧಾರವಾದ ಈ ಕೀಟಗಳನ್ನು ಉಪೇಕ್ಷಿಸಿದರೆ ಅದರಿಂದ ಬಲವಾದ ಏಟು ತಿನ್ನಬೇಕಾಗುತ್ತದೆ ಅಲ್ಲಿನ ಸರಕಾರಕ್ಕೆೆ ಅನಿಸಿದ್ದರಿಂದ, ಈಗ ಜಗತ್ತಿಿನಲ್ಲಿರುವ ಉತ್ತಮ ತಳಿಗಳನ್ನು ತಂದು ಸಾಕುತ್ತಿಿದೆ. ಕೇವಲ ಮೂರು ವರ್ಷಗಳಲ್ಲಿ ಇದರ ಸಕಾರಾತ್ಮಕ ಪರಿಣಾಮ ಅಲ್ಲಿನ ಕೃಷಿ ಕ್ಷೇತ್ರದ ಮೇಲೆ ಕಾಣಿಸಿಕೊಂಡಿದೆ. ಈಗ ಅಲ್ಲಿನ ಸರಕಾರ ಮತ್ತೂ ಒಂದು ಹೆಜ್ಜೆೆ ಮುಂದೆ ಹೋಗಿ, ಮೂಲ ತಳಿ ಸಂರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಿದೆ. ಪರಿಸರದಲ್ಲಿ ಒಂದು ಜಾತಿಯ ಜೇನ್ನೊೊಣ ಕಣ್ಮರೆಯಾದರೂ ಅದರ ಪರಿಣಾಮ ಹಲವು ಬೆಳೆಗಳ ಮೇಲೆ ಆಗುತ್ತದೆ ಎಂಬ ಸರಳ, ಸಣ್ಣ ತಡವಾಗಿಯಾದರೂ ಕಂಡುಕೊಂಡಿದೆ. ಜೇನ್ನೊೊಣಗಳಿಲ್ಲದೇ ಯಾವ ಕೃಷಿಯೂ ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದೆ.

ಇವೆಲ್ಲವುಗಳ ಪರಿಣಾಮವಾಗಿ, ಅಜರ್‌ಬೈಜಾನ್ ಜಗತ್ತಿಿನಲ್ಲಿಯೇ ಅತಿ ಮಧುರ, ಸಿಹಿಯಾದ ಜೇನುತುಪ್ಪವನ್ನು ತಯಾರಿಸುವ ದೇಶಗಳಲ್ಲಿ ಒಂದಾಗಿದೆ. ನಿಮ್ಮ ಊಟದ ತಾಟಿನಲ್ಲಿ ನೀವು ಸೇವಿಸುವ ಆಹಾರಗಳ ರುಚಿಯನ್ನು ನಿರ್ಧರಿಸುವುದು ಜೇನ್ನೊೊಣಗಳು ಅಂದ್ರೆೆ ನಿಮಗೆ ಆಶ್ಚರ್ಯವಾಗಬಹುದು. ‘ಜೇನ್ನೊೊಣಗಳ ತಳಿ ಸಂರಕ್ಷಿಸದೇ ನಮ್ಮ ಬಾಯಿರುಚಿ ಕಾಪಾಡುವುದೂ ಸಾಧ್ಯವಿಲ್ಲ. ದುರ್ದೈವ, ಯಾರೂ ಈ ಬಗ್ಗೆೆ ಗಮನಹರಿಸುತ್ತಿಿಲ್ಲ’ ಎಂದು ಅಲ್ಲಿನ ಜೇನುಹುಳು ತಜ್ಞ ಬರೆದಿದ್ದಾನೆ. ಯಾವುದೇ ದೇಶದಲ್ಲಿ ಜೇನ್ನೊೊಣಗಳ ಒಂದು ಜಾತಿ ನಾಶವಾಗಿ, ಲಕ್ಷಾಂತರ ಹುಳುಗಳು ಸತ್ತರೆ, ಅದರ ಪರಿಣಾಮ ಇಡೀ ಜಗತ್ತಿಿನ ಮೇಲಾಗುತ್ತದಂತೆ. ಒಂದು ಜೇನುಗೂಡಿನ ಒಟ್ಟಂದದಿಂದ ಅದು ಇರುವ ಹತ್ತಾಾರು ಕಿಮೀ ವ್ಯಾಾಪ್ತಿಿಯಲ್ಲಿರುವ ಪರಿಸರ ಹೇಗಿದೆ ಎಂಬುದನ್ನು ಹೇಳಬಹುದಂತೆ. ಅದು ತಯಾರಿಸುವ ಜೇನುತುಪ್ಪದಿಂದ ನೂರಾರು ಕಿಮೀ ದೂರದ ಪರಿಸರ, ವಾತಾವರಣ, ನೈಸರ್ಗಿಕ ಲಕ್ಷಣಗಳನ್ನು ನಿಖರವಾಗಿ ಹೇಳಬಹುದಂತೆ. ಆದರೆ ಪ್ರತಿದಿನ ಜಗತ್ತಿಿನಾದ್ಯಂತ ಕನಿಷ್ಠ ಹತ್ತಕ್ಕೂ ಹೆಚ್ಚಿಿನ ಜೇನ್ನೊೊಣಗಳ ವಿವಿಧ ತಳಿಗಳು ನಶಿಸುತ್ತಿಿವೆಯಂತೆ.

ಆದರೆ ಈ ಬಗ್ಗೆೆ ತಲೆಕೆಡಿಸಿಕೊಳ್ಳುತ್ತಿಿಲ್ಲ. ಒಂದು ಜೇನು ನೊಣ ಪ್ರಭೇದ ನಶಿಸಿ ಹೋದರೆ ಅದನ್ನು ಪುನಃ ಸೃಷ್ಟಿಿಸಲು ಸಾಧ್ಯವಿಲ್ಲವಂತೆ. ಅಂದರೆ ಒಂದು ತಳಿ ಕಣ್ಮರೆಯಾದರೆ ಅದು ಶಾಶ್ವತವಾಗಿ ಕಣ್ಮರೆ ಆದಂತೆಯೇ. ಒಂದು ಜೇನುಗೂಡು ನಾಶವಾದರೆ ಅದರಿಂದ ವಿಪರೀತ ಹಾನಿಯಾಗುತ್ತದೆ, ಅದರಲ್ಲೂ ಒಂದು ಪ್ರಭೇದ ನಶಿಸಿ ಹೋದರೆ ಅದರಿಂದ ಆಗುವ ಅನಾಹುತ ಅಷ್ಟಿಿಷ್ಟಲ್ಲ. ಅಷ್ಟಕ್ಕೂ ಒಂದು ಜೇನು ನೊಣ ಏನು ಮಾಡೀತು ಎಂದು ಉಪೇಕ್ಷೆ ಮಾಡುವಂತಿಲ್ಲ. ಹೂವಿಲ್ಲದ, ಹಣ್ಣಿಿಲ್ಲದ ಬರಡು ಭೂಮಿಯಲ್ಲಿ ಹೀರಿ ಜೇನ್ನೊೊಣಗಳು ಸಿಹಿಸಿಹಿ ಜೇನುತುಪ್ಪ ತಯಾರಿಸಬಲ್ಲವು. ಅವುಗಳಿಗೆ ಗೊತ್ತಿಿರುವುದು ಜೇನುತುಪ್ಪ ತಯಾರಿಸುವುದೊಂದೇ. ಆದರೆ ಅದು ಕಾರಣವಾಗುವ ಪರಾಗಸ್ಪರ್ಶ ಕ್ರಿಿಯೆಗಳಿಗೆ ಲೆಕ್ಕವಿಲ್ಲ. ಸುತ್ತಮುತ್ತಲಿನ ಪರಿಸರದಲ್ಲಿರುವ ಗಿಡಮರಗಳಲ್ಲಿ ನಿರಂತರವಾಗಿ ನಡೆಯುತ್ತಿಿರುವ ಈ ಕ್ರಿಿಯೆ ಮತ್ತು ಆ ಮೂಲಕ ನಡೆಯುವ ಸಮತೋಲನ ಪ್ರಕ್ರಿಿಯೆಯಲ್ಲಿ ಜೇನ್ನೊೊಣಗಳೇ ಅಗ್ರೇಸರರು. ಹೀಗಿರುವಾಗ ಒಂದು ಪ್ರಭೇದ ನಶಿಸಿ ಹೋದರೆ ನಮ್ಮ ಪರಿಸರದ ಮೇಲೆ ಇದರಿಂದ ಅದೆಂಥ ಕೆಟ್ಟ ಪರಿಣಾಮ ಉಂಟಾಗುತ್ತಿಿರಬಹುದು ಎಂದು ಊಹಿಸಬಹುದು.

ಅದು ಜೇನ್ನೊೊಣವಾಗಿರಬಹುದು, ರವಾಂಡಾ ಕಾಡಿನಲ್ಲಿರುವ ಗೊರಿಲ್ಲಾ ಆಗಿರಬಹುದು, ಅಥವಾ ಐಸ್ಲೆೆಂಡ್ ದೇಶದ ಎಂಟು ನೂರು ವರ್ಷಗಳ ಅತ್ಯಂತ ಸಣ್ಣ ಗ್ಲೇಸಿಯರ್- ‘ಒಕ್ಜೋೋಕುಲ್’ ಇರಬಹುದು, ಇವೆಲ್ಲಾ ಅಪಾಯದ ಅಂಚಿನಲ್ಲಿವೆ ಅಂದರೆ ಯಾವೂದೂ ಸರಿ ಇಲ್ಲ ಎಂದರ್ಥ. ಏನೋ ದೊಡ್ಡ ಅಪಾಯ ಕಾದಿದೆ ಎಂದರ್ಥ. ಈ ಬೃಹತ್ ಜೀವ ಸಂಕುಲದಲ್ಲಿ ಆನೆಯೂ ಒಂದೇ, ಜೇನ್ನೊೊಣಗಳೂ ಒಂದೇ. ಯಾವುದು ನಶಿಸಿ ಹೋದರೂ, ಅದರ ಪರಿಣಾಮ ಮಾತ್ರ ಅಗಾಧ. ಒಂದು ಜೇನ್ನೊೊಣ ಪ್ರಭೇದ ನಶಿಸಿದರೆ ಅದರಿಂದೇನಾದೀತು ಎಂಬ ಅಮಾಯಕ, ಉಡಾಫೆ ಸೊಕ್ಕಿಿನ ಮನೋಭಾವವೇ ನಮ್ಮನ್ನು ಆಳುತ್ತಿಿರುವಾಗ ಅದರ ಪರಿಣಾಮವನ್ನು ಯಾರಿಗೆ ಹೇಳುವುದು?

ಇಂದು ರವಾಂಡಾದಲ್ಲಿ ಅಪರೂಪದ ಮಳೆಕಾಡುಗಳು ಉಳಿದುಕೊಂಡಿದ್ದರೆ, ಅದಕ್ಕೆೆ ಆ ಗೊರಿಲ್ಲಾಗಳೇ ಕಾರಣ. ಗೊರಿಲ್ಲಾಗಳ ಭಯದಿಂದ ಯಾರೂ ಅತ್ತ ಸುಳಿಯುತ್ತಿಿಲ್ಲ. ಒಂದು ವೇಳೆ ಸುಮಾರು ಐನೂರರಷ್ಟಿಿರುವ ಆ ಗೊರಿಲ್ಲಾಗಳೂ ನಶಿಸಿಹೋದರೆ, ಆ ಕಾಡುಗಳನ್ನು ದೇವರು ಬಂದರೂ ರಕ್ಷಿಸಲಾರ. ಹೀಗಾಗಿ ಆ ಗೊರಿಲ್ಲಾಗಳೂ ಇರಬೇಕು, ಆ ಕಾಡುಗಳೂ ಇರಬೇಕು. ಒಂದಿಲ್ಲದಿದ್ದರೆ ಮತ್ತೊೊಂದೂ ಇಲ್ಲ. ಒಂದಿದ್ದರೆ ಎರಡೂ ಇರುತ್ತವೆ. ಈ ಕಾರಣಗಳಿಗಾಗಿ ಜೀವಿಯೂ ಇರಲೇಬೇಕು. ಒಂದು ಕಣ್ಮರೆಯಾದರೂ ಅದು ಪ್ರಕೃತಿಯ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಗೊರಿಲ್ಲಾಗಳು ಇರುವುದರಿಂದಲೇ ಕಳ್ಳ ಸಾಗಣೆದಾರರು ಭಯದಿಂದ ಕಾಡಿನತ್ತ ಸುಳಿಯುತ್ತಿಿಲ್ಲ. ಆ ಕಾಡಿರುವುದರಿಂದಲೇ ಗೊರಿಲ್ಲಾಗಳೂ ಅಲ್ಲಿ ಕೊನೆ ಸಂತತಿಯಾಗಿ ಜೀವ ಹಿಡಿದುಕೊಂಡು ಬದುಕುಳಿದಿವೆ. ಎಂಟು ನೂರು ವರ್ಷಗಳ ಐಸ್ಲೆೆಂಡಿನ ಒಕ್ಜೋೋಕುಲ್ ಎಂಬ ಗ್ಲೇಸಿಯರ್ ಕಣ್ಮರೆಯಾದಾಗ ದೇಶವಾಸಿಗಳೆಲ್ಲ ಕಣ್ಣೀರು ಸುರಿಸಿ, ಶೋಕಾಚರಣೆ ಮಾಡಿದ್ದೂ ಇದೇ ಕಾರಣಕ್ಕೆೆ. ಗ್ಲೇಸಿಯರ್ ಕಣ್ಮರೆಯಾದರೆ ದೇಶವಾಸಿಗಳೆಲ್ಲ ಅಳಬೇಕೇಕೆ ಎಂಬ ಪ್ರಶ್ನೆೆಗೆ ಅವರ ಕಣ್ಣೀರಿನಲ್ಲಿಯೇ

ಮೊನ್ನೆೆ ಜಾರ್ಜಿಯಾ ದೇಶದಿಂದ ಬರುವಾಗ ಕತಾರ್‌ನ ದೋಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣದ ಪುಸ್ತಕದ ಅಂಗಡಿಯೊಂದರಲ್ಲಿ ಈ ತಿಂಗಳ ‘ನ್ಯಾಾಷನಲ್ ಜಿಯೋಗ್ರಾಾಫಿಕ್’ ಮ್ಯಾಾಗಜಿನ್ ಕಣ್ಣಿಿಗೆ ಬಿತ್ತು. ಮುಖಪುಟದಲ್ಲಿ *ಔಠಿ ್ಛ ಐಠಿ ಓಜ್ಞಿಿ: ಠಿ ಛಿ ಔಟಛಿ ಛ್ಞಿಿ ಅ್ಞ ಅ್ಞಜಿಞ್ಝ ಎಟಛಿ ಉ್ಡಠಿಜ್ಞ್ಚಿಿಠಿ ಎಂಬ ಲೇಖನ ಗಮನ ಸೆಳೆಯಿತು. ಸತ್ತ ಘೇಂಡಾ ಮೃಗವನ್ನು ಒಬ್ಬ ವ್ಯಕ್ತಿಿ ಅಪ್ಪಿಿ ಮುದ್ದಾಡುತ್ತಿಿರುವ ಚಿತ್ರವಿರುವ ಆ ಮುಖಪುಟವನ್ನು ನೋಡಿ ಅದನ್ನು ಖರೀದಿಸದೇ ಇರಲು, ಆ ಲೇಖನವನ್ನು ಓದದೇ ಇರಲು ಆಗಲಿಲ್ಲ. ಅಮೆರಿಕದ ಖ್ಯಾಾತ ಫೋಟೋಜರ್ನಲಿಸ್‌ಟ್‌ ಮತ್ತು ವನ್ಯಜೀವಿ ಹಕ್ಕುಗಳ ಹೋರಾಟಗಾರ್ತಿ ಅಮಿ ವಿಟಾಲೇ ಆ ಲೇಖನ ಬರೆದಿದ್ದಳು.

ಅದು ಅಳಿವಿನ ಅಂಚಿನಲ್ಲಿರುವ ‘ನಾರ್ದರನ್ ವೈಟ್ ರೈನೋಸರಸ್’ನ ಕುರಿತಾದ ಲೇಖನ. ಇಡೀ ಜಗತ್ತಿಿನಲ್ಲಿ ಮೂರೇ ಮೂರು ನಾರ್ದರನ್ ವೈಟ್ ರೈನೋಸರಸ್ (ಬಿಳಿ ಮಿಶ್ರಿಿತ ಕಂದು ಬಣ್ಣದ ಘೇಂಡಾ ಮೃಗ) ಇವೆ. ಆ ಪೈಕಿ ಎರಡು ಹೆಣ್ಣು ಮತ್ತು ಒಂದೇ ಒಂದು ಗಂಡು. ಒಂದು ವೇಳೆ ಒಂದು ಗಂಡು ಘೇಂಡಾ ಮೃಗವೂ ಸತ್ತುಹೋದರೆ ಅಲ್ಲಿಗೆ ಆ ಸಂತತಿಯೇ ಈ ಭೂಮಿಯಿಂದ ನಶಿಸಿ ಹೋದಂತೆ. ಅಂದರೆ ಆ ಭಗವಂತ ಬಂದರೂ ಮತ್ತೆೆ ನಾರ್ದರನ್ ವೈಟ್ ಘೇಂಡಾ ಮೃಗವನ್ನು ಸೃಷ್ಟಿಿಸಲು ಸಾಧ್ಯವಿಲ್ಲ.

ಹೀಗಾಗಿ ಕಟ್ಟಕಡೆಯ ಗಂಡು ಘೇಂಡಾವನ್ನು ಇಷ್ಟು ವರ್ಷಗಳ ಕಾಲ ಬಹಳ ಜತನದಿಂದ, ಕಣ್ಣಲ್ಲಿ ಕಣ್ಣಿಿಟ್ಟು, ಎಲ್ಲಿಲ್ಲದ ರಕ್ಷಣೆ ಕೊಟ್ಟು ಝೆಕ್ ರಿಪಬ್ಲಿಿಕ್ ನಲ್ಲಿರುವ ಪ್ರಾಾಣಿ ಸಂಗ್ರಹಾಲಯದಲ್ಲಿ ನೋಡಿಕೊಂಡಿದ್ದರು. ಅಲ್ಲಿ ಇಟ್ಟರೆ ಪ್ರತಿದಿನ ಸಾವಿರಾರು ಜನರು ನೋಡಿ ಘೇಂಡಾ ಮೃಗಕ್ಕೆೆ ಆಯಾಸವಾಗಬಹುದು ಮತ್ತು ಆ ಕಟ್ಟಕಡೆಯ ಗಂಡು ಸಂತತಿಯನ್ನು ಅತಿ ಕಾಳಜಿಯಿಂದ ನೋಡಿಕೊಳ್ಳಬೇಕು ಎಂಬ ಕಾರಣದಿಂದ, ಅದನ್ನು ಸುಮಾರು ನಾಲ್ಕು ಸಾವಿರ ಕಿಮೀ ದೂರದಿಂದ ಕೀನ್ಯಾಾಕ್ಕೆೆ ವಿಮಾನದಲ್ಲಿ ಸಾಗಿಸಿದ್ದರು. ಹಾಗೆ ಸಾಗಿಸುವಾಗ ದೊಡ್ಡ ಪಂಜರವನ್ನು ನಿರ್ಮಿಸಲಾಗಿತ್ತು. ಆ ಪಂಜರದೊಳಗೆ ಓಡಾಡುವಷ್ಟು ಜಾಗವನ್ನು ಮಾಡಿಕೊಡಲಾಗಿತ್ತು. ಕೀನ್ಯಾಾದಲ್ಲಿ ಅದೊಂದರ ಆರೈಕೆಗೆ ನಾಲ್ವರು ಪಶು ವೈದ್ಯರು ಮತ್ತು ಹನ್ನೆೆರಡು ನುರಿತ ಆಳುಗಳನ್ನು ದಿನದ ಇಪ್ಪತ್ನಾಾಲ್ಕು ಗಂಟೆಗಳ ಕಾಲ ನಿಗಾ ಇಡಲು ನೇಮಿಸಲಾಗಿತ್ತು.

ಈ ಘೇಂಡಾ ಮೃಗದ ಹೆಸರು ‘ಸುಡಾನ್’ ಅಂತ. ಏನೇ ಆದರೂ ಈ ಮೃಗವನ್ನು ಉಳಿಸಿಕೊಳ್ಳಲೇಬೇಕೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡಗಳೂ ಬಂದಿದ್ದವು. ಸುಡಾನ್ ಉಳಿಸಲು ಜಗತ್ತಿಿನೆಲ್ಲೆಡೆಗಳಿಂದ ಹಣದ ನೆರವು ಹರಿದು ಬಂದಿತ್ತು. ಕೀನ್ಯಾಾ ಸರಕಾರ ಅದಕ್ಕಾಾಗಿ ಯಾವ ಕ್ರಮಕ್ಕೂ ಸಜ್ಜಾಾಗಿತ್ತು. ಸುಡಾನ್ ಕುರಿತು ದೈನಂದಿನ ಬುಲೆಟಿನ್ ಪ್ರಕಟ ಮಾಡಲಾಗುತ್ತಿಿತ್ತು. ಕೀನ್ಯಾಾದ ಓಲ್ ಪೇಜೆತಾ ಎಂಬ ಪ್ರತಿಷ್ಠಿಿತ ವನ್ಯಧಾಮದಲ್ಲಿ ಸುಡಾನ್‌ಗೆ ವಸತಿ ನಿರ್ಮಿಸಿಕೊಡಲಾಯಿತು. ಅಕ್ಷರಶಃ ಒಬ್ಬ ರಾಜನಿಗೆ ಸಿಗಬಹುದಾದ ಎಲ್ಲಾ ಮರ್ಯಾದೆ, ಸವಲತ್ತುಗಳನ್ನೆೆಲ್ಲ ಆ ಘೇಂಡಾಕ್ಕೆೆ ಒದಗಿಸಿಕೊಡಲಾಗಿತ್ತು. ಸುಡಾನ್ ಉಳಿಸಿಕೊಳ್ಳಲು ಕೆಲವು ಪ್ರಾಾಣಿಪ್ರಿಿಯರು ತಮ್ಮ ಆಸ್ತಿಿ-ಪಾಸ್ತಿಿ ಬರೆದುಕೊಟ್ಟಿಿದ್ದರು. ನೂರಾರು ವನ್ಯಜೀವಿ ಸಂಘಟನೆಗಳು ಸುಡಾನ್ ನೆರವಿಗೆ ಧಾವಿಸಿದವು. ಕೆಟ್ಟ ಮೇಲೆ ಬುದ್ಧಿಿ ಬಂದಿತ್ತು.

ಸುಮಾರು ನೂರು ವರ್ಷಗಳ ಹಿಂದೆ ಆಫ್ರಿಿಕಾದಲ್ಲಿ ಲಕ್ಷಾಂತರ ಘೇಂಡಾ ಮೃಗಗಳಿದ್ದವು. 1980 ರ ಸುಮಾರಿಗೆ ಅಂದರೆ ಸುಮಾರು ನಲವತ್ತು ವರ್ಷಗಳ ಹಿಂದೆ ಅವುಗಳ ಸಂಖ್ಯೆೆ ಹತ್ತೊೊಂಬತ್ತು ಸಾವಿರಕ್ಕೆೆ ಇಳಿದಿತ್ತು. ಈ ಪ್ರಾಾಣಿಯ ಅಂಗಾಂಗಗಳೇ ಅದರ ಉಳಿವಿಗೆ ಕುತ್ತಾಾಗಿ ಪರಿಣಮಿಸಿತ್ತು. ಕೋಡು, ಉಗುರುಗಳನ್ನು ಹಾಲಿನಲ್ಲೋ, ನೀರಿನಲ್ಲೋ ತೇಯ್ದು ನೆಕ್ಕಿಿದರೆ ಜ್ವರ, ಹೊಟ್ಟೆೆನೋವು ವಾಸಿಯಾಗುವುದಂತೆ, ಹಾವು ಕಡಿದರೆ ಅದರ ಕೋಡನ್ನು ಬೇಯಿಸಿ ಕುಡಿದರೆ ರಾಮಬಾಣವಂತೆ, ಮಕ್ಕಳಾಗದಿದ್ದರೆ ಘೇಂಡಾದ ಕೋಡನ್ನು ಹಾಲಿನಲ್ಲಿ ತೇಯ್ದು ಕುಡಿದರೆ ನಪುಂಸಕತ್ವ ಮಾಯವಾಗುವುದಂತೆ, ಜಠರದ ಸಮಸ್ಯೆೆಗೂ ಇದೇ ಮದ್ದಂತೆ, ಇದರ ಚರ್ಮದಿಂದ ಅದನ್ನು ತಯಾರಿಸಬಹುದಂತೆ, ಇದನ್ನು ಮಾಡಬಹುದಂತೆ…ಎಂಬ ನಾಟಿ ವೈದ್ಯರ ಮತ್ತು ವನ್ಯಪ್ರಾಾಣಿ ದಲ್ಲಾಳಿಗಳ ಮಾತು ಕೇಳಿ ಈ ಮೂಕ ದಢೂತಿ ಪ್ರಾಾಣಿ ಕಣ್ಣಾಾ ಕಣ್ಣೆೆದುರಲ್ಲೇ ನಾಶವಾಗುತ್ತಾಾ ನಾಶವಾಗುತ್ತಾಾ, ಒಂದು ಒಂದು ಗಂಡು ಘೇಂಡಾ ಉಳಿದುಕೊಂಡಿತು,ಆಗ ಮನುಷ್ಯ ಎಚ್ಚೆೆತ್ತುಕೊಂಡ!

ಸುಡಾನ್ ಝೆಕ್ ರಿಪಬ್ಲಿಿಕ್‌ನಿಂದ ಕೀನ್ಯಾಾದ ವನ್ಯಧಾಮಕ್ಕೆೆ ಬಂದು ಒಂಬತ್ತು ವರ್ಷಗಳ ಕಾಲ ರಾಜಾತಿಥ್ಯವನ್ನು ಅನುಭವಿಸಿತು. ಅದನ್ನು *ಛಿ ಞಟಠಿ ಛ್ಝಿಿಜಿಜಜಿಚ್ಝಿಿಛಿ ಚ್ಚಿಛ್ಝಿಿಟ್ಟ ಜ್ಞಿಿ ಠಿಛಿ ಡಿಟ್ಟ್ಝ ಎಂದು ಎಲ್ಲರೂ ತಮಾಷೆ ಮಾಡುತ್ತಿಿದ್ದರು. ಅದು ಕೀನ್ಯಾಾದ ವಾತಾವರಣಕ್ಕೆೆ ಹೊಂದಿಕೊಳ್ಳಲು ಬಹಳ ಪ್ರಯಾಸಪಟ್ಟಿಿತು. ಝೆಕ್ ರಿಪಬ್ಲಿಿಕ್‌ನಲ್ಲಿದ್ದ ವಾತಾವರಣವನ್ನೇ ಪುನರ್ ಸೃಷ್ಟಿಿಸಲಾಗಿತ್ತು. ಆದರೆ ವಯಸ್ಸೆೆಂಬುದು ಅದರ ಪರವಾಗಿ ಇರಲಿಲ್ಲ. ಅದಕ್ಕೆೆ ನಲವತ್ತೈದು ವರ್ಷಗಳಾಗಿದ್ದವು. ಹೆಸರು ಹೇಳಿದರೆ ಕೋಟಿ ಕೋಟಿ ಡಾಲರೇನೋ ಹರಿದುಬರುತ್ತಿಿತ್ತು. ಆದರೆ ಆಯಸ್ಸನ್ನು ಹಣದಿಂದ ಖರೀದಿಸುವುದು ಸಾಧ್ಯವಿಲ್ಲವಲ್ಲ? ಸುಡಾನ್ ಆರೋಗ್ಯ ಸರಿ ಇಲ್ಲ ಎಂದು ಅದನ್ನು ನೋಡಿಕೊಳ್ಳುತ್ತಿಿದ್ದ ವೈದ್ಯರು ಹೇಳಿದಾಗ, ಜಗತ್ತಿಿನೆಲ್ಲೆಡೆ ಪ್ರವಾಹೋಪಾದಿಯಲ್ಲಿ ಸಂದೇಶಗಳು ಹರಿದುಬಂದವು. ಅದೆಷ್ಟೇ ಖರ್ಚಾಗಲಿ, ನಾವು ಅದನ್ನು ಭರಿಸುತ್ತೇವೆ, ಹೇಗಾದರೂ ಮಾಡಿ ಸುಡಾನ್‌ನನ್ನು ಉಳಿಸಿ ಎಂದು ಸಾವಿರಾರು ಜನ ಚೆಕ್ ಬುಕ್ ಹಿಡಿದು ಅದು ಇರುವ ವನ್ಯಧಾಮಕ್ಕೆೆ ಧಾವಿಸಿ ಬಂದರು.

ಆದರೆ ಕಾಲ ಮಿಂಚಿ ಹೋಗಿತ್ತು. ಯಾರೂ ಮಾಡುವ ಸ್ಥಿಿತಿಯಲ್ಲಿ ಇರಲಿಲ್ಲ. ಅದು ಹಿಂದಿನ ವರ್ಷದ ಮಾರ್ಚ್ 19 ರಂದು ಈ ಭೂಮಿಯಿಂದ ತನ್ನ ಸಂತತಿಯನ್ನೇ ಕಟ್ಟಿಿಕೊಂಡು ನಿರ್ಗಮಿಸಿಬಿಟ್ಟಿಿತು! ಇನ್ನು ಯಾರು ಏನೇ ಮಾಡಿದರೂ ಆ ಸಂತತಿಯ ಘೇಂಡಾ ಮೃಗವನ್ನು ಭೂಮಿಯ ಮೇಲೆ ಕಾಣಲು ಸಾಧ್ಯವಿಲ್ಲ!

ಈಗ ಎರಡೇ ಎರಡು ಹೆಣ್ಣು ಘೇಂಡಾ ಮೃಗಗಳು ಮಾತ್ರ ಉಳಿದುಕೊಂಡಿವೆ. ವಿಜ್ಞಾನಿಗಳು ಕೃತಕ ಗರ್ಭಧಾರಣೆ ವಿಧಾನದ ಮೂಲಕ ಆ ಪ್ರಾಾಣಿಯನ್ನು ಸೃಷ್ಟಿಿಸಬಹುದು. ಅದು ಕೃತಕ ಘೇಂಡಾ ಮೃಗವಾದೀತೇ ಹೊರತು ನಿಸರ್ಗ ಘೇಂಡಾ ಆಗಲು ಸಾಧ್ಯವೇ ಇಲ್ಲ. ಆ ಅಪರೂಪದ ಬಿಳಿ ಮಿಶ್ರಿಿತ ಕಂದು ಬಣ್ಣದ ಘೇಂಡಾ, ಮನುಷ್ಯನ ಹಪಾಹಪಿಗೆ ಈ ಜಗತ್ತಿಿನಿಂದ ಮರೆಯಾಯಿತು . ಮನುಷ್ಯನ ದುರಾಸೆ, ನಿಷ್ಕಾಾಳಜಿ, ತಾತ್ಸಾಾರ, ಅವಜ್ಞೆ ಮತ್ತು ಮೂರ್ಖತನಕ್ಕೆೆ ಒಂದು ಅಪರೂಪದ ಪ್ರಾಾಣಿ ಸಂತತಿಯೇ ಈ ಪ್ರಪಂಚದಿಂದ ನಮ್ಮ ಕಣ್ಣೆೆದುರಲ್ಲೇ ನಶಿಸಿ ಹೋಯಿತು. ಇನ್ನು ಮೂರು ಲೋಕ ಒಂದು ಮಾಡಿದರೂ ಅದನ್ನು ಪುನಃ ಸೃಷ್ಟಿಿಸಲು ಸಾಧ್ಯವಿಲ್ಲ.

ಇದು ಕೇವಲ ಘೇಂಡಾ ಮೃಗದ್ದೊಂದೇ ಕಥೆಯಲ್ಲ. ಹಲವು ಸಂಕುಲಗಳ ಸುಡಾನ್‌ಗಳು ನಮ್ಮ ಮುಂದೆಯೇ ದಿನಗಳನ್ನು ದೂಡುತ್ತಿಿವೆ. ನಾವು ಇನ್ನಾಾದರೂ ಎಚ್ಚೆೆತ್ತುಕೊಳ್ಳದಿದ್ದರೆ ಸುಡಾನ್ ಬೀಳ್ಕೊೊಟ್ಟ ಹಾಗೆ ಅನೇಕ ಪ್ರಾಾಣಿಗಳಿಗೂ ವಿದಾಯ ಹೇಳುವ ದಿನಗಳು ದೂರವಿಲ್ಲ. ಕಟ್ಟಕಡೆಗೆ ಸುಡಾನ್ ಉಳಿಸಿಕೊಳ್ಳಲು ಪಟ್ಟ ಕಾಳಜಿ, ಶ್ರಮವನ್ನು ಎಲ್ಲಾ ಪ್ರಾಾಣಿಗಳಿಗೂ ತೋರಿದರೆ, ಇನ್ನಷ್ಟು ವರ್ಷ ಅವುಗಳನ್ನಾಾದರೂ ಉಳಿಸಿಕೊಳ್ಳಲು ಸಾಧ್ಯ.

ನಾವೇಕೆ ವನ್ಯಪ್ರಾಣಿಗಳನ್ನು ಸಂರಕ್ಷಿಸಬೇಕು ಎಂಬ ಪ್ರಶ್ನೆ ಬಂದಾಗ ಸುಡಾನ್ ನೆನಪಾಗುತ್ತಾನೆ!

Leave a Reply

Your email address will not be published. Required fields are marked *