Tuesday, 11th August 2020

ಕಟೀಲು ಅಧ್ಯಕ್ಷರಾದದು ಬಿಜೆಪಿಯ ಹೊಸ ಚಿಂತನೆಗೆ ಸಾಕ್ಷಿ

ನಳಿನ ಕುಮಾರ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷರಾದರಂತೆ ಎಂದು ಘೋಷಣೆಯಾಗುತ್ತಿಿದ್ದಂತೆ, ಶುರುವಾಯಿತು ಚರ್ಚೆ. ಅವರನ್ನು ಮಾಡಿದ್ದು ಸರಿಯಾ, ಅವರನ್ನು ಮಾಡಬಾರದಿತ್ತು, ಏನಾಯ್ತು ಇವಾಗ, ಮಾಡಿದ್ದು ಸರಿಯಾಗಿದೆ… ವಿಷಯದ ಆ ಕಡೆ- ಈ ಕಡೆ ಜನ ಚದುರಿ ಹೋದರು. ಅಭಿಪ್ರಾಾಯಗಳು ಎರಡು ಪಂಗಡಗಳನ್ನೇ ಮಾಡಿದವು. ಕೆಲವರಂತೂ ಈ ಕಟೀಲ್ ಅವರನ್ನು ರಾಜ್ಯಾಾಧ್ಯಕ್ಷರನ್ನಾಾಗಿ ಒಪ್ಪಿಿಕೊಳ್ಳಲು ಸಾಧ್ಯವಿಲ್ಲ, ಮನಸ್ಸು ಒಪ್ಪುುವುದಿಲ್ಲ ಎಂದು ಹೇಳಿದರು. ಇನ್ನು ಕೆಲವರು ಈ ಮಾತನ್ನು ವಿರೋಧಿಸಿದರು. ಸೋಶಿಯಲ್ ಮೀಡಿಯಾದಲ್ಲಂತೂ ಎರಡು ದಿನ ಇದೇ ಚರ್ಚೆ. ಕೆಲವರಿಗೂ ಇನ್ನೂ ಸಮಾಧಾನವಾಗಿಲ್ಲ. ಪರ-ವಿರೋಧ ವಾದ ನಡೆಯುತ್ತಲೇ ಇದೆ. ಅದು ಸಹಜ ಕೂಡ.

ನನಗೆ ತುಸು ಅಸಮಂಜಸ ಅಂತ ಅನಿಸಿದ್ದು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಾಳ ಅವರ ಪ್ರತಿಕ್ರಿಿಯೆ. ‘ಕಟೀಲ್ ಅವರು ಮಂಗಳೂರು ಪ್ರಾಾಂತಕ್ಕೆೆ ಸೀಮಿತವಾದವರು. ಅವರಿಗೆ ಇಡೀ ಕರ್ನಾಟಕದ ಸಮಗ್ರ ಚಿತ್ರಣದ ಅರಿವಿಲ್ಲ. ರಾಜ್ಯದ ಎಲ್ಲಾಾ ಜಿಲ್ಲೆೆಗಳಲ್ಲಿರುವ ಕಾರ್ಯಕರ್ತರ ಪರಿಚಯವಿಲ್ಲ. ಇಂಥವರು ರಾಜ್ಯಾಾಧ್ಯಕ್ಷರಾದರೆ ಅವರಿಗೂ ಕಷ್ಟ, ಅವರನ್ನು ಒಪ್ಪಿಿಕೊಳ್ಳಲು ಕಾರ್ಯಕರ್ತರಿಗೂ ಕಷ್ಟ. ಕಟೀಲ್ ಅವರಿಗೆ ದಕ್ಷಿಿಣ ಕನ್ನಡದ ಹೊರಗಿನ ರಾಜ್ಯದ ಪರಿಚಯವಿಲ್ಲ. ಎಲ್ಲಾಾ ಜಿಲ್ಲೆೆಗಳಲ್ಲಿರುವ ಸಮಸ್ಯೆೆಗಳ ಅರಿವಿಲ್ಲ’ ಎಂಬ ಧಾಟಿಯಲ್ಲಿ ಯತ್ನಾಾಳ ಅಭಿಪ್ರಾಾಯ ಹೊರಹಾಕಿದರು.

ಅವರು ಹೇಳೋದರಲ್ಲಿ ತಪ್ಪೇನೂ ಇಲ್ಲ. ಕಟೀಲ್ ಆಯ್ಕೆೆಯ ಪರ-ವಿರೋಧ ಚರ್ಚೆಯ ಪೈಕಿ ವಿರೋಧ ಅಭಿಪ್ರಾಾಯದ ಒಂದು ಎಳೆ ಅಷ್ಟೆೆ. ಮಂಗಳೂರು ಬಿಟ್ಟು ಅವರಿಗೆ ಏನು ಗೊತ್ತಿಿದೆ? ಚಾಮರಾಜನಗರ ಗೊತ್ತಿಿದೆಯಾ? ಯಾದಗಿರಿ, ರಾಯಚೂರು ಗೊತ್ತಾಾ? ಅಲ್ಲಿನ ಕಾರ್ಯಕರ್ತರು, ಪದಾಧಿಕಾರಿಗಳು ಗೊತ್ತಿಿದೆಯಾ? ಇಲ್ಲ ತಾನೆ? ಹೀಗಿರುವಾಗ ಕಟೀಲ್ ಅವರನ್ನು ರಾಜ್ಯಾಾಧ್ಯಕ್ಷರನ್ನಾಾಗಿ ಮಾಡಿದ್ದು ಸರಿಯಲ್ಲ ಎಂಬುದು ಯತ್ನಾಾಳ ವಾದದ ತಿರುಳು.

ಇದು ಮೇಲ್ನೋೋಟಕ್ಕೆೆ ಸರಿ ಎಂದು ಅನಿಸುತ್ತದೆ. ಕಟೀಲ್ ಅವರು ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯರು. ಅವರು ಆ ಕ್ಷೇತ್ರಕ್ಕಷ್ಟೇ ಸೀಮಿತರಾದವರು. ರಾಜ್ಯಾಾದ್ಯಂತ ಓಡಾಡುವ ಅವಕಾಶ ಅವರಿಗೆ ಸಿಗಲಿಲ್ಲ. ಪಕ್ಷವೂ ಅವರಿಗೆ ಅಂಥ ಜವಾಬ್ದಾಾರಿ ವಹಿಸಲಿಲ್ಲ. ಇವರಿಗೂ ಅಂಥ ಅವಕಾಶ ಕೂಡಿಬರಲಿಲ್ಲ. ಅಲ್ಲದೇ ಕಟೀಲ್ ತಾವಾಗಿಯೇ ಅಂಥ ಅವಕಾಶವನ್ನು ಸೃಷ್ಟಿಿಸಿಕೊಳ್ಳಲಿಲ್ಲ. ಹೀಗಾಗಿ ಅವರು ದಕ್ಷಿಿಣ ಕನ್ನಡಕ್ಕೆೆ ತಮ್ಮ ವ್ಯಾಾಪ್ತಿಿಯನ್ನು ಸೀಮಿತಪಡಿಸಿಕೊಳ್ಳುವುದು ಅನಿವಾರ್ಯವಾಯಿತು.

ನನಗೆ ಇಲ್ಲಿ ಒಂದು ಪ್ರಶ್ನೆೆ ಕಾಡುತ್ತದೆ. ಅದೇನೆಂದರೆ ಒಂದು ವೇಳೆ ಯತ್ನಾಾಳ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಾಗಿ ಮಾಡಿದ್ದಿದ್ದರೆ, ಏನಾಗುತ್ತಿಿತ್ತು? ಆಗಲೂ ಇದೇ ಪ್ರಶ್ನೆೆ ಎದುರಾಗುತ್ತಿಿತ್ತು. ‘ಯತ್ನಾಾಳ್ ಅವರಿಗೆ ಇಡೀ ಕರ್ನಾಟಕದ ಪರಿಚಯವಿದೆಯಾ? ಅವರಿಗೆ ರಾಜ್ಯದ ಎಲ್ಲಾಾ ಜಿಲ್ಲೆೆಗಳಲ್ಲಿರುವ ಕಾರ್ಯಕರ್ತರ ಪರಿಚಯ ಇದೆಯಾ? ಅವರಿಗೆ ಮಂಗಳೂರು ಗೊತ್ತಾಾ? ಸಖರಾಯಪಟ್ಟಣ ಹಾಗೂ ಸಕ್ರೆೆ ಪಟ್ಟಣ ಎರಡೂ ಒಂದೇನಾ ಅಥವಾ ಬೇರೆ ಬೇರೆಯಾ? ಅವರು ಎಂದಾದರೂ ಚಾಮರಾಜನಗರ, ಗುಡಿಬಂಡೆಗೆ ಭೇಟಿ ಕೊಟ್ಟಿಿದ್ದಾಾರಾ? ಯತ್ನಾಾಳ್ ಅವರಿಗೆ ವಿಜಯಪುರ, ಬಾಗಲಕೋಟೆ ಬಿಟ್ಟು ರಾಜ್ಯದ ಎಷ್ಟು ಜಿಲ್ಲೆೆಗಳ ಪರಿಚಯವಿದೆ?’ ಮುಂತಾದ ಪ್ರಶ್ನೆೆಗಳು ತೂರಿಬರುತ್ತಿಿದ್ದವು.

ಇವು ಕೇವಲ ಟೀಕಾತ್ಮಕ ಪ್ರಶ್ನೆೆಗಳಲ್ಲ, ವಾಸ್ತವ ಕೂಡ ಹೌದು. ಯತ್ನಾಾಳ್ ಬದಲು ಕಾರ್ಕಳದ ಶಾಸಕ ಸುನೀಲ್ ಅಥವಾ ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ ಅವರನ್ನು ಪಕ್ಷದ ರಾಜ್ಯಾಾಧ್ಯಕ್ಷರನ್ನಾಾಗಿ ಮಾಡಿದರೂ, ಇದೇ ಅಭಿಪ್ರಾಾಯ ಕೇಳಿಬರುತ್ತಿಿತ್ತು. ಇಡೀ ರಾಜ್ಯವನ್ನು ಬಲ್ಲ ನಾಯಕರು ಬಿಜೆಪಿಯಲ್ಲಿ ಯಾರಿದ್ದಾಾರೆ ಇಂದು, ಯಡಿಯೂರಪ್ಪನವರನ್ನು ಬಿಟ್ಟು? ಉಪಮುಖ್ಯಮಂತ್ರಿಿಯಾಗಿದ್ದ ಆರ್.ಅಶೋಕ ಅವರಿಗೂ ಬೆಂಗಳೂರು ದಾಟಿದ ನಂತರ, ಸೈನ್‌ಬೋರ್ಡ್ ಇಲ್ಲದೇ ಊರಿನ ದಾರಿ ಗೊತ್ತಾಾಗುವುದಿಲ್ಲ. ಅವರ ಪಾಲಿಗೆ ಬೆಂಗಳೂರೇ ಕರ್ನಾಟಕ. ಅವರನ್ನು ಅಧ್ಯಕ್ಷರನ್ನಾಾಗಿ ಮಾಡಿದರೂ, ಈ ಪ್ರಶ್ನೆೆ ಕೇಳಿ ಬರುತ್ತಿಿರಲಿಲ್ಲವೇ? ಖಂಡಿತವಾಗಿಯೂ ಕೇಳಿಬರುತ್ತಿಿತ್ತು.

ಈ ಪ್ರಶ್ನೆೆ ಇವರಿಗಷ್ಟೇ ಅಲ್ಲ, ಮೋದಿ ಅವರ ಹೆಸರು ಪ್ರಧಾನಿ ಹುದ್ದೆೆಗೆ ಪ್ರಸ್ತಾಾಪವಾದಾಗಲೂ ಕೇಳಿ ಬಂದಿತ್ತು. ಮೋದಿಯವರು ಕೇವಲ ಗುಜರಾತಿಷ್ಟೇ ಸೀಮಿತವಾದವರು, ಅವರಿಗೆ ಸಮಗ್ರ ರಾಷ್ಟ್ರದ ಕಲ್ಪನೆ ಇಲ್ಲ, ಅವರಿಗೆ ಕೇರಳದಲ್ಲಿ ಯಾವ ಭಾಷೆ ಮಾತಾಡುತ್ತಾಾರೆಂಬುದೂ ಗೊತ್ತಿಿಲ್ಲ, ಅಂಥವರು ಪ್ರಧಾನಿ ಹುದ್ದೆೆಗೆ ಏರುವುದನ್ನು ಕಲ್ಪಿಿಸಿಕೊಳ್ಳಲು ಆಗುವುದಿಲ್ಲ ಎಂಬ ಮಾತುಗಳು ಕೇಳಿಬಂದವು. ಬಿಜೆಪಿಯಲ್ಲಿ ಒಂದು ವರ್ಗದ ಜನರೂ ಈ ಮಾತುಗಳನ್ನು ಹೇಳಿಕೊಂಡು ನಕ್ಕರು. ಅದು ನಿಜವೂ ಆಗಿದ್ದಿರಬಹುದು. ಈ ಎಲ್ಲಾಾ ಟೀಕೆ-ಟಿಪ್ಪಣಿಗಳ ನಡುವೆಯೇ ಮೋದಿ ಪ್ರಧಾನಿಯಾದರು. ಕಳೆದ ಐದೂವರೆ ವರ್ಷಗಳಿಂದ ಅವರು ಆ ಹುದ್ದೆೆಯಲ್ಲಿದ್ದಾಾರೆ.

ಎರಡನೇ ಅವಧಿಗೂ ಆರಿಸಿ ಬಂದಿದ್ದಾಾರೆ. ಪ್ರಪ್ರಥಮ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆೆ ಬಂದಿದೆ. ಭಾರತದ ಇತಿಹಾಸದಲ್ಲಿಯೇ ಮೋದಿಯವರು ಅತ್ಯಂತ ಪ್ರಭಾವಿ, ವರ್ಚಸ್ವಿಿ ಹಾಗೂ ಜನಪ್ರಿಿಯ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾಾರೆ. ಇಡೀ ದೇಶಕ್ಕೆೆ ಅನ್ವಯವಾಗುವ ವ್ಯಕ್ತಿಿ ಅಲ್ಲ ಎಂಬ ಕಾರಣಕ್ಕೆೆ ಅವರ ಹೆಸರನ್ನು ಪ್ರಧಾನಿ ಹುದ್ದೆೆಗೆ ಪರಿಗಣಿಸದಿದ್ದರೆ ಏನಾಗುತ್ತಿಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಮೋದಿಯವರು ಪ್ರಧಾನಿಯಾಗಿ ಇಷ್ಟು ಯಶಸ್ವಿಿಯಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಕೇವಲ ರಾಜ್ಯಕ್ಕಷ್ಟೇ ಸೀಮಿತವಾದವರು, ದೇಶದಲ್ಲಿ ಯಶಸ್ವಿಿಯಾಗುವುದು ಸುಲಭದ ಮಾತಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ತಮ್ಮಲ್ಲೂ ಅಪರೂಪದ ನಾಯಕತ್ವ ಗುಣವಿದೆ ಎಂಬುದನ್ನು ಅವರು ಸಾಬೀತು ಮಾಡಿದರು. ಪ್ರಾಾಯಶಃ ಮೋದಿಯವರಿಗೆ ಈ ಅವಕಾಶ ಸಿಗದಿದ್ದರೆ, ಅವರಲ್ಲಿ ಇಷ್ಟೆೆಲ್ಲ ಸಾಮರ್ಥ್ಯವಿದೆಯೆಂಬುದು ಯಾರಿಗೂ ಗೊತ್ತಾಾಗುತ್ತಿಿರಲಿಲ್ಲ.

ಯಾರಿಗೇ ಆಗಲಿ, ಅವರಲ್ಲಿರುವ ನಿಜವಾದ ಸಾಮರ್ಥ್ಯ ಪ್ರಕಟವಾಗಬೇಕಾದರೆ ಅವಕಾಶಗಳು ಸಿಗಬೇಕು. ಆಗಲೇ ಗೊತ್ತಾಾಗೋದು. ನಮ್ಮಲ್ಲಿ ಹೊಸ ಪ್ರತಿಭೆಗಳು ಅರಳಲು ಅವಕಾಶವೇ ಸಿಗುವುದಿಲ್ಲ. ಸಿಕ್ಕರೂ ಅವರನ್ನು ಬುಡದಲ್ಲೇ ಕತ್ತರಿಸಲು ಹೊಂಚುಹಾಕುವವರೇ ಹೆಚ್ಚು. ಸೀನಿಯಾರಿಟಿ ಕಾರಣ ನೀಡಿ ತುಳಿಯುವ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ. ಇದೇ ಕಾರಣವಾಗಿದ್ದರೆ, ಮೋದಿಯವರ ಹೆಸರು ಪ್ರಧಾನಿ ಹುದ್ದೆೆಗೆ ಪರಿಗಣನೆಗೆ ಬರಲೇಬಾರದಿತ್ತು. ಯಾಕೆಂದರೆ ಅವರಿಗಿಂತ ಹಿರಿಯರಾದ ನಾಯಕರಿದ್ದರು. ಮೋದಿ ಅವರಿಗೆ ದಿಲ್ಲಿ ರಾಜಕಾರಣದ ಅನುಭವವೂ ಇರಲಿಲ್ಲ. ಆದರೂ ಅವರಿಗೆ ಒಂದು ಅವಕಾಶ ನೀಡಲು ನಿರ್ಧರಿಸಲಾಯಿತು, ಇದು ಅತ್ಯಂತ ನಿರ್ಣಾಯಕ ನಿರ್ಧಾರ.

ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಕಷ್ಟು ಬಲವಾದ ಸಂಕಲ್ಪ, ದೃಢತೆಯೂ ಬೇಕು. ಅಲ್ಲದೇ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಣ್ಣ ಅಪಾಯವೂ ಇರುತ್ತದೆ. ಅವೆಲ್ಲವನ್ನೂ ಮೀರಿ ಇಂಥ ಪ್ರಮುಖ ಕ್ರಮಕ್ಕೆೆ ಮುಂದಾಗಬೇಕಾಗುತ್ತದೆ. ಮೋದಿ ವಿಷಯದಲ್ಲಿ ಈ ನಿರ್ಧಾರ ಅತ್ಯಂತ ಫಲದಾಯಕ ಎಂಬುದು ಸಾಬೀತಾಗಿದೆ. ಮೋದಿಗೇನು ಗೊತ್ತು ಬದನೇಕಾಯಿ ಎಂದು ಅಂದುಕೊಂಡಿದ್ದರೆ ಏನಾಗುತ್ತಿಿತ್ತು ಎಂಬುದನ್ನು ಊಹಿಸಿ.

ಈ ಮಾತನ್ನು ಅಮಿತ್ ಶಾ ಅವರಿಗೂ ಅನ್ವಯಿಸಬಹುದು. ಮೋದಿ ಅವರೇನೋ ಗುಜರಾತಿನ ಮುಖ್ಯಮಂತ್ರಿಿಯಾಗಿದ್ದರು. ಆದರೆ ಅಮಿತ್ ಶಾ ಯಾರಿಗೆ ಗೊತ್ತಿಿತ್ತು? ಅವರು ಅಲ್ಲಿನ ಗೃಹ ಖಾತೆ ರಾಜ್ಯಸಚಿವರಾಗಿದ್ದರು. ಗುಜರಾತಿನ ಮುಖ್ಯಮಂತ್ರಿಿ ಆಗುವ ಮುನ್ನ ಮೋದಿಯವರು ದಿಲ್ಲಿಯಲ್ಲಿ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಆದರೆ ಶಾ ಅವರು ದಿಲ್ಲಿಯಲ್ಲಿ ಸಂಪೂರ್ಣ ಅಪರಿಚಿತ. ಸೊಹ್ರಾಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಅವರನ್ನು ಬಂಧಿಸುವ ತನಕ ಅಮಿತ್ ಶಾ ಎಂಬ ವ್ಯಕ್ತಿಿ ಈ ಜಗತ್ತಿಿನಲ್ಲಿ ಇದ್ದಾರೆ ಎಂಬುದು ಸಹ ಗುಜರಾತಿನ ಹೊರಗಿನವರಿಗೆ ಗೊತ್ತಿಿರಲಿಲ್ಲ. ಮೋದಿ ಅವರು ಪ್ರಧಾನಿ ಆದ ಬಳಿಕ, ಶಾ ಅವರನ್ನು ತಮ್ಮ ಜತೆಗೆ ದಿಲ್ಲಿಗೆ ಕರೆದುಕೊಂಡು ಬಂದರು. ಉತ್ತರ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಗೆ ಪಕ್ಷದ ಉಸ್ತುವಾರಿಯಾಗಿ ನೇಮಿಸಿದರು. ಬಿಜೆಪಿ ಆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿತು. ಆಗ ಅಮಿತ್ ಶಾ ಅವರ ಹೆಸರು ದಿಲ್ಲಿ ರಾಜಕಾರಣದಲ್ಲಿ ಮುನ್ನೆೆಲೆಗೆ ಬಂದಿತು.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಯಾರಾಗಬೇಕು ಎಂಬ ಪ್ರಶ್ನೆೆ ಬಂದಾಗ, ಮೋದಿ ಅವರು ಶಾ ಅವರ ಹೆಸರನ್ನೇ ಪ್ರಸ್ತಾಾಪಿಸಿದರು. ಅದು ನಿಜಕ್ಕೂ ಬಹಳ ಬೋಲ್‌ಡ್‌ ಆದ ನಿರ್ಧಾರವಾಗಿತ್ತು. ಅಮಿತ್ ಶಾ ಅವರಿಗೆ ಗುಜರಾತ ರಾಜ್ಯದ ಹೊರತಾಗಿ ಬೇರೆ ಯಾವ ರಾಜ್ಯದ ಗಂಧ-ಗಾಳಿಯೂ ಗೊತ್ತಿಿರಲಿಲ್ಲ. ಅವರ ಪಕ್ಷದ ಕಾರ್ಯಕರ್ತರಿಗೂ ಅವರ ಬಗ್ಗೆೆ ಅಷ್ಟಾಾಗಿ ಗೊತ್ತಿಿರಲಿಲ್ಲ. ಪ್ರಾಾಯಶಃ ಅವರು ಇಡೀ ದೇಶದಲ್ಲಿ ಒಂದು ಬಾರಿಯೂ ಸಂಚರಿಸಿರಲಿಕ್ಕಿಿಲ್ಲ. ಪಕ್ಷದ ರಾಜ್ಯ ಘಟಕಗಳ ಅಧ್ಯಕ್ಷರನ್ನೂ ಭೇಟಿ ಮಾಡಿರಲಿಕ್ಕಿಿಲ್ಲ. ಅವರ ಪಾಲಿಗೆ ಗುಜರಾತೇ ಜಗತ್ತು. ಅಂಥ ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದರು. ಮುಂದಿನದೆಲ್ಲ ಇತಿಹಾಸ.

ಬಿಜೆಪಿಯ ಇತಿಹಾಸದಲ್ಲೇ ಶಾ ಅವರು ಅತ್ಯಂತ ಯಶಸ್ವಿಿ, ಪ್ರಭಾವಿ ಮತ್ತು ಸರ್ವ ಆದರಣೀಯ ಅಧ್ಯಕ್ಷ ಎಂಬ ಅಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ನೇತೃತ್ವದಲ್ಲಿ ಇಪ್ಪತ್ನಾಾಲ್ಕು ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣಾ ನಡೆಯಿತು. ಆ ಪೈಕಿ ಬಿಜೆಪಿ ಇಪ್ಪತ್ತೊೊಂದು ರಾಜ್ಯಗಳಲ್ಲಿ ಜಯಭೇರಿ ಬಾರಿಸಿತು. ಇಂಥ ಅದ್ಭುತ ಸಾಧನೆಯನ್ನು ಯಾವ ಅಧ್ಯಕ್ಷರೂ ಸಾಧಿಸಿರಲಿಲ್ಲ. ಅಮಿತ್ ಶಾ ಅವರು ಬಿಜೆಪಿಯ ‘ಚಾಣಾಕ್ಷ’ ಎಂದು ಕರೆಯಿಸಿಕೊಂಡರು. ಅವರು ಕೈ ಇಟ್ಟಲ್ಲೆಲ್ಲ ಪಕ್ಷದ ಅದೃಷ್ಟವೇ ಬದಲಾಯಿತು. ಎರಡನೇ ಅವಧಿಗೂ ಅವರನ್ನೇ ಅಧ್ಯಕ್ಷರನ್ನಾಾಗಿ ಮುಂದುವರಿಸಲು ಪಕ್ಷ ತೀರ್ಮಾನಿಸಿತು. ಪಕ್ಷದಲ್ಲಿ ಶಿಸ್ತು, ಸಂಘಟನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತಂದು, ಪಕ್ಷವನ್ನು ಒಂದಾದ ಮೇಲೊಂದರಂತೆ ಗೆಲುವಿನ ಸುಪ್ಪತ್ತಿಿಗೆಗೆ ಏರಿಸಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು.

ಬಿಜೆಪಿಯ ಶ್ರೇಣೀಕೃತ ವ್ಯವಸ್ಥೆೆಗೆ ಹೋಲಿಸಿದರೆ ಅಮಿತ್ ಶಾ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಲೇ ಬಾರದು. ಅವರಿಗೆ ದಿಲ್ಲಿ ರಾಜಕೀಯ ಜ್ಞಾನವೇ ಇರಲಿಲ್ಲ. ಪಕ್ಷದಲ್ಲಿ ಜ್ಯೇಷ್ಠತೆಯೂ ಇರಲಿಲ್ಲ. ರಾಷ್ಟ್ರೀಯ ಸ್ತರದಲ್ಲಿ ಕೆಲಸ ಮಾಡಿದ ಅನುಭವವೂ ಇರಲಿಲ್ಲ. ಅಂಥ ವ್ಯಕ್ತಿಿಯನ್ನು ಅಧ್ಯಕ್ಷರನ್ನಾಾಗಿ ಮಾಡುವ ಪ್ರಶ್ನೆೆಯೇ ಇರಲಿಲ್ಲ. ಈ ವಿಷಯದಲ್ಲಿ ಮೋದಿ ಬಹಳ ದೊಡ್ಡ ರ್ಕ್‌ಿ ತೆಗೆದುಕೊಂಡಿದ್ದರು. ಇಂದು ಅಮಿತ್ ಶಾ ಯಾವ ಹಂತಕ್ಕೆೆ ಏರಿದ್ದಾರೆ ಅಂದರೆ ಬಿಜೆಪಿಯ ಇತಿಹಾಸದಲ್ಲೇ ಅವರು ಅತ್ಯಂತ ಯಶಸ್ವಿಿ, ಪರಿಣಾಮಕಾರಿ ಅಧ್ಯಕ್ಷರಾಗಿದ್ದಾರೆ.

ಶಾ ಅವರಿಗೆ ಈ ಅವಕಾಶ ಕೊಡದಿದ್ದರೆ ಅವರು ಮುಂದೆ ಬರುತ್ತಿಿರಲಿಲ್ಲ. ಅವರಲ್ಲಿರುವ ಈ ಅಸಾಧಾರಣ ಸಾಮರ್ಥ್ಯವೂ ಗೊತ್ತಾಾಗುತ್ತಿಿರಲಿಲ್ಲ. ಅದರ ಲಾಭ ಪಕ್ಷಕ್ಕೆೆ ಸಿಗುತ್ತಿಿರಲಿಲ್ಲ. ಆದರೆ ಪದೇ ಪದೆ ಅಧ್ಯಕ್ಷರಾಗುವುದರಿಂದ ಹೊಸ ಪ್ರತಿಭೆಗಳು ಅರಳಲು, ಮುಂದೆ ಬರಲು ಸಾಧ್ಯವಾಗುವುದಿಲ್ಲ. ಇದು ಇಡೀ ಸಂಘಟನೆಗೆ ಒಂಥರದ ಜಾಡ್ಯವನ್ನು ತರುತ್ತದೆ. ಆದರೆ ಯಾರೂ ಸಹ ಹೊಸತನ, ಪ್ರಯೋಗಶೀಲತೆಯನ್ನು ಇಷ್ಟಪಡುವುದಿಲ್ಲ. ರ್ಕ್‌ಿ ತೆಗೆದುಕೊಳ್ಳಲು ಬಯಸುವುದಿಲ್ಲ. ಪರಿವರ್ತನೆಗೆ ತೆರೆದುಕೊಳ್ಳುವುದಿಲ್ಲ. ವಯಸ್ಸಾಾದವರನ್ನೇ ಪದೇ ಪದೆ ಅಧ್ಯಕ್ಷರನ್ನಾಾಗಿ ಮಾಡುವ ಪರಿಪಾಠಕ್ಕೆೆ ಜೋತುಬೀಳುತ್ತಾಾರೆ. ಆಗ ಅಂಥವರಿಂದ ಮಹತ್ತರವಾದುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಈ ಹಿನ್ನೆೆಲೆಯಲ್ಲಿ ನಳಿನ್ ಕುಮಾರ ಕಟೀಲ್ ಅವರ ನೇಮಕವನ್ನು ಗಮನಿಸಬೇಕು. ಹೌದು, ಅವರು ಮಂಗಳೂರಿಗೆ ಮಾತ್ರ ಸೀಮಿತರಾದ ನಾಯಕರಾಗಿರಬಹುದು. ಆದರೆ ಮಂಗಳೂರಿನಲ್ಲಿ ಅಥವಾ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಪ್ರಭಾವಿ ನಾಯಕರಾಗಿ ಹೊರಹೊಮ್ಮಿಿದ್ದಾರೆ. ಅವರು ಮೂರು ಸಲ ಲೋಕಸಭಾ ಚುನಾವಣೆಯಲ್ಲಿ ಆರಿಸಿ ಬಂದಿರುವುದೇ ಅದಕ್ಕೆೆ ಸಾಕ್ಷಿ. ಕಟೀಲ್ ಅವರು ಪಕ್ಷ ಸಂಘಟನೆಗೆ ಈಗಾಗಲೇ ಹೆಸರು ಮಾಡಿದ್ದಾರೆ. ಪ್ರಖರ ಭಾಷಣಕಾರರೂ ಆಗಿರುವ ಅವರು ಯುವ ಸಮೂಹದಲ್ಲಿ ಅತ್ಯಂತ ಜನಪ್ರಿಿಯರು. ಲೋಕ ಸಭೆಯಲ್ಲೂ ಅವರು ತಮ್ಮ ಮಾತುಗಳಿಂದ ಗಮನ ಸೆಳೆದಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಹೆಸರು ಕೆಡಿಸಿಕೊಂಡವರಲ್ಲ. ಎರಡು ದಶಕಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದರೂ ಕೈ, ಬಾಯಿ ಶುದ್ಧ ಇಟ್ಟುಕೊಂಡವರು. ಸದಾ ನಗುಮೊಗ, ಸ್ನೇಹಪರತೆ ಮತ್ತು ಜನಪರ ಕಾಳಜಿಯಿಂದ ಈಗಾಗಲೇ ಉತ್ತಮ ನಾಯಕರೆಂದು ಕ್ಷೇತ್ರದಲ್ಲಿ ತಮ್ಮನ್ನು ಪ್ರತಿಷ್ಠಾಾಪಿಸಿಕೊಂಡಿದ್ದಾರೆ. ಅವರಿಗೆ ರಾಜ್ಯದ ಜವಾಬ್ದಾಾರಿ ಕೊಟ್ಟಿಿರಲಿಲ್ಲ. ಹೀಗಾಗಿ ಅವರು ಮಂಗಳೂರು ಬಿಟ್ಟು ಹೊರಗೆ ಕೆಲಸ ಮಾಡಿರಲಿಲ್ಲ. ಅದರರ್ಥ ಅವರಿಗೆ ಕ್ಷೇತ್ರ ಬಿಟ್ಟು ಬೇರೆಡೆ ಕೆಲಸ ಮಾಡುವ ಸಾಮರ್ಥ್ಯ ಇರಲಿಲ್ಲ ಎಂದಲ್ಲ.

ಮೂಲತಃ ಮಂಗಳೂರಿನವರೇ ಆದ ಸದಾನಂದ ಗೌಡರು ಬಿಜೆಪಿ ರಾಜ್ಯಾಾಧ್ಯಕ್ಷರಾದಾಗಲೂ ಇಂಥದೇ ಮಾತುಗಳು ಕೇಳಿ ಬಂದಿದ್ದವು. ಗೌಡರು ಪಕ್ಷದ ಅಧ್ಯಕ್ಷರಾದರಷ್ಟೇ ಅಲ್ಲ, ಆ ಬಲದಿಂದ ರಾಜ್ಯದ ಮುಖ್ಯಮಂತ್ರಿಿಯೂ ಆದರೂ. ಕೇಂದ್ರದ ಮಂತ್ರಿಿಯೂ ಆದರು. ಅವರ ಪ್ರತಿಭೆಯನ್ನು ಪ್ರಕಟಪಡಿಸಲು ಅವರಿಗೆ ಸೂಕ್ತ ವೇದಿಕೆ ಸಿಕ್ಕಿಿದ್ದರಿಂದ ಅವರಲ್ಲಿರುವ ನಾಯಕನಿಗೆ ಹೊರಬರಲು ಸಾಧ್ಯವಾಯಿತು. ಈಗ ಅಂಥ ಒಂದು ಬೆಳವಣಿಗೆ ರಾಜ್ಯ ಬಿಜೆಪಿಯಲ್ಲಿ ಆಗಿದೆ. ಕಟೀಲ್ ಅವರು ರಾಜ್ಯ ಅಧ್ಯಕ್ಷರಾಗುವ ಮೂಲಕ ಬಿಜೆಪಿ ಹೊಸ ಮುಖಕ್ಕೆೆ ಮಣೆ ಹಾಕಿದೆ. ಕಟೀಲ್ ಅವರ ಸಾಮರ್ಥ್ಯವನ್ನು ರಾಜ್ಯ ಮಟ್ಟದಲ್ಲಿ ಓರೆಗೆ ಹಚ್ಚದೇ ಅವರ ಬಗ್ಗೆೆ ಉಡಾಫೆಯಿಂದ, ಲಘುವಾಗಿ ಮಾತಾಡುವುದು ಸಲ್ಲ. ಅಂಥ ಮಾತುಗಳಿಗೆ ಯಾವುದೇ ಆಧಾರಗಳಿಲ್ಲ. ಒಬ್ಬನಿಗೆ ಜವಾಬ್ದಾಾರಿ ಕೊಟ್ಟು ಅವನ ಅಸಲಿಯತ್ತೇನು ಎಂಬುದನ್ನು ಪರೀಕ್ಷಿಸಬೇಕು. ಯಾವ ಜವಾಬ್ದಾಾರಿಯನ್ನೇ ಕೊಡದೇ, ಅವನಿಂದ ಈ ಕೆಲಸ ಸಾಧ್ಯವಿಲ್ಲ, ಅವನ ನೇಮಕ ಸರಿ ಅಲ್ಲ ಎಂದು ಷರಾ ಬರೆಯುವುದು ಸರಿಯಲ್ಲ.

ಹೊಸ ಹೊಸ ನಾಯಕರು ಹುಟ್ಟಿಿ ಬರುವುದು ಇಂಥ ಪ್ರಯೋಗಶೀಲತೆ, ಪರರ ಮೇಲೆ ನಂಬಿಕೆ, ವಿಶ್ವಾಾಸವಿಡುವ ಮನೋಭಾವದಿಂದ. ಇಲ್ಲದಿದ್ದರೆ ಅಧಿಕಾರದಲ್ಲಿ ಇರುವವರದೇ ಮುಖ ನೋಡುತ್ತಿಿರಬೇಕಾಗುತ್ತದೆ. ಇದರಿಂದ ಪಕ್ಷ ಕಳಾಹೀನವಾಗುತ್ತದೆ. ಹೊಸ ಪ್ರತಿಭೆಗಳು ಮುಂದೆ ಬರದೇ ಕಮರಿ ಹೋಗುತ್ತವೆ. ಪ್ರತಿಯೊಬ್ಬರಲ್ಲೂ ಒಂದು ವಿಶೇಷ ಗುಣ, ವೈವಿಧ್ಯ ಇರುತ್ತದೆ. ಅದನ್ನು ಪ್ರಕಟಪಡಿಸಲು ಒಂದು ವೇದಿಕೆ, ಅವಕಾಶ ಅತ್ಯಗತ್ಯ. ಈಗ ಅಂಥ ಸಂದರ್ಭ ಕಟೀಲ್ ಅವರಿಗೆ ಒದಗಿ ಬಂದಿದೆ. ಇದು ಸಹಜವಾಗಿ ಕೆಲವರಲ್ಲಿ ಅಸಮಾಧಾನ ಉಂಟು ಮಾಡಿರಬಹುದು. ಯಾರೂ ಸಹ ಬದಲಾವಣೆಯನ್ನು, ಹೊಸ ಪ್ರಯೋಗವನ್ನು ಒಪ್ಪಿಿಕೊಳ್ಳುವುದಿಲ್ಲ. ಯಾರೂ ಸಹ ಯಾರನ್ನೂ ಪರೀಕ್ಷಿಸದೆಯೇ ಸ್ವೀಕರಿಸುವುದಿಲ್ಲ. ಕಟೀಲ್ ಅವರೂ ಇಂಥ ಪರೀಕ್ಷೆಗೆ ಒಳಗಾಗಲೇ ಬೇಕು.

ಆದರೆ ಅವರಿಗೆ ಅಂಥ ಅವಕಾಶವನ್ನೇ ನೀಡಬಾರದು ಅಥವಾ ಅಂಥ ಅವಕಾಶ ನೀಡುವುದಕ್ಕೆೆ ಅವರು ಅರ್ಹರಾಗಿದ್ದಾರಾ ಎಂದು ಪ್ರಶ್ನಿಿಸುವುದು ಸರಿ ಅಲ್ಲ. ಬಿಜೆಪಿ ಹೈ ಕಮಾಂಡ್ ಕಟೀಲ್ ಅವರಲ್ಲಿ ವಿಶ್ವಾಾಸವಿಟ್ಟು ಅವರಿಗೆ ಈ ಜವಾಬ್ದಾಾರಿ ನೀಡಿರುವುದು ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಗಾಳಿ ಬೀಸುತ್ತಿಿದೆ ಎಂಬುದಕ್ಕೆೆ ನಿದರ್ಶನ. ಹೊಸ ನಾಯಕತ್ವ ಮೂಡಿಬರುವುದು ಇಂಥ ಸಂಕ್ರಮಣ ಕಾಲದಲ್ಲಿಯೇ. ಅಷ್ಟಕ್ಕೂ ಪಕ್ಷದ ಅಧ್ಯಕ್ಷನಾದವನಿಗೆ ರಾಜ್ಯದ ನಕಾಶೆ ಗೊತ್ತಿಿರಬೇಕಿಲ್ಲ. ಅದನ್ನು ತಿಳಿದುಕೊಂಡು ಆತ ಟ್ರಾ್ಸ್‌ಾ ಪೋರ್ಟ್ ಕಂಪನಿ ಶುರು ಮಾಡಬೇಕಿಲ್ಲ.

ರಾಜ್ಯದ ಅಧ್ಯಕ್ಷರಾದವರು ಮೊದಲು ತಳಮಟ್ಟದಿಂದ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಬೇಕು. ಎಲ್ಲಾ ನಾಯಕರನ್ನು ತನ್ನ ಜತೆ ಕರೆದುಕೊಂಡು ಹೋಗಬೇಕು. ಯೋಗ್ಯರನ್ನು ಗುರುತಿಸಿ ಅವರಿಗೆ ಸಮರ್ಪಕ ಹೊಣೆಗಾರಿಕೆ ಕೊಡಬೇಕು. ಪಕ್ಷದಲ್ಲಿ ಗೆದ್ದಲು ಹಿಡಿದು ಆಯಕಟ್ಟಿಿನ ಜಾಗದಲ್ಲಿರುವವರನ್ನು ಓಡಿಸಬೇಕು. ಎಲ್ಲ ಪಂಗಡ, ಜಾತಿ, ಸಮುದಾಯಗಳ ನಾಯಕರನ್ನು ಹುರಿದುಂಬಿಸಿ ಅವರೆಲ್ಲರನ್ನು ಕೆಲಸಕ್ಕೆೆ ಹಚ್ಚಬೇಕು. ಅದಕ್ಕಿಿಂತ ಹೆಚ್ಚಾಾಗಿ ನಾಯಕತ್ವದಲ್ಲಿ ವಿಶ್ವಾಾಸ, ಹುರುಪು, ಲವಲವಿಕೆ ಮೂಡಿಸಬೇಕು. ತಮ್ಮ ಹಿತಾಸಕ್ತಿಿ ಕಾಪಾಡುವ ನಾಯಕನಿವನು ಎಂಬ ಭರವಸೆ ಮೂಡಿಸಬೇಕು.
ಕಟೀಲ್ ಈ ಕೆಲಸ ಮಾಡಲಿ. ಖಂಡಿತವಾಗಿಯೂ ಅವರಲ್ಲಿ ಈ ಸಾಮರ್ಥ್ಯ ಇದೆ.

Leave a Reply

Your email address will not be published. Required fields are marked *