Sunday, 23rd February 2020

ಕದ್ದಾಲಿಕೆ ಸಿಬಿಐಗೆ ; ಪರ-ವಿರೋಧ ಚರ್ಚೆ

*ಎಚ್‌ಡಿಕೆ, ಅಲೋಕ್ ಕುಮಾರ್, ಪರಂ, ಡಿಕೆಶಿಗೆ ಸಂಕಷ್ಟ
*ರಾಜಕಾರಣಿಗಳೊಂದಿಗೆ ಪೊಲೀಸ್ ಅಧಿಕಾರಿಗಳಿಗೆ ಕಂಟಕ
*ಆಪರೇಷನ್ ಕಮಲದ ಸಂಭಾಷಣೆಯೂ ಬಯಲಾಗುವ ಸಾಧ್ಯತೆ

ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಫೋನ್ ಟ್ಯಾಾಪಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಮೂಲಕ ಕದ್ದಾಾಲಿಕೆಯ ರೂವಾರಿ ಎನ್ನುವ ಆರೋಪ ಹೊತ್ತಿಿರುವ ಮಾಜಿ ಮುಖ್ಯಮಂತ್ರಿಿ ಎಚ್.ಡಿ ಕುಮಾರಸ್ವಾಾಮಿ ಅವರಿಗೆ ಸಂಕಷ್ಟ ಎದುರಾಗಿದೆ.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಾಧ್ಯಕ್ಷ ಅಮಿತ್ ಶಾ ಭೇಟಿ ಬೆನ್ನಲ್ಲೇ, ಮುಖ್ಯಮಂತ್ರಿಿ ಯಡಿಯೂರಪ್ಪ ಅವರು ಈ ಮಹತ್ವದ ನಿರ್ಣಯ ಕೈಗೊಂಡಿದ್ದಾಾರೆ. ಸೋಮವಾರ ಈ ಬಗ್ಗೆೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ. ಸಿಬಿಐಗೆ ಪ್ರಕರಣ ಹಸ್ತಾಾಂತರಗೊಂಡರೆ, ಕುಮಾರಸ್ವಾಾಮಿ ಮಾತ್ರವಲ್ಲದೇ ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಸೇರಿದಂತೆ ಹಲವರಿಗೆ ಸಮಸ್ಯೆೆಯಾಗಲಿದೆ.

ಭಾಸ್ಕರ್ ರಾವ್ ಅವರ ಆಡಿಯೊ ಪ್ರಕರಣ ಬೆಳಕಿಗೆ ಬಂದ ಸಮಯದಲ್ಲಿ, ಅಧಿಕಾರಿಗಳ ನಡುವೆ ಶುರುವಾಗಿದ್ದ ಸಮರ ಬಳಿಕ ರಾಜಕೀಯ ತಿರುವು ಪಡೆದುಕೊಂಡಿತ್ತು. ಆದರೀಗ ರಾಜ್ಯ ಸರಕಾರ ಪ್ರಕರಣವನ್ನು ಸಿಬಿಐಗೆ ವಹಿಸಲು ನಿರ್ಧರಿಸಿರುವುದು, ರಾಜಕಾರಣಿಗಳೊಂದಿಗೆ, ಹಲವು ಐಪಿಎಸ್ ಅಧಿಕಾರಿಗಳಿಗೂ ಸಮಸ್ಯೆೆಯಾಗುವ ಸಾಧ್ಯತೆ ಸ್ಪಷ್ಟವಾಗಿದೆ.
ಇದೇ ವಿಚಾರಕ್ಕೆೆ ಸಂಬಂಧಿಸಿದಂತೆ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಭಾನುವಾರ ಮುಖ್ಯಮಂತ್ರಿಿ ಯಡಿಯೂರಪ್ಪ ನಿವಾಸಕ್ಕೆೆ ಭೇಟಿ ನೀಡಿ ಚರ್ಚಿಸಿದ್ದಾರೆ. ಈ ವೇಳೆ ಸಿಬಿಐ ತನಿಖೆಗೆ ಅಗತ್ಯ ಸಹಕಾರ ನೀಡುವಂತೆ ಸೂಚನೆ ನೀಡಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೇಳಲು ನೀಲಮಣಿ ರಾಜು ಅವರಿಗೆ ಸೂಚನೆ ನೀಡಿದ್ದಾಾರೆ ಎಂದು ತಿಳಿದುಬಂದಿದೆ.

ಅಲೋಕ್‌ಗೆ ಸಮಸ್ಯೆೆ
ಇನ್ನು ಇಡೀ ದೂರವಾಣಿ ಕದ್ದಾಾಲಿಕೆ ಪ್ರಕರಣವನ್ನು ಕುಮಾರಸ್ವಾಾಮಿ ಅವರ ಸೂಚನೆ ಮೇರೆಗೆ ಬೆಂಗಳೂರಿನ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಪ್ರಕರಣವನ್ನು ನಿಭಾಯಿಸಿದ್ದರು. ಆದರೆ, ಈ ರೀತಿ ಟ್ಯಾಾಪ್ ಮಾಡುವಂತೆ ಕುಮಾರಸ್ವಾಾಮಿ ಅವರಾಗಲಿ ಅಥವಾ ಇನ್ಯಾಾವುದೇ ಸಚಿವರಾಗಲಿ, ಅಧಿಕೃತ ಸೂಚನೆ ನೀಡಿಲ್ಲ. ಆದ್ದರಿಂದ ಇದೀಗ ಇಡೀ ಪ್ರಕರಣ ಅಲೋಕ್ ಕುಮಾರ್‌ಗೆ ಸುತ್ತಿಿಕೊಳ್ಳುವುದರಲ್ಲಿ ಸಂದೇಹವಿಲ್ಲ.
ಅಲೋಕ್ ಕುಮಾರ್ ಅವರೊಂದಿಗೆ ಇನ್ನೊೊಬ್ಬ ಮಹಿಳಾ ಐಪಿಎಸ್ ಅಧಿಕಾರಿ ಹಾಗೂ ಕೆಲ ಪೊಲೀಸ್ ಅಧಿಕಾರಿಗಳು ದೂರವಾಣಿ ಕದ್ದಾಾಲಿಕೆಯಲ್ಲಿ ಭಾಗಿಯಾಗಿದ್ದಾಾರೆ ಎನ್ನಲಾಗಿದೆ. ಆದ್ದರಿಂದ ಕುಮಾರಸ್ವಾಾಮಿ ಅವರೊಂದಿಗೆ ಈ ಅಧಿಕಾರಿಗಳಿಗೂ ಸಮಸ್ಯೆೆಯಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಎಚ್‌ಡಿಕೆ ಹಣಿಯುವ ಯತ್ನ
ದೋಸ್ತಿಿ ಸರಕಾರ ಬಿದ್ದ ದಿನದಿಂದಲೂ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿಿರುವ ಮಾಜಿ ಮುಖ್ಯಮಂತ್ರಿಿ ಕುಮಾರಸ್ವಾಾಮಿ ಅವರನ್ನು ಹಣಿಯಲು ಫೋನ್ ಟ್ಯಾಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ. ಸಂದೀಪ್ ಪಾಟೀಲ್ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಕೇವಲ ಎಚ್‌ಡಿಕೆ ಮಾತ್ರವಲ್ಲದೇ, ಹಲವು ಕಾಂಗ್ರೆೆಸ್ ನಾಯಕರ ಹೆಸರು ಪ್ರಸ್ತಾಾಪವಾಗಿರುವುದರಿಂದ ಈ ನಿರ್ಧಾರಕ್ಕೆೆ ಬರಲಾಗಿದೆ ಎಂದು ತಿಳಿದುಬಂದಿದೆ.
ಪ್ರಮುಖವಾಗಿ ಕಾಂಗ್ರೆೆಸ್‌ನ ಡಾ. ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ, ಕೆ.ಜೆ. ಜಾರ್ಜ್ ಅವರ ಹೆಸರುಗಳು ಈ ಪ್ರಕರಣದಲ್ಲಿ ಕೇಳಿಬಂದಿದ್ದು, ಈ ನಾಯಕರು ಸಚಿವರಾಗಿದ್ದಾಾಗ ನಡೆಸಿರುವ ದೂರವಾಣಿ ಕರೆಗಳು ಸಂಕಷ್ಟ ತರಲಿವೆ ಎನ್ನುವ ಮಾತುಗಳು ಕೇಳಿಬಂದಿದೆ. ಇದರೊಂದಿಗೆ ಇಡೀ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಹಾಗೂ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ ಅವರ ದೂರವಾಣಿಗಳು ಕದ್ದಾಾಲಿಕೆಯಾಗಿವೆ ಎನ್ನುವ ಮಾತು ಕೇಳಿಬಂದಿತ್ತು. ಆದ್ದರಿಂದ ಇಬ್ಬರು ನಾಯಕರು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.

ಕೆಲ ಬಿಜೆಪಿ ನಾಯಕರಿಗೂ ಸಮಸ್ಯೆೆ?
ಇನ್ನು ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಿದರೆ, ಕೇವಲ ಜೆಡಿಎಸ್ ಹಾಗೂ ಕಾಂಗ್ರೆೆಸ್ ನಾಯಕರ ಮಾತುಗಳು ಮಾತ್ರವಲ್ಲದೇ ಬಿಜೆಪಿಯ ಕೆಲ ನಾಯಕರು ಮಾಡಿರುವ ಫೋನ್‌ಗಳ ಕರೆಗಳ ವಿವರವೂ ಹೊರಬರುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರಮುಖವಾಗಿ ಆಪರೇಷನ್ ಕಮಲದ ಉಸ್ತುವಾರಿ ವಹಿಸಿಕೊಂಡಿದ್ದ ಕೆಲ ನಾಯಕರು ಅತೃಪ್ತ ಶಾಸಕರೊಂದಿಗೆ ನೀಡಿರುವ ‘ಭರವಸೆ’ಗಳ ಕರೆಗಳು ಬಯಲಿಗೆ ಬರಲಿವೆ. ಆದ್ದರಿಂದ ಸಿಬಿಐಗೆ ವಹಿಸುವ ಮೊದಲು ಈ ಕರೆಗಳ ಬಗ್ಗೆೆ ಯಾವ ರೀತಿ ಮುತುವರ್ಜಿ ವಹಿಸಬೇಕೆಂಬ ಬಗ್ಗೆೆ ಬಿಜೆಪಿ ನಾಯಕರು ಚರ್ಚಿಸುತ್ತಿಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

ಶಾ ಸೂಚನೆ ಮೇರೆಗೆ ಸಿಬಿಐಗೆ ಪ್ರಕರಣ
ದೋಸ್ತಿಿ ಸರಕಾರ ಬೀಳುವುದು ಖಚಿತವಾಗುತ್ತಿಿದ್ದಂತೆ, ಮುಖ್ಯಮಂತ್ರಿಿ ಕುಮಾರಸ್ವಾಾಮಿ ಅವರು ಹಲವು ಮಹತ್ವದ ದಾಖಲೆಗಳನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ. ಇದರಲ್ಲಿ ಕೆಲವು ವರದಿಗಳು ಹಾಗೂ ಎಸ್‌ಐಟಿಗಳ ತನಿಖಾ ಮಾಹಿತಿಯಿದೆ. ಈ ವರದಿಗಳಲ್ಲಿ ಬಿಜೆಪಿಯ ಕೆಲ ಪ್ರಮುಖ ಶಾಸಕರಿಗೆ ಸಮಸ್ಯೆೆಯಾಗಲಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದ್ದರಿಂದ ಕುಮಾರಸ್ವಾಾಮಿ ಅವರನ್ನು ನಿಯಂತ್ರಿಿಸಲು ಸಿಬಿಐ ಅಸ್ತ್ರ ಪ್ರಯೋಗಿಸಲು ಮುಖ್ಯಮಂತ್ರಿಿ ಯಡಿಯೂರಪ್ಪ ಅವರಿಗೆ ಅಮಿತ್ ಶಾ ಸೇರಿದಂತೆ ಕೇಂದ್ರ ನಾಯಕರು ಸೂಚನೆ ನೀಡಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಸೇರಿದಂತೆ ಹಲವರು ಫೋನ್ ಟ್ಯಾಾಪಿಂಗ್ ಬಗ್ಗೆೆ ಸಮಗ್ರ ತನಿಖೆಗೆ ಒತ್ತಾಾಯಿಸಿದ್ದರು. ಆದ್ದರಿಂದ ಸಿಬಿಐ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಸೋಮವಾರ ಈ ಸಂಬಂಧ ಆದೇಶ ಹೊರಡಿಸಲಾಗುವುದು. ತಪ್ಪಿಿತಸ್ಥರ ವಿರುದ್ದ ಕ್ರಮವಾಗಬೇಕು. ಹೀಗಾಗಿ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.
ಯಡಿಯೂರಪ್ಪ, ಮುಖ್ಯಮಂತ್ರಿ

ಪೋನ್ ಕದ್ದಾಲಿಕೆಯನ್ನು ಸಿಬಿಐಗೆ ಒಪ್ಪಿಿಸುವ ನಿರ್ಧಾರ ಸ್ವಾಾಗತಾರ್ಹ. ಆದರೆ ಸಿಬಿಐಯನ್ನು ಕೈಗೊಂಬೆ ಮಾಡಿಕೊಂಡು ರಾಜಕೀಯ ಸೇಡಿಗಾಗಿ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿಿದೆ. ಇನ್ನು ಈ ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆೆಸ್ ಒತ್ತಾಾಯದ ನಡುವೆಯೂ, ಹಗರಣವನ್ನು ಸ್ವಯಂಪ್ರೇರಿತರಾಗಿ ಸಿಬಿಐ ತನಿಖೆಗೆ ಒಪ್ಪಿಿಸಿರಲಿಲ್ಲ. ಈಗ ಇದ್ದಕ್ಕಿಿದ್ದಂತೆ ನೀಡಿರುವುದು ಅಚ್ಚರಿ.
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಫೋನ್ ಕದ್ದಾಲಿಕೆ ವಿಚಾರದಲ್ಲಿ ಸಿಬಿಐ ಅಲ್ಲ, ಟ್ರಂಪ್ ಸಹಾಯ ಪಡೆದು ಅಂತಾರಾಷ್ಟ್ರೀಯ ತನಿಖೆಯಾಗಲಿ. ಜೆಡಿಎಸ್ ತನಿಖೆಗೆ ಸಹಕಾರ ನೀಡಲಿದೆ. ಫೋನ್ ಕದ್ದಾಲಿಕೆ ವಿಚಾರದಲ್ಲಿ ಎಲೆಕ್ಟ್ರಾಾನಿಕ್ ಮೀಡಿಯಾಗಳು ನನ್ನ ಹೆಸರು ತಂದಿವೆ. ನನ್ನ ಮತ್ತು ಜನತೆಯ ನಡುವೆ ಅವಿಶ್ವಾಾಸ ಮೂಡಿಸಲು ಯತ್ನಿಿಸುತ್ತಿಿದೆ. ಮಾಧ್ಯಮಗಳು ಫೋನ್ ಕದ್ದಾಲಿಕೆ ಸ್ಟೋೋರಿ ಮಾಡಿ ಬಿಲ್ಡಪ್ ತಗಳೋ ಪ್ರಯತ್ನದಲ್ಲಿವೆ.

ಎಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಕದ್ದಾಲಿಕೆ ಸಿಬಿಐಗೆ ; ಪರ-ವಿರೋಧ ಚರ್ಚೆ

*ಯಾವುದೇ ರೀತಿಯ ತನಿಖೆಗೂ ಸಿದ್ಧವೆಂದ ಎಚ್‌ಡಿಕೆ
*ಕಾಂಗ್ರೆೆಸ್‌ನಿಂದ ಟೀಕೆ. ಜೆಡಿಎಸ್‌ನಿಂದ ಸ್ವಾಗತ

ರಾಜ್ಯದಲ್ಲಿ ಸದ್ದು ಮಾಡಿದ್ದ ಫೋನ್ ಟ್ಯಾಾಪಿಂಗ್ ಪ್ರಕರಣ ಸಿಬಿಐಗೆ ವಹಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸುತ್ತಿದ್ದಂತೆ, ಪರ ವಿರೋಧ ಚರ್ಚೆಗಳು ಶುರುವಾಗಿವೆ.
ಬಿಜೆಪಿ ನಾಯಕರನ್ನು ಈ ನಿರ್ಧಾರವನ್ನು ಸ್ವಾಾಗತಿಸಿದರೆ, ಕಾಂಗ್ರೆೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈ ನಿರ್ಧಾರವನ್ನು ಸ್ವಾಾಗತಿಸುವುದರೊಂದಿಗೆ, ಸಿಬಿಐ ಕೇಂದ್ರ ಸರಕಾರ ಕೈಗೊಂಬೆ. ಇದರಿಂದ ಪಾರದರ್ಶಕ ತನಿಖೆ ಸಾಧ್ಯವೇ ಎನ್ನುವ ಅನುಮಾನ ವ್ಯಕ್ತಪಡಿಸಿದ್ದರೆ. ಆದರೆ ಮಾತ್ರ ರಾಜ್ಯ ಸರಕಾರದ ನಿರ್ಧಾರವನ್ನು ಮಿಶ್ರ ಪ್ರತಿಕ್ರಿಿಯೆ ನೀಡಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಾಮಿ ನೇತೃತ್ವದ ಮೈತ್ರಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನುವ ಮಾತು ಕೇಳಿಬರುತ್ತಿಿದ್ದಂತೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು.

ಈ ಬಗ್ಗೆೆ ಕಾಂಗ್ರೆೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆೆಸ್ ನಾಯಕರು ಮಾತನಾಡಿ, ರಾಜಕೀಯ ಎದುರಾಳಿಗಳನ್ನು ಹಣಿಯಲು ದೂರವಾಣಿ ಕದ್ದಾಲಿಕೆ ಮಾಡುವುದು ಕಾನೂನುಬಾಹಿರ. ಇದರಲ್ಲಿ ಭಾಗಿಯಾದವರನ್ನು ಬಯಲಿಗೆಳೆದು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದರು.
ಇದೀಗ ಯಡಿಯೂರಪ್ಪ ಅವರು ಈ ನಿರ್ಧಾರ ಪ್ರಕಟಿಸುತ್ತಿಿದ್ದಂತೆ, ಬಿಜೆಪಿ ನಾಯಕರು ಸೇರಿದಂತೆ ಅನರ್ಹ ಶಾಸಕ ವಿಶ್ವನಾಥ್ ಸ್ವಾಗತಿಸಿದ್ದರೆ, ಕಾಂಗ್ರೆೆಸ್ ಪಕ್ಷದೊಳಗೆ ಭಿನ್ನ ಅಭಿಪ್ರಾಾಯಗಳು ವ್ಯಕ್ತವಾಗಿವೆ. ಮುಖ್ಯಮಂತ್ರಿಿಗಳ ಈ ನಿರ್ಧಾರವನ್ನು ಕೆಪಿಸಿಸಿ ಟೀಕಿಸಿದರೆ, ಸಿದ್ದರಾಮಯ್ಯ ಸ್ವಾಾಗತಿಸಿದ್ದಾರೆ. ಈ ಬೆಳವಣಿಗೆಗೆ ಜೆಡಿಎಸ್ ಪಾಳಯದಲ್ಲಿ ಅತೃಪ್ತಿಿ ಮೂಡಿಸಿದ್ದು, ಮಿಶ್ರ ಪ್ರತಿಕ್ರಿಿಯೆ ವ್ಯಕ್ತವಾಗಿದೆ.

ಸ್ವಾಗತಾರ್ಹ: ಬಿಜೆಪಿ
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವ ಮುಖ್ಯಮಂತ್ರಿಿ ಯಡಿಯೂರಪ್ಪ ನಿರ್ಧಾರ ಸ್ವಾಾಗತಾರ್ಹ. ಪೋನ್ ಕದ್ದಾಲಿಕೆ ಅಕ್ಷಮ್ಯ ಅಪರಾಧ. ಇದರಲ್ಲಿ ಯಾರೇ ತಪ್ಪುು ಮಾಡಿದ್ದರೂ ಶಿಕ್ಷೆಯಾಗಬೇಕು. ಇದರಲ್ಲಿ ಸೇಡಿನ ರಾಜಕಾರಣದ ಪ್ರಶ್ನೆೆಯಿಲ್ಲ. ಕಾಂಗ್ರೆೆಸ್ ನಾಯಕರು ಸಹ ಸೂಕ್ತ ತನಿಖೆಗೆ ಒತ್ತಾಯಿಸಿದ್ದರು. ಇದೊಂದು ಗಂಭೀರ ಪ್ರಕರಣವಾಗಿರುವ ಕಾರಣ ಸಿಬಿಐ ತನಿಖೆಯಿಂದ ಮಾತ್ರ ಸತ್ಯಾಾಂಶ ಹೊರಬರಲಿದೆ ಎಂದಿದ್ದಾರೆ.

ಬಿಜೆಪಿ ಶಾಸಕ ಸಿ.ಟಿ.ರವಿ, ದೂರವಾಣಿ ಟ್ಯಾಾಪಿಂಗ್ ಮಹಾಪರಾಧ. ಉಪ್ಪುು ತಿಂದವರು ನೀರು ಕುಡಿಯಲೇಬೇಕು. ಅಧಿಕಾರಿಗಳು ಆಡಳಿತದಲ್ಲಿರುವವರ ಬಕೆಟ್ ಹಿಡಿಯುವ ಕೆಲಸ ಮಾಡುವ ಪ್ರವೃತ್ತಿಿಗೆ ಕಡಿವಾಣ ಬೀಳಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲು ಮಾತನಾಡಿ, ಸಿಬಿಐ ತನಿಖೆ ಬಗ್ಗೆೆ ಕುಮಾರಸ್ವಾಾಮಿ ಅವರು ಅಪಸ್ವರ ಎತ್ತುತ್ತಿಿರುವುದು ಸರಿಯಲ್ಲ. ದೂರವಾಣಿ ಕದ್ದಾಲಿಕೆ ಮತ್ತು ದುರುಪಯೋಗ ವಿಚಾರದಲ್ಲಿ ಅನೇಕ ಸರಕಾರಗಳು ಬಿದ್ದುಹೋಗಿವೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಕುಮಾರಸ್ವಾಾಮಿ ದೂರವಾಣಿ ಕದ್ದಾಲಿಕೆ ಮಾಡಿದ್ದಾರೆ ಎಂಬ ಆರೋಪವಿದೆ. ರಾಜ್ಯವಷ್ಟೇ ಅಲ್ಲದೇ ರಾಷ್ಟ್ರ ಮಟ್ಟದ ನಾಯಕರ ದೂರವಾಣಿಯನ್ನೂ ಸಹ ಕದ್ದಾಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿಬಿಐ ಬದಲಿಗೆ, ರಾಜ್ಯದ ಸಂಸ್ಥೆೆಗೆ ನೀಡಬೇಕಿತ್ತು
ಇನ್ನು ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿಿ ಮಾತನಾಡಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದು ಸ್ವಾಾಗತಾರ್ಹ. ಆದರೆ, ಸಿಬಿಐ ಬದಲಿಗೆ ರಾಜ್ಯದ ಯಾವುದಾದರೂ ತನಿಖಾ ಸಂಸ್ಥೆೆಗೆ ವಹಿಸಬಹುದಿತ್ತು. ಸಿಬಿಐ ಕೇಂದ್ರ ಸರಕಾರದ ಮುಖ ನೋಡಿ ತನಿಖೆ ಮಾಡಬಾರದು. ಇದು ತೋಳ ಬಂತು ತೋಳ ಎಂಬಂತಹ ಕಥೆಯಾಗಬಾರದು ಎಂದು ಅಭಿಪ್ರಾಾಯ ವ್ಯಕ್ತಪಡಿಸಿದ್ದಾರೆ.

ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ರಾಜ್ಯ ಸರಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿ ಆರಂಭದಲ್ಲಿ ಟ್ವೀಟ್ ಮಾಡಿದ್ದ ಕೆಪಿಸಿಸಿ, ತಾನು ಕಳ್ಳ, ಪರರನ್ನು ನಂಬ ಎಂಬಂತಿದೆ ಮುಖ್ಯಮಂತ್ರಿಿಗಳ ವರ್ತನೆ. ಆಪರೇಷನ್ ಕಮಲ ಮೂಲಕ ಸರಕಾರ ಬೀಳಿಸಿ, ಹಿಂಬಾಗಿಲ ಮೂಲಕ ಗದ್ದುಗೆ ಏರಿರುವ ತಾವು ಭೂಗತ ಪಾತಕಿಗಳ ರೀತಿ ವರ್ತಿಸುತ್ತಿಿದ್ದಾರೆ. ಮೋದಿ ಆಳ್ವಿಿಕೆಯಲ್ಲಿ ಸಿಬಿಐ ಬಿಜೆಪಿಯ ಮುಂಚೂಣಿ ಘಟಕವಾಗಿ ಕೆಲಸ ಮಾಡುತ್ತಿಿದೆ. ಫೋನ್ ಕದ್ದಾಲಿಕೆ ಎಂಬುದು ಒಂದು ಸುಳ್ಳು, ದ್ವೇಷ ರಾಜಕಾರಣದ ಸಂಚು’ ಎಂದು ಆರೋಪಿಸಿತ್ತು. ಬಳಿಕ ಈ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.

ಇದಕ್ಕೆೆ ಟ್ವೀಟ್ ಮೂಲಕ ಪ್ರತಿಕ್ರಿಿಯಿಸಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆೆಸ್, ನಾಲಿಗೆಗೂ ಮೆದುಳಿಗೂ ಸಂಪರ್ಕ ಕಳೆದುಕೊಂಡು ಮತಿಭ್ರಮಣಗೊಂಡಿದೆ. ದೇಶವನ್ನು ಲೂಟಿ ಹೊಡೆದ ಭೂಗತ ಪಾತಕಿಗಳು ಯಾರೆಂದು ಜನ ನೋಡಿದ್ದಾರೆ. ಕದ್ದಾಲಿಕೆ ಬಗ್ಗೆೆ ತನಿಖೆಗೆ ಒತ್ತಾಾಯಿಸಿದ ನಿಮ್ಮ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಏನೆಂದು ಕರೆಯುತ್ತೀರಿ ಎಂದು ಪ್ರಶ್ನಿಸಿದ್ದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಪ್ರಕರಣವನ್ನು ರಾಜ್ಯ ತನಿಖಾ ಸಂಸ್ಥೆೆಗಳೇ ತನಿಖೆ ನಡೆಸಬಹುದಿತ್ತು. ಕದ್ದಾಲಿಕೆಯಿಂದ ಬಹಿರಂಗಗೊಳ್ಳುವ ಗಂಭೀರ ಪ್ರಕರಣಗಳು, ರಾಜ್ಯದ್ರೋಹದ ಕೆಲಸಗಳು, ಅದರಲ್ಲಿ ಭಾಗಿಯಾದವರ ಕುರಿತು ಕೂಡ ತನಿಖೆ ನಡೆಯಬೇಕು ಎಂದಿದ್ದಾರೆ.
ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಿ, ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರಕಾರ ಕೂಡ ದೂರವಾಣಿ ಕದ್ದಾಲಿಕೆ ಮಾಡಿದೆ. ಅದನ್ನು ಸಿಬಿಐ ತನಿಖೆಗೆ ಒಪ್ಪಿಿಸಲಿ. ರಾಜ್ಯ ಸರಕಾರದ ನಿರ್ಧಾರವನ್ನು ಸ್ವಾಾಗತಿಸುತ್ತೇವೆ. ಆದರೆ, ಅದೇ ರೀತಿ ಎಲ್ಲಾ ಕದ್ದಾಲಿಕೆಯ ತನಿಖೆಯಾಗಲಿ ಎಂದಿದ್ದಾರೆ.

ಬಿಎಸ್‌ವೈ ನಡೆ ಸ್ವಾಗತಾರ್ಹ : ವಿಶ್ವನಾಥ
ಈ ಬಗ್ಗೆೆ ಅನರ್ಹ ಶಾಸಕ ಎಚ್. ವಿಶ್ವನಾಥ್ ಮಾತನಾಡಿದ್ದು, ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಸಿಬಿಐ ತನಿಖೆಗೆ ವಹಿಸಿರುವುದು ಸ್ವಾಾಗತಾರ್ಹ. ಕೇಂದ್ರದಲ್ಲಿ ಯಾವ ಸರಕಾರ ಇದೆ ಎಂಬುದು ಮುಖ್ಯವಲ್ಲ. ತನಿಖೆಯಿಂದ ಸತ್ಯಾಾಂಶ ಹೊರಬರಬೇಕು ಹಾಗೂ ತಪ್ಪಿಿತಸ್ಥರ ವಿರುದ್ದ ಸೂಕ್ತ ಕ್ರಮವಾಗಲೇಬೇಕು ಎಂದು ಆಗ್ರಹಿಸಿದರು.
ಮಾಜಿ ಸಿಎಂ ಕುಮಾರಸ್ವಾಾಮಿ ಟೆಲಿಫೋನ್ ಕದ್ದಾಲಿಕೆಯಂತ ನೀಚ ಕೆಲಸ ಮಾಡಿದ್ದಾರೆ. ಫೋನ್ ಟ್ಯಾಾಪಿಂಗ್ ಮಾಡಿ ಬ್ಲ್ಯಾಾಕ್‌ಮೇಲ್ ಮಾಡುವ ಕೆಲಸ ಮಾಡಿದ್ದರು. ಭಯೋತ್ಪಾಾದಕರಿಗೂ ಇಂತಹವರಿಗೂ ಏನು ವ್ಯತ್ಯಾಾಸವಿದೆ. ಇವರೂ ಒಂದು ರೀತಿಯ ಭಯೋತ್ಪಾಾದಕರಿದ್ದಂತೆ. ಜೆಡಿಎಸ್ ರಾಜ್ಯಾಾಧ್ಯಕ್ಷನಾಗಿದ್ದ ವೇಳೆ ನಮ್ಮ ಪಕ್ಷದ ಸಿಎಂ ನನ್ನ ಪೋನ್ ಕದ್ದಾಲಿಸುವ ನೀಚ ಕೆಲಸ ಮಾಡಿದ್ದಾರೆ. ಈ ಬಗ್ಗೆೆ ತನಿಖೆಗೆ ಆದೇಶಿಸಿರುವುದು ಒಳ್ಳೆೆಯ ಬೆಳವಣಿಗೆ ಎಂದಿದ್ದಾಾರೆ.

ಸಮಗ್ರ ತನಿಖೆ ಅಗತ್ಯ
ಮಂಡ್ಯ: ರಾಜ್ಯದಲ್ಲಿ ನಡೆದಿರುವ ಫೋನ್ ಕದ್ದಾಲಿಕೆ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಇದರ ಬಗ್ಗೆೆ ನಾನು ಮೊದಲಿನಿಂದಲೂ ಹೇಳುತ್ತಾಾ ಬಂದಿದ್ದೆೆ ಎಂದು ಸಂಸದೆ ಸುಮಲತಅಂಬರೀಷ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮಯದಿಂದಲೂ ಸುಮಾರು 300 ಮಂದಿಯ ಫೋನ್ ಕದ್ದಾಾಲಿಕೆಯಾಗಿತ್ತು. ನಾನು ಇದರ ಬಗ್ಗೆೆ ದೂರು ಸಹ ನೀಡಿದ್ದೆೆ. ಆದರೆ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದರು. ಈಗ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ಆದೇಶಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ತನಿಖೆಯಿಂದ ಸಂಪೂರ್ಣವಾಗಿ ಸತ್ಯ ಹೊರಬರಲಿದೆ ಎಂದು ತಿಳಿಸಿದರು.

ಕಳ್ಳರು, ಸುಳ್ಳರಿಂದ ಫೋನ್ ಕದ್ದಾಲಿಕೆ

ಬಳ್ಳಾರಿ: ರಾಜ್ಯದಲ್ಲಿ ನಡೆದ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪನವರು ಸಿಬಿಐ. ತನಿಖೆಗೆ ಒಪ್ಪಿಿಸಿರುವುದು ಸ್ವಾಾಗತಾರ್ಹ. ಹಿಂದಿನ ಸರಕಾರದಲ್ಲಿದ್ದ ಕಳ್ಳರು, ಸುಳ್ಳರು ಸೇರಿಕೊಂಡು ಫೋನ್ ಕದ್ದಾಲಿಸಿದ್ದಾರೆ ಎಂದು ಶಾಸಕ ಬಿ.ಶ್ರೀರಾಮುಲು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಫೋನ್ ಕದ್ದಾಲಿಸಿದ್ದ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆಯವರ ಸರಕಾರ ಬಿದ್ದಿತ್ತು. ಸರಕಾರ ಉಳಿಸಿಕೊಳ್ಳಲು ಎಚ್.ಡಿ.ಕುಮಾರಸ್ವಾಾಮಿ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಿದ ಬಳಿಕ ಉಲ್ಟಾಾ ಹೊಡೆಯುತ್ತಿಿದ್ದಾರೆ ಎಂದರು.
ರಾಷ್ಟ್ರಮಟ್ಟದ ನಾಯಕರ ಕರೆಗಳನ್ನು ಸಹ ಕದ್ದಾಲಿಸಲಾಗಿದೆ. ಇದರಲ್ಲಿ ಕೆಲ ಅಧಿಕಾರಿಗಳ ಕೈವಾಡವೂ ಇದೆ. ಹೀಗಾಗಿಯೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆಯೇ ಹೊರತು ರಾಜಕೀಯ ಉದ್ದೇಶವಿಲ್ಲ.

ಎಚ್‌ಡಿಕೆಗೆ ಆತಂಕ ಶುರುವಾಗಿದೆ: ವಿಶ್ವನಾಥ್
ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸ್ವಾಾಗತಾರ್ಹ. ಸಿಬಿಐಗೆ ಪ್ರಕರಣವನ್ನು ಹಸ್ತಾಾಂತರಿಸಿರುವುರದಿಂದ ಮಾಜಿ ಸಿಎಂ ಕುಮಾರಸ್ವಾಾಮಿ ಅವರಿಗೆ ಆತಂಕ ಶುರುವಾಗಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆೆಸ್ ಒಡೆದು ಹೋಗಿದೆ. ಅಲ್ಲೇ ಮೂರ್ನಾಲ್ಕು ಗುಂಪುಗಳಾಗಿವೆ. ಅವರೆಲ್ಲರೂ ದ್ವಂದ್ವ ಹೇಳಿಕೆ ಕೊಡುತ್ತಿಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅವರೇ ಒತ್ತಾಾಯಿಸಿದ್ದರು. ಆದರೆ ಈಗ ಒಂದು ಗುಂಪು ಸರಿ ಎಂದು ಹೇಳುತ್ತಿಿದ್ದಾರೆ. ಮತ್ತೊೊಂದು ಗುಂಪು ತಪ್ಪುು ಎಂದು ಹೇಳುತ್ತಿಿದ್ದಾರೆ. ಸಿದ್ದರಾಮಯ್ಯ ಅವರು ಸ್ವಾಾಗತ ಮಾಡಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.

ಸುಮಲತಾ ಅಂಬರೀಶ್, ಸಂಸದೆ

ರಾಜ್ಯದಲ್ಲಿ ನಡೆದಿರುವ ಫೋನ್ ಕದ್ದಾಾಲಿಕೆ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಇದರ ಬಗ್ಗೆೆ ನಾನು ಮೊದಲಿನಿಂದಲೂ ಹೇಳುತ್ತಾಾ ಬಂದಿದ್ದೆೆ. ಚುನಾವಣೆ ಸಮಯದಿಂದಲೂ ಸುಮಾರು 300 ಮಂದಿಯ ಫೋನ್ ಕದ್ದಾಾಲಿಕೆಯಾಗಿತ್ತು. ನಾನು ಇದರ ಬಗ್ಗೆೆ ದೂರು ಸಹ ನೀಡಿದ್ದೆೆ. ಆದರೆ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ಆದೇಶಿಸಿರುವುದು ಉತ್ತಮ ಬೆಳವಣಿಗೆ. ತನಿಖೆಯಿಂದ ಸಂಪೂರ್ಣವಾಗಿ ಸತ್ಯ ಹೊರಬರಲಿದೆ.

ಆರ್. ಅಶೋಕ, ಮಾಜಿ ಉಪಮುಖ್ಯಮಂತ್ರಿ

ರಾಜ್ಯದಲ್ಲಿ ನಡೆದಿದೆ ಎನ್ನಲಾದ ಪೋನ್ ಕದ್ದಾಲಿಕೆ ಪ್ರಕರಣದ ಸಮಗ್ರ ತನಿಖೆಗೆ ಸ್ವತಃ ಸಿದ್ದರಾಮಯ್ಯ ಒತ್ತಾಾಯ ಮಾಡಿದ್ದರು. ಆದ್ದರಿಂದ ಸಿಬಿಐಗೆ ವಹಿಸಲಾಗಿತ್ತು. ಆದರೀಗ ಕಾಂಗ್ರೆೆಸ್ ಉಲ್ಟಾಾ ಹೊಡೆದಿದೆ.

ವಿ. ಸೋಮಣ್ಣ, ಮಾಜಿ ಸಚಿವ 

ರಾಜ್ಯ ಸರಕಾರದ ನಿರ್ಧಾರದ ಹಿಂದೆ ಯಾವುದೇ ಸೇಡಿನ ರಾಜಕಾರಣವಿಲ್ಲ. ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯಾಗಬೇಕು ಎಂದು ಎಲ್ಲ ಪಕ್ಷದ ನಾಯಕರು ಒತ್ತಾಾಯ ಮಾಡಿದ್ದರು. ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದರು. ಈಗ ಸಿಎಂ ಯಡಿಯೂರಪ್ಪ ಸಿಬಿಐ ತನಿಖೆಗೆ ಆದೇಶ ನೀಡಿದ್ದಾರೆ.

Leave a Reply

Your email address will not be published. Required fields are marked *