Wednesday, 26th February 2020

ಕದ್ದಾಲಿಕೆ ತನಿಖೆ ಆಗಲಿ: ಸತ್ಯಬೋಧ, ಬೆಂಗಳೂರು

ಫೋನ್ ಕದ್ದಾಲಿಕೆ ಕಾನೂನು ಬಾಹಿರ ಕೃತ್ಯ. ಈ ಆರೋಪ ಬಂದಾಗ ಅಂದು ಮುಖ್ಯಮಂತ್ರಿಿಯಾಗಿದ್ದ ರಾಮಕೃಷ್ಣ ಹೆಗಡೆಯವರು ರಾಜೀನಾಮೆ ನೀಡಿ ಮಾದರಿ ಆದರು. ಇಂತಹ ಅರೋಪ ಹೊತ್ತ ವ್ಯಕ್ತಿಿ ಕ್ಷಣಕಾಲವೂ ಅಧಿಕಾರದಲ್ಲಿ ಇರಬಾರದು ಎನ್ನುವುದು ಅವರ ನಿಲುವಾಗಿತ್ತು. ಇಂಥದ್ದೇ ಒಂದು ಫೋನ್ ಕದ್ದಾಲಿಕೆ ಈಗ ನಡೆದಿದೆ. ಮೇಲ್ನೋೋಟಕ್ಕೆೆ ಇದು ನಡೆದಿರುವುದು ಸತ್ಯ ಎಂಬ ಅಂಶ ಹೊರಬಿದ್ದಿದೆ. ಪಕ್ಷಭೇದ ಮರೆತು ಇದರ ಬಗ್ಗೆೆ ತನಿಖೆ ನಡೆದು ಸತ್ಯಾಾಂಶ ಹೊರಬರಲಿ ಎನ್ನುವ ನಿಲುವು ತಾಳಿರುವುದು ಸ್ವಾಾಗತಾರ್ಹ. ಜನಸಾಮಾನ್ಯರೂ ಸತ್ಯ ತಿಳಿಯಲು ಕಾತುರರಾಗಿದ್ದಾರೆ. ಇಲ್ಲಿ ಅಪರಾಧಿಗಳಿಗೆ ಶಿಕ್ಷೆೆ ಆಗುವುದು ಪ್ರಜಾಪ್ರಭುತ್ವದ ಪಾವಿತ್ರ್ಯ ದೃಷ್ಟಿಿಯಿಂದ ಅಗತ್ಯ. ಆದರೆ ಇದು ಕೇವಲ ಸಮಯ ಬಂದಾಗ ಮುಂದೊಂದು ದಿನ ತಾವು ಕುತಂತ್ರ ಹೂಡಿ ಸಿಕ್ಕಿಿಬಿದ್ದಾಗ ತಮ್ಮನ್ನು ಅಪವಾದದಿಂದ ರಕ್ಷಿಸಿಕೊಳ್ಳಲು ಉಪಯೋಗಿಸಿಕೊಳ್ಳ ಬಹುದಾದ ಆಪತ್ಭಾಾಂಧವ, ಬ್ರಹ್ಮಾಾಸ್ತ್ರ ವಾಗಿ ರಾಜಕಾರಣಿ ಬಳಸಬಾರದು. ಅನೇಕ ಬಾರಿ ‘ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ’ ಎನ್ನುವ ಆಣಿಮುತ್ತುಗಳು ರಾಜಕೀಯ ಮುಖಂಡರಿಂದ ಉದುರುತ್ತಲೇ ಇರುತ್ತವೆ. ಇದೊಂದು ಬ್ಲ್ಯಾಾಕ್ ಮೇಲ್ ತಂತ್ರ. ಇದನ್ನು ನ್ಯಾಾಯಾಲಯಗಳೂ ಗಮನಿಸಬೇಕು. ವಾಯಿದೆ ಮೀರಿದ ಆರೋಪಗಳಿಗೆ ಆಸ್ಪದ ಇಲ್ಲ ಎಂಬ ಸ್ಪಷ್ಟ ಸಂದೇಶ ನೀಡಬೇಕು. ತನಿಖೆಗೆ ಯಾರಿಂದಲೂ ವಿರೋಧ ಇಲ್ಲದಾಗ ಮುಖ್ಯಮಂತ್ರಿಿಗಳು ಈ ವಿಷಯದಲ್ಲಿ ಮೀನಾಮೇಷ ಎಣಿಸದೆ ತನಿಖೆಗೆ ಆದೇಶ ನೀಡಿ ಸತ್ಯದರ್ಶನ ಮಾಡಿಸಲು ಮುಂದಾಗಲಿ.
ಸತ್ಯಬೋಧ, ಬೆಂಗಳೂರು

Leave a Reply

Your email address will not be published. Required fields are marked *