Tuesday, 15th October 2019

‘ಕೈ’ ನಲ್ಲಿ ಈಗಲೂ ಸಿದ್ದು ಪ್ರಶ್ನಾತೀತ ನಾಯಕ

ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಘೋಷಣೆ ದೆಹಲಿಯಲ್ಲಿ ವೇಣುಯಿಂದ ಅಧಿಕೃತ ಘೋಷಣೆ

ರಾಜ್ಯ ಕಾಂಗ್ರೆೆಸ್‌ನಲ್ಲಿ ನಾಯಕತ್ವದ ಬಗ್ಗೆೆ ಪ್ರಶ್ನೆೆಗಳು ಮೂಡುತ್ತಿಿದ್ದರೂ, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕನಾಗಿ ಆಯ್ಕೆೆಯಾಗುವ ಇನ್ನೊೊಮ್ಮೆೆ ತಾವು ನಾಯಕ’ ಎನ್ನುವುದನ್ನು ಸಾಬೀತುಪಡಿಸಿದ್ದಾಾರೆ.
ರಾಜ್ಯದಲ್ಲಿ ಮೈತ್ರಿಿ ಸರಕಾರ ಪತನಗೊಂಡ ದಿನದಿಂದಲೂ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆೆಯಾಗುತ್ತಾಾರೆ ಎಂದು ಅನೇಕರು ಹೇಳುತ್ತಿಿದ್ದರೂ, ಮೂಲ ಕಾಂಗ್ರೆೆಸಿಗರು ಇದಕ್ಕೆೆ ಅವಕಾಶ ನೀಡುವುದಿಲ್ಲ. ಎಚ್.ಕೆ ಪಾಟೀಲ್, ರಮೇಶ್ ಕುಮಾರ್, ಪರಮೇಶ್ವರ ಅಥವಾ ಬೇರೆಯಾರಿಗಾದರೂ ಅವಕಾಶ ನೀಡುತ್ತಾಾರೆ ಹೊರೆತು ಸಿದ್ದರಾಮಯ್ಯ ಅವರಿಗೆ ನೀಡುವುದಿಲ್ಲ ಎನ್ನುವ ವಾದವನ್ನು ಕೆಲವರು ಮಂಡಿಸುತ್ತಿಿದ್ದರು. ಆದರೆ ಅಂತಿಮವಾಗಿ ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಅವರನ್ನೇ ವಿಪಕ್ಷ ನಾಯಕನಾಗಿ ಪಕ್ಷದ ಹೈಕಮಾಂಡ್ ಮೂಲಕ ‘ಪ್ರಶ್ನಾಾತೀತ ನಾಯಕ’ ಎನ್ನುವ ಸಂದೇಶವನ್ನು ರವಾನಿಸಿದೆ.

ವಿರೋಧ ಪಕ್ಷದ ನಾಯಕರನ್ನಾಾಗಿ ಯಾರನ್ನು ಆಯ್ಕೆೆ ಮಾಡಬೇಕೆಂಬ ವಿಚಾರಕ್ಕೆೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆೆಸ್‌ನಲ್ಲಿ ಮೂಡಿದ್ದ ಹಲವು ಗೊಂದಲಗಳಿಗೆ ತೆರೆ ಎಳೆಯಲು, ಭಾನುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿಿ ಅವರ ನೇತೃತ್ವದ ವೀಕ್ಷಕರ ತಂಡ ರಾಜ್ಯ ಕಾಂಗ್ರೆೆಸ್ ನಾಯಕರ ಅಭಿಪ್ರಾಾಯವನ್ನು ಸಂಗ್ರಹಿಸಿತ್ತು. ಬಳಿಕ ಸುದೀರ್ಘ ವರದಿಯನ್ನು ಎಐಸಿಸಿ ಅಧ್ಯಕ್ಷೆೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದೆ. ಈ ವರದಿಯನ್ನು ಆಧರಿಸಿ ಸೋನಿಯಾ ಅವರು ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕನನ್ನಾಾಗಿ ಆಯ್ಕೆೆ ಮಾಡಿದ್ದಾಾರೆ ಎಂದು ಮೂಲಗಳು ತಿಳಿಸಿವೆ.
ಸರಕಾರವನ್ನು ಎದುರಿಸಲು ಈ ತೀರ್ಮಾನ

ಗುರುವಾರದಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದ್ಧ ವಾಕ್ಸಮರ ನಡೆಸಲು ಕಾಂಗ್ರೆೆಸ್ ತಯಾರಿ ನಡೆಸಿದೆ. ಆದರೆ ವಿರೋಧ ಪಕ್ಷದ ನಾಯಕನಿಲ್ಲದೇ ಅಧಿವೇಶನದಲ್ಲಿ ಭಾಗಿಯಾದರೆ ಸಮಸ್ಯೆೆಯಾಗುತ್ತದೆ ಎನ್ನುವ ಕಾರಣಕ್ಕೆೆ ಬುಧವಾರ ಘೋಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರಂಭದಲ್ಲಿ ಕಲಾಪ ನಡೆಯುವ ವೇಳೆ, ವಿರೋಧ ಪಕ್ಷದ ನಾಯಕರನ್ನು ಘೋಷಿಸುವುದರಿಂದ, ಗೊಂದಲ ಹಾಗೂ ಅಸಮಾಧಾನ ಭುಗಿಲೇಳುವ ಸಾಧ್ಯತೆಯಿದೆ ಎನ್ನುವ ಕಾರಣಕ್ಕೆೆ, ಅಧಿವೇಶನ ಮುಗಿಯುವ ತನಕ ಘೋಷಣೆ ಮಾಡುವುದು ಬೇಡ ಎನ್ನುವ ನಿರ್ಧಾರಕ್ಕೆೆ ವರಿಷ್ಠರು ಬಂದಿದ್ದರು. ಆದರೆ ವಿರೋಧ ಪಕ್ಷದ ನಾಯಕರು ಇಲ್ಲದಿದ್ದರೆ, ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದ ಹಿನ್ನಲೆಯಲ್ಲಿ, ಕೊನೆ ಗಳಿಗೆಯಲ್ಲಿ ಘೋಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭಾ ವಿರೋಧ ಪಕ್ಷದ ನಾಯಕನ ಆಯ್ಕೆೆ ಬೆನ್ನಲ್ಲೇ ಶೀಘ್ರದಲ್ಲಿಯೇ ವಿಧಾನಸಭೆ ವಿಪಕ್ಷದ ಉಪನಾಯಕ, ವಿರೋಧ ಪಕ್ಷದ ಸಚೇತಕ, ವಿಧಾನಪರಿಷತ್ ಉಪನಾಯಕ ಹಾಗೂ ಮುಖ್ಯಸಚೇತಕನ ಆಯ್ಕೆೆ ಪ್ರಕ್ರಿಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸಿಎಲ್‌ಪಿಯಲ್ಲಿಯೂ ಇದೇ ಚರ್ಚೆ
ವಿರೋಧ ಪಕ್ಷ ನಾಯಕನ ಆಯ್ಕೆೆಗೆ ಸಂಬಂಧಿಸಿದಂತೆ ಕಾಂಗ್ರೆೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಚರ್ಚೆ ನಡೆಸಲಾಗಿದ್ದು, ಪಕ್ಷದ ವರಿಷ್ಠರು ಯಾರನ್ನು ವಿರೋಧ ಪಕ್ಷ ನಾಯಕರನ್ನಾಾಗಿ ನೇಮಿಸುತ್ತಾಾರೆ ಅವರಿಗೆ, ಇನ್ನುಳಿದ ನಾಯಕರು ಸಹಕರಿಸಬೇಕು. ಪಕ್ಷ ಸಂಘಟನೆಗೆ ಅನುಕೂಲವಾಗುವ ರೀತಿಯಲ್ಲಿ ಹೈಕಮಾಂಡ್ ಈ ನಿರ್ಧಾರ ತಗೆದುಕೊಳ್ಳಲಿದೆ ಎಂದು ನಾಯಕರು ತಿಳಿಸಿದ್ದಾಾರೆ ಎಂದು ತಿಳಿದುಬಂದಿದೆ.

ಸಿದ್ದು ಕಾರಣವೇನು?
* ಮುಂದಿನ ದಿನದಲ್ಲಿ ಪಕ್ಷ ಸಂಘಟನೆಗೆ ಅನುಕೂಲ
* ಉಪಚುನಾವಣೆಯಲ್ಲಿ ಬಿಜೆಪಿ ಎದುರಿಸುವುದು ಸುಲಭ
* ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ಮಾಸ್ ಲೀಡರ್ ವರ್ಚಸ್ಸು
* ಸಿದ್ದು ಮೇಲೆ ಈಗಲೂ ಪಕ್ಷದ ವರಿಷ್ಠರಿಗೆ ನಂಬಿಕೆ
* ಯಡಿಯೂರಪ್ಪ ಅವರನ್ನು ಎದುರಿಸಲು ಶಕ್ತ ನಾಯಕ

Leave a Reply

Your email address will not be published. Required fields are marked *