ಚಿಕ್ಕನಾಯಕನಹಳ್ಳಿ : ತಾಲ್ಲೂಕಿನಾದ್ಯಂತ ದಾಸ ಶ್ರೇಷ್ಠ ಸಂತ ಕನಕದಾಸರ 526ನೇ ಜಯಂತಿ ಯನ್ನು ಕೋವಿಡ್ ಕಾರಣ ಅತ್ಯಂತ ಸರಳವಾಗಿ ಆಚರಿಸಲಾಯಿತು.
ಕನಕ ಜಯಂತಿ ಅಂಗವಾಗಿ ಪಟ್ಟಣದ ಸರಕಾರಿ ಕಚೇರಿಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕು ಕಚೇರಿ, ಬೆಸ್ಕಾಂ, ಬಿಇಓ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯತ್ ಸೇರಿದಂತೆ ಕಚೇರಿಗಳಲ್ಲಿ ವಿವಿಧ ಇಲಾಖೆಗಳು ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಗಣ್ಯರು ಭಾಗಿಯಾಗಿದ್ದರು. ಸಮಾರಂಭದಲ್ಲಿ ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಲ್ಲದೇ ಕನಕದಾಸರು ನೂರಾರು ವರ್ಷಗಳ ಮೊದಲೇ ಜಾತಿ ಮಥ ಪಂಥಗಳಾಚೆ ಸಮಾಜ ಕಟ್ಟಲು ಹೇಗೆ ಶ್ರಮಿಸಿದರು ಎಂಬ ಬಗ್ಗೆ ಜನರಿಗೆ ತಿಳಿಸಿದರು.
ಕನಕದಾಸರ ಜಯಂತಿ ಅಂಗವಾಗಿ ಜೈವಿಕ ಇಂಧನ ನಿಗಮ ಮಂಡಳಿ ಅಧ್ಯಕ್ಷ ಕಿರಣ್ಕುಮಾರ್ ಜನತೆಗೆ ಶುಭಾಷಯ ಕೋರಿ ದರು. ಸಮಾಜದ ಮೇಲು, ಕೀಳು, ಜಾತಿ. ಮತ. ಸಿದ್ದಾಂತದ ವಿರುದ್ದ ಪ್ರತಿಭಟನಾ ನೆಲೆಗಟ್ಟಿನಲ್ಲಿ ದಾಸರು ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ತಂದರು. ಅವರು ಸಾರಿದ ತತ್ವದರ್ಶಗಳು ಇಂದಿಗೂ ಪ್ರಸ್ತುತ. ಅವರು ನೀಡಿದ ಆದರ್ಶ ನಮ್ಮೆಲ್ಲರಿಗೂ ದಾರಿ ದೀಪವಾಗಲಿ ಎಂದು ತಿಳಿಸಿದರು.