Monday, 13th July 2020

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಪ್ರಶಸ್ತಿಗಳು

ದೆಹಲಿ: ರಾಕಿಂಗ್ ಸ್ಟಾಾರ್ ಯಶ್ ಅಭಿನಯದ ಕೆಜಿಎಫ್, ಶೃತಿ ಹರಿಹರನ್ ಅಭಿನಯದ ನಾತಿಚರಾಮಿ ಚಿತ್ರಗಳು ಸೇರಿದಂತೆ ಕನ್ನಡಕ್ಕೆೆ ಒಟ್ಟು 11 ರಾಷ್ಟ್ರ ಪ್ರಶಸ್ತಿಿ ಸಿಕ್ಕಿಿದ್ದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ವರ್ಷದಲ್ಲಿ ಇಷ್ಟು ಪ್ರಶಸ್ತಿಿಗಳು ಬಂದಿರುವುದು ಇದೇ ಮೊದಲು.

ಪ್ರತಿಷ್ಠಿಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಿ ಪಟ್ಟಿಿಯನ್ನು ನವದೆಹಲಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಪ್ರಕಟಿಸಿದರು.

ಪ್ರಶಸ್ತಿಿ ಪಟ್ಟಿಿ
* ಅತ್ಯುತ್ತಮ ಪ್ರಾಾದೇಶಿಕ ಚಿತ್ರ ನಾತಿಚರಾಮಿ
* ಅತ್ಯುತ್ತಮ ಮಹಿಳಾ ಗಾಯಕಿ (ಮಾಯಾವಿ ಮಾನವೆ ಹಾಡು-) (ಬಿಂಧು ಮಾಲಿನಿ ಗಾಯಕಿ) ನಾತಿಚರಾಮಿ
* ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಿ ನಾತಿಚರಾಮಿ
* ಅತ್ಯುತ್ತಮ ಸಂಕಲನ ನಾತಿಚರಾಮಿ
* ಅತ್ಯುತ್ತಮ ಸಾಹಸ ಚಿತ್ರ ಕೆಜಿಎಫ್-01
* ಅತ್ಯುತ್ತಮ ವಿಎಫ್‌ಎಕ್‌ಸ್‌ ಚಿತ್ರ ಕೆಜಿಎಫ್01
* ಅತ್ಯುತ್ತಮ ರಾಷ್ಟ್ರೀಯ ಏಕತಾ ಚಿತ್ರ ಒಂದಲ್ಲ, ಎರಡಲ್ಲ
* ಅತ್ಯುತ್ತಮ ಬಾಲ ಕಲಾವಿದ ಒಂದಲ್ಲ, ಎರಡಲ್ಲ
* ಅತ್ಯುತ್ತಮ ಮಕ್ಕಳ ಚಿತ್ರ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆ ಕಾಸರಗೂಡು (ವಿ.ಪಿ.ರೋಹಿತ್)
* ಅತ್ಯುತ್ತಮ ರಾಷ್ಟ್ರೀಯ ಆಕ್ರ್ಸೂಸ್ ಚಿತ್ರ ಮೂಕಜ್ಜಿಿಯ ಕನಸುಗಳು
* ವಿಶೇಷ ಪ್ರಶಸ್ತಿಿ -ನಾತಿಚರಾಮಿ(ಶೃತಿ ಹರಿಹರನ್)

ಚಲನಚಿತ್ರ ಪ್ರಶಸ್ತಿಿ: ಆಯುಷ್ಮಾಾನ್ ಖುರಾನಾ, ವಿಕ್ಕಿಿ ಕೌಶಲ್ ಅತ್ಯುತ್ತಮ ನಟರು, ಕೀರ್ತಿ ಸುರೇಶ್ ಅತ್ಯುತ್ತಮ ನಟಿ
ದೆಹಲಿ: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಿ ಪ್ರಕಟವಾಗಿದ್ದು ಬಧಾಯಿ ಹೋ ಚಿತ್ರದ ಅಭಿನಯಕ್ಕಾಾಗಿ ಆಯುಷ್ಮಾಾನ್ ಖುರಾನಾ ಹಾಗೂ ಉರಿ: ದಿ ಸರ್ಜಿಕಲ್ ಸ್ಟ್ರೆೆ ಕ್’ ನಟ ವಿಕ್ಕಿಿ ಕೌಶಲ್ ಅವರುಗಳು ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಿಯನ್ನು ಹಂಚಿಕೊಂಡಿದ್ದಾರೆ. ನಟಿ ಕೀರ್ತಿ ಸುರೇಶ್ ಮಹಾನಟಿ ಚಿತ್ರಕ್ಕಾಾಗಿ ಅತ್ಯುತ್ತಮ ನಟಿ ಪ್ರಶಸ್ತಿಿ ಪಡೆದಿದ್ದಾರೆ.

ಮಹಾನಟಿ ಅತ್ಯುತ್ತಮ ತೆಲುಗು ಚಿತ್ರ ಪ್ರಶಸ್ತಿಿ ಬಾಚಿಕೊಂಡಿದ್ದರೆ ‘ಅಂಧಾಧುನ್’ ಚಿತ್ರಕ್ಕೆೆ ಅತ್ಯುತ್ತಮ ಹಿಂದಿ ಭಾಷಾ ಚಿತ್ರ ಪ್ರಶಸ್ತಿಿ ಲಭಿಸಿದೆ.
ಚೊಚ್ಚಲ ಉರಿ: ದಿ ಸರ್ಜಿಕಲ್ ಸ್ಟ್ರೈಕ್‌ಗಾಗಿ ಆದಿತ್ಯ ಧಾರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಿ ಗೆದ್ದರೆ, ಅಂಧಾಧುನ್ ಅತ್ಯುತ್ತಮ ಹಿಂದಿ ಚಲನಚಿತ್ರ ಮತ್ತು ಅತ್ಯುತ್ತಮ ಚಿತ್ರಕಥೆಗಾಗಿ ಪ್ರಶಸ್ತಿಿಗಳನ್ನು ಗೆದ್ದಿದೆ.
ಗರ್ಭಧಾರಣೆ ತಡವಾಗಿ ಸಮಸ್ಯೆೆ ಎದುರಿಸುವ ಕೌಟುಂಬಿಕ ಕಥಾನಕವನ್ನೊೊಳಗೊಂಡ ಬಧಾಯಿ ಹೋ ಅತ್ಯುತ್ತಮ ಜನಪ್ರಿಿಯ ಚಿತ್ರವೆಂದು ಪ್ರಶಸ್ತಿಿ ಗಳಿಸಿದರೆ ಹಿರಿಯ ನಟ ಸುರೇಖಾ ಸಿಕ್ರಿಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಿ ಗಿಟ್ಟಿಿಸಿದ್ದಾರೆ.

 ಇನ್ನು ಅಕ್ಷಯ್ ಕುಮಾರ್ ಅವರ ‘ಪ್ಯಾಾಡ್ ಮ್ಯಾಾನ್’ ಸಾಮಾಜಿಕ ವಿಷಯಗಳಲ್ಲಿ ಅತ್ಯುತ್ತಮ ಚಿತ್ರವೆಂದು ಪರಿಗಣಿಸಲ್ಪಟ್ಟಿಿದೆ. ಬಿಡುಗಡೆ ವೇಳೆ ಸಾಕಷ್ಟು ವಿವಾದಕ್ಕೀಡಾಗಿದ್ದ ಸಂಜಯ್ ಲೀಲಾ ಭನ್ಸಾಾಲಿ ಅವರ ಪದ್ಮಾಾವತ್, ಚಿತ್ರದ ಘೂರ್ಮ ಹಾಡಿನ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿಿ ತನ್ನದಾಗಿಸಿಕೊಂಡಿದೆ.
ಅರಿಜಿತ್ ಸಿಂಗ್ ಅತ್ಯುತ್ತಮ ಮೇಲ್ ಪ್ಲೇ ಬ್ಯಾಾಕ್ ಸಿಂಗರ್ ( ಹಿನ್ನೆೆಲೆ ಗಾಯಕ )ಪ್ರಶಸ್ತಿಿ ಗೆದ್ದಿದ್ದಾಾರೆ.

Leave a Reply

Your email address will not be published. Required fields are marked *