Friday, 24th March 2023

ನಟ ಶಂಕರ್ ನಾಗ್ 66ನೇ ಜನ್ಮದಿನ ಇಂದು

ಬೆಂಗಳೂರು: ನಟ ಶಂಕರ್ ನಾಗ್ ಅವರ 66ನೇ ಜನ್ಮದಿನವಾಗಿದ್ದು ಸಿನಿಮಾ ಕಲಾವಿದರು ಹಾಗೂ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಶಂಕರ್ ನಾಗ್ ‘ಒಂದಾನೊಂದು ಕಾಲದಲ್ಲಿ’ ಎಂಬ ಚಿತ್ರ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, 35ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ನಟ ಹಾಗೂ ನಿರ್ದೇಶಕರಾಗಿ ಮಿಂಚಿದ ಶಂಕರ್ ನಾಗ್ ಮಾಲ್ಗುಡಿ ಡೇಸ್ ಎಂಬ ಜನಪ್ರಿಯ ಧಾರವಾಹಿಯನ್ನು ಕೂಡ ನಿರ್ದೇಶಿಸಿದ ಪ್ರತಿಭಾವಂತ ನಟ. ಇವರ ಹುಟ್ಟುಹಬ್ಬಕ್ಕೆ ಸಾಕಷ್ಟು ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.

error: Content is protected !!