Friday, 7th October 2022

ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ -ಸಿದ್ದಗಂಗಾ ಮಠದಲ್ಲಿ ಮೊಳಗಿದ ಕನ್ನಡ ಕಲರವ

ತುಮಕೂರು: ಕನ್ನಡ ಮನಸುಗಳನ್ನು ಒಟ್ಟುಗೂಡಿಸಲು ಮಠದಲ್ಲಿ ಗುರು ವಾರ ಸಾವಿರಾರು ವಿದ್ಯಾರ್ಥಿಗಳ ಕಂಠದಿಂದ ಮೊಳಗಿದ ಒಕ್ಕೊರಲಿನ ಸುಮಧುರ ಕನ್ನಡ ಗೀತೆಗಳು ಕನ್ನಡಿಗರನ್ನಲ್ಲದೆ ಇತರೆ ಭಾಷಿಕರಲ್ಲೂ ಕನ್ನಡದ ಮೇಲೆ ಪ್ರೀತಿ ಮೂಡು ವಂತೆ ಮಾಡಿತು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗ ದಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮದಡಿ ಸಿದ್ದಗಂಗಾ ಮಠದಲ್ಲಿ ಆಯೋಜಿಸಿದ್ದ ಕನ್ನಡ ಗೀತಗಾಯನ ಕಾರ್ಯ ಕ್ರಮದಲ್ಲಿ ಸಾಲಾಗಿ ನಿಂತ ಶ್ರೀ ಮಠದ ಸುಮಾರು 8000ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಶಿಕ್ಷಕ ವೃಂದದವರು, ಸಿಬ್ಬಂದಿಗಳು, ಮಠದ ಭಕ್ತಾಧಿಗಳು, ಅಧಿಕಾರಿಗಳು ದನಿಗೂಡಿಸಿ ಡಾ: ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಡಾ: ಕೆ.ಎಸ್.ನಿಸಾರ್ ಅಹಮ್ಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಸೇರಿದಂತೆ ಮೂರು ಗೀತೆಗಳನ್ನು ಹಾಡಿದರು.

ಸಿದ್ಧಲಿಂಗ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ವಿವಿಧ ಗಾಯಕರ ಕಂಠದಲ್ಲಿ ಮೂಡಿ ಬಂದ ಗಾಯನ ಕಾರ್ಯಕ್ರಮವು ಕನ್ನಡಿಗರಲ್ಲಿದ್ದ ಭಾಷಾಭಿಮಾನ ಇಮ್ಮಡಿಗೊಳಿಸಿತು. ಪ್ರತಿ ಗೀತೆಗಳ ನಂತರ ವಿದ್ಯಾರ್ಥಿಗಳು ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ ಬಾಳ್ಗೆ, ಕನ್ನಡಕ್ಕಾಗಿ ನಾವು, ಮಾತಾಡ್ ಮಾತಾಡ್ ಕನ್ನಡ ಘೋಷವಾಕ್ಯಗಳನ್ನು ಕೂಗುವ ಮೂಲಕ ಕನ್ನಡ ಕಹಳೆಯನ್ನು ಮೊಳಗಿಸಿದರು.

ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂದು ಪಣತೊಡುತ್ತೇನೆ ಎಂದು ಹೆಮ್ಮೆಯಿಂದ ನುಡಿದರು.

ಜಿಪಂ ಸಿಇಓ ಡಾ: ಕೆ.ವಿದ್ಯಾಕುಮಾರಿ ಮಾತನಾಡಿ, ಕನ್ನಡ ಭಾಷೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಕನ್ನಡಕ್ಕಾಗಿ ನಾವು ಅಭಿ ಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡವು ರಾಜ್ಯದ ಜನಭಾಷೆಯಾಗಬೇಕು ಎಂದು ತಿಳಿಸಿದರು.

ಶಾಸಕ ಜ್ಯೋತಿಗಣೇಶ್ ಮಾತನಾಡಿ, ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರು ತಮ್ಮದೇ ಆದ ಛಾಪು ಮೂಡಿಸಿ ದ್ದಾರೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರೂ ಸಹ ತಮ್ಮ ಸುತ್ತಮುತ್ತಲಿನ ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ನಿದರ್ಶನಗಳಿವೆ. ಬ್ಯಾಂಕಿಂಗ್ ಮತ್ತು ರೈಲ್ವೆ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಹಾಪೂರ್ವಾಡ್, ಉಪವಿಭಾಗಾಧಿಕಾರಿ ಅಜಯ್, ಡಿಡಿಪಿಐ ಸಿ.ನಂಜಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸಾವಿರಾರು ವಿದ್ಯಾರ್ಥಿ ಗಳು, ಅಧಿಕಾರಿಗಳು, ಶಿಕ್ಷಕರು, ಮಠದ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

***

ಕನ್ನಡ ದನಿಯನ್ನು ಎಲ್ಲೆಡೆ ಮೊಳಗಿಸಲು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮದ ಪ್ರಯೋಗ ವಿನೂತನವಾಗಿದೆ. ಭಾರತೀಯರಾದ ನಾವೆಲ್ಲಾ ಪ್ರಾದೇಶಿಕತೆಯನ್ನು ಉಳಿಸಿಕೊಂಡು ರಾಷ್ಟಿçÃಯತೆಯನ್ನು ಬೆಳೆಸಬೇಕು. ಮಾತೃಭಾಷೆಯಾದ ಕನ್ನಡವನ್ನು ಜನ ಮಾನಸದಲ್ಲಿ ಶಾಶ್ವತಗೊಳಿಸುವ ಕೆಲಸವಾಗಬೇಕು.

ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಿದ್ದಗಂಗಾ ಮಠ