Monday, 9th December 2019

ಕಾರ್ಯಸೂಚಿ ಹೆಸರಲ್ಲಿ ಮೊದಲ ದಿನವೇ ಗದ್ದಲ ಗಲಾಟೆ

ನೆರೆಗಿಂತ ಪೇಪರ್ ಮಂಡಿಸುವುದು ಮುಖ್ಯವೇನ್ರಿ: ಸಿದ್ದು ಕಾರ್ಯಸೂಚಿಯಂತೆ ಕಲಾಪ ನಡೆಸಲು ಮುಂದಾದ ಸ್ಪೀಕರ್ ನಡೆಗೆ ಆಕ್ರೋೋಶ ಗದ್ದಲದ ನಡುವೆಯೇ ವಿವಿಧ ವರದಿ ಮಂಡಿಸಿದ ಸರಕಾರ

ನಿರೀಕ್ಷೆೆಯಂತೆ ನೆರೆ ಪರಿಹಾರದ ವಿಚಾರಕ್ಕೆೆ ಸಂಬಂಧಿಸಿದಂತೆ ಮೊದಲ ದಿನದ ಚಳಿಗಾಲದ ಅಧಿವೇಶನದಲ್ಲಿ ಗದ್ದಲ- ಗಲಾಟೆ ಏರ್ಪಟ್ಟು, ಪ್ರತಿಪಕ್ಷ ಹಾಗೂ ಸ್ಪೀಕರ್ ನಡುವಿನ ಗುದ್ದಾಾಟಕ್ಕೆೆ ವೇದಿಕೆಯಾಯಿತು.

ಗುರುವಾರ ಸಂತಾಪ ಸೂಚನಾ ನಿರ್ಣಯದ ಬಳಿಕ ಕಾರ್ಯದರ್ಶಿ ವರದಿ ಸೇರಿದಂತೆ ವಿವಿಧ ಸಮಿತಿಗಳ ವರದಿಗಳನ್ನು ಒಪ್ಪಿಿಸಲು ಸ್ಪೀಕರ್ ಸೂಚಿಸಿದರು. ಇದಕ್ಕೆೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳು, ವರದಿಗಳ ಬದಲು ನೆರೆ ವಿಚಾರಕ್ಕೆೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲ್ಲಿಸಿರುವ ನಿಲುವಳಿ ಸೂಚಿಸಲು ಆಗ್ರಹಿಸಿದರು. ಆದರೆ ಇದಕ್ಕೆೆ ಸ್ಪೀಕರ್ ಒಪ್ಪದೇ ಇದ್ದಾಾಗ ಪ್ರತಿಪಕ್ಷಗಳು ಗದ್ದಲ ಎಬ್ಬಿಿಸಿದವು. ಗದ್ದಲದ ನಡುವೆಯೂ ವಿಧಾನಸಭಾ ಕಾರ್ಯದರ್ಶಿ ಸೇರಿದಂತೆ ವಿವಿಧ ಸಚಿವರು ಹಾಗೂ ಮುಖ್ಯಮಂತ್ರಿಿಗಳು ವಿವಿಧ ವರದಿಗಳನ್ನು ಸದನಕ್ಕೆೆ ಒಪ್ಪಿಿಸಿದರು.

ಇದಕ್ಕೆೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ಬರ ಮತ್ತು ನೆರೆಯಿಂದ ಅರ್ಧ ರಾಜ್ಯವೇ ಸಂಕಷ್ಟಕ್ಕೆೆ ಸಿಲುಕಿದೆ. ಈ ಬಗ್ಗೆೆ ಚರ್ಚಿಸಲು ಸಲ್ಲಿಸಿರುವ ನಿಲುವಳಿ ಸೂಚನೆಗೆ ಸಂಬಂಧಿಸಿದಂತೆ ಪ್ರಾಾಥಮಿಕ ಚರ್ಚೆಗೆ ಅವಕಾಶ ನೀಡುವ ಬದಲು, ವರದಿಗಳಿಗೆ ಅವಕಾಶ ನೀಡುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯೆಂದು ಟೀಕಿಸಿದರು.

ಪ್ರತಿಪಕ್ಷದ ಒತ್ತಾಾಯಕ್ಕೆೆ ಮಣಿಯದೇ ಕಾರ್ಯಸೂಚಿಯಂತೆ ಸದನದ ಕಲಾಪಕ್ಕೆೆ ಅವಕಾಶ ಕಲ್ಪಿಿಸಿದ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿರ್ಧಾರವನ್ನು ಖಂಡಿಸಿದರು. ಪ್ರಶ್ನೋೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ನಂತರ ನಿಯಮ 60 ರಂತೆ ಸಾರ್ವಜನಿಕ ಮಹತ್ವದ ವಿಚಾರದ ಚರ್ಚೆಗೆ ನಿಯಮಾವಳಿಗಳಲ್ಲಿ ಅವಕಾಶವಿದೆ ಎಂಬುದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು, ದಿನದ ಕಾರ್ಯಸೂಚಿಯಲ್ಲಿ ಪ್ರಶ್ನೋೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ಚರ್ಚೆ ಇಲ್ಲದಿರುವ ಹಿನ್ನೆೆಲೆಯಲ್ಲಿ ಸಭಾಧ್ಯಕ್ಷ ಪೀಠಕ್ಕೆೆ ತಾವು ಸಲ್ಲಿಸಿದ ನಿಲುವಳಿ ಸೂಚನೆ ಕುರಿತ ಪ್ರಾಾಥಮಿಕ ಚರ್ಚೆಗೆ ಪಟ್ಟುಹಿಡಿದರು.

ಚರ್ಚೆಗೆ ಸಿದ್ಧ; ವರದಿ ಒಪ್ಪಿಿಸಲು ಅವಕಾಶ ನೀಡಿ
ಈ ವೇಳೆ ಮಧ್ಯೆೆ ಪ್ರವೇಶಿಸಿದ ಸಭಾನಾಯಕ ಬಿ.ಎಸ್.ಯಡಿಯೂರಪ್ಪ, ಚರ್ಚೆಗೆ ಸರಕಾರ ಸಿದ್ಧವಿದೆ. ಆದರೆ, ಕೆಲ ವರದಿಗಳನ್ನು ಮಂಡಿಸುತ್ತೇವೆ. ಇದಕ್ಕೆೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆೆ ಪ್ರತಿಪಕ್ಷಗಳು ಒಪ್ಪದಿದ್ದಾಾಗ ಗದ್ದಲ ಏರ್ಪಟಿತ್ತು. ಸಿದ್ದರಾಮಯ್ಯ ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ರಮೇಶ್ ಕುಮಾರ್, ಕೃಷ್ಣ ಬೈರೇಗೌಡ ಹಾಗೂ ಎಚ್.ಕೆ.ಪಾಟೀಲ್ ಆಗ್ರಹಿಸಿದರು. ಇನ್ನು ಜೆಡಿಎಸ್ ಸದಸ್ಯರು ಬಾವಿಗಿಳಿದು ಪ್ರತಿಭಟನೆಗೆ ಮುಂದಾಗುತ್ತಿಿದ್ದಂತೆ, ಸ್ಪೀಕರ್ ಸದನವನ್ನು ಮಧ್ಯಾಾಹ್ನಕ್ಕೆೆ ಮುಂದೂಡಿದರು. ಇದಕ್ಕೆೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವದ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಏರಿದ ಧ್ವನಿಯಲ್ಲಿ ಕೂಗಿ ಸಭಾಧ್ಯಕ್ಷರ ನಡೆಯನ್ನು ಪ್ರತಿಭಟಿಸಿದರು. ಸಭಾಧ್ಯಕ್ಷರು ಸರಕಾರದೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಇದಾವುದಕ್ಕೂ ಜಗ್ಗದ ಸಭಾಧ್ಯಕ್ಷರು ಕಾರ್ಯಸೂಚಿಯಂತೆ ಕಲಾಪವನ್ನು ಮುಂದುವರಿಸಿದರು.

ಐದು ದಿನ ವಿಸ್ತರಿಸಲು ಆಗ್ರಹ
ಇನ್ನು ಗಲಾಟೆಯಿಂದ ಸದನವನ್ನು ಮುಂದೂಡಿದ ಬಳಿಕ ನಡೆದ ಬಿಎಸಿ ಸಭೆಯಲ್ಲಿ ಪ್ರತಿಪಕ್ಷದ ನಾಯಕರು, ನೆರೆಯಿಂದ ರಾಜ್ಯದಲ್ಲಿ ಗಂಭೀರ ಸಮಸ್ಯೆೆ ಎದುರಾಗಿದೆ. ಆದ್ದರಿಂದ ಕಲಾಪವನ್ನು ಐದು ದಿನ ಮುಂದುವರಿಸಬೇಕು ಎನ್ನುವ ಆಗ್ರಹವನ್ನು ಮಾಡಿದ್ದಾಾರೆ. ಆದರೆ ಇದಕ್ಕೆೆ ಮುಖ್ಯಮಂತ್ರಿಿ ಯಡಿಯೂರಪ್ಪ ಹಾಗೂ ಸ್ಪೀಕರ್ ಒಪ್ಪಿಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ. ಆದ್ದರಿಂದ ಶುಕ್ರವಾರವೇ ಧನವಿಧೇಯಕಕ್ಕೆೆ ಅನುಮೋದನೆ ಪಡೆದು, ಕಲಾಪವನ್ನು ಅಂತ್ಯಗೊಳಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿದೆ.

Leave a Reply

Your email address will not be published. Required fields are marked *