Wednesday, 5th August 2020

ಕಾಶ್ಮೀರ ವಿಷಯದಲ್ಲಿ ಕಾಂಗ್ರೆಸ್ ಸದಾ ಪಾಕಿಸ್ತಾನ ಪರ, ಇದು ಕಾಂಗ್ರೆಸ್ ದೇಶಭಕ್ತಿ!

ಕೆಲವು ಪ್ರಶ್ನೆೆಗಳನ್ನು ಕೇಳಲೇಬೇಕಾಗಿದೆ.

ಅಲ್ಲಾಾರೀ, ಈ ರಾಹುಲ್ ಗಾಂಧಿಗೆ ಏನಾಗಿದೆ? ಅವರಿಗೆ ಸ್ವಲ್ಪವಾದರೂ ಜವಾಬ್ದಾಾರಿ ಇದೆಯಾ? ಮೊನ್ನೆೆ ಕೇಂದ್ರ ಸರಕಾರ, ಕಾಶ್ಮೀರಕ್ಕೆೆ ವಿಶೇಷ ಸ್ಥಾಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿತು. ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನ್ನು ಕೇಂದ್ರಾಾಡಳಿತ ಪ್ರದೇಶವಾಗಿ ಘೋಷಿಸಿತು. ನನ್ನ ದೃಷ್ಟಿಿಯಲ್ಲಿ ಇದು ಐತಿಹಾಸಿಕ ನಿರ್ಧಾರ. ದೇಶಕ್ಕೆೆ ಎರಡನೇ ಸ್ವಾಾತಂತ್ರ್ಯ ಲಭಿಸಿದಷ್ಟು ಮಹತ್ವಪೂರ್ಣವಾದ ತೀರ್ಮಾನ. ಭಾರತದೊಳಗೇ ಇದ್ದರೂ ಕಾಶ್ಮೀರ ನಮ್ಮ ನಿಯಂತ್ರಣದಲ್ಲಿ ಇರಲಿಲ್ಲ. ಇಡೀ ದೇಶಕ್ಕೆೆ ಒಂದು ಕಾನೂನು ಇದ್ದರೆ, ಕಾಶ್ಮೀರಕ್ಕೇ ಬೇರೆ ಕಾನೂನು ಇತ್ತು. ಆ ಮೂಲಕ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕವಾಗಿ ಇಡುವ ಪ್ರಯತ್ನ ಲಾಗಾಯ್ತಿಿನಿಂದಲೂ ನಡೆದುಕೊಂಡು ಬಂದಿತ್ತು. ಅಂಥ ಕರಾಳ ಶಾಸನವನ್ನು ಮೋದಿ ನೇತೃತ್ವದ ಸರಕಾರ ರದ್ದುಪಡಿಸಿತು. ದೇಶದ ಅಖಂಡತೆ, ಸಾರ್ವಭೌಮತ್ವದ ದೃಷ್ಟಿಿಯಿಂದ ಇದೊಂದು ಚಾರಿತ್ರಿಿಕ ನಿರ್ಧಾರ. ನಿಜವಾದ ಗಂಡಸು ಮಾಡಬಹುದಾದ ಧೀರೋದಾತ್ತ ನಡೆ. ಪ್ರಶ್ನೆೆಯೇ ಇಲ್ಲ. ಬೇರೆ ಯಾರಿಂದಲೂ ಸಾಧ್ಯವಿರಲಿಲ್ಲ. ಅಂಥ ‘ಸಾಹಸೀ ನಿರ್ಧಾರ’ವನ್ನು ಮೋದಿ ತೆಗೆದುಕೊಂಡರು. ಇದು ಸಾಕಷ್ಟು ಯೋಚಿಸಿ, ಅತ್ಯಂತ ಕರಾರುವಾಕ್ಕಾಾಗಿ ನಡೆಸಿದ ಕಾರ್ಯಾಾಚರಣೆ. ಇದಕ್ಕೆೆ ರಾಜಕೀಯ ಇಚ್ಛಾಾಶಕ್ತಿಿ ಮಾತ್ರ ಅಲ್ಲ, ಐವತ್ತಾಾರು ಇಂಚಿನ ಎದೆಯೂ ಬೇಕು.

ಸಂಸತ್ತಿಿನಲ್ಲಿ ಭಾರೀ ಬಹುಮತ, ರಾಜಕೀಯ ಇಚ್ಛಾಾಶಕ್ತಿಿ ಇದ್ದವರೆಲ್ಲ ಏನು ಮಾಡಿದ್ದಾಾರೆಂಬುದನ್ನು ನಾವು ನೋಡಿದ್ದೇವೆ. ಈ ನಿಟ್ಟಿಿನಲ್ಲಿ ಕೇಂದ್ರ ಸರಕಾರದ ನಡೆಯನ್ನು ಶ್ಲಾಾಸಲೇಬೇಕು. ಮೋದಿ ಹಾಗೂ ಶಾ ಅವರ ಹೊರತಾಗಿ ಬೇರೆ ಯಾರೇ ಇದ್ದರೂ ಇಂಥ ರಿಸ್‌ಕ್‌ ತೆಗೆದುಕೊಳ್ಳುತ್ತಿಿರಲಿಲ್ಲ. ಇಡೀ ದೇಶವೇ ಈ ನಿರ್ಧಾರಕ್ಕೆೆ ತಲೆಬಾಗಿದೆ. ನಾಳೆಯೇ ಕಾಶ್ಮೀರದಲ್ಲಿ ರಾಮರಾಜ್ಯ ನೆಲೆಸುವುದಿಲ್ಲ. ಅದು ಎಲ್ಲರಿಗೂ ಗೊತ್ತು. ಆದರೆ ಕಾಶ್ಮೀರದ ಕಲ್ಯಾಾಣಕ್ಕೆೆ ಮೊದಲ ಹೆಜ್ಜೆೆ ಇಟ್ಟರಲ್ಲ, ಅದನ್ನು ಪ್ರಶಂಸಿಸಲೇಬೇಕು. ಬಿಜೆಪಿಯನ್ನು ಟೀಕಿಸುವವರೂ ಮೋದಿ-ಶಾ ನಿರ್ಧಾರಕ್ಕೆೆ ಶಿರ ಬಾಗಿದ್ದಾಾರೆ. ಕೇಜ್ರಿಿವಾಲ, ಚಂದ್ರಬಾಬು ನಾಯ್ಡು, ಅವರಂಥ ಕಟು ಟೀಕಾಕಾರರೂ ಈ ನಿರ್ಧಾರವನ್ನು ಸ್ವಾಾಗತಿಸಿದ್ದಾಾರೆ. ಇಡೀ ವಿಶ್ವ ಸಮುದಾಯ ಬೆಕ್ಕಸ ಬೆರಗಾಗಿದೆ. ಪಾಕಿಸ್ತಾಾನ ಅಂಡು ಸುಟ್ಟುಕೊಂಡ ಬೆಕ್ಕಿಿನಂತಾಗಿದೆ.

ಆದರೆ ಈ ರಾಹುಲ್ ಗಾಂಧಿಗೆ ಏನಾಗಿದೆ? ಮನುಷ್ಯ ಒಂದು ಹೇಳಿಕೆಯನ್ನಾಾದರೂ ಕೊಡಬಾರದೇ? ಅವರು ಭೂಮಿಯ ಮೇಲಿನ ಯಾವುದೇ ಊರಿನಲ್ಲಿರಲಿ, ಇಂಥ ಅಪರೂಪದ, ಮಹತ್ವದ ಕ್ರಮದ ಬಗ್ಗೆೆ ಕನಿಷ್ಠ ಎರಡು ಸಾಲಿನ ಟ್ವೀಟನ್ನಾಾದರೂ ಮಾಡಬಾರದೇ? ಆಯಪ್ಪನಿಗೆ ಇದಕ್ಕಿಿಂತ ಪ್ರಮುಖವಾದ ಯಾವ ಕೆಲಸವಿತ್ತೋೋ? ಅಂಥ ಕೆಲಸವಿದ್ದಿದ್ದರೆ, ಅದನ್ನಾಾದರೂ ಹೇಳಬಹುದಿತ್ತು. ಆಗ ಬೇರೆಯವರಿಗೂ ಗೊತ್ತಾಾಗುತ್ತಿಿತ್ತು. ಆಗ ರಾಹುಲ್ ಗಾಂಧಿಯವರನ್ನು ಖಂಡಿತವಾಗಿ ಅಭಿನಂದಿಸಬಹುದಿತ್ತು. ಕೇಂದ್ರ ಸರಕಾರ ಇಂಥ ಮಹತ್ವಪೂರ್ಣ ನಿರ್ಧಾರ ತೆಗೆದುಕೊಂಡು ಇಪ್ಪತ್ನಾಾಲ್ಕು ಗಂಟೆಗಳಾದರೂ ‘ಪುಣ್ಯಾಾತ್ಮ’ ಒಂದು ಪ್ರತಿಕ್ರಿಿಯೆಯನ್ನೂ ನೀಡಿರಲಿಲ್ಲ! ಅವರ ಕುಟುಂಬದ ಇತರ ಸದಸ್ಯರೂ ಆ ಬಗ್ಗೆೆ ತುಟಿ ಪಿಟಿಕ್ಕೆೆನ್ನಲಿಲ್ಲ. ರಾಹುಲ್ ಗಾಂಧಿ ಜಗತ್ತಿಿನ ಯಾವುದೇ ಮೂಲೆಯಲ್ಲಿರಲಿ, ಇಂಥ ಪ್ರಮುಖ ನಿರ್ಧಾರದ ಬಗ್ಗೆೆ ತಮ್ಮ ಅಭಿಪ್ರಾಾಯ ತಿಳಿಸಲೇಬೇಕಿತ್ತು.

ಕಳೆದ ಹತ್ತು ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿಿರುವ ಬಗ್ಗೆೆ ರಾಹುಲ್ ಗಾಂಧಿಯವರಿಗೆ ಸುಳಿವು ಸಿಕ್ಕಿಿರಲೇಬೇಕು. ಮೂವತ್ತು ಸಾವಿರ ಸೈನಿಕರನ್ನು ಕೇಂದ್ರ ಸರಕಾರ ಅಲ್ಲಿಗೆ ಹಠಾತ್ ನಿಯೋಜಿಸಿದಾಗಲೇ ಅದರ ಪ್ರಾಾಮುಖ್ಯ ಅವರಿಗೆ ಗೊತ್ತಾಾಗಬೇಕಿತ್ತು. ಅಂಥ ಸಂದರ್ಭದಲ್ಲಿ ಅವರು ಎಲ್ಲಿಯೇ ಇದ್ದರೂ, ಭಾರತಕ್ಕೆೆ ದೌಡಾಯಿಸಬೇಕಿತ್ತು. ವಿದೇಶಕ್ಕೆೆ ಹೋಗಿದ್ದರೂ ವಾಪಸ್ ಬರಬೇಕಿತ್ತು. ಸರಿ, ಬರಲಾಗದ ಪರಿಸ್ಥಿಿತಿಯಲ್ಲಿದ್ದಾಾರೆಂದು ಭಾವಿಸಿದರೂ, ಅವರು ಇರುವ ತಾಣದಿಂದಲೇ, ಸರಕಾರ ತೆಗೆದುಕೊಂಡ ಕ್ರಮದ ಬಗ್ಗೆೆ ತಮ್ಮ ಪಕ್ಷ ಯಾವ ನಿಲುವು ತಳೆಯಬೇಕು ಎಂಬ ಬಗ್ಗೆೆ ಮಾರ್ಗದರ್ಶನ ನೀಡಬೇಕಿತ್ತು.

ಆದರೆ ಪುಣ್ಯಾಾತ್ಮ, ಘಟನೆ ನಡೆದು ಇಪ್ಪತ್ನಾಾಲ್ಕು ಗಂಟೆಗಳಾದರೂ ಸುಮ್ಮನಿದ್ದಾಾರೆ ಅಂದರೆ ಅದು ಬೇಜವಾಬ್ದಾಾರಿಯ ಪರಾಕಾಷ್ಠೆೆಯೇ ಸರಿ. ಅಂದರೆ ಅವರು ಇಂಥ ರಾಷ್ಟ್ರೀಯ ವಿಷಯಕ್ಕಿಿಂತ ಬೇರೆ ಯಾವುದೋ ಕೆಲಸದಲ್ಲೇ ಹೆಚ್ಚು ಆಸಕ್ತಿಿ ಹೊಂದಿದ್ದಾಾರೆಂದು ಭಾವಿಸಬಹುದು. ಗಾಂಧಿ ಕುಟುಂಬದ ಯಾವೊಬ್ಬ ಸದಸ್ಯರೂ ಮಾತಾಡದಿದ್ದುದು ಆಶ್ಚರ್ಯ ಹಾಗೂ ಹೊಣೆಗೇಡಿತನವೇ ಸರಿ. ವಿಪರ್ಯಾಾಸವೆಂದರೆ, ಈ ಸಮಸ್ಯೆೆಗೆ ಈ ಗಾಂಧಿ ಕುಟುಂಬದ ಮೂಲ ಪುರುಷ ನೆಹರು ಅವರೇ ಕಾರಣ. ಕೇಂದ್ರ ಸರಕಾರ ರಾಜ್ಯಸಭೆಯಲ್ಲಿ 370ನೇ ವಿಧಿಯನ್ನು ರದ್ದುಪಡಿಸುವ ಪ್ರಸ್ತಾಾವ ಮಂಡಿಸಿದಾಗ, ಕಾಶ್ಮೀರ ಮೂಲದ ಹಾಗೂ ರಾಜ್ಯಸಭೆಯಲ್ಲಿ ಕಾಂಗ್ರೆೆಸ್ ನಾಯಕ ಗುಲಾಂ ನಬಿ ಆಜಾದ್ ಮಾತ್ರ ಅದನ್ನು ಟೀಕಿಸಿದರು. ಗುಲಾಂ ನಬಿ ಕಾಶ್ಮೀರದ ಮುಖ್ಯಮಂತ್ರಿಿಯಾಗಿದ್ದವರು. ಹೀಗಾಗಿ ಅವರಿಗೆ ಪಕ್ಷಕ್ಕಿಿಂತ, ಈ ನಿರ್ಧಾರವನ್ನು ವಿರೋಧಿಸುವುದರಲ್ಲಿ ವೈಯಕ್ತಿಿಕ ಹಿತಾಸಕ್ತಿಿ ಇದೆ.

ವಿಚಿತ್ರವೆಂದರೆ, ಕೇಂದ್ರ ಸರಕಾರದ ಕ್ರಮಕ್ಕೆೆ ಯಾವ ಪ್ರತಿಕ್ರಿಿಯೆ ನೀಡಬೇಕು ಎಂಬುದು ತಿಳಿಯದೇ ಕಾಂಗ್ರೆೆಸ್ ವಕ್ತಾಾರರು ಕೆಲ ಕಾಲ ಅಯೋಮಯ ಸ್ಥಿಿತಿಯಲ್ಲಿದ್ದರು. ಆದರೆ ಸದನದಲ್ಲಿ ಗುಲಾಂ ನಬಿ ಆಜಾದ್ 370ನೇ ವಿಧಿ ರದ್ದುಪಡಿಸಿದ್ದರ ವಿರುದ್ಧ ಮಾತಾಡಿದ್ದರಿಂದ, ವಕ್ತಾಾರರೂ ಇದೇ ನಿಲುವಿಗೆ ಅಂಟಿಕೊಳ್ಳಬೇಕಾದುದು ಅನಿವಾರ್ಯವಾಯಿತು. ಹಾಗೆ ನೋಡಿದರೆ, ಕಾಂಗ್ರೆೆಸ್‌ನ ಅನೇಕ ನಾಯಕರಿಗೆ ಈ ನಿಲುವು ಇಷ್ಟವಿರಲಿಲ್ಲ. ಕೇಂದ್ರ ಸರಕಾರವನ್ನು ಈ ವಿಷಯದಲ್ಲಿ ವಿರೋಧಿಸಿದರೆ ದೇಶವಾಸಿಗಳ ಕೆಂಗಣ್ಣಿಿಗೆ ಗುರಿಯಾಗಬೇಕಾಗುತ್ತದೆ ಎಂದು ಕೆಲವು ನಾಯಕರು ವಾದಿಸಿದರೂ, ಸದನದಲ್ಲಿ ಒಂದು, ಹೊರಗೆ ಮತ್ತೊೊಂದು ನಿರ್ಧಾರ ತೆಗೆದುಕೊಂಡು ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂದು ಭಾವಿಸಿ, 370ನೇ ವಿಧಿ ರದ್ದು ಪಡಿಸಿರುವುದರ ವಿರುದ್ಧ ಮಾತಾಡಲು ತೀರ್ಮಾಾನಿಸಿದರು. ಆದರೆ ಬಹುತೇಕ ಕಾಂಗ್ರೆೆಸ್ ನಾಯಕರಿಗೆ ಇದು ಇಷ್ಟವಿರಲಿಲ್ಲ. ಕಾಶ್ಮೀರಕ್ಕೆೆ ವಿಶೇಷ ಸ್ಥಾಾನಮಾನ ನೀಡುವ 370ನೇ ವಿಧಿ ಬಗ್ಗೆೆ ದೇಶವ್ಯಾಾಪಿ ವಿರೋಧಿ, ಆಕ್ರೋೋಶವಿರುವುದು ಅವರಿಗೆ ಗೊತ್ತಿಿತ್ತು. ಪ್ರತಿಪಕ್ಷವಾಗಿ ವಿರೋಧಿಸಬೇಕು ಎಂಬ ಕಾರಣಕ್ಕೆೆ ವಿರೋಧಿಸಿದರೂ ಅದರ ಪರಿಣಾಮವೇನಾಗಬಹುದು ಎಂಬುದು ಅವರಿಗೆ ಗೊತ್ತಿಿತ್ತು. ಎಂಥವರಿಗಾದರೂ ದೇಶದ ಭಾವನೆ ಎಂಥದ್ದು, ಗಾಳಿ ಯಾವ ಕಡೆ ಬೀಸುತ್ತಿಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ.

ಇದನ್ನು ಅರಿತುಕೊಂಡೇ ಕೇಂದ್ರ ಸರಕಾರ, ಇಂಥ ಸವಾಲಿನ ಕೆಲಸಕ್ಕೆೆ ಮುಂದಾಯಿತು. ಎಂಥವರಿಗಾದರೂ ಗೊತ್ತಾಾಗುತ್ತದೆ, ಇಂಥ ಪ್ರಮುಖ ತೀರ್ಮಾಾನ ತೆಗೆದುಕೊಂಡರೆ, ಜಮ್ಮು-ಕಾಶ್ಮೀರ ಹೊತ್ತಿಿ ಉರಿದು ಹೋಗುತ್ತದೆಂದು. ಆದರೆ ಮೋದಿ-ಶಾ ಅವರಿಗೆ ಗೊತ್ತಿಿತ್ತು, ತಾವು ತೆಗೆದುಕೊಳ್ಳುವ ನಿರ್ಧಾರದಿಂದ ಕಾಶ್ಮೀರದಲ್ಲಿರುವ ರಾಜಕೀಯ ನಾಯಕರಿಗೆ, ಪ್ರತ್ಯೇಕತಾವಾದಿಗಳಿಗೆ ಬೇಸರವಾಗಬಹುದು, ಆದರೆ ಇಡೀ ದೇಶವಾಸಿಗಳಿಗೆ ಖುಷಿಯಾಗುತ್ತದೆಂದು. ಕಾರಣ ಪ್ರಜ್ಞಾಾವಂತ ನಾಗರಿಕರಾರೂ ಅಂಥ ಕರಾಳ ವಿಧಿಯನ್ನು ಒಪ್ಪಿಿಕೊಳ್ಳುವ ಪ್ರಶ್ನೆೆಯೇ ಇರಲಿಲ್ಲ. ವಿಶೇಷ ಸ್ಥಾಾನಮಾನ ನೀಡಿದ, ಏಳು ದಶಕಗಳ ನಂತರವೂ ಕಾಶ್ಮೀರ ಇಂದು ಏಕೆ ಇಂಥ ಸ್ಥಿಿತಿಯಲ್ಲಿದೆ ಎಂಬ ಪ್ರಶ್ನೆೆಗೆ ಯಾರಲ್ಲೂ ಉತ್ತರವಿಲ್ಲ.

ಜಮ್ಮು-ಕಾಶ್ಮೀರದಲ್ಲಿ ಕಾನೂನು-ಸುವ್ಯವಸ್ಥೆೆಗೆ ಭಂಗ ಉಂಟಾಗದೇ, ಸಾವು-ನೋವು ಸಂಭವಿಸದೇ, 370ನೇ ವಿಧಿ ರದ್ದುಪಡಿಸುವುದು ಸುಲಭದ ಮಾತಾಗಿರಲಿಲ್ಲ. ಒಂದು ವೇಳೆ ಕಾಶ್ಮೀರಿಗಳು ಅದನ್ನು ಸ್ವಾಾಗತಿಸಿದರೂ, ರಾಜಕೀಯ ನಾಯಕರು, ಪ್ರತ್ಯೇಕತಾವಾದಿಗಳು, ಉಗ್ರ ಸಂಘಟನೆಗಳು ಹಿಂಸಾಚಾರವೆಸಗದೇ ಬಿಡುವುದಿಲ್ಲ ಎಂಬುದು ಎಂಥವರಿಗಾದರೂ ತಿಳಿದ ವಿಷಯವೇ. ಇಂಥ ಪ್ರಮುಖ ಕ್ರಮ ಕೈಗೊಳ್ಳಲು ಮುಂದಾದಾಗ, ಮುನ್ನೆೆಚ್ಚರಿಕೆ ಕ್ರಮವಾಗಿ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸುವುದು, ಕರ್ಫ್ಯೂೂ ವಿಧಿಸುವುದು, ಕಮ್ಯುನಿಕೇಶನ್ ಸಿಸ್ಟಮ್‌ನ್ನು ಅಸ್ತವ್ಯಸ್ತಗೊಳಿಸುವುದು ಅನಿವಾರ್ಯ. ಈ ಕ್ರಮ ಕೈಗೊಳ್ಳದೇ ಸಂಸತ್ತಿಿನಲ್ಲಿ 370ನೇ ವಿಧಿ ರದ್ದು ಮಾಡುವ ಪ್ರಸ್ತಾಾವವನ್ನು ಮಂಡಿಸಿದ್ದರೆ, ಉಮರ್ ಅಬ್ದುಲ್ಲಾಾ, ಅವನ ಅಪ್ಪ ಫಾರೂಖ್ ಅಬ್ದುಲ್ಲಾಾ, ಮೆಹಬೂಬಾ ಮುಫ್ತಿಿ ಮುಂತಾದವರು ಬೆಂಕಿ ಹಚ್ಚುವ ಕೆಲಸಕ್ಕೆೆ ಮುಂದಾಗದೇ ಇರುತ್ತಿಿದ್ದರಾ? ಇವರೇ ಹಿಂಸಾಚಾರ, ಗಲಭೆ, ದೊಂಬಿಗೆ ಕುಮ್ಮಕ್ಕು ನೀಡಿ, ಕಣಿವೆ ರಾಜ್ಯದಲ್ಲಿ ಹಿಂಸಾಚಾರ ತಾಂಡವವಾಡುವಂತೆ ಮಾಡುತ್ತಿಿದ್ದರು. ಇಡೀ ಕಾಶ್ಮೀರ ಕಣಿವೆ ಹೊತ್ತಿಿ ಉರಿದು ಹೋಗುತ್ತಿಿತ್ತು.

ಆದರೆ ಅಂಥ ಯಾವ ಉಪಟಳ, ಉಪದ್ವ್ಯಾಾಪಗಳಿಗೆ ಅವಕಾಶವೇ ಇಲ್ಲದಂತೆ ಕಾರ್ಯಾಚರಣೆ ನಡೆಸಿದ್ದು. ತುರ್ತುಸ್ಥಿಿತಿಯಲ್ಲೂ ಇಂಥ ಪರಿಸ್ಥಿಿತಿ ಇರಲಿಲ್ಲ ಎಂದು ಕೆಲವು ಬುದ್ಧಿಿಜೀವಿಗಳು ಲಬೋಲಬೋ ಹುಯ್ದುಕೊಳ್ಳುತ್ತಿಿರುವುದು ಸಹಜವೇ ಆಗಿದೆ. ಮೋದಿ-ಶಾ ಇಂಥ ಧೀರೋದಾತ್ತ ಕೆಲಸಕ್ಕೆೆ ಮುಂದಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಕಾಂಗ್ರೆೆಸ್ ನಾಯಕರು, ಸರಕಾರದ ನಡೆಯನ್ನು ಬೆಂಬಲಿಸಿದರೆ, ತಮ್ಮ ಸೆಕ್ಯುಲರ್ ಇಮೇಜ್‌ಗೆ ಧಕ್ಕೆೆ ಬರಬಹುದು ಎಂಬ ಚಿಂತೆಯೇ ನಡುವೆಯೇ, ಒಲ್ಲದ ಮನಸ್ಸಿಿನಿಂದ ವಿರೋಧಿಸಿದರು. ಗುಲಾಂ ನಬಿ ಆಜಾದ್ ಹೊರತಾಗಿ, ಉಳಿದವರ ವಿರೋಧದಲ್ಲಿ ದಮ್ಮೇ ಇರಲಿಲ್ಲ. ಗುಲಾಂ ನಬಿ ಆಜಾದ್ ಅವರಿಗೆ ಸ್ಥಳೀಯ ರಾಜಕಾರಣದಿಂದಾಗಿ ವಿರೋಧಿಸಲೇಬೇಕಾದ ಅನಿವಾರ್ಯ.

ಕೆಲವು ಕಾಂಗ್ರೆೆಸ್ ಮುಖಂಡರು ಅದೆಂಥ ಫಜೀತಿಯಲ್ಲಿ ಸಿಲುಕಿದ್ದರೆಂದರೆ, 370ನೇ ವಿಧಿ ರದ್ದುಗೊಳಿಸುವುದನ್ನು ವಿರೋಧಿಸಿದರೆ, ಸಾರ್ವಜನಿಕರಿಂದ ಗಂಭೀರ ಪ್ರತಿರೋಧ ಎದುರಿಸಬೇಕಾಗಬಹುದೆಂದು ಹೆದರಿದ್ದರು. ಅದಕ್ಕಾಾಗಿ ರಾಜ್ಯಸಭೆಯಲ್ಲಿ ಕಾಂಗ್ರೆೆಸ್‌ನ ಮುಖ್ಯಸಚೇತಕ ಭುಬನೇಶ್ವರ ಕಲಿತಾ ಅವರು ತಮ್ಮ ಸದಸ್ಯತ್ವಕ್ಕೇ ರಾಜೀನಾಮೆ ಘೋಷಿಸಿದರು. ಈ ಪ್ರಸ್ತಾಾವನೆಗೆ ಸಮಾಜವಾದಿ ಪಕ್ಷವೂ ವಿರೋಧ ವ್ಯಕ್ತಪಡಿಸಿದ್ದರಿಂದ ಆ ಪಕ್ಷದ ಇಬ್ಬರು ರಾಜ್ಯಸಭಾ ಸದಸ್ಯರಾದ ಸಂಜಯ ಸೇಠ್ ಹಾಗೂ ಸುರೀಂದರ ನಾಗರ್ ಕೂಡ ಸದಸ್ಯತ್ವಕ್ಕೆೆ ರಾಜೀನಾಮೆ ನೀಡಿದರು.

ರಾಷ್ಟ್ರದ ಮೂಡ್ ಹೇಗಿದೆ, ದೇಶದ ಜನತೆ ಏನೆಂದು ಯೋಚಿಸುತ್ತಿಿದ್ದಾಾರೆ ಎಂಬುದನ್ನು ಸಹ ಕಾಂಗ್ರೆೆಸ್ ನಾಯಕರು ಅರಿಯದಾದರು. ಇದು ಅವರ ಬೌದ್ಧಿಿಕ ದಿವಾಳಿತನದ ಪ್ರತೀಕ.

ಯೋಚಿಸಿ, ಇಂದು ಪಾಕಿಸ್ತಾಾನವೂ ಭಾರತ ಸರಕಾರದ ಕ್ರಮವನ್ನು ವಿರೋಧಿಸುತ್ತಿಿದೆ. ಕಾಂಗ್ರೆೆಸ್ ಸಹ ಇದನ್ನು ವಿರೋಧಿಸುತ್ತದೆ. ‘ಕಾಶ್ಮೀರ ಭಾರತದ ಆಂತರಿಕ ವಿಷಯವಲ್ಲ. ಭಾರತ, ವಿಶ್ವಸಂಸ್ಥೆೆಯ ಭದ್ರತಾ ಮಂಡಳಿಯ ನಿಬಂಧನೆಗಳನ್ನು ಉಲ್ಲಂಸಿದೆ’ ಎಂದು ಪಾಕಿಸ್ತಾಾನದ ಅಧ್ಯಕ್ಷರು ಹೇಳಿದ್ದಾಾರೆ. ಇದೇ ರೀತಿಯ ಅಭಿಪ್ರಾಾಯವನ್ನು ಕಾಂಗ್ರೆೆಸ್ ಸಹ ವ್ಯಕ್ತಪಡಿಸಿದೆ. ಲೋಕಸಭೆಯಲ್ಲಿ ಕಾಂಗ್ರೆೆಸ್ ನಾಯಕ ಅಧೀರ ರಂಜನ್ ಚೌಧರಿ ‘ಕಾಶ್ಮೀರ ವಿಷಯ ಕೇವಲ ಭಾರತದ ಆಂತರಿಕ ವಿಷಯವಲ್ಲ, ವಿಶ್ವಸಂಸ್ಥೆೆಗೆ ಭಾರತ ಬರೆದುಕೊಟ್ಟ ಮುಚ್ಚಳಿಕೆಯ ಉಲ್ಲಂಘನೆ’ ಎಂಬುದಾಗಿ ಹೇಳಿದ್ದಾಾರೆ. ಅಂದರೆ 370ನೇ ವಿಧಿಗೆ ಸಂಬಂಧಿಸಿದಂತೆ ಪಾಕಿಸ್ತಾಾನ ಹಾಗೂ ಕಾಂಗ್ರೆೆಸ್ ನಿಲುವಿನಲ್ಲಿ ಸ್ವಲ್ಪವೂ ಬದಲಾವಣೆ ಇಲ್ಲ.

ಅಂದರೆ ಕಾಂಗ್ರೆೆಸ್ ಪಕ್ಷ ಪಾಕಿಸ್ತಾಾನದ ಹಿತಾಸಕ್ತಿಿಗಳನ್ನು ರಕ್ಷಿಿಸಲು ಹೊರಟಿದೆಯಾ? ಕಾಂಗ್ರೆೆಸ್ ಪಕ್ಷ ರಾಷ್ಟ್ರವಿರೋಧಿಗಳ ಬೆಂಬಲಕ್ಕೆೆ ನಿಂತಿದೆಯಾ? ಕಾಂಗ್ರೆೆಸ್ ಪಕ್ಷ ಪಾಕಿಸ್ತಾಾನದ ಬೆಂಬಲಕ್ಕೆೆ ಕಟಿಬದ್ಧವಾಗಿದೆಯಾ? ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾಾನದ ಮಾತುಗಳನ್ನೇ ಹೇಳುತ್ತಿಿರುವುದೇಕೆ? ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ತಾವು ಪಾಕಿಸ್ತಾಾನವನ್ನು ಬೆಂಬಲಿಸುತ್ತಿಿದ್ದೇವೆ ಎಂಬ ಕನಿಷ್ಠ ಪ್ರಜ್ಞೆೆಯೂ ಇಲ್ಲದಾಯಿತಾ? ಕಾಂಗ್ರೆೆಸ್‌ನ ನೈತಿಕ, ಬೌದ್ಧಿಿಕ ದಿವಾಳಿತನಕ್ಕೆೆ ಇದಕ್ಕಿಿಂತ ತಾಜಾ ನಿದರ್ಶನ ಇನ್ನೊೊಂದಿಲ್ಲ.

370ನೇ ವಿಧಿ ರದ್ದುಗೊಳಿಸುವ ಪ್ರಸ್ತಾಾವವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಮೂಲಕ ಹಠಾತ್ತನೇ ಮಂಡಿಸಿ, ಸದನದ ಒಪ್ಪಿಿಗೆ ಪಡೆಯುವ ತರಾತುರಿಯಾದರೂ ಯಾಕೆ, ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕಿತ್ತು, ರಾಷ್ಟ್ರವ್ಯಾಾಪಿ ಸಂವಾದವಾಗಬೇಕಿತ್ತು, ಅದು ಬಿಟ್ಟು ಏಕಾಏಕಿ ಸಂವಿಧಾನದ 370ನೇ ವಿಧಿಯನ್ನು ಬರಖಾಸ್ತುಗೊಳಿಸಲು ಹೊರಟಿರುವುದು ಸರಿ ಅಲ್ಲ ಎಂದು ಕಾಂಗ್ರೆೆಸ್ ನಾಯಕರು ಹೇಳಿದ್ದಾಾರೆ.

ಇದೇ ಪ್ರಶ್ನೆೆಯನ್ನು ಕೆಲವು ಬುದ್ಧಿಿಜೀವಿಗಳೂ ಕೇಳಿದ್ದಾಾರೆ.
ಸಂವಿಧಾನದ 370ನೇ ವಿಧಿ, ಕಾಶ್ಮೀರಕ್ಕೆೆ ವಿಶೇಷ ಸ್ಥಾಾನಮಾನ ನೀಡಿರುವ ಬಗ್ಗೆೆ ಕಳೆದ ಏಳು ದಶಕಗಳಿಂದ ರಾಷ್ಟ್ರವ್ಯಾಾಪಿ ಚರ್ಚೆಯಾಗಿದೆ. ಸಂಸತ್ತಿಿನಲ್ಲಿ ಸುಮಾರು ನಲವತ್ತು ಸಲ ಸುದೀರ್ಘವಾಗಿ ಚರ್ಚೆಯಾಗಿದೆ. ಆಯಾ ಕಾಲದಲ್ಲಿದ್ದ ಮುತ್ಸದ್ದಿಗಳು ಈ ‘ಕರಾಳ ವಿಧಿ’ ಬಗ್ಗೆೆ ಮಾತಾಡಿದ್ದಾಾರೆ. ಆ ಸಂದರ್ಭಗಳಲ್ಲಿ ಅಧಿಕಾರದಲ್ಲಿ ಇದ್ದ ರಾಜಕೀಯ ಪಕ್ಷಗಳು ಕ್ರಮ ಕೈಗೊಳ್ಳುವ ಎದೆಗಾರಿಕೆ ತೋರಿಸದೇ ಹೇಡಿತನ, ಬೇಜವಾಬ್ದಾಾರಿತನ ಮೆರೆದಿವೆ. ಬಿಜೆಪಿಯಂತೂ ಈ ವಿಷಯದ ಬಗ್ಗೆೆ (ಹಿಂದಿನ ಜನಸಂಘ ಕಾಲದಿಂದ) ಕಳೆದ 68 ವರ್ಷಗಳಿಂದ ತನ್ನ ವಿರೋಧವನ್ನು ಪ್ರಕಟಿಸುತ್ತಲೇ ಬಂದಿದೆ. ವಾಜಪೇಯಿ ಅವರಂತೂ ನೆಹರು ಅವರ ಸಮ್ಮುಖದಲ್ಲೇ ಸದನದಲ್ಲಿ ಎರಡು ಗಂಟೆಗಳ ಕಾಲ ಇದೇ ವಿಷಯದ ಬಗ್ಗೆೆ ಮಾತಾಡಿದ್ದು ಮೇಲ್ಪಂಕ್ತಿಿಯಾಗಿದೆ.

ಇನ್ನು ಚರ್ಚೆ ಮಾಡುವುದೇನಿದೆ ಬದನೆಕಾಯಿ? ‘ಭತ್ತವನ್ನು ಸುಲಿದರೆ ಅಕ್ಕಿಿ’ ಎಂಬುದು ಎಲ್ಲರಿಗೂ ಗೊತ್ತಿಿರುವಂಥದ್ದೇ. ಗೊತ್ತಿಿರುವ ವಿಷಯವನ್ನು ಎಷ್ಟು ಸಲ ಅಂತ ಹೊಳ್ಳಾಾಮಳ್ಳಾಾ ಚರ್ಚಿಸುವುದು? ಅದಕ್ಕೂ ಮೇಲಾಗಿ, ತಾನು ಅಧಿಕಾರಕ್ಕೆೆ ಬಂದರೆ 370ನೇ ವಿಧಿಯನ್ನು ರದ್ದುಪಡಿಸುತ್ತೇನೆಂದು ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿತ್ತಲ್ಲ? ಅದನ್ನು ಅನುಮೋದಿಸಿಯೇ ದೇಶದ ಜನತೆ ಬಿಜೆಪಿಗೆ 303 ಸ್ಥಾಾನಗಳನ್ನು ನೀಡಿದೆ ತಾನೆ? ಹೀಗಿರುವಾಗ ದೇಶದ ಜನರಿಗೆ ಗೊತ್ತಿಿರುವ ವಿಷಯದ ಬಗ್ಗೆೆ ಪದೇಪದೆ ಚರ್ಚೆ ಮಾಡಿ, ಗಲಾಟೆ ಮಾಡಿ, ಗಂಟಲು ಹರಿದುಕೊಂಡು, ಕಾಲಕ್ಷೇಪ ಮಾಡುವುದು ಏಕೆ? ಆ ವಿಧಿ ಸಂವಿಧಾನ ವಿರೋಧಿ, ಜನ ವಿರೋಧಿ, ದೇಶ ವಿರೋಧಿ ಎಂಬುದು ಗೊತ್ತಿಿದೆ.

ಹೀಗಿದ್ದ ಮೇಲೆ ಅದನ್ನು ರದ್ದುಪಡಿಸಲು ತೊಂದರೆ ಏನು? ಹಾಗೆ ನೋಡಿದರೆ, ಇಷ್ಟು ದಿನ ಯಾಕೆ ರದ್ದುಪಡಿಸಿಲ್ಲ ಎಂದು ಪ್ರಶ್ನಿಿಸಬೇಕಿತ್ತು. ಅದರ ಬದಲು ಬರೀ ಚರ್ಚೆ ಮಾಡುವುದರಲ್ಲೇ ಕಾಲಹರಣ ಮಾಡುವುದು ಎಷ್ಟು ಸರಿ? ಸರಿ, ಚರ್ಚೆ ಮಾಡೋಣ, ಏನಂತ ವಾದ ಮಾಡ್ತೀರ? 370ನೇ ವಿಧಿಯಿಂದ ಕಾಶ್ಮೀರ ಉದ್ಧಾಾರವಾಗಿದೆ ಎಂದು ಹೇಳ್ತೀರಾ? ಕಾಶ್ಮೀರಿ ಜನತೆ ಬದುಕು ಉತ್ತಮವಾಗಿದೆಯೆಂದು ಹೇಳ್ತೀರಾ? ಕಾಶ್ಮೀರ ಭೂರಮೆಯ ಮುಕುಟವಾಗಿದೆಯೆಂದು ಬಣ್ಣಿಿಸುತ್ತೀರಾ?
ಕಳೆದ ಏಳು ದಶಕಗಳಲ್ಲಿ ಕಾಶ್ಮೀರ ಪಾಕಿಸ್ತಾಾನದ ಅಂಗಳವಾಗಿದೆ. ಉಗ್ರಗಾಮಿಗಳ ವಿಹಾರ ತಾಣವಾಗಿದೆ.

ಉಗ್ರರನ್ನು ಉತ್ಪಾಾದಿಸುವ ಕಾರ್ಖಾನೆಯಾಗಿದೆ. ಪ್ರತಿದಿನ ಹತ್ತಾಾರು ಜನ ಹಿಂಸಾಚಾರದಲ್ಲಿ ಸಾಯುತ್ತಿಿದ್ದಾಾರೆ. ಭಾರತದಲ್ಲಿದ್ದೂ ಪ್ರತ್ಯೇಕವಾಗಿದೆ. ಭಾರತಕ್ಕಿಿಂತ ಪಾಕಿಸ್ತಾಾನಕ್ಕೆೆ ಹೆಚ್ಚು ಆಪ್ತವಾಗಿದೆ. ವಿಶೇಷ ಸ್ಥಾಾನಮಾನ ಅಧಿಕಾರ ಸ್ವೇಚ್ಛಾಾಚಾರಕ್ಕೆೆ ದಾರಿ ಮಾಡಿಕೊಟ್ಟಂತಾಗಿದೆ. ಅಧಿಕಾರದಲ್ಲಿದ್ದವರು ಆಡಿದ್ದೇ ಆಟ. ಹೇಳುವವರು ಕೇಳುವವರೂ ಯಾರೂ ಇಲ್ಲದಂತಾಗಿದೆ.

ರಾಜಕೀಯ ಪಕ್ಷಗಳು ಪ್ರತ್ಯೇಕತಾವಾದಿಗಳೊಂದಿಗೆ ಶಾಮೀಲಾಗಿದ್ದಾಾರೆ. ಅವರಿಬ್ಬರೂ ಸೇರಿ ಕಾಶ್ಮೀರವನ್ನು ಕೊಳ್ಳೆೆ ಹೊಡೆಯುತ್ತಿಿದ್ದಾಾರೆ. ಅಲ್ಲಿ ತಯಾರಿಸಿದ ಉಗ್ರರನ್ನು ದೇಶದ ಇತರ ಭಾಗಗಳಿಗೂ ಕಳಿಸಿ ಅಭದ್ರತೆ, ಭಯ, ಆತಂಕ ಮೂಡಿಸಲಾಗುತ್ತಿಿದೆ. ಈ ಎಲ್ಲಾಾ ಸಂಗತಿಗಳು ಜಗತ್ತಿಿಗೆ ಗೊತ್ತಿಿರುವಂಥದ್ದು, ಹೀಗಿರುವಾಗ ಚರ್ಚೆ ಮಾಡುವುದೇನಿದೆ?
ರಾಮಚಂದ್ರ ಗುಹಾ ಎಂಬ ಇತಿಹಾಸಕಾರನ ಬಗ್ಗೆೆ ನಿಮಗೆ ಗೊತ್ತಿಿರಬಹುದು, 370ನೇ ವಿಧಿ ರದ್ದು ಮಾಡುವ ಪ್ರಸ್ತಾಾವನೆ ಬಗ್ಗೆೆ ಈ ಗುಹಾನಿಗೆ ಚೇಳು ಕಡಿದಂತಾಗಿದೆ. ಇತಿಹಾಸಕಾರನಾದವನು ಒಂದು ಸಿದ್ಧಾಾಂತದ ಪಕ್ಷಪಾತಿ ಆಗಿರಬಾರದು ಎಂಬ ಕನಿಷ್ಠ ಸಾಕ್ಷಿಿಪ್ರಜ್ಞೆೆಯೂ ಈತನಿಗೆ ಇಲ್ಲ.

ಈತ ನೆಹರು ಭಕ್ತ. ನೆಹರು ಮಾಡಿದ್ದಕ್ಕೆೆ ಯಾರಾದರೂ ತಕರಾರು ತೆಗೆದರೆ, ಈತನಿಗೆ ಮೈತುಂಬಾ ಆಕ್ರೋೋಶ. ಕಾಶ್ಮೀರದಲ್ಲಿ ಕರ್ಫ್ಯೂೂ ವಿಧಿಸಿದ್ದಕ್ಕೆೆ ಈತನಿಗೆ ಕೋಪ. ‘ಇಂದು ಕಾಶ್ಮೀರ, ನಾಳೆ ಕರ್ನಾಟಕ. ಇದು ಪ್ರಜಾತಂತ್ರವಲ್ಲ, ಸರ್ವಾಧಿಕಾರ. ಹುಚ್ಚರ ದರಬಾರು. ಅಭದ್ರತೆಯಿಂದ ನರಳುವವರು ಸಂವಾದಕ್ಕೆೆ ಸಿದ್ಧರಿರುವುದಿಲ್ಲ. 370ನೇ ವಿಧಿ ರದ್ದತಿಗೆ ಅಂಕಿತ ಹಾಕಿದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ನೋಡಿದರೆ, ತುರ್ತುಸ್ಥಿಿತಿಗೆ ಒಪ್ಪಿಿಗೆ ನೀಡಿದ ಫಕ್ರುದ್ದೀನ್ ಅಲಿ ಅಹಮದ್ ಅವರ ನೆನಪಾಗುತ್ತದೆ’ ಎಂದು ಈ ಗುಹಾ ಟ್ವೀಟ್ ಮಾಡಿದ್ದಾಾನೆ.

ಇವನನ್ನು ಕೆಲಸವಿಲ್ಲದ ಇತಿಹಾಸಕಾರ ಎನ್ನುವುದಕ್ಕಿಿಂತ ಕಾಂಗ್ರೆೆಸ್ ಚೇಲಾ ಎಂದು ಕರೆದರೆ, ಸ್ವಲ್ಪ ಗೌರವವಾದರೂ ಬರುತ್ತಿಿತ್ತು. ತನ್ನನ್ನು ಇತಿಹಾಸಕಾರ ಎಂದು ಕರೆದುಕೊಳ್ಳುವವನು ಆಡುವ ಮಾತುಗಳಾ ಇವು? ‘ಕಾಶ್ಮೀರ ಸಮಸ್ಯೆೆಗೆ ನೆಹರು ನೀಡಿದ ಅಮೂಲ್ಯ ಕೊಡುಗೆಗಳು’ ಎಂಬ ಪುಸ್ತಕವನ್ನು ಬರೆದಿದ್ದರೆ, ಈ ಗುಹಾನಿಗೆ ಸ್ವಲ್ಪ ಮರ್ಯಾಾದೆಯಾದರೂ ಬರುತ್ತಿಿತ್ತೇನೋ? ಕಳೆದ ಎಪ್ಪತ್ತು ವರ್ಷಗಳಲ್ಲಿ ಕಾಶ್ಮೀರ ಸರಿಪಡಿಸಲು ಆಗದಷ್ಟು ಹಾಳಾಗಿದೆ ಎಂಬ ಸಾಮಾನ್ಯ ಸಂಗತಿಯೂ ಈ ಮಹಾನ್ ಇತಿಹಾಸಕಾರನಿಗೆ ಗೊತ್ತಾಾಗದೇ ಹೋಯಿತಾ? ಅಷ್ಟಕ್ಕೂ ಈ ಕಾಶ್ಮೀರ ಸಮಸ್ಯೆೆ ಎಂಬುದು ತನ್ನ ಮುದ್ದು ನೆಹರು ಕೊಡುಗೆ ಎಂಬುದು ಗುಹಾನಿಗೆ ಗೊತ್ತಿಿಲ್ಲವಾ? ಅಂದು ನೆಹರು ಗಂಡಸುತನ ಪ್ರದರ್ಶಿಸಿದ್ದಿದ್ದರೆ, ಈ ಸಮಸ್ಯೆೆಯೇ ಉದ್ಭವಿಸುತ್ತಿಿರಲಿಲ್ಲ. ಎಪ್ಪತ್ತು ವರ್ಷಗಳ ನಂತರವೂ ನೆಹರುಗೆ ಶಾಪ ಹಾಕುವ ಪ್ರಮೇಯವೇ ಬರುತ್ತಿಿರಲಿಲ್ಲ. ಕಾಶ್ಮೀರ ಸಮಸ್ಯೆೆಯನ್ನು ಬಗೆಹರಿಸಲಾಗದಷ್ಟು ಕಗ್ಗಂಟು ಮಾಡಿದವರೇ ನೆಹರು.

ಈಗ ಅದನ್ನು ಸರಿಪಡಿಸುವ ನಿಟ್ಟಿಿನಲ್ಲಿ ಮೋದಿ ಹೆಜ್ಜೆೆ ಇಟ್ಟರೆ ಗುಹಾನಿಗೆ ಮೈತುಂಬಾ ತುರಿಕೆ, ಕಿರಿಕಿರಿ. ಅದಕ್ಕೇ ಆತ ಕಿಡಿಕಿಡಿ. ಆದರೆ ತಾನು ಬೆತ್ತಲಾಗುತ್ತಿಿದ್ದೇನೆ ಎಂಬ ತಿಳಿವಳಿಕೆಯೂ ಅವನಿಗೆ ಆಗದಿರುವುದು ದುರ್ದೈವ.
ಈ ಕಮ್ಯುನಿಸ್ಟರಿಗೆ ಏನಾಗಿದೆಯೋ ಗೊತ್ತಿಿಲ್ಲ. ಅವರೂ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿದ್ದಾಾರೆ. ದುರ್ದೈವ ಅಂದರೆ, ಇವರು 370ನೇ ವಿಧಿ ವಿರುದ್ಧ ಮಾತಾಡಿದ್ದು ಪಾರ್ಲಿಮೆಂಟ್ ಕಡತಗಳಲ್ಲಿ ಇದೆ. ಈಗಂತೂ ಅವರು ಅಸ್ತಿಿತ್ವ ಕಳೆದುಕೊಂಡ ಡೈನೋಸಾರಸ್‌ನಂತಾಗಿದ್ದಾಾರೆ.

ಅವರು ಹೊಗಳಲಿ, ವಿರೋಧಿಸಲಿ ಅವರ ಮಾತಿಗೆ ಕಿಮ್ಮತ್ತಿಿಲ್ಲ. ಬಿಜೆಪಿಯನ್ನು ತೆಗಳುವ ಕಡು ವೈರಿಗಳಿಗೂ 370ನೇ ‘ವಿಧಿ’ವಶವಾಗಿರುವುದು ಸಂತಸ ತಂದಿದೆ. ಆದರೆ ಬಹಿರಂಗವಾಗಿ ಹೇಳಲು ಗಂಟಲು ಕಟ್ಟುತ್ತದೆ. ಅಷ್ಟಾಾಗಿಯೂ ಕೇಜ್ರಿಿವಾಲ, ಚಂದ್ರಬಾಬು ನಾಯ್ಡು ಬಹಿರಂಗವಾಗಿ ಸ್ವಾಾಗತಿಸಿದ್ದಾಾರೆಂದರೆ ಅವರಿಗೆ ಎಷ್ಟು ಖುಷಿಯಾಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಕಾಶ್ಮೀರ ಹಾಳಾಗಲಿ, ಭಾರತಕ್ಕೆೆ ತೊಂದರೆಯಾಗಲಿ ಎಂಬ ಆಶಯ ಇರುವವರು ಮಾತ್ರ 370ನೇ ವಿಧಿ ಪರವಾಗಿ ಮಾತಾಡಬಹುದು. ಬುದ್ಧಿಿ ಇರುವವರು, ದೇಶದ ಬಗ್ಗೆೆ ಕಾಳಜಿ ಇರುವವರ್ಯಾಾರೂ ಅದರ ಪರವಾಗಿ ನಿಲ್ಲಲು ಸಾಧ್ಯವೇ ಇಲ್ಲ.

ಅಂದಹಾಗೆ, ನೀವು ಎಲ್ಲಿದ್ದೀರಿ ಎಂಬುದನ್ನು ನೋಡಿಕೊಳ್ಳಿಿ. ಮೋದಿ ವಿರೋಧಿಸುವ ಭರದಲ್ಲಿ ಭಾರತಕ್ಕೆೆ ವಿರೋಧಿಗಳಾಗಬೇಡಿ, ಅಬ್ದುಲ್ಲಾಾ, ಮುಫ್ತಿಿಗಳಂತೆ!

4 thoughts on “ಕಾಶ್ಮೀರ ವಿಷಯದಲ್ಲಿ ಕಾಂಗ್ರೆಸ್ ಸದಾ ಪಾಕಿಸ್ತಾನ ಪರ, ಇದು ಕಾಂಗ್ರೆಸ್ ದೇಶಭಕ್ತಿ!

Leave a Reply

Your email address will not be published. Required fields are marked *