Tuesday, 17th September 2019

ಕತ್ತು ಹಿಸುಕಿ ಪತ್ನಿಯ ಕೊಲೆ: ಪತಿ, ಸಹೋದರನ ಬಂಧನ

ಬೆಂಗಳೂರು: ಇಬ್ಬರ ಮಧ್ಯೆೆ ದಾಂಪತ್ಯ ಜೀವನ ಹೊಂದಾಣಿಕೆ ಆಗದಿದ್ದಕ್ಕೆೆ ಕೋಪಕೊಂಡ ಪತಿ, ತನ್ನ ಪತ್ನಿಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ಕೊತ್ತನೂರಿನ ದುರ್ಗಾ ಪರಮೇಶ್ವರಿ ಲೇಔಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
21 ವರ್ಷದ ಶಿಲ್ಪಾಾ ಮೃತ ದುರ್ದೈವಿ. ಸೋಮವಾರದಿಂದ ಶಿಲ್ಪಾಾ ಕಾಣಿಸದಿರುವುದರಿಂದ ಆಕೆಯ ಕುಟುಂಬಸ್ಥರು ಪತಿ ಕಲ್ಲೇಶನನ್ನು ಪದೇ ಪದೆ ಪ್ರಶ್ನಿಿಸುತ್ತಿಿದ್ದ ಹಿನ್ನೆೆಲೆಯಲ್ಲಿ ಶನಿವಾರ ಆತ ಪತ್ನಿಿ ನಾಪತ್ತೆೆಯಾಗಿರುವುದರ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆೆ ಪಡೆದು ವಿಚಾರಣೆ ನಡೆಸಿದಾಗ, ದಾಂಪತ್ಯ ಜೀವನಕ್ಕೆೆ ಒಂದು ವರ್ಷವಾಗಿದ್ದು, ಇಬ್ಬರ ಮಧ್ಯೆೆ ಹೊಂದಾಣಿಕೆ ಇರಲಿಲ್ಲ. ಆಗ್ಟ್ 12ರಂದು ಇಬ್ಬರ ಮಧ್ಯೆೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿದ್ದು. ರಾತ್ರಿಿ 2 ಗಂಟೆಯ ಸುಮಾರಿಗೆ ಶಿಲ್ಪಾಾಳ ಕತ್ತು ಹಿಸುಕಿ ದಿಂಬಿನಿಂದ ಉಸಿರುಗಟ್ಟಿಿಸಿ ಆಕೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಿಕೊಂಡಿದ್ದಾನೆ.
ನಂತರ ಸಹೋದರ ಕೃಷ್ಣಪ್ಪನ ಸಹಾಯದಿಂದ ಬೈಕ್ ಮೇಲೆ ಶವವನ್ನು ನಿರ್ಜನ ಪ್ರದೇಶಕ್ಕೆೆ ಸಾಗಿಸಿ ಎಸೆದಿರುವುದಾಗಿ ಆರೋಪಿ ಒಪ್ಪಿಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಕಲ್ಲೇಶ್ ಹಾಗೂ ಆತನ ಸಹೋದರ ಕೃಷ್ಣಪ್ಪನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *