Tuesday, 21st March 2023

ದಡಾರ ಪ್ರಕರಣ: ಎಂಟು ಮಕ್ಕಳಲ್ಲಿ ಸೋಂಕು ಪತ್ತೆ

ಲ್ಲಿಕೋಟೆ: ಮಲಪ್ಪುರಂ ನಂತರ ಉತ್ತರ ಕೇರಳದ ನೆರೆಯ ಕಲ್ಲಿಕೋಟೆ ಜಿಲ್ಲೆಯಲ್ಲಿ ಹೊಸ ದಡಾರ ಪ್ರಕರಣಗಳು ವರದಿ ಯಾಗಿವೆ.

ನಾದಪುರಂನ ಕುಟ್ಟಿಯಾಡಿ ಹೆಲ್ತ್ ಬ್ಲಾಕ್‌ನಲ್ಲಿ ಎಂಟು ಮಕ್ಕಳು ವೈರಲ್ ಸೋಂಕಿನಿಂದ ಬಳಲುತ್ತಿರುವುದು ಕಂಡುಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ದಡಾರ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವ ದಲ್ಲಿ ತುರ್ತು ಕಾರ್ಯಪಡೆ ಸಭೆ ನಡೆಸಿತು.

ಸಭೆಯಲ್ಲಿ ಲಸಿಕೆಯನ್ನು ಪಡೆಯದಿರುವ ಮಕ್ಕಳಿಗೆ ಆದಷ್ಟು ಬೇಗ ಅದನ್ನು ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಎನ್ ತೇಜ್ ಲೋಹಿತ್ ರೆಡ್ಡಿ ತಿಳಿಸಿದ್ದಾರೆ.

ಲಸಿಕೆ ತೆಗೆದುಕೊಳ್ಳದ ಮಕ್ಕಳಲ್ಲಿ ಈ ರೋಗವು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕುವಂತೆ ಸೂಚಿಸಲಾಗಿದೆ ಎಂದರು. ನೆರೆಯ ಮಲಪ್ಪುರಂ ಜಿಲ್ಲೆಯಲ್ಲಿ ಇತ್ತೀಚೆಗೆ 460 ದಡಾರ ಪ್ರಕರಣಗಳು ವರದಿಯಾಗಿವೆ.

Read E-Paper click here

error: Content is protected !!