Monday, 9th December 2019

ಖದರ್ ತೋರಲು ಬರುತ್ತಿದ್ದಾನೆ ಕೆಂಪೇಗೌಡ !

ಖದರ್ ತೋರಲು ಬರುತ್ತಿದ್ದಾನೆ
ಕೆಂಪೇಗೌಡ !

ಕೆಂಪೇಗೌಡ ಆ ಹೆಸರಿನಲ್ಲೇ ಒಂದು ಖದರ್ ಇದೆ. ಪಂಚ್ ಇದೆ. ಮಮತೆಯ ಪ್ರತಿರೂಪವೂ ಇದೆ. ಈ ಹೆಸರಿನಲ್ಲೇ ತೆರೆಗೆ ಬಂದ ಕಿಚ್ಚ ಸುದೀಪ್ ಅಭಿನಯದ `ಕೆಂಪೇಗೌಡ’ ಚಿತ್ರ ಕನ್ನಡ ಚಿತ್ರರಂಗದಲ್ಲೇ ಹೊಸ ಮೈಲುಗಲ್ಲಾಯಿತು. ಈಗ `ಕೆಂಪೇಗೌಡ 2′ ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ನಟ ಖಡಕ್ ಲುಕ್‍ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಹೌದು. ಹಿಂದಿನ `ಕೆಂಪೇಗೌಡ’ ಚಿತ್ರಕ್ಕೂ `ಕೆಂಪೇಗೌಡ 2` ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಈ ಚಿತ್ರದ ಕಥೆಯೇ ಬೇರೆ. ಈ ಹಿಂದೆ ಯಾವ ಚಿತ್ರವೂ ಹೊಂದಿರದ ಕಥೆ, ಅಂಶಗಳು ಚಿತ್ರದಲ್ಲಿದೆಯಂತೆ. ನೈಜತೆಯ ರೂಪದಂತೆ ಮೂಡಿಬಂದಿರುವ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ತೆರೆಗೆ ಬರುತ್ತಿದೆಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿ ಸಂತಸಗೊಂಡಿದ್ದಾರೆ. ಕೋಮಲ್‍ರ `ಕೆಂಪೇಗೌಡ’ನ ಲುಕ್‍ಗೆ ಫಿದಾ ಆಗಿದ್ದಾರೆ. ಹಾಡುಗಳಂತೂ ಸಂಗೀತ ಮನಸೂರೆಗೊಳ್ಳುತ್ತಿವೆ. ಸಿನಿಪ್ರಿಯರಿಗೆ ಬೇಕಾದ, ಮನರಂಜನೆಗೆ ಪೂರಕವಾದ ಎಲ್ಲಾ ಅಂಶಗಳು ಚಿತ್ರದಲ್ಲಿವೆ. ಈ ಚಿತ್ರ ಕೋಮಲ್‍ಗೆ ಮತ್ತೊಂದು ಬ್ರೇಕ್ ನೀಡುವುದರಲ್ಲಿ ಅನುಮಾನವೇ ಇಲ್ಲ.

 

ಖಾಕಿಖದರ್‍ನಲ್ಲಿ ಕೋಮಲ್ !
ಇಷ್ಟು ದಿನ ಹಾಸ್ಯ ಸನ್ನಿವೇಶಗಳಲ್ಲಿ, ನಾಯಕ ಅಭಿನಯಿಸಿ ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ಕೋಮಲ್ ಈಗ ಖಾಕಿ ಖದರ್‍ನಲ್ಲಿ ತೆರೆಗೆ ಬರುತ್ತಿದ್ದಾರೆ. ಸಮಾಜಕ್ಕೆ ಕಂಟಕವಾಗಿರುವ, ಸಮಾಜಘಾತುಕರನ್ನು ಮಟ್ಟ ಹಾಕುವ, ದಿಟ್ಟ ಪೆÇಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಪ್ರಸ್ತುತ ದಿನಗಳಲ್ಲಿ ನಡೆಯುವ ಘಟನಾವಳಿಗಳನ್ನು ಚಿತ್ರ ಎನ್ನಲಾಗುತ್ತಿದೆ. ಹಾಗಾಗಿ ಚಿತ್ರ ನೈಜತೆಯಿಂದಲೇ ಕೂಡಿದೆ ಎಂಬ ಪ್ರಶಂಸೆಯ ಮಾತುಗಳೂ ಕೇಳಿ ಬರುತ್ತಿವೆ. ಕೋಮಲ್ ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಕಥೆಗೆ ತಕ್ಕಂತೆ ಮೈಕಟ್ಟನ್ನು ಹೊಂದಿದ್ದಾರೆ. ಅವರ ಪ್ರಬುದ್ಧ ನಟನೆ ತೆರೆಯ ಮೇಲೆ ದಿಟ. ಈಗಾಗಲೇ ಅದು ಟ್ರೇಲರ್‍ನಲ್ಲಿ ಸಾಬೀತಾಗಿದೆ. ಸಿನಿ ದಿಗ್ಗಜರೂ ಕೂಡ ಕೋಮಲ್ ನಟನೆಗೆ ಶಭಾಷ್ ಎಂದಿದ್ದಾರೆ. ಹಾಗಾಗಿ `ಕೆಂಪೇಗೌಡ 2′ ಗೆಲ್ಲುವ ಎಲ್ಲಾ ಲಕ್ಷಣಗಳೂ ಇವೆ. ಹೊಸ ದಾಃಲೆ ಬರೆಯುವ ನಿರೀಕ್ಷೆಯೂ ನಿಚ್ಚಳವಾಗಿದೆ.

 

 

ಖಳನಾರು?
ಕೆಂಪೇಗೌಡ 2′ ಚಿತ್ರ ತಾರಾಗಣದ ಮೂಲಕವೇ ಗಮನಸೆಳೆಯುತ್ತಿದೆ. ಕೋಮಲ್ ಚಿತ್ರದಲ್ಲಿ ನಟಿಸಿರುವುದು ವಿಶೇಷವಾದರೆ, ಲೂಸ್‍ಮಾದ ಯೋಗಿ ಚಿತ್ರದಲ್ಲಿ ಅಭಿನಯಿಸಿರುವುದು ಮತ್ತೂ ವಿಶೇಷ. ಇದರ ಜೊತೆಗೆ ಕ್ರಿಕೆಟಿಗ ಶ್ರೀಶಾಂತ್ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಇಲ್ಲಿ ಖಳ ನಟನಾರು ಎಂಬ ಕ್ಯೂರಿಯಾಸಿಟಿಯೂ ಇz್ದÉೀ ಇದೆ. ಲೂಸ್‍ಮಾದ ಯೋಗಿ ಖಳನಟನಾಗಿ ಬಣ್ಣ ಹಚ್ಚಿದ್ದಾರಾ ? ಇಲ್ಲ, ಶ್ರೀಶಾಂತ್ ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರ ಎಂಬ ಕುತೂಹಲ ಇಮ್ಮಡಿಗೊಂಡಿದೆ. ಇದಕ್ಕೆಲ್ಲ ಚಿತ್ರ ನೋಡದ ಉತ್ತರ ಸಿಗಲಿದೆ. ಇದರ ಜೊತೆಗೆ ಸೂಪರ್ ಲೊಕೇಷನ್ `ಕೆಂಪೇಗೌಡ’ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಕಥೆಗೆ ತಕ್ಕಂತೆ, ದೇಶ ವಿದೇಶಗಳಲ್ಲೂ ಚಿತ್ರೀಕರಣ ನಡೆಸಿದ್ದು, ಸುಂದರ ತಾಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.ವಿನೋದ್ ನಿರ್ಮಾಣದ ಈ ಶಂಕರ್‍ಗೌಡ ಆಕ್ಷನ್‍ಕಟ್ ಹೇಳಿದ್ದಾರೆ.ಕೆಂಪೇಗೌಡ 2′ ಚಿತ್ರ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಪಡೆದಿದೆ. ಚಿತ್ರಕ್ಕೆ ಸೆನ್ಸಾರ್ ಆಗುತ್ತಿದ್ದಂತೆ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿತು. ವರ ಮಹಾಲಕ್ಷ್ಮಿ ಹಬ್ಬದಂದೇ ತೆರೆಗೆ ನಿರ್ಧರಿಸಿತು. ಅದಕ್ಕೆ ಅಗತ್ಯ ಸಿದ್ಧತೆಗಳು ನಡೆದಿವೆ. ಹೀಗಿರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಕುರುಕ್ಷೇತ್ರ’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡುತ್ತ ಬಂದಿದ್ದು, `ಕುರುಕ್ಷೇತ್ರ’ವನ್ನು ವರಮಹಾಲಕ್ಷ್ಮಿ ಹಬ್ಬದಂದೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿದೆ. ಹಾಗಾಗಿ ಮಹಾಲಕ್ಷ್ಮಿ ಹಬ್ಬದಂದು ಸ್ಟಾರ್ ಪೈಪೆÇೀಟಿ ಆರಂಭವಾಗಲಿದೆ.

Leave a Reply

Your email address will not be published. Required fields are marked *