Tuesday, 21st March 2023

ರಾಜಸ್ಥಾನ, ಕೇರಳದಲ್ಲಿ ’ಕೈ’ ಬಿಕ್ಕಟ್ಟು: ಡಿಸೆಂಬರ್ 4 ರಂದು ಖರ್ಗೆ ಸಭೆ

ನವದೆಹಲಿ: ಡಿಸೆಂಬರ್ 4 ರಂದು ಕಾಂಗ್ರೆಸ್ ಪಕ್ಷದ ಮೊದಲ ಸ್ಟೀರಿಂಗ್ ಕಮಿಟಿ ಸಭೆಯ ಅಧ್ಯಕ್ಷತೆಯನ್ನು ನೂತನ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಹಿಸಲಿದ್ದು, ನಾಯಕತ್ವದ ಸಮಸ್ಯೆಗಳನ್ನು ಎದುರಿಸುತ್ತಿರುವ ಎರಡು ರಾಜ್ಯಗಳಾದ ರಾಜಸ್ಥಾನ ಮತ್ತು ಕೇರಳದಲ್ಲಿ ಬಿಕ್ಕಟ್ಟನ್ನು ನಿಭಾಯಿಸುವುದು ಅವರ ತಕ್ಷಣದ ಸವಾಲಾಗಿದೆ.
ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಚಾಲನಾ ಸಮಿತಿಯ ಮೊದಲ ಸಭೆಯಾಗಿರುವು ದರಿಂದ ಈ ಸಭೆ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ, ಪಕ್ಷದ ಸಂವಿಧಾನದ ಪ್ರಕಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ನಂತರ ಉಸ್ತುವಾರಿ ಸಮಿತಿಯನ್ನು ಖರ್ಗೆ ಮರುರಚಿಸಿದ್ದರು.
ಸಭೆಯ ಅಜೆಂಡಾವು ಸಮಗ್ರ ಅಧಿವೇಶನದ ದಿನಾಂಕಗಳನ್ನು ಅಂತಿಮಗೊಳಿಸುವುದು, ಭಾರತ್ ಜೋಡೋ ಯಾತ್ರೆ ಮತ್ತು ಇತರ ಸಾಂಸ್ಥಿಕ ವಿಷಯಗಳ ಕುರಿತಾಗಿರುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ಶತ್ರು ಸಚಿನ್ ಪೈಲಟ್ ತಿಕ್ಕಾಟ, ಶಶಿ ತರೂರ್ ಅವರ ಉತ್ತರ ಕೇರಳದ ರಾಜಕೀಯ ಪ್ರವಾಸದ ನಂತರ ಉಂಟಾದ ರಾಜಕೀಯ ಪ್ರಹಸನಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
error: Content is protected !!