Friday, 19th August 2022

ಮಾಜಿ ಶಾಸಕ ರಾಜಣ್ಣಗೆ ಅಹಿಂದ ಸಂಘಟನೆ ಬೆಂಬಲ

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ ನಡೆಯನ್ನು ವ್ಯಂಗ್ಯ ಮಾಡಿದ್ದ ಮಾಜಿ ಶಾಸಕ ರಾಜಣ್ಣ ವಿರುದ್ದ ಟೀಕೆಗಳು ಅಧಿಕ ವಾದ ಹಿನ್ನೆಲೆಯಲ್ಲಿ ಜಿಲ್ಲಾ ಅಹಿಂದ ಸಂಘಟನೆ ರಾಜಣ್ಣ ಬೆಂಬಲಕ್ಕೆ ನಿಂತಿದೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅಹಿಂದ ಸಂಘಟನೆಯ ಪದಾಧಿಕಾರಿ ಗಳು, ರಾಜಣ್ಣ ಈಗಾಗಲೇ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಮಾಡಿದ್ದಾರೆ. ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ತಳಮಟ್ಟದಲ್ಲಿ ನೂರಾರು ಸಮಾಜಗಳಿವೆ. ತಳಮಟ್ಟದ ಸಮಾಜ ವನ್ನು ಜಿಲ್ಲೆಯಲ್ಲಿ ರಾಜಣ್ಣ ಕಾಪಾಡುತ್ತಿದ್ದಾರೆ ಎಂದರು.
40 ವರ್ಷದಿಂದ ರಾಜಣ್ಣ ನಮ್ಮ ಕೈ ಹಿಡಿದಿದ್ದಾರೆ. ಅವರ ವಿಚಾರಕ್ಕೆ ಧಕ್ಕೆ ಬಂದರೆ ಹೋರಾಟ ಮಾಡಲಾಗುತ್ತದೆ. ಯಾವುದೇ ವ್ಯಕ್ತಿ ಸಮಾಜ ವಿರುದ್ಧ ನಾವು ಹೋಗಲ್ಲ. ರಾಜಣ್ಣ ಅವರನ್ನ ನಿಂದಿಸಿದರೆ ನಾವು ಸುಮ್ಮನೇ ಇರಲ್ಲ ಎಂದು ಹೇಳಿದರು.
ರಾಜಣ್ಣ ಜಿಲ್ಲೆಯಲ್ಲಿ ಅಹಿಂದಕ್ಕೆ ನಾಯಕರು. ದೇವೇಗೌಡರ ಬಗ್ಗೆ ರಾಜಣ್ಣ ಅವರಿಗೆ ಅಪಾರ ಗೌರವವಿದೆ. ಚುನಾವಣೆ ಗಮನ ದಲ್ಲಿಟ್ಟುಕೊಂಡು ಗದಪ್ರಹಾರ ಮಾಡುವುದು ತಪ್ಪು. ಇದು ನಿಲ್ಲಿಸಬೇಕು. ರಾಜಣ್ಣ ತೇಜೋವಧೆ ಮಾಡುವುದನ್ನು  ಅಹಿಂದ ಸಂಘಟನೆ ಖಂಡಿಸುತ್ತದೆ ಎಂದು ಮುಖಂಡ ಅಂಜಿನಪ್ಪ ಬ್ಯಾಟ್ ಬೀಸಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲೆಯ ಅಹಿಂದ ಮುಖಂಡರು ಉಪಸ್ಥಿತರಿದ್ದರು.