Wednesday, 30th September 2020

ಬೀದಿಗಿಳಿದ ಕೆಪಿಸಿಸಿ: ನಮ್ಮ ಪಕ್ಷದ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ

ಡಿಕೆಶಿ ವ್ಯಕ್ತಿತ್ವಕ್ಕೆ ಧಕ್ಕೆೆ ತರಲೆಂದೇ ಈ ಕೆಲಸ: ದಿನೇಶ್ ಗುಂಡೂರಾವ್ ಆಕ್ರೋಶ

ಮಾಜಿ ಶಾಸಕ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಕಾಂಗ್ರೆೆಸ್ ಕಾರ್ಯಕರ್ತರು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಬಿಜೆಪಿ ನಾಯಕರ ವಿರುದ್ದ ಧಿಕ್ಕಾಾರ ಕೂಗಿದ ಪ್ರತಿಭಟನೆಕಾರರು, ಟೈರ್‌ಗೆ ಬೆಂಕಿ ಹಚ್ಚಿಿ ಆಕ್ರೋೋಶ ವ್ಯಕ್ತಪಡಿಸಿದರು.

ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವುದು ಸ್ಪಷ್ಟವಾಗಿ ಗೊತ್ತಿಿತ್ತು. ಸಿಬಿಐ, ಇ.ಡಿ, ಐಟಿ ತನಿಖಾ ಸಂಸ್ಥೆೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿಿತ್ತು. ಬಿಜೆಪಿಯವರನ್ನು ಬಿಟ್ಟು ನಮ್ಮ ಪಕ್ಷದವರನ್ನೇ ಟಾರ್ಗೆಟ್ ಮಾಡಲಾಗುತ್ತಿಿದೆ’ ಎಂದು ದೂರಿದರು.
ಡಿಕೆಶಿ ವ್ಯಕ್ತಿಿತ್ವಕ್ಕೆೆ ಧಕ್ಕೆೆ ತರಲು ಈ ಕೆಲಸ ಮಾಡಿದ್ದಾರೆ. ಇ.ಡಿ, ಐಟಿ, ಸಿಬಿಐ ಕೇಂದ್ರ ಸರಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿಿವೆ. ಗುಜರಾತ್‌ನ ಶಾಸಕರಿಗೆ ರಕ್ಷಣೆ ಕೊಟ್ಟ ಒಂದೇ ಕಾರಣಕ್ಕೆೆ ಅವರ ಮೇಲೆ ಐಟಿ ದಾಳಿ ನಡೆಯಿತು ಎಂದರು.
ಯಾವುದೇ ವಿಚಾರಣೆ ಇದ್ದರೂ ಭಾಗಿಯಾಗಿದ್ದಾರೆ. ಎಲ್ಲ ಪ್ರಶ್ನೆೆಗಳಿಗೆ ಉತ್ತರ ಕೊಟ್ಟಿಿದ್ದಾರೆ. ಅವರ ತಾಯಿ, ಪತ್ನಿಿ, ಪುತ್ರಿಿಯ ವಿಚಾರಣೆ ನಡೆಸಿದ್ದಾರೆ. ಗಣೇಶ ಹಬ್ಬಕ್ಕೆೆ ಮನೆಗೆ ಹೋಗಲು ಅವಕಾಶ ಕೊಡಲಿಲ್ಲ. ತಂದೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ಏನಾದರೂ ಸಾಕ್ಷಿ ಇದ್ದರೆ ಎಫ್‌ಐಆರ್ ಹಾಕಲಿ. ಚಾರ್ಜ್‌ಶೀಟ್ ಹಾಕಿ ಕೋರ್ಟ್‌ಗೆ ಕರೆದುಕೊಂಡು ಹೋಗಲಿ. ಅದು ಬಿಟ್ಟು ಹೀಗೆ ಷಡ್ಯಂತ್ರ ನಡೆಸುವುದು ಸರಿಯಲ್ಲ’ ಎಂದರು.

ರಾಮನಗರದಲ್ಲೂ ಪ್ರತಿಭಟನೆ:


ಡಿಕೆಶಿ ಬಂಧನವನ್ನು ಖಂಡಿಸಿ ಜಿಲ್ಲಾಾ ಕೇಂದ್ರ ರಾಮನಗರದಲ್ಲೂ ಕಾಂಗ್ರೆೆಸ್ ಕಾರ್ಯಕರ್ತರು, ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಪ್ರತಿಭಟನೆ ನಡೆಸಿ ಪ್ರಮುಖ ವೃತ್ತಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಿಿ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

                         ಇಬ್ಬರ ಬಂಧನ

ಸರಕಾರಿ ಬಸ್‌ಗೆ ಬೆಂಕಿ ಹಚ್ಚಿಿದ್ದಲ್ಲದೆ, ಪಟ್ಟಣದಲ್ಲಿ ಪ್ರತ್ಯೇಕವಾಗಿ ಬೆಂಕಿ ಹಚ್ಚಿಿದ್ದ ಪ್ರಕರಣಕ್ಕೆೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವುದಾಗಿ ರಾಮನಗರ ಎಸ್‌ಪಿ ಡಾ. ಅನೂಪ್ ಶೆಟ್ಟಿಿ ತಿಳಿಸಿದ್ದಾರೆ. ಕನಕಪುರದಲ್ಲಿ ಸದ್ಯ ಉದ್ವಿಿಗ್ನ ಪರಿಸ್ಥಿಿತಿ ಇದೆ. ಈ ಹಿನ್ನೆೆಲೆಯಲ್ಲಿ ತಾವು ಅಲ್ಲಿಯೇ ಮೊಕ್ಕಾಾಂ ಹೂಡಿ ಪರಿಸ್ಥಿಿತಿಯನ್ನು ತಹಬಂದಿಗೆ ತರಲು ಯತ್ನಿಿಸುವುದಾಗಿ ಡಾ. ಅನೂಪ್ ಶೆಟ್ಟಿಿ ಹೇಳಿದರು.

ಡಿಕೆಶಿ ಸ್ವಕ್ಷೇತ್ರದಲ್ಲಿ ಅಘೋಷಿತ ಬಂದ್

ಕನಕಪುರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸುತ್ತಲೇ ಡಿಕೆಶಿ ಸ್ವಕ್ಷೇತ್ರ ಕನಕಪುರದಲ್ಲಿ ಅಘೋಷಿತ ಬಂದ್ ಆಚರಿಸಲಾಗುತ್ತಿಿದೆ. ಜತೆಗೆ ರಸ್ತೆೆಗಿಳಿದಿರುವ ಅವರ ಅಭಿಮಾನಿಗಳು ಟೈರ್‌ಗಳಿಗೆ ಬೆಂಕಿ ಹಚ್ಚಿಿ ಪ್ರತಿಭಟನೆ ಮಾಡಿದರು. ಕನಕಪುರದ ಚುಂಚಿ ಬಡಾವಣೆಯಲ್ಲಿ ಸರಕಾರಿ ಬಸ್‌ವೊಂದಕ್ಕೆೆ ಬೆಂಕಿ ಹಚ್ಚಿಿ ಆಕ್ರೋೋಶ ಹೊರಹಾಕಿದರು. ಪಟ್ಟಣದ ಚನ್ನಬಸಪ್ಪ ಸರ್ಕಲ್ ವತ್ತದಲ್ಲಿ ಹೆಚ್ಚಿಿನ ಸಂಖ್ಯೆೆಯಲ್ಲಿ ಜಮಾಯಿಸಿದ್ದ ಡಿಕೆಶಿ ಅಭಿಮಾನಿಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿ, ಪ್ರತಿಭಟಿಸಿದರು. ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ಹಿನ್ನೆೆಲೆಯಲ್ಲಿ ಬಸ್ ನಿಲ್ದಾಾಣದಲ್ಲಿ ಯಾವುದೇ ಬಸ್‌ಗಳು ಬಂದಿಲ್ಲ. ಇದ್ದ ಕೆಲವು ಬಸ್‌ಗಳಲ್ಲಿ ಹತ್ತಿಿದ್ದ ಪ್ರಯಾಣಿಕರನ್ನು ಡಿಕೆಶಿ ಬೆಂಬಲಿಗರು ಕೆಳಗಿಳಿಸಿದರು. ಇದರಿಂದಾಗಿ ತುರ್ತು ಕಾರ್ಯಗಳಿಗೆ ತೆರಳಬೇಕಾಗಿದ್ದವರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಕೈ ಕಾರ್ಯಕರ್ತರಿಗೆ ಬೆಂಕಿ ತಗುಲಿ ಗಾಯ


ಚಿತ್ರದುರ್ಗ: ಮಾಜಿ ಶಾಸಕ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಚಳ್ಳಕೆರೆಯಲ್ಲಿ ಪ್ರತಿಭಟನೆ ನಡೆಸುತ್ತಿಿದ್ದ ಕಾಂಗ್ರೆೆಸ್ ಕಾರ್ಯಕರ್ತರಿಗೆ ಬೆಂಕಿ ತಗುಲಿ ಗಾಯಗೊಂಡಿದ್ದಾಾರೆ. ಟೈರ್‌ಗೆ ಬೆಂಕಿ ಹಚ್ಚುವಾಗ ಈ ಅವಘಡ ಸಂಭವಿಸಿದ್ದು, ಎಂಟು ಕಾಂಗ್ರೆೆಸ್ ಕಾರ್ಯಕರ್ತರು ಹಾಗೂ ಪೊಲೀಸ್ ಕಾನ್‌ಸ್‌‌ಟೆಬಲ್ ಗಾಯಗೊಂಡಿದ್ದಾರೆ. ಕಾಂಗ್ರೆೆಸ್ ಕಾರ್ಯಕರ್ತರಾದ ಲಿಂಗಮ್ಮ, ಶಂಕರಪ್ಪ, ಸಯ್ಯದ್ ಕಲೀಂ, ಶಿವರಾಜ್, ಮಂಜುನಾಥ್, ಶ್ರೀನಿವಾಸಮೂರ್ತಿ, ಮಲ್ಲಿಕಾರ್ಜುನಪ್ಪ, ತಿಪ್ಪೇಸ್ವಾಾಮಿ ಹಾಗೂ ಕಾನ್‌ಸ್‌‌ಟೆಬಲ್ ಅಣ್ಣಪ್ಪ ಗಾಯಗೊಂಡಿದ್ದು, ಇವರನ್ನು ಚಳ್ಳಕೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *