Tuesday, 17th September 2019

ಇ.ಡಿ, ಸಿಬಿಐ ಅನ್ನು ಬಿಜೆಪಿ ಸೀಳುನಾಯಿಗಳನ್ನಾಗಿ ಮಾಡಿಕೊಂಡಿದೆ..

ಬೆಂಗಳೂರು: ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಅನ್ನು ಕೇಂದ್ರ ಸರಕಾರ ದುರುಪಯೋಗಪಡಿಸಿಕೊಳ್ಳುತ್ತಿಿದೆ. ಈ ಸಂಸ್ಥೆೆಗಳ ಮೂಲಕ ಕರ್ನಾಟಕದ ಹೆಮ್ಮೆೆಯ ಪುತ್ರ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕಿರುಕುಳ ನೀಡಲಾಗುತ್ತಿಿದೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಆಕ್ರೋೋಶ ವ್ಯಕ್ತಪಡಿಸಿದ್ದಾರೆ.

ಡಿಕೆಶಿ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ, ಕೇಂದ್ರ ಸರಕಾರದ ವಿರುದ್ಧ ವಿಶ್ವ ಒಕ್ಕಲಿಗರ ಒಕ್ಕೂಟ ಬುಧವಾರ ರಾಜಭವನ ಚಲೋ ಹಮ್ಮಿಿಕೊಂಡಿದೆ. ಈ ಹಿನ್ನೆೆಲೆಯಲ್ಲಿ ಬಸವನಗುಡಿ ನ್ಯಾಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃಷ್ಣಾಾ ಬೈರೇಗೌಡ ಇಲ್ಲಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಾಳಿ ನಡೆಸಿದ ಕೃಷ್ಣಾಾ ಬೈರೇಗೌಡ, ಐಟಿ ಮತ್ತು ಇ.ಡಿಯನ್ನು ಕೇಂದ್ರ ಸರಕಾರ ಬಳಸಿಕೊಂಡು ಹೇಡಿಗಳಂತೆ ರಾಜಕೀಯ ಮಾಡುತ್ತಿಿದೆ. ಇವರಿಗೆ ಧೈರ್ಯವಿದ್ದರೆ ಜನರ ನಡುವೆ ರಾಜಕೀಯ ಮಾಡಲಿ. ಮಲ್ಯ ದೇಶ ಬಿಟ್ಟು ಹೋದಾಗ ಐಟಿ ಮತ್ತು ಇ.ಡಿ ಎಲ್ಲಿ ಹೋಗಿದ್ದರು. ಕೇಂದ್ರ ಸರಕಾರ ಐಟಿ, ಇ.ಡಿ, ಸಿಬಿಐ ಅನ್ನು ಬಿಜೆಪಿ ಸೀಳುನಾಯಿಗಳನ್ನಾಾಗಿ ಮಾಡಿಕೊಂಡಿದೆ. ಪಾಕಿಸ್ತಾಾನದಲ್ಲೂ ಇದೇ ರೀತಿ ತನಿಖಾ ಸಂಸ್ಥೆೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾಾರೆ. ಕೇಂದ್ರ ಪಾಕ್ ಮಾದರಿ ಅನುಸರಿಸುತ್ತಿಿದೆ. ಕಾಫಿ ಡೇ ಸಂಸ್ಥಾಾಪಕ ಸಿದ್ಧಾಾರ್ಥ್‌ರದ್ದು ಆತ್ಮಹತ್ಯೆೆ ಅಲ್ಲ, ಕುಮ್ಮಕ್ಕಿಿನ ಸಾವು ಎಂದು ಆರೋಪಿಸಿದರು.

Leave a Reply

Your email address will not be published. Required fields are marked *