Sunday, 27th September 2020

ಕುಮಾರಣ್ಣ‘ಇಸ್ವಾಸ ದ್ರೋಹ’ ಮಾಡಕ್ಕಿಲ್ಲ, ಅಂದ್ರೆ ನಂಬೋದ್ಯಾರು!

ಹಳ್ಳಿಕಟ್ಟೆೆ

ಲೇ, ಸೀನ ಎಲ್ಲೋಗಿದ್ಯೋೋ ಹಾಳಾದನೆ, ಮೂರ್ ದಿನದಿಂದ ಪತ್ತೇನೆ ಇತ್ತುಲ್ಲಾ, ಎಲ್ಲೋ ನಮ್ಮ ಮಲ್ಯನಂಗ್ ದೇಶಾಂತ್ರ ಹೊಗ್ಬುಟ್ನೇನೋ, ಎಷ್ಟೇ ಆಗ್ಲಿಿ ಆವಪ್ಪನ್ ಋಣದಲ್ ಬದ್ಕೊೊ ಬಡೈದ ಅಲ್ವಾಾ, ಇಡ್ಕಂಡ್ ಬರೋಕ್ ಟಿವಿಗ್ ಕೊಡ್ಬೇಕು ಅಂತಾ ಪ್ಲಾಾನ್ ಮಾಡಿದ್ದೆ ನಾನು ಅಂತ ಅರಳಿಕಟ್ಟೆೆ ಕಡೆಗ್ ಬಂದ ಪಟೇಲಪ್ಪ.

ದೊಡ್ಡಪ್ರೋೋ, ದೇಶಾಂತ್ರ ಹೋಗಂತದ್ದು ಬಾ, ನಾನೇನ್ ಊರ್ ತುಂಬಾ ಮೂರ್ ಮಣ ಸಾಲ ಮಾಡ್ಕಂಡಿದ್ದಿನೇ, ಇಲ್ಲ ಅಲಾಲ್ ಕೋರರ್ ತರ ಅಕ್ಕಪಕ್ಕದೋವ್ರ ಹೆಸ್ರಲೆಲ್ಲ ಸಿಕ್ಕಾಾಪಟ್ಟೆೆ ಆಸ್ತಿಿ ಮಾಡೀದಿನೋ, ಎಲ್ಡೂ ಇಲ್ಲ ತಾನೇ, ನಿಮ್ ಜತೆ ಸೇರ್‌ಕೊಂಡ್ ಬುಡುಬುಡಿಕೆ ಆಟ್ಗೋೋಳ್ ಆಡೋದಷ್ಟೇ ತಾನೆ ನನ್ ಕೇಮೆ ಅಂದ ಸೀನ.
ಹೋಗ್ಲಿಿ ಬುಡು, ನೀನೇ ಈ ಗದ್ದೆ ಸೀಮೆಗೆಲ್ಲ ಘನಾಂದಾರಿ ಜಮೀನ್ದಾಾರ, ನಿನ್ನ ನಾನ್ ಏನು ಅನ್ನಂಗಿಲ್ಲ. ನೆನ್ನೆೆ ಮೊನ್ನೆೆ ನಿಮ್ಮಂಣ್ಣಂದೆ ಅಂತ ಹವಾ ಆಗಿತ್ತು. ಜನ ಹೋಗಿದ್ರುಲ್ಲಾ, ತಲೇಗ್ ಎಷ್ಟು ಕೊಟ್ರು, ಜತ್ಗೆೆ ಎಣ್ಣೆೆ ಗಿಣ್ಣೆೆ ಏನಾರ ಇತ್ತಾಾ ಅಂತ ಕೊಂಕ್ ಪ್ರಶ್ನೆೆ ಕೇಳ್ದಾಾ ಪಟೇಲಪ್ಪ.

ದೊಡ್ಡಪ್ರೋೋ, ಅಣ್ಣನ್ ರಿಸೀವ್ ಮಾಡ್ಕಳ್ಳಕ್ ಅಪ್ಪಂಗುಟ್ಟಿಿದೋನ್ ಯಾವಾನಾರ ದುಡ್ ತಗೊಂಡ್ ಹೋಯ್ತಾಾನಾ, ನಮ್ಮಣ್ಣ ನಮ್ಮೆೆಮ್ಮೆೆ ಗೊತ್ತಾಾ. ಅಣ್ಣ ಅಷ್ಟು ದೊಡ್ದಾಾಗಿ ಬೆಳ್ದದೆ ನಾವು ಅಣ್ಣಂಗೋಸ್ಕರ ಅಷ್ಟು ಮಾಡ್ಲಿಿಲ್ಲಾ ಅಂದ್ರೆೆ ಹೆಂಗೆ ಅಂತ ಭಾಷ್ಣ ಬಿಗ್ದಾಾ ಸೀನ.
ಊಂ ಕಣೇಳು, ನಾ ಕಾಣೆನಾ ನಿಮ್ ನಿಯತ್ನಾಾ, ನಿಮ್ ನಿಯತ್ತು ಓಸಿ ಹೊಟ್ಟೆೆಗೋಗಿ, ಬಿರಿಯಾನಿಲ್ ಬಾಡ್ ಖಾಲಿಯಾಗಿ ಬರೀ ಕುಷ್ಕ ಉಳದೈತೆ ಅನ್ನೋೋ ತಂಕಾ. ಸೀಪಕ್ಕೆೆನಲ್ಲಿ ಮೂಳೆ ಸಿಗ್ನಿಿಲ್ಲ ಅಂದ್ರೆೆ ಯಾವ್ ಅಣ್ಣನೂ ಬ್ಯಾಾಡ ನಿಮ್ಗೆೆ. ಅಂತಾದ್ರಲ್ಲಿ ಬಿಲ್ಡಪ್ ಬ್ಯಾಾರೆ ಅಂದ ಪಟೇಲಪ್ಪ.

ದೊಡ್ಡಪ್ಪ, ದೊಡ್ಡೋೋರ್ ಬಗ್ಗೆೆ ಹಂಗೆಲ್ಲ ಸಣ್ಣದಾಗ್ ಮಾತಾಡ್ಬೇಡ. ನೀನ್ ಹಿಂಗೆಯ ಬಾಯ್ ಕೆಡೆಸ್ಕಳ್ಳದು, ಯಾವ್ ಬಡ್ಡಿಿ ಹೈದ ಯಾವ್ ಬಿಲ್ದಲ್ಲಿ ಮೊಬೈಲ್ ಆನ್ ಮಾಡ್ಕೊೊಂಡ್ ಮಡಿಕಂಡಿರತಾನೋ ಗೊತ್ತಾಾಗಕುಲ್ಲಾ, ಮೊನ್ನೆೆ ನೀನ್ ಗಿಡ್ನೆೆಂಡ್ರು ಜತ್ಗೆೆ ಮಾತಾಡಿದ್ನಾಾ ದೊಣ್ಣಯ್ಯನ್ ಹೆಂಗ್ ರೆಕಾರ್ಡ್ ಮಾಡಿದ್ದ ಗೊತೈತ್ತಲ್ಲ ಅಂದ ಸೀನ.
ರೆಕಾರ್ಡ್ ಮಾಡಿ ಏನಿರ್ಲಾ ಕಿತ್ಕಂಡಿರಿ, ಸಿಡಿ ಮಾಡಿ ಸೀಲೊತ್ತಿಿ ತಗಂಡೋಗ್ ಕೊಡಕ್ ನಂಗೇನ್ ಹೈಕಮಾಂಡ್ ಇದ್ದಾತ, ಅಬ್ಬಬ್ಬಾಾ ಅಂದ್ರೆೆ ನಿಮ್ ದೊಡವ್ವಂಗ್ ಕೊಟ್ಟಿಿರಿ, ಆ ಬಡ್ಡಿಿದ್ಕೆೆ ಮೊಬೈಲ್ ನಾ ಎತ್ಮರೆ ಹಿಡ್ಕಳ್ಳದು ಅನ್ನದೆ ಇನ್ನೂ ಗೊತ್ತಿಿಲ್ಲ. ಅಂತಾದ್ರಲ್ಲಿ ಇನ್ನೇನ್ ಕಿತ್ತ ಗುಡ್ಡಾಾಕಿರೇಳು ಅಂದ ಪಟೇಲಪ್ಪ.

ದೊಡ್ಡಪ್ಪ, ಜಾಸ್ತಿಿ ಬಿಲ್ಡಪ್ ಕೊಡ್ಬೇಡ, ದೊಡ್ಡವ್ವಂಗೆ ಗಿಡ್ನೆೆಂಡ್ರು ಮ್ಯಾಾಟ್ರು ಗೊತ್ತಾಾದ್ರೆೆ ಮೂಲೆಗ್ ಹಾಕಂಡ್ ರುಬ್ತಾಾಳೆ ಗೊತ್ತು. ಆದ್ರೆೆ, ಇಂತ ರಾಜ್ಕೀಯ ಎಲ್ಲ ಮಾತಾಡ್ವಾಾಗ ವಸಿ ಉಷಾರು. ಯಾಕಂದ್ರೆೆ ನಿಂಗಿರೋ ಪಟೇಲಪ್ಪ ನ್ ಪದವಿನಾ ಕಿತ್ಕಳ್ಳಕ್ಕೆೆ ಬೋ ಜನ ಹೊಂಚ್ ಹಾಕ್ತಾಾವ್ರೆೆ. ನೀ ಬೈಯ್ಯೋದ ತಗಂಡೋಗಿ ಕೊಟ್ಟು ನಿನ್ ಪ್ಟ್ೋಗೆ ಬೆಂಕಿ ಹಾಕ್ಬುಟ್ಟಾಾರು ಹುಷಾರು ಅಂದ ಸೀನ.
ನಂದೇನ್ ಸಿಎಮ್‌ಮ್‌ ಪೋಸ್ಟ್ಲಾಾ, ನಾನೇನ್ ಯಡ್ಯೂರಿನಾ, ಮಾತಾಡಿದ್ನೇ ಕಾಣದಂಗೆ ನಮ್ಮೋೋರೆ ರೆಕಾರ್ಡ್ ಮಾಡಿ, ತಕಂಡ್ ಹೋಗಿ ಹೈಕಮಾಂಡಿಗ್ ಕೊಡಕ್ಕೆೆ, ಹೋಗ್ರಲೇ. ಕೇಮೆ ನೋಡಿ, ದಂಡಿಗ್ ಹೆದ್ರುಲಿಲ್ಲಾ ದಾಳಿಗ್ ದಾಸಯ್ಯನ್ ಗಳಘಂಟೆಗ್ ಹೆದ್ರಾಾರ ಅಂದಂಗೆ ಇಲ್ದಿಿರೋ ಪಟೇಲನ್ ಪ್ಟ್ೋಗೆ ಹೆದ್ರುತ್ತೀನಾ ಅಂದ ಪಟೇಲಪ್ಪ.

ನೀನು ಒಂಥರಾ ಯಡ್ಯೂರ್ ಇದ್ದಂಗೆ ಕಣ್ ಬುಡ್ ದೊಡ್ಡಪ್ರೋೋ, ಆ ವಯ್ನು ಇದ್ದುದ್ನಾಾ ಇದ್ದಂಗೆ ಒಪ್ಕಂಡ್ ನಾ ಮಾತಾಡಿದ್ ನಿಜ, ಆದ್ರೆೆ ಅದನ್ನ ನಾ ಹೇಳೋಕ್ ಒಂಟಿದ್ ಬ್ಯಾಾರ ತರ ಅಷ್ಟೇಯ ಅಂತ ತ್ಯಾಾಪೆ ಹಾಕ್ಯದೆ, ಬ್ಯಾಾರೆ ಲೀಡ್ರುಗಳೆಲ್ಲ ಇದು ನಮ್ ಸಿಎಮ್‌ಮ್‌ ವಾಯ್ಸಲ್ಲ ಇದನ್ನು ಮಿಮಿಕ್ರಿಿ ಮಾಡೋರ್ ಯಾರೋ ಮಾಡವ್ರೆೆ ಅಂತ, ರೆಡಿ ಬ್ರಹ್ಮ ಯಾರಂತ ಗೊತ್ತದೆ ಅಂತೆಲ್ಲ ತಲೆ ಕೆಟ್ಟೊೊರಂಗ್ ಮಾತಾಡ್ತಾಾವ್ರೆೆ ಅಂದ ಸೀನ.
‘ಮಾಡಿದ್ ಮಹಾನ್ಭಾಾವನೆ ನಂದು ಅಂತ ಒಪ್ಕೊೊಂಡ್ ಮ್ಯಾಾಲೆ ಪಂಚಾಯ್ತಿಿದ್ದೇನಿದ್ದು ಅನ್ನಂಗೆ ಸಿಎಮ್ಮೆೆ ಒಪ್ಕಂಡ್ ಮ್ಯಾಾಕೆ ಇವುಕ್ಕೆೆಲ್ಲ ಏನಂತ್ಲಾಾ, ಆ ಈಸ್ವರಪ್ಪ, ಸೆಟ್ರು, ಸೋಮಣ್ಣಂಗೆ ನಾಲಿಗೆ ತಡಿಯಾಕಿಲ್ಲ, ಬಡ್ಕೊೊಂಡು ಮಕ್ಕುಗಿಸಕತ್ತವೆ. ಹೋಗ್ಲಿಿ ಈಗ ಎಲ್ಲಿಗಂಟ ಬಂತ್ಲಾಾ ಆಡಿಯೋ ಮ್ಯಾಾಟ್ರು ಅಂದ ಪಟೇಲಪ್ಪ.

ಹೈಕಮಾಂಡ್ ಹತ್ರಕ್ಕೋೋಗ್ಯದೆ ಕಣ್ ದೊಡ್ಡಪ್ರೋೋ, ಯಡ್ಯೂರು ಅದ್ರಲ್ಲಿ ಬಾಯ್ತಪ್ಪಿಿ ರಾಷ್ಟ್ರಾಾಧ್ಯಕ್ಷರ್ ಹೆಸ್ರೇಳ್ಯದೆ. ಇದೇ ಚ್ಸ್‌ಾ ಯಡ್ಯೂರಿ ಮ್ಯಾಾಲ್ ಕತ್ತಿಿ ಮಸಿತಿದ್ದರೆಲ್ಲ ಸೇರಕಂಡು ಆಡಿಯೋನ ಹೈಕಮಾಂಡ್‌ಗೆ ಕಳಸಿಕೊಟ್ಟವ್ರೆೆ, ಜತ್ಗೆೆ ಆಂತರಿಕ ತನಿಖೆ ಬ್ಯಾಾರೆ ಮಾಡ್ತೀವಿ ಅಂದೈತಂತೆ ಕಟೀಲು ಅಂದ ಸೀನ.
ಮಾಡದೆಯಾ, ಒಲ್ಲದ್ ಗಂಡಂಗೆ ಮೊಸ್ರಲ್ ಕಲ್ಲು ಅನ್ನಂಗೆ ಯಡ್ಯೂರ್ ಮ್ಯಾಾಲೆ ಮಸೆಯಕ್ ಒಂದ್ ಕತ್ತಿಿ ಬೇಕಿತ್ತು. ಈಗ ಚಿನ್ನದ್ ಕತ್ತಿಿನೇ ಸಿಕ್ಯದೆ ಬುಡ್ತಾಾರಾ, ಹೋಗ್ಲಿಿ ಈ ಕಾಂಗ್ರೆೆಸ್ನೋೋರ್ ಇದನ್ನಾಾದ್ರೂ ಬಳಿಸ್ಕಂಡ್ ಹೋರಾಟ ಮಾಡ್ತಾಾವ್ರ ಹೆಂಗೆ, ಇಲ್ಲ ‘ಹಿಂಗ್ಮಾಾಡಿದ್ರೆೆ ನಿಂಗ ದೊಡ್ಡೋೋವ್ನಾಾಯ್ತನೆ. ನಂಗ್ಯಾಾಕ್ ಇದೆಲ್ಲ’ ಅನ್ನೋೋ ಅವ್ರ ಅಂದ ಪಟೇಲಪ್ಪ.

ನೀನೇಳ್ದಂಗೆ ದೊಡ್ಡಪ್ಪೋೋ, ಬೈ ಎಲೆಕ್ಸನ್‌ಗೆ ಇದು ವರ್ಕೌಟ್ ಆಯ್ತದೆ. ಈಗ ಬೈ ಎಲೆಕ್ಸನ್ ಗೆದ್ರೆೆ ಸರಕಾರ ಏನ್ ಬೀಳಕ್ಕಿಿಲ್ಲ. ಯಾಕಂದ್ರೆೆ ಕುಮಾರಣ್ಣ ನಾ ‘ಇಸ್ವಾಾಸ ದ್ರೋಹ’ ಮಾಡಕ್ಕಿಿಲ್ಲ, ಮಾಡಕ್ಕಿಿಲ್ಲ’ ಅಂತ ಬಾಂಡ್ ಮಾಡ್ಕೊೊಟ್ಟದೆ. ಆದ್ರೆೆ ಕಾಂಗ್ರೆೆಸ್ ಗೆದ್ರೆೆ ಸಿದ್ರಾಾಮಯ್ಯನೆ ಗೆಲ್ಸಿಿದ್ದು ಅನ್ನೋೋ ಕ್ರೆೆಡಿಟ್ ಬತ್ತದೆ. ‘ಉಪ್ಪಿಿನ್ನೆೆಸ್ರು ಪೊರ ಉಣ್ಣಕ್ ಊರಿಂದ್ ಊರಿಗ್ ಬಂದ್ರಂತೆ’ ಅನ್ನಂಗೆ ಏನು ಇಲ್ದೆೆನೆ ಸುಮ್ನೆೆ ಯಾಕ್ ಮೈ ನೋಯಿಸ್ಕಳ್ಳದು ಅಂತ ಸುಮ್ಕಾಾಗ್ಯವ್ರೆೆ. ಪಾಪ ಸಿದ್ದಣ್ನೆೆ ಏನೋ ವಸಿ ಹೋರಾಟ ಮಾಡತೈತೆ ಅಂದ ಸೀನ.
ಕುಮಾರಣ್ಣ ಏನ್ ಮಾಡೈತೆ ಅಂದೆ, ‘ಇಸ್ವಾಾಸ ದ್ರೋಹ ಮಾಡಕ್ಕುಲ್ವಂತ, ಈ ಮಾತ್ನಾಾ ಯಾವ್ ಪುಣ್ಯಾಾತ್ಮ ನಂಬವ್ನಪ್ಪ, ಮೂರ್ ಕೊಟ್ರೆೆ ಮಾವನ್ ಕಡಿಕೆ, ಆರ್ ಕೊಟ್ರೆೆ ಅತ್ತೆೆ ಕಡಿಕೆ ಅನ್ನೋೋದ್ನಾಾ ನಮ್ ಗೌಡ್ರು ಫ್ಯಾಾಮಿಲಿ ನೋಡೇ ಕಲೀಬೇಕು. ಅಂತಾದ್ರಲ್ಲಿ ಯಡ್ಯೂರು ಇದ್ನೆೆಲ್ಲ ನಂಬೈತಲ, ಮೆಚ್ಬೇಕು ಆ ವೈಯನ್ ಗುಂಡ್ಗೇನಾ, ಅದಿರಲಿ ನಿಮ್ ಹುಲಿ, ಸಿಂಹ, ಉಷಾರಿಲ್ದೆೆ ಆಸ್ಪತ್ರೆೆಗ್ ಹೆಂಗದ್ಲಾಾ ಅಂದ ಪಟೇಲಪ್ಪ.

ದೊಡ್ಡಪ್ರೋೋ, ಅಂತದ್ದೇನಿಲ್ಲಾ, ಮೊನ್ನೆೆ ಮೆರವಣಿಗೆ ಮಾಡೋವಾಗ ನಮ್ ಹುಡುಗ್ರು ಜೋಶಲ್ಲಿ ಜಾಸ್ತಿಿ ತಳ್ಳಾಾಡವ್ರೆೆ. ಆಗ ಅಣ್ಣಂಗೆ ಇಸ್ಕಾಾಟ ಜಾಸ್ತಿಿ ಆಯ್ತಲ್ಲ, ಅದ್ಕೆೆ ಸ್ವಲ್ಪ ಮೈಕೈ ನೋವ್ ಜಾಸ್ತಿಿಯಾಗಿ ಜರ ಬಂದಂಗ್ ಆಗಿತ್ತು, ಚೆಕಪ್ಗೆೆ ಅಂತ ಡಾಕ್ಟ್ರು ತಕ್ ಹೋಗಿದ್ದು, ಅದ್ನೆೆ ದೊಡ್ಡುದ್ ಮಾಡಿ ತೋರಿಸಿದ್ರು ಟಿವಿಯರು ಕಣ್ ತಕಾ ಅಂದ ಸೀನ.
ನೀವ್ ಬುಡ್ರಪ್ಪ, ಬೆದೆ ನನ್ಮಕ್ಳು, ಅಣ್ಣ ಅಣ್ಣ ಅನ್ಕಂಡು ಎತ್ತಿಿ ಹೆಗ್ಲು ಎಸ್ಕಳ್ಳಕ್ಕೂ ಹೇಸದಿಲ್ಲ ನೀವು, ಮೊನ್ನೆೆ ನೋಡ್ಲಿಿಲ್ವಾಾ ಹೊನ್ನಾಾಳಿ ಹೋರಿ ಕರವ ಹೆಗಲ್ ಮ್ಯಾಾಕ್ ಹೊತ್ಕಂಡ್ ಗೂಳಿ ಬಂದು ಗುಮ್ಮುತ್ತಿಿದ್ದಂಗೆ ಕೈ ಬುಡ್ಲಿಿಲ್ವಾಾ ಅಂತ ಜನ ನೀವು. ಹೋಗ್ಲಿಿ ವಸಿ ದಿನ ಅರಾಮಾಗಿ ಇರಕ್ ಬುಟ್ಬುಡ್ರೋೋ ಅಂತೇಳಿ, ನಂಗೂ ವಸಿ ಕೆಲ್ಸ ಅದೆ ಬತ್ತೀನಿರ್ಲಾಾ ಅಂತ ಕಟ್ಟೆೆ ಕಡಿಕ್ ಹೊಂಟ ಪಟೇಲಪ್ಪ.

Leave a Reply

Your email address will not be published. Required fields are marked *