Sunday, 17th October 2021

ಸಿಎಂ ಸ್ಥಾನಕ್ಕೆ‌ ನೇರ ಚುನಾವಣೆ ನಡೆದರೆ ಕುಮಾರಣ್ಣ ಸಿಎಂ: ವೆಂಕಟರಾವ್ ನಾಡಗೌಡ

ಜೆಡಿಎಸ್ ಪದಾಧಿಕಾರಿಗಳ ಆದೇಶ ಪ್ರತಿ ವಿತರಣಾ ಕಾರ್ಯಕ್ರಮ 

ಕೊಪ್ಪಳ: ರಾಜ್ಯದಲ್ಲಿ ಮುಖ್ಯಮಂತ್ರಿಗಳ ನೇರ ಚುನಾವಣೆ ಮಾಡಿದರೆ ಎಚ್.ಡಿ. ಕುಮಾರಸ್ವಾಮಿ ಅತ್ಯಧಿಕ ಮತಗಳನ್ನು ಪಡೆದು ಸಿಎಂ ಆಗುತ್ತಾರೆ ಎಂದು ಮಾಜಿ ಸಚಿವ,  ಶಾಸಕ, ಕಲ್ಯಾಣ ಕರ್ನಾಟಕ ಉಸ್ತುವಾರಿ ವೆಂಕಟರಾವ್ ನಾಡಗೌಡ ಹೇಳಿದರು.

ಅವರು ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ತಾಲೂಕು ಹಾಗೂ ಜಿಲ್ಲಾ ಪಾಧಿಕಾರಿಗಳ ಆದೇಶ ಪ್ರತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿ ತಾಲೂಕಿನಲ್ಲಿ ಕನಿಷ್ಟ ಐದು ಸಾವಿರ ಸದಸ್ಯರನ್ನು ಮಾಡಿ, ಬೂತ್ ಮಟ್ಟದಲ್ಲಿ ಬೂತ್ ಕಮೀಟಿಗಳನ್ನು ಮಾಡಿ ಸಂಘಟನೆಯನ್ನು ಮಾಡಿ ಜನರ ಮುಂದೆ ಕುಮಾರಸ್ವಾಮಿಯವರು ಜನಪರ ಆಡಳಿತವನ್ನು ನಡೆಸಿದಂತಹ ರೈತರ ಸಾಲ ಮನ್ನಾ, ಗ್ರಾಮ ವಾಸ್ತವ್ಯದ ಮೂಲಕ ಜನರಿಗೆ ಒಳ್ಳೆಯ ಆಡಳಿತ ನೀಡಿದ್ದನ್ನು ಮತ್ತು ಈಗಿನ ಸರ್ಕಾರ ಪೆಟ್ರೋಲ್ ಡಿಸೇಲ್, ಸಿಲಿಂಡರ್, ಗೊಬ್ಬರದ ಬೆಲೆಗಳನ್ನು ಗಗನಕ್ಕೆರಿಸಿ ಜನರ ಮೇಲೆ ಬರೆ ಎಳೆದಿದ್ದನ್ನು ಜನರಿಗೆ ಹೋರಾಟದ ಮೂಲಕ ತಿಳಿಸಬೇಕಾಗಿದೆ. ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿರಿ ಎಂದು ಸಂಘಟನೆ ಮಾಡಬೇಕೆಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಮಾತನಾಡಿ, ಜಿಲ್ಲಾ ಹಾಗೂ ತಾಲೂಕ ವಾರು ಹೊಸ ಪದಾಧಿಕಾರಿಗಳ ನೇಮಕ ವಾಗಿದ್ದು ಈ ಆದೇಶ ಪ್ರತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪದಾಧಿಕಾರಿಗಳು ಹೆಚ್ಚಾಗಿ ಯುವಕ ರಿದ್ದು, ಶಕ್ತಿಮೀರಿ ಸಂಘಟನೆಯನ್ನು ಮಾಡಬೇಕಿದೆ. ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ತಾವೆಲ್ಲರೂ ಶ್ರಮೀಸಬೇಕು ಎಂದು ಹೇಳಿದರು.

ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಾಹಾಂತಯ್ಯನಮಠ ಮಾತನಾಡಿ, ಈ ಹಿಂದೆ ಜೆಡಿಎಸ್ ಅಧಿಕಾರ ಪಡೆದು ನಂತರ ಪಕ್ಷವನ್ನು ತೊರೆದಂತ ವರಿಗೆ ಪ್ರತೀಕವಾಗಿ ಹೆಚ್ಚಿನ ಕಾಳಜಿ ವಹಿಸಿ ಪಕ್ಷವನ್ನು ಕಟ್ಟಿ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಅಧಿಕಾರಕ್ಕೆ ತರೋಣ. ಇತ್ತೀಚಿಗೆ ಕಲಬುರ್ಗಿಯಲ್ಲಿ ನಡೆದ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಪಾತ್ರ ಅತಿ ಮುಖ್ಯವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳು ಅತಂತ್ರ ಸ್ಥಿತಿಯಲ್ಲಿದ್ದು ಜೆಡಿಎಸ್ ಆಸರೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವೂ ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಕೂಡಾ ಕಿಂಗ್ ಮೇಕರ್ ಆಗುವುದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯಬೇಕೆಂದು ಹೇಳಿದರು.

ನಂತರ ಆಯ್ಕೆಯಾದ ಎಲ್ಲಾ ನೂತನ ಪಾದಾಧಿಕಾರಿಗಳಿಗೆ ಆದೇಶ ಪ್ರತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಗೌಡೂರು, ಬುಲೇಟ್ ಗೌಡ್ರು, ಪ್ರಧಾನ ಕಾರ್ಯದರ್ಶಿ ಮಂಜುನಾಥ ಸೊಟರೂರು, ಸುರೇಶಗೌಡ ಹಲವಾಗಲಿ, ಬಿ.ಕೆ. ಹಿರೇಮನಿ, ಸುರೇಶಗೌಡ ಪಾಟೀಲ್, ವಕ್ತಾರ ಮೌನೇಶ ವಡ್ಡಟ್ಟಿ, ಮಹಿಳಾ ಮುಖಂಡರಾದ ಶ್ರೀನಿಧಿ ಚಕ್ರವರ್ತಿ, ಅಕ್ಕಮಹಾದೇವಿ, ಕೊಪ್ಪಳ ತಾಲೂಕಾಧ್ಯಕ್ಷ ಚನ್ನಪ್ಪ ಮುತ್ತಾಳ, ಕನಕಗಿರಿ ಅಧ್ಯಕ್ಷ ಅಶೋಕ ಉಮಳೂಟಿ, ಯಲಬುರ್ಗಾ ತಾಲೂಕ ಅಧ್ಯಕ್ಷ ಮಲ್ಲನಗೌಡ ಕೋಣನಗೌಡ್ರು, ಕುಷ್ಟಗಿ ತಾಲೂಕಾಧ್ಯಕ್ಷ ಬಸವರಾಜ ನಾಯಕ, ಕುಕನೂರು ತಾಲೂಕಾಧ್ಯಕ್ಷ ಸುರೇಶ ಗುರಿಕಾರ, ಗಂಗಾವತಿ ತಾಲಕಾಧ್ಯಕ್ಷ ವೀರನಗೌಡ್ರು ಪಾಟೀಲ, ಕಾರಟಗಿ ತಾಲೂಕಾಧ್ಯಕ್ಷ ಗಂಗಾಧರ ಬೂದ್ದಿನ್, ನಗರಸಭಾ ಸದಸ್ಯ ಚನ್ನಪ್ಪ ಕೊಟ್ಯಾಳ, ಗಂಗಾವತಿ ನಗರಸಭಾ ಸದಸ್ಯ ಉಸಮಾನಸಾಬ್ ಬಿಚಕತ್ತಿ, ಖಜಾಂಚಿ ಮಂಜುನಾಥ ಹುರಕಡ್ಲಿ, ಮೇಹಮೂದ್ ಹುಸೇನ್ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *