Tuesday, 11th August 2020

ಕೈ ಹಿಡಿದವರ ಕೈ ಕಚ್ಚುವುದು ಕುಮಾರಸ್ವಾಮಿಗೆ ಕರಗತ

ಯಾವುದೇ ಸಂಬಂಧವನ್ನು ಬೆಳೆಸುತ್ತಾ ಹೋದಂತೆ ಇಲ್ಲದ ಸಮಸ್ಯೆೆಗಳು ಉದ್ಭವಿಸುತ್ತವೆ, ಹೊಸ ಹೊಸ ತಲೆನೋವುಗಳು ಶುರುವಾಗುತ್ತವೆ, ಯಾರು ತಮಗೆ ಲಾಭ ಮಾಡಿಕೊಟ್ಟಿದ್ದಾರೋ ಅವರು ಪ್ರತಿಯಾಗಿ ತಮಗೇನು ಸಿಗುತ್ತದೆ ಎಂಬುದನ್ನು ನಿರೀಕ್ಷಿಸುತ್ತಾರೆ, ಅವರ ಬ್ಯಾಗೇಜುಗಳು ದಿನದಿಂದ ದಿನಕ್ಕೆೆ ಭಾರವಾಗುತ್ತವೆ.

ಮಾಜಿ ಮುಖ್ಯಮಂತ್ರಿಿ ಕುಮಾರಸ್ವಾಾಮಿ ಅವರು ತಮ್ಮ ಬುದ್ಧಿಿಯನ್ನು ತೋರಿಸಿದ್ದಾರೆ. ಇಷ್ಟು ದಿನ ಅವರು ಸುಮ್ಮನಿದ್ದುದೇ ಆಶ್ಚರ್ಯ. ಅವರು ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಳ್ಳುತ್ತಿದ್ದಂತೆ ಕಾಂಗ್ರೆೆಸ್ ನಾಯಕರ ಮೇಲೆ ಆರೋಪಗಳ ಮೂಟೆಯನ್ನೇ ಹೊರಿಸುತ್ತಾಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ಈ ವಿಷಯದಲ್ಲಿ ಅವರು ಸ್ವಲ್ಪ ತಡ ಮಾಡಿದರು. ತಮ್ಮ ಸರಕಾರ ಬೀಳಲು ಕಾಂಗ್ರೆೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಹೇಳುತ್ತಾಾರೆಂದು ಗೊತ್ತಿಿತ್ತು. ಕಾರಣ ಅದು ಕುಮಾರಸ್ವಾಾಮಿ ಅವರ ಜಾಯಮಾನ. ತಮಗೆ ಯಾರು ಸಹಾಯ ಮಾಡಿದ್ದಾರೋ ಅವರ ಕೈಕಚ್ಚುವುದು ಅವರಿಗೆ ಅಭಿಜಾತವಾಗಿ ಒಲಿದು ಬಂದ ಬುದ್ಧಿಿ. ಅವರ ರಾಜಕೀಯ ನಡೆಯನ್ನು ನೋಡಿದರೆ, ಈ ಗುಣವನ್ನು ಅವರು ಬಹಳ ಅಚ್ಚುಕಟ್ಟಾಾಗಿ ಪ್ರದರ್ಶಿಸುತ್ತಾಾ ಬಂದಿದ್ದಾರೆ. ಹೀಗಾಗಿ ಅವರ ಜತೆ ಶಾಶ್ವತವಾಗಿ ಸ್ನೇಹ ಇಟ್ಟುಕೊಳ್ಳಲು ಸಾಧ್ಯವಿಲ್ಲ.

ಅಸಲಿಗೆ ಅದು ಕುಮಾರಸ್ವಾಾಮಿಗೆ ಬೇಕಾಗಿಯೂ ಇಲ್ಲ. ಅವರು ಎಲ್ಲರ ಜತೆಗೆ ಒಂದೆರಡು ವರ್ಷಗಳ ಕಾಲ ಮಾತ್ರ ಒಳ್ಳೆೆಯ ಸಂಬಂಧ ಹೊಂದುತ್ತಾಾರೆ. ಆನಂತರ ಒಂದಿಲ್ಲೊಂದು ಕಾರಣಗಳನ್ನು ಹುಡುಕಿ ಆ ಸಂಬಂಧ ಕಿತ್ತು ಹೋಗುವಂತೆ ಮಾಡಿಕೊಳ್ಳುತ್ತಾಾರೆ. ಹೀಗೆ ಮಾಡುವುದರಲ್ಲಿ ತಮಗೆ ಲಾಭವಿದೆ ಎಂದೇ ಅವರು ಭಾವಿಸಿದ್ದಾರೆ. ಅವರಿಗೆ ಗೊತ್ತು ಯಾರೂ ಸಹ ತಮಗೆ ಜೀವನವಿಡೀ ನಿಯತ್ತಾಾಗಿ ಇರುವುದಿಲ್ಲ ಮತ್ತು ಯಾರಿಂದಲೂ ಜೀವನ ಪೂರ್ತಿ ಲಾಭ ಸಿಗುವುದಿಲ್ಲ. ಒಂದೆರಡು ವರ್ಷಗಳ ಕಾಲ ಸ್ನೇಹಿತರಂತೆ ಇದ್ದು ಅವರಿಂದ ಸಿಗಬಹುದಾದ, ಮಾಡಿಕೊಳ್ಳಬಹುದಾದ ಎಲ್ಲಾ ಲಾಭವನ್ನೂ ಮಾಡಿಕೊಂಡು ನಂತರ ಇಡೀ ಸ್ನೇಹಕ್ಕೆೆ ‘ಜೈ’ ಎಂದು ಎದ್ದು ಬಂದುಬಿಡಬೇಕು. ಇದು ಅವರ ಪಾಲಿಸಿ. ಅದನ್ನು ಅವರು ಬಹಳ ಚೆಂದವಾಗಿ, ಅದನ್ನು ಜೀವನದ ಕಲೆಯಾಗಿ ನಡೆಸಿಕೊಂಡು ಬಂದಿದ್ದಾರೆ.

ಯಾವುದೇ ಸಂಬಂಧವನ್ನು ಬೆಳೆಸುತ್ತಾಾ ಹೋದಂತೆ ಇಲ್ಲದ ಸಮಸ್ಯೆೆಗಳು ಉದ್ಭವಿಸುತ್ತವೆ, ಹೊಸ ಹೊಸ ತಲೆನೋವುಗಳು ಶುರುವಾಗುತ್ತವೆ, ಯಾರು ತಮಗೆ ಲಾಭ ಮಾಡಿಕೊಟ್ಟಿಿದ್ದಾರೋ ಅವರು ಪ್ರತಿಯಾಗಿ ತಮಗೇನು ಸಿಗುತ್ತದೆ ಎಂಬುದನ್ನು ನಿರೀಕ್ಷಿಸುತ್ತಾಾರೆ, ಅವರ ಬ್ಯಾಾಗೇಜುಗಳು ದಿನದಿಂದ ದಿನಕ್ಕೆೆ ಹೆಚ್ಚುತ್ತಾಾ ಹೋಗುತ್ತವೆ, ಸಂಬಂಧಗಳಲ್ಲಿ ಅನಗತ್ಯ ಕಿರಿಕಿರಿಗಳು ಇಣುಕಲಾರಂಭಿಸುತ್ತವೆ…ಈ ಯಾವ ಉಸಾಬರಿಯೂ ಬೇಡವೆಂದರೆ ಸಂಬಂಧ ಅಥವಾ ಸ್ನೇಹವನ್ನು ಒಂದೆರಡು ವರ್ಷಗಳ ನಂತರ ಏನಾದರೂ ಕಾರಣ ನೀಡಿ ಹರಿದುಕೊಂಡು ಬಿಡಬೇಕು. ಆಗ ನನ್ನ ದಾರಿಗೆ ನನಗೆ, ನಿಮ್ಮ ದಾರಿಗೆ ನಿಮಗೆ. ನಿಮ್ಮಿಿಂದ ಹರಿದುಕೊಂಡಿದ್ದಷ್ಟೇ ಬಂತು ಲಾಭ. ಇದು ಕುಮಾರಸ್ವಾಾಮಿ ಜೀವನ ಮಂತ್ರ.

ಕುಮಾರಸ್ವಾಾಮಿ ಯಾರ್ಯಾಾರಿಗೆ ಹತ್ತಿಿರವಾಗಿದ್ದರೋ ಅವರೆಲ್ಲರನ್ನೂ ಕೇಳಿ, ಅವರೂ ಸಹ ಇದೇ ಮಾತನ್ನು ಅನುಮೋದಿಸುತ್ತಾಾರೆ. ಅವರೆಲ್ಲರೂ ಕುಮಾರಸ್ವಾಾಮಿಯ ಈ ಗುಣದ ಫಲಾನುಭವಿಗಳೇ. ಜಮೀರ ಅಹಮ್ಮದ್, ಚೆಲುವರಾಯಸ್ವಾಾಮಿ, ಪುಟ್ಟಣ್ಣ, ಮಾಗಡಿ ಬಾಲಕೃಷ್ಣ ಆದಿಯಾಗಿ ಒಂದು ಕಾಲಕ್ಕೆೆ ಅವರಿಗೆ ಆತ್ಮೀಯರಾದ ಎಲ್ಲರನ್ನೂ ಕೇಳಿ ನೋಡಿ ಅವರೆಲ್ಲ ಈ ಮಾತನ್ನು ನೂರಕ್ಕೆೆ ನೂರು ಒಪ್ಪುುತ್ತಾಾರೆ. ಅವರೆಲ್ಲ ಹೇಳುವ ಒಂದು ಮಾತೆಂದರೆ ಕುಮಾರಸ್ವಾಾಮಿ ಜತೆಗೆ ದೀರ್ಘಕಾಲ ಸ್ನೇಹ ಸಾಧ್ಯವಿಲ್ಲ. ನಮ್ಮಿಿಂದ ಲಾಭ ಮಾಡಿಕೊಂಡ ನಂತರ, ಒಳಬರುವ ಪ್ರಮಾಣ ಕಡಿಮೆಯಾದ ಬಳಿಕ ಕುಮಾರಣ್ಣ ನಿಧಾನವಾಗಿ ಕಳಚಿಕೊಳ್ಳುವ ಪ್ರಯತ್ನ ಮಾಡುತ್ತಾಾರೆ. ಈ ಗುಣವನ್ನು ಅವರು ತಮ್ಮ ಟ್ರಂಪ್‌ಕಾರ್ಡ್ ನಂತೆ ಪ್ರದರ್ಶಿಸುತ್ತಾಾ ಬಂದಿದ್ದಾರೆ. ಗಂಡಸರು, ಹೆಂಗಸರು ಎಂಬ ಭೇದ-ಭಾವವಿಲ್ಲದೇ ಅವರು ಗುಣವನ್ನು ಅವರು ಮೈಗೂಡಿಸಿಕೊಂಡಿದ್ದಾರೆ.

ಕುಮಾರಸ್ವಾಾಮಿ ಅವರಿಗೆ ಹೊಸ ಹೊಸ ಸ್ನೇಹಿತರು ಬೇಕು. ಅಂದರೆ ಅವರಿಗೆ ಸ್ನೇಹಿತರನ್ನು ಕಾಲಕಾಲಕ್ಕೆೆ ಬದಲಿಸುತ್ತಾಾ ಇರಬೇಕು. ಕೆಲವರಿಗೆ ಕಾರನ್ನು ಆಗಾಗ ಬದಲಿಸುವ ಷೋಕಿ ಇರುತ್ತದೆ. ಕುಮಾರಸ್ವಾಾಮಿಗೆ ಸ್ನೇಹಿತರನ್ನು ಬದಲಿಸುವ ಷೋಕಿ. ಮೂರ್ನಾಾಲ್ಕು ವರ್ಷಗಳ ಹಿಂದೆ ಸಾ.ರಾ.ಮಹೇಶ, ಭೋಜೇ ಗೌಡ ಅವರನ್ನು ಯಾರಾದರೂ ಕುಮಾರಸ್ವಾಾಮಿ ಅವರ ಅಕ್ಕ-ಪಕ್ಕ ಯಾರಾದರೂ ಕಂಡಿದ್ದಾರಾ? ಸಾಧ್ಯವೇ ಇಲ್ಲ.

ಆಗ ಇದ್ದವರೇ ಬೇರೆಯವರು. ಮೊದಲ ಬಾರಿಗೆ ಅವರು ಮುಖ್ಯಮಂತ್ರಿಯಾದಾಗ ಅವರ ಜತೆ ಇದ್ದವರೇ ಬೇರೆಯವರು. ಜಮೀರ ಅಹಮ್ಮದ್, ಚೆಲುವರಾಯಸ್ವಾಾಮಿ, ಪುಟ್ಟಣ್ಣ, ಮಾಗಡಿ ಬಾಲಕೃಷ್ಣ ಅವರ ಸುತ್ತ ಮುತ್ತ ಇರಲೇಬೇಕಿತ್ತು. ಜಮೀರ ಅವರಂತೂ ಅವರನ್ನು ಭದ್ರಕೋಟೆಯಂತೆ ಆವರಿಸಿಕೊಂಡಿದ್ದರು. ಜಮೀರ ಅವರ ಗೆಸ್‌ಟ್‌ ಹೌಸಿನಲ್ಲಿಯೇ ಕುಮಾರಸ್ವಾಾಮಿ ವಾಸಿಸುತ್ತಿಿದ್ದರು. ಇಬ್ಬರ ಮಧ್ಯೆೆ ವಿಪರೀತ ಎನ್ನುವಷ್ಟು ಗಳಸ್ಯ-ಕಂಠಸ್ಯ. ದೇವೇಗೌಡರೇ ಇವರ ಸಂಬಂಧ ನೋಡಿ ಆತ್ಮೀಯರ ಮುಂದೆ ಅನೇಕ ಸಲ ಹೇಳಿಕೊಂಡಿದ್ದಿದೆ. ಆದರೆ ಕುಮಾರಸ್ವಾಾಮಿ ತಂದೆಯ ಮಾತುಗಳನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ.

ಮೊನ್ನೆೆ ಕುಮಾರಸ್ವಾಮಿ ಎರಡನೇ ಸಲ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರ ಜತೆ ಒಂದು ಕಾಲಕ್ಕೆ ಇದ್ದ ಸ್ನೇಹಿತರಾರೂ ಇರಲಿಲ್ಲ. ಆ ಜಾಗದಲ್ಲಿ ಬೇರೆಯವರು ಬಂದು ನಿಂತಿದ್ದರು. ಕುಮಾರಸ್ವಾಾಮಿ ಅವರೆಲ್ಲರನ್ನೂ ದೂರ ಸರಿಸಿದ್ದರು. ತಮ್ಮ ಸುತ್ತಲಿದ್ದವರಿಂದ ಬರುವುದೆಲ್ಲಾ ಬಂದ ಮೇಲೆ, ಅವರಿಂದ ಇನ್ನು ಮುಂದೆ ಹೆಚ್ಚು ಪ್ರಯೋಜನ ಆಗುವುದಿಲ್ಲ ಎಂಬುದು ಮನವರಿಕೆ ಆದ ಮೇಲೆ ಮೆತ್ತಗೆ ಅವರೆಲ್ಲರನ್ನೂ ದೂರ ಸರಿಸಿದ್ದರು.

ಒಂದು ಸಂಬಂಧವನ್ನು ಮುಂದುವರಿಸುವುದಕ್ಕಿಿಂತ ಕಡಿದುಕೊಳ್ಳುವುದರಲ್ಲೇ ಹೆಚ್ಚು ಲಾಭವಿದೆ ಎಂಬ ಬದುಕಿನ ಸರಳ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡುವುದರಲ್ಲಿ ಕುಮಾರಸ್ವಾಾಮಿ ಎತ್ತಿದ ಕೈ. ಅವರು ಎಲ್ಲಾ ಸಂಬಂಧಗಳಿಗೂ ಒಂದು ಎಕ್‌ಸ್‌‌ಪೈರಿ ಡೇಟ್‌ನ್ನು ನಿಗದಿಪಡಿಸುತ್ತಾಾರೆ. ಅದು ಕಳೆಯುತ್ತಿದ್ದಂತೆ ಮೆಲ್ಲಗೆ ಜಾರಿಕೊಂಡು ಬಿಡುತ್ತಾಾರೆ. ಅವರಿಗೆ ಯಾರು ಬರಡಾಗುತ್ತಿದ್ದಾರೆ, ಅಪ್ರಸ್ತುತರು ಎಂಬುದು ಬಹಳ ಬೇಗ ಗೊತ್ತಾಾಗುತ್ತದೆ. ಆನಂತರ ಅವರು ಅಂಥವರನ್ನು ತಮ್ಮ ಹತ್ತಿಿರಕ್ಕೆೆ ಇಟ್ಟುಕೊಳ್ಳುವುದಿಲ್ಲ. ಅಂದರೆ ಜನರಿಂದ ಕೆಲಸ ಮಾಡಿಸಿಕೊಂಡು, ಅದಾದ ನಂತರ ಬಾಳೆ ಎಲೆ ತುದಿಯ ಬೇವಿನಸೊಪ್ಪಿಿನಂತೆ ಎಸೆದುಬಿಡುತ್ತಾಾರೆ. ಆ ಜಾಗಕ್ಕೆೆ ಹೊಸಬರು ಬಂದಿರುತ್ತಾಾರೆ. ಇದರಿಂದ ಅವರ ಚಾಕರಿ ಮಾಡಲು ಹೊಸ ಹುರುಪಿನಿಂದ ಬೇರೆಯವರು ಬಂದಿರುತ್ತಾಾರೆ. ನೋಡಿದ ಮುಖಗಳನ್ನೇ ಪದೇಪದೆ ನೋಡುವ ಜಾಯಮಾನ ಅವರಿಗೆ ಒಗ್ಗಿಿ ಬರುವುದಿಲ್ಲ.

ಉದ್ಯಮಿ ರಾಜೀವ ಚಂದ್ರಶೇಖರ ಅವರನ್ನು ಎರಡನೇ ಸಲ ರಾಜ್ಯಸಭಾ ಸದಸ್ಯರನ್ನಾಾಗಿ ಮಾಡಲು ಕುಮಾರಸ್ವಾಾಮಿ ಅವರಿಗೆ ಇಷ್ಟವಿರಲಿಲ್ಲ. ಒಬ್ಬರಿಗೆ ಒಂದು ಛಾನ್‌ಸ್‌ ಕೊಟ್ಟ ನಂತರ ಲಾಭ ಕಡಿಮೆ. ಎರಡನೇ ಅವಧಿಗೆ ಸುತರಾಂ ಇಷ್ಟವಿರಲಿಲ್ಲ. ಆದರೆ ತಂದೆಯವರ ಮಾತಿಗೆ ಕಟ್ಟುಬಿದ್ದು ಮಾಡಿದರು. ಎರಡನೇ ಸಲ ಮಾಡಿದ ನಂತರ ಅವರ ಸಂಬಂಧ ಹಳಸಿಹೋಗಿತ್ತು. ಒಂದು ವೇಳೆ ಸಂಬಂಧ ಚೆನ್ನಾಾಗಿದ್ದಿದ್ದರೆ ರಾಜೀವ ಚಂದ್ರಶೇಖರ ಮೂರನೇ ಅವಧಿಗೆ ಟಿಕೆಟ್ ಕೇಳುತ್ತಿಿದ್ದರು. ಆ ಉಸಾಬರಿಯೇ ಬೇಡವೆಂದು ಅವರೊಂದಿಗಿನ ಸಂಬಂಧ ಹರಿದುಕೊಂಡುಬಿಟ್ಟರು. ರಾಜೀವ ಹೊರತಾಗಿ ಅವರು ಯಾರಿಗೂ ಎರಡನೇ ಅವಧಿಗೆ ಟಿಕೆಟ್ ನೀಡಿದ್ದಿಲ್ಲ. ಕುಪೇಂದ್ರ ರೆಡ್ಡಿಿ ಅವರಿಗೆ ನೀಡಿದ್ದರೆ ಅದಕ್ಕೆೆ ಕಾರಣ ‘ಲಾಭ’ ಮುಂದುವರಿದಿದೆ ಎಂದರ್ಥ. ಇಲ್ಲದಿದ್ದರೆ ‘ಬಾಬಾಜಿ ಕಾ ಘಂಟಾ’!

ಒಬ್ಬರ ಜತೆ ಸುದೀರ್ಘ ಸಂಬಂಧ ಇಟ್ಟುಕೊಳ್ಳುವುದಕ್ಕಿಿಂತ ಹರಿದುಕೊಳ್ಳುವುದರಲ್ಲಿಯೇ ಲಾಭವಿದೆ ಎಂಬ ಹೊಸ ಜೀವನ ಮಂತ್ರವನ್ನು ಬೋಧಿಸಿದ ಹೆಗ್ಗಳಿಕೆ ಕುಮಾರಸ್ವಾಾಮಿಗೇ ಸಲ್ಲಬೇಕು. ಈ ವಿಷಯದಲ್ಲಿ ಅವರು ಸ್ವಲ್ಪವೂ ರಾಜಿ ಮಾಡಿಕೊಳ್ಳುವುದಿಲ್ಲ. ಸಂಬಂಧದ ವಾಯಿದೆ ಮುಗಿಯುತ್ತಿಿದ್ದಂತೆ ನಿರ್ದಾಕ್ಷಿಣ್ಯವಾಗಿ ಅದನ್ನು ಕಡಿದುಕೊಂಡು ಎದ್ದುಬರುತ್ತಾಾರೆ.

ಬಿಜೆಪಿ ಅವರ ಜತೆ ಸೇರಿ ಸರಕಾರ ಮಾಡಿದರು. ಆಗ ಅವರಿಗೆ ಯಡಿಯೂರಪ್ಪ ಅಂದರೆ ಬಹಳ ಅಚ್ಚುಮೆಚ್ಚು. ಇಪ್ಪತ್ತು ತಿಂಗಳ ನಂತರ ಆಡಿದ ಮಾತಿನಂತೆ ಅವರು ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡಬೇಕಿತ್ತು. ಈ ಸಂದರ್ಭದಲ್ಲಿ ಗೊಂದಲ ಎಬ್ಬಿಿಸಿ ಯಡಿಯೂರಪ್ಪ ಅವರಿಗೆ ಅಧಿಕಾರ ಸಿಗದಂತೆ ಮಾಡಿದರು. ಆ ಸಂದರ್ಭದಲ್ಲೂ ಅವರು ಬಳಸಿದ ಕಾರ್ಡ್ ಇದೇ-ಸಂಬಂಧ ಕಡಿದುಕೊಳ್ಳುವುದು! ಸಂಬಂಧ ಕಡಿದುಕೊಂಡರೆ ಅಧಿಕಾರವನ್ನು ಹೇಗೆ ಕೇಳುತ್ತಾಾರೆ? ಕುಮಾರಸ್ವಾಾಮಿ ಅದೇ ಟ್ರಿಿಕ್ ಬಳಸಿದರು. ಸಾಲವಾಗಿ ಹಣ ಪಡೆದ ಕೆಲವರು ಇದೇ ತಂತ್ರ ಮಾಡುವುದುಂಟು. ಅದೇನೆಂದರೆ ಸಂಬಂಧ ಕಡಿದುಕೊಳ್ಳುವುದು. ಒಂದು ಸಲ ಸಂಬಂಧ ಕಡಿದುಕೊಂಡ ನಂತರ ಯಾರೂ ಪದೇಪದೆ ಬಂದು ಹಣಕ್ಕೆೆ ಪೀಡಿಸುವುದಿಲ್ಲ.

ಯಡಿಯೂರಪ್ಪನವರಿಗೆ ಅಧಿಕಾರ ಕೊಡಬೇಕು ಎನ್ನುವ ಹೊತ್ತಿಿಗೆ ಅವರೊಂದಿಗಿನ ಸಂಬಂಧವನ್ನು ಕುಮಾರಸ್ವಾಾಮಿ ಕೆಡಿಸಿಕೊಂಡಿದ್ದರು. ಇಬ್ಬರೂ ಮುಖ-ಮುಖ ನೋಡಿ ಮಾತಾಡುವ ವಾತಾವರಣ ಇರಲಿಲ್ಲ. ಒಳ್ಳೆೆಯ ಸಂಬಂಧವಿದ್ದರೆ ತಾನೇ ಯಡಿಯೂರಪ್ಪನವರಿಗೆ ಅಧಿಕಾರವನ್ನು ಹಸ್ತಾಾಂತರಿಸುವುದು? ಅದರ ಬದಲು ಸಂಬಂಧ ಕೆಡಿಸಿಕೊಂಡು ಬಿಟ್ಟರೆ ಅಧಿಕಾರ ಕೊಡಬೇಕಿಲ್ಲವಲ್ಲ, ಹೀಗಾಗಿ ಬಿಜೆಪಿ ಜತೆಗಿನ ಮೈತ್ರಿಿ ಮುರಿದುಕೊಂಡು ಬಂದರು.

ಮೊನ್ನೆೆ ನಡೆದ ವಿಧಾನ ಸಭಾ ಚುನಾವಣಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದಾಗ, ಕುಮಾರಸ್ವಾಾಮಿ ಅವರು ಬಿಜೆಪಿ ಜತೆ ಹೋಗಬಹುದಿತ್ತು. ಆದರೆ ಅವರಿಗೆ ಹಳೆ ಸ್ನೇಹಿತನಿಗಿಂತ ಹೊಸ ಗೆಳೆಯ ಬೇಕಾಗಿತ್ತು. ಕಾರಣ ಅವರಿಗೆ ಹಳೆ ಸಂಬಂಧ ಮುಂದುವರಿಸುವುದರಲ್ಲಿ ಅಥವಾ ಪುನರ್ ಸ್ಥಾಾಪಿಸುವುದರಲ್ಲಿ ಆಸಕ್ತಿಿ ಇಲ್ಲ. ಕಾರಣ ಬರುವಷ್ಟು ಹೀರಿಕೊಂಡ ನಂತರ ಅವರ ಜತೆಗೆ ಅವರು ವ್ಯವಹಾರ ಮಾಡುವವರಲ್ಲ. ಹೀಗಾಗಿ ಕಾಂಗ್ರೆೆಸ್ ಸೆರಗು ಹಿಡಿಯಲು ನಿರ್ಧರಿಸಿದರು. ಅವರಿಗೂ ಗೊತ್ತಿಿತ್ತು, ಕಾಂಗ್ರೆೆಸ್ ಜತೆಗೆ ಸುದೀರ್ಘ ಸಂಬಂಧ ಸಾಧ್ಯವಿಲ್ಲ ಎಂಬುದು. ಕಾಂಗ್ರೆೆಸ್ ಒಂದೇ ಅಲ್ಲ, ಯಾರ ಜತೆಗೂ ಅವರಿಗೆ ಸುದೀರ್ಘ ಸಂಬಂಧ ಸಾಧ್ಯವಿಲ್ಲ. ಸಂಬಂಧ ಕುದುರಿಸಿಕೊಳ್ಳುವಾಗಲೇ ಅವರು ಎಕ್‌ಸ್‌‌ಪೈರಿ ಡೇಟ್ ಎಳೆದು ಬಿಡುತ್ತಾಾರೆ. ಬರುವುದೆಲ್ಲವೂ ಬಂದ ನಂತರ ಅವರು ಅಲ್ಲಿ ಹೆಚ್ಚು ಹೊತ್ತು ನಿಂತು ಕಾಲಹರಣ ಮಾಡುವುದಿಲ್ಲ.

ಸುಮಾರು ಹದಿನೈದು ತಿಂಗಳ ಕಾಲ ಕಾಂಗ್ರೆೆಸ್ ಜತೆ ಸೇರಿ ಸರಕಾರ ಮಾಡಿದ ನಂತರ, ಅವರಿಗೆ ಈ ವ್ಯವಸ್ಥೆೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎಂಬುದು ಗೊತ್ತಾಾಗಲಾರಂಭಿಸಿತು. ನಿಧಾನವಾಗಿ ಸಂಬಂಧ ಮುರಿದುಕೊಳ್ಳಲು ಮಾನಸಿಕವಾಗಿ ಸಿದ್ಧರಾಗಲು ನಿರ್ಧರಿಸಿದರು.

ಸರಕಾರ ಪತನವಾಗುತ್ತಿಿದ್ದಂತೆ ಈಗ ತಾನು ಯಾರ ಕೃಪೆಯಿಂದ ಮುಖ್ಯಮಂತ್ರಿಿ ಆಗಿದ್ದೆೆನೋ ಅದನ್ನು ಮರೆತು ಅವರ ವಿರುದ್ಧವೇ ಈಗ ಟೀಕಾ ಪ್ರಹಾರ ಆರಂಭಿಸಿದ್ದಾರೆ. ‘ಹೊಳೆ ದಾಟಿದ ನಂತರ ಅಂಬಿಗ ಮಿಂಡ’ ಎಂಬ ಗಾದೆ ಮಾತನ್ನು ಮತ್ತೊೊಮ್ಮೆೆ ನಿಜ ಮಾಡಿದ್ದಾರೆ. ತಮ್ಮ ಹುಟ್ಟು ಗುಣ ಘಟ್ಟ ಹತ್ತಿಿದರೂ ಹೋಗದು ಎಂಬುದನ್ನು ಮತ್ತೊೊಮ್ಮೆೆ ಸಾಬೀತುಪಡಿಸಿದ್ದಾರೆ. ಈಗ ತಾವು ಮುಖ್ಯಮಂತ್ರಿಿಯಾಗಲು ಕಾರಣರಾಗಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತಾಡುತ್ತಿಿದ್ದಾರೆ. ಬರುವ ಉಪ ಚುನಾವಣೆಯಲ್ಲಿ ತಮ್ಮ ಪಕ್ಷವಾದ ಜೆಡಿಎಸ್‌ಗೆ, ಕಾಂಗ್ರೆೆಸ್ಸೇ ಮೊದಲ ವೈರಿ ಎಂದು ಹೇಳುತ್ತಾಾರೆಂದರೆ ಕುಮಾರಸ್ವಾಾಮಿ ಅವರ ನಿಯತ್ತು ಏನು ಮತ್ತು ಅವರು ಸಂಬಂಧಕ್ಕೆೆ ಎಷ್ಟು ಬೆಲೆ ಕೊಡುತ್ತಾಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಈಗ ಕುಮಾರಸ್ವಾಾಮಿ ಅವರಿಗೆ ಕಾಂಗ್ರೆೆಸ್ ಜತೆಗಿನ ಸಂಬಂಧ ಹರಿದುಕೊಳ್ಳುವುದರಲ್ಲಿ ಲಾಭವಿದೆ. ಕಾರಣ ಸದ್ಯಕ್ಕಂತೂ ಕಾಂಗ್ರೆೆಸ್ಸಿಿನ ಹಂಗಿಲ್ಲ. ಅವರಿಂದ ಯಾವುದೇ ಪ್ರಯೋಜನ ಇಲ್ಲ. ಮೂವತ್ತೇಳು ಸೀಟು ಪಡೆದ ತಾವು ಮುಖ್ಯಮಂತ್ರಿಿ ಆದದ್ದು ಸಿದ್ದರಾಮಯ್ಯ ಅವರ ಕೃಪಾಕಟಾಕ್ಷದಿಂದ ಎಂಬ ಸಣ್ಣ ಕೃತಜ್ಞತೆಯೂ ಅವರಿಗಿಲ್ಲ. ಏಕೆಂದರೆ ಕಾಂಗ್ರೆೆಸ್ ಎಂಬತ್ತು ಸ್ಥಾಾನ ಪಡೆದಿದ್ದರೆ ಅದಕ್ಕೆೆ ಸಿದ್ದರಾಮಯ್ಯ ಅವರೇ ಕಾರಣ. ಅವರ ಋಣದಿಂದ ಮುಖ್ಯಮಂತ್ರಿಿಯಾಗಿ ಒಂದೂವರೆ ವರ್ಷಗಳ ಕಾಲ ಅಧಿಕಾರ ಅನುಭವಿಸಿದ ವ್ಯಕ್ತಿಿಗೆ ಸ್ವಲ್ಪವೂ ಕೃತಜ್ಞತೆಯ ಭಾವವೇ ಇಲ್ಲ ಎಂದರೆ ಅವರಲ್ಲಿ ಅದೆಂಥ ಧೂರ್ತತೆ ಇರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಸಿದ್ದರಾಮಯ್ಯ ಅವರು ಹೇಳಿದಂತೆ ಅವರಿಗೆ ಈ ಜನ್ಮದಲ್ಲಿ ಮುಖ್ಯಮಂತ್ರಿಿ ಆಗುವುದು ಸಾಧ್ಯವಿರಲಿಲ್ಲ. ಮೂವತ್ತೇಳು ಸೀಟು ಪಡೆದವರು ಸಿಎಂ ಆಗುವುದು ತಮಾಷೆಯಾ? ಸಿದ್ದರಾಮಯ್ಯ ಅವರು ಸಹಕರಿಸದಿದ್ದರೆ ಅವರ ಸರಕಾರ ಒಂದು ವರ್ಷ ಸಹ ದಾಟುತ್ತಿಿರಲಿಲ್ಲ. ಈ ಉಪಕಾರ ಸ್ಮರಣೆಯ ಭಾವವೇ ಕುಮಾರಸ್ವಾಾಮಿ ಅವರಿಗೆ ಇಲ್ಲದಿರುವುದು ಅವರ ನೀಚ ಸ್ವಾಾರ್ಥಕ್ಕೆೆ ಸಾಕ್ಷಿ. ಇಲ್ಲದಿದ್ದರೆ ಈ ಜನ್ಮದಲ್ಲಿ ಅವರು ಮತ್ತೊೊಮ್ಮೆೆ ಮುಖ್ಯಮಂತ್ರಿಿ ಆಗುವುದು ಸಾಧ್ಯವೇ ಇರಲಿಲ್ಲ. ಈ ನೆನೆಯುವ ಗುಣವೂ ಆ ಯಾರಿಗೆ ಇಲ್ಲವಲ್ಲ? ತಮಗೆ ಉಪಕಾರ ಮಾಡಿದವರಿಗೇ ಕೈ ಕಚ್ಚುತ್ತಿಿದ್ದಾರೆ.

ಇದು ಮನುಷ್ಯತ್ವ ಇಲ್ಲದಿರುವವರು ನಡೆದುಕೊಳ್ಳುವ ರೀತಿ. ತಮಗೆ ಕಾಂಗ್ರೆೆಸ್ ನಾಯಕರು ಅಧಿಕಾರ ಅನುಭವಿಸಲು ಅವಕಾಶ ಕೊಟ್ಟಿಿದ್ದಾರೆ, ಅವರಿಗೆ ತಾವು ಉಪಕೃತರಾಗಿರಬೇಕು ಎಂಬ ಕನಿಷ್ಠ ಸೌಜನ್ಯವೂ ಕುಮಾರಸ್ವಾಾಮಿ ಅವರಿಗೆ ಇಲ್ಲವಲ್ಲ, ಇದು ದುರ್ದೈವ!

ಉಪಕಾರ ಸ್ಮರಣೆ ಇಲ್ಲದ ವ್ಯಕ್ತಿಿ ಮೃಗೀಯ ಗುಣ ಹೊಂದಿರುತ್ತಾಾನೆ ಎಂಬ ಮಾತನ್ನು ಅವರು ತಮ್ಮ ನಡೆ-ನುಡಿಗಳಿಂದ ಸಾಬೀತು ಮಾಡುತ್ತಿಿದ್ದಾರೆ. ಕುಮಾರಸ್ವಾಾಮಿ ಅವರು ಈ ಜನ್ಮದಲ್ಲಿ ಬಿಜೆಪಿ ಅಥವಾ ಕಾಂಗ್ರೆೆಸ್ ಸಹಾಯವಿಲ್ಲದೇ ಮುಖ್ಯಮಂತ್ರಿಿ ಆಗಲು ಸಾಧ್ಯವಿಲ್ಲ. ಸ್ವಂತ ಬಲದಿಂದ ಗೆದ್ದು ಬರುವ ತಾಕತ್ತು ಅವರಿಗಿಲ್ಲ. ಅವರೊಂಥರಾ ಪರಾವಲಂಬಿ ಜಂತು ಹುಳು ಇದ್ದಂತೆ! ಬೇರೆಯವರ ಹೊಟ್ಟೆೆಯಲ್ಲಿ, ಅವರು ತಿಂದಿದ್ದನ್ನು ತಿಂದು ಜೀವನ ಸಾಗಿಸಬೇಕು. ಅದು ಅವರಿಗೂ ಗೊತ್ತಿಿದೆ. ಆದರೆ ತಮಗೆ ಉಪಕಾರ ಮಾಡಿದವರ ಕೈಗೇ ಕಚ್ಚುವ ಅವರ ನಡೆಯನ್ನು ರಾಜ್ಯದ ಜನ ಅನೇಕ ಸಲ ನೋಡಿದ್ದಾರೆ. ಜನರನ್ನು ಪದೇಪದೆ ಮೂರ್ಖರನ್ನಾಾಗಿ ಮಾಡುವುದು ಅಸಾಧ್ಯ.

ಸಿದ್ದರಾಮಯ್ಯ ಅವರ ಬಗ್ಗೆೆ ಕುಮಾರಸ್ವಾಾಮಿ ಹೇಳುತ್ತಿಿರುವ ಮಾತುಗಳನ್ನು ಕೇಳಿಸಿಕೊಂಡರೆ, ಈ ಮನುಷ್ಯ ಯಾವ ಹಂತಕ್ಕೆೆ ಬೇಕಾದರೂ ಹೋಗಬಲ್ಲರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ‘ಮಲಗಲು ಆಸರೆಯಾದವರ ಮನೆಯಲ್ಲಿ ಮಲ ವಿಸರ್ಜಿಸಿ ಹೋದರು..’ ಎಂಬಂತೆ ಕುಮಾರಸ್ವಾಾಮಿ ಎಲ್ಲವನ್ನೂ ರಾಜಕೀಯ ಮಸೂರದಲ್ಲಿ ನೋಡುವ ಬದಲು ಮಾನವೀಯತೆಯ ಬಿಂಬದಲ್ಲೂ ಬದುಕು ನೋಡಲಿ. ಕೊನೆಗೂ ನಾವು ಮಾಡಿದ ಕರ್ಮಗಳಿಂದಲೇ ಪ್ರಾಾಯಶ್ಚಿಿತ ಮಾಡಿಕೊಳ್ಳಬೇಕು ಎಂಬುದನ್ನು ಅವರು ಅರಿತುಕೊಳ್ಳಲಿ.
==

Leave a Reply

Your email address will not be published. Required fields are marked *