Tuesday, 31st January 2023

ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸುತ್ತಿರುವುದು ಶ್ಲಾಘನೀಯ

ಬೆಂಗಳೂರು: ಬದುಕು ಕಟ್ಟಿಕೊಳ್ಳಲು ಬಂದವರು ನಮ್ಮ ಆಚರಣೆ, ಪದ್ದತಿ ಬಿಟ್ಟು ಹೋಗಬಾರದೆಂದು, ಈ ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸುತ್ತಿರು ವುದು ಶ್ಲಾಘನೀಯ ಎಂದು ಅರೆಭಾಷೆ ಅಕಾಡೆಮಿಯ ಪೂರ್ವಭಾವಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಹೇಳಿದರು.

ಅವರು ಡಿ.04ರಂದು ಕಬ್ಬನ್ ಪಾರ್ಕ್ ಬಳಿಯ ಕರ್ನಾಟಕ ಸಚಿವಾಲಯ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಗೌಡ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ದೀಪಾವಳಿ ಬಲೀಂದ್ರ ಹಬ್ಬದ ಆಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕೃಷಿ ಸಂಸ್ಕೃತಿಯ ಹಿನ್ನೆಲೆ ಉಳ್ಳ ನಾವು ಬಲೀಂದ್ರನನ್ನು ನೆನೆಸಿಕೊಂಡು ಸೇರಿಕೊಳ್ಳುವ ಕಾರ್ಯ ಕ್ರಮ ಇದಾಗಿದ್ದು, ಈ ಸಂಬಂಧ ವನ್ನು ತಲೆಮಾರಿನುದ್ದಕ್ಕು ಬೆಸೆಯುವ ಕೊಂಡಿಯಾಗಿ ಯುವ ಜನರು ಹೆಚ್ಚಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಸಭಾದಕ್ಷತೆಯನ್ನು ಓಂ ಪ್ರಕಾಶ್ ವಹಿಸಿಕೊಂಡರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಗೌಡ ಸಮಾಜದ ಪ್ರತಿಭೆಯನ್ನು ಗುರುತಿಸಿ ಗೌರವಿಸಲಾಯಿತು. ಕನ್ನಡ ಡ್ರಾಮಾ ಜೂನಿಯರ್ ಖ್ಯಾತಿಯ ತುಷಾರ್ ಗೌಡ ಸುಳ್ಯ ಮತ್ತು ಗಾನ ಪ್ರತಿಭೆ ಬಾಲಕಿ ಜ್ಞಾನ, ನಾಮಧಾರಿ ಬೀಜತಳಿ ಸಂಸ್ಥೆಯ ಉಪಾಧ್ಯಕ್ಷರಾದ ಸಂಶೋಧಕ ಸುಬ್ರಹ್ಮಣ್ಯ ಮದುವೆಗದ್ದೆ, ಮತ್ತು ಎಲೆಕ್ಟ್ರಾ ನಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ವಾತಿ ಎಲೆಕ್ಟ್ರಾನಿಕ್ಸ್ ನ ಮಾಲಿಕರು ಶಿವಪ್ಪ ಮಡಿಯಾಲ ರನ್ನು ಸನ್ಮಾನಿಸಲಾಯಿತು. ಅರೆಭಾಷೆ ಅಕಾಡೆಮಿಯ ಅಭ್ಯು ದಯಕ್ಕೆ ಶ್ರಮಿಸಿದ ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರನ್ನು ಗೌರವಿಸಲಾ ಯಿತು. ಈ ವೇಳೆ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ ಪುರುಷೋತ್ತಮ ಎಂ., ಬಿ ನಾರಾಯಣ, ವಿಶೇಷ ಆಹ್ವಾನಿತರಾದ ನಳಿನಾಕ್ಷ ಗೌಡ ಬೋಜಾರ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತ ರಿದ್ದರು.

ವಿವಿಧ ರೀತಿಯ ಪ್ರತಿಭಾಪ್ರದರ್ಶನಕ್ಕೆ ಅವಕಾಶ ಹಾಗೂ ಶ್ರೀ ದೇವಿ ಮಹಿಷ ಮರ್ದಿನಿ ಯಕ್ಷಗಾನ ಸುಂದರವಾಗಿ ನಡೆಯಿತು. ಯಕ್ಷಗಾನ ಸಂಘದ ಅಡಳಿತ ಮಂಡಳಿಯ ಸದಸ್ಯರಾದ ಸತೀಶ್ ಅಗ್ಪಲ ಹಾಗು ಕುಸುಮಾಧರ ಕೆಮ್ಮಾರ ಇವರ ನಿರ್ದೇಶನದಲ್ಲಿ ನಡೆಯಿತು. ಶ್ರೀದೇವಿಯ ಪಾತ್ರವನ್ನು ಕುಸುಮಾಧರ ಕೆಮ್ಮಾರ ಸ್ವತಃ ನಿರ್ವಹಿಸಿದ್ದರು.

ಸ್ವಾಗತ ಲಕ್ಷ್ಮೀನಾರಾಯಣ ಸಿ ಎಚ್, ಪ್ರಾಸ್ತಾವಿಕ ನುಡಿ ಬಿ ನಾರಾಯಣ , ಧನ್ಯವಾದ ಪುರುಷೋತ್ತಮ ಅಗ್ಪಲ ಮಾಡಿದರು. ನಿರೂಪಣೆಯನ್ನು ಸಂದೀಪ್ ದೇವರಗುಂಡ ನಡೆಸಿ ಕೊಟ್ಟರು.

error: Content is protected !!