Tuesday, 7th December 2021

ಮುಂದಿನ ವರ್ಷ ಅದ್ಧೂರಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ

ಬೆಂಗಳೂರು: ಕರೋನಾ ಕಾರಣದಿಂದಾಗಿ ಕಳೆದ ಮೂರು ವರ್ಷ ರದ್ದುಗೊಂಡಿದ್ದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ವನ್ನು ಈ ಬಾರಿ 2022ರ ಜನವರಿಯಲ್ಲಿ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ.

ಕೋವಿಡ್ ಹಿನ್ನಲೆಯಲ್ಲಿ ಕಳೆದ ಮೂರು ಬಾರಿ ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆಸಲಾಗುತ್ತಿದ್ದ ಫಲ ಪುಷ್ಪ ಪ್ರದರ್ಶನವನ್ನು ರದ್ದುಗೊಳಿಸಲಾಗಿತ್ತು. ಹೀಗೆ ಕರೋನಾ ಕಾರಣದಿಂದ ರದ್ದುಗೊಂಡಿದ್ದ ಫಲಪುಷ್ಪ ಪ್ರದರ್ಶನ, 2022ರ ಜನವರಿಯಲ್ಲಿ ಅದ್ಧೂರಿಯಾಗಿ, ನೂತನ ಥೀಮ್ ನಡಿ ನಡೆಸಲು ನಿರ್ಧಾರವಾಗಿದೆ.

ಮೈಸೂರು ಉದ್ಯಾನ ಕಲಾಸಂಘ ಮತ್ತು ರಾಜ್ಯ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ನಡೆಯಲಿರುವಂಥ ಮುಂಬರುವ 2022ರ ಜನವರಿಯ ಗಣರಾಜ್ಯೋತ್ಸವಕ್ಕೆ, ಯಾವ ಥೀಮ್ ನಡಿಯಲ್ಲಿ ನಡೆಸಬೇಕು ಎನ್ನುವ ಚಿಂತನೆ ನಡೆಸಲಾಗುತ್ತಿದೆ.