Friday, 27th May 2022

ಮಠಾಧೀಶರು, ರಾಜಕಾರಣಿಗಳು ಅವರ ನೆರವಿಗೆ ಧಾವಿಸಿ

ಚಿತ್ರದುರ್ಗ : 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣ ರಾಜ್ಯ ಅನಾವರಣವಾಯಿತು. ಆಗ ಎಲ್ಲರು ಕಲ್ಯಾಣ ಕೈಬೀಸಿ ಕರೆಯುತ್ತಿದೆ ಎಂದರು. ಆದರೆ ಪ್ರಸಕ್ತ ದಿನಮಾನಗಳಲ್ಲಿ ನಾಡಿನ ಜನರು ಕರೋನಾ, ಪ್ರವಾಹದಿಂದ ತತ್ತರಿಸಿದ್ದಾರೆ. ಕರ್ತವ್ಯದಲ್ಲಿರುವ ಮಠಾಧೀಶರು, ರಾಜಕಾರಣಿಗಳು ಅವರ ನೆರವಿಗೆ ಧಾವಿಸಬೇಕೆಂದು ಡಾ. ಶಿವಮೂರ್ತಿ ಮುರುಘಾಮಠದ ಶರಣರು ಹೇಳಿದರು.

ಅವರು ಗುರುವಾರ ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮದ 500ಕ್ಕು ಹೆಚ್ಚು ಪ್ರವಾಹ ಪೀಡಿತ ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.

ಒಂದು ಕಡೆ ಕರೊನಾ ಸೃಷ್ಟಿಸಿದ ಅಹಸಾಯಕತೆ, ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಕರ್ನಾಟಕದಲ್ಲಿ ಇನ್ನೂ ಸೋಂಕು ಕಡಿಮೆಯಾಗಿಲ್ಲ. ಅದು ಭೀಕರತೆ ಸೃಷ್ಟಿ ಮಾಡಿತ್ತು. ಅಲ್ಲದೆ ಅತೀಯಾಗಿ ಮಳೆ ಸುರಿದು ನದಿ, ಕೆರೆಗಳು ಹರಿದು, ಊರು ಕೇರೆಗೆ ತೊಂದರೆ ಮಾಡಿರುವುದು ಅಪಾಯವನ್ನು ಉಂಟು ಮಾಡಿದ್ದು ವಿಷಾದನೀಯ ಎಂದರು.

ಕೊರೊನಾ ಸೋಂಕು, ಪ್ರವಾಹದಿಂದ ಮಾನವ ಜೀವನ ತತ್ತರಿಸಿ ತೊಂದರೆಗೊಳಗಾಗಿದೆ. ಇಂಥ ಸಂದರ್ಭದಲ್ಲಿ ಜನರಿಗೆ ಯಾವ ರೀತಿ ಸಾಂತ್ವನ ಹೇಳಬೇಕು. ಅಲ್ಲದೇ ಸಮಾಜದಿಂದ ಕೆಲವು ಪ್ರಶ್ನೆಗಳು ಬರುತ್ತವೆ ಸಂತರ ಸ್ವಾಮೀಜಿಗಳ ಕಾರ್ಯವೇನು ಎಂದು. ಆದರೆ ನಾಡಿಗೆ ದುಃಖ, ಸಮಸ್ಯೆಗೆ ಬಂದಾಗ ದೈರ್ಯ ತುಂಬುವುದು ಜನರಿಗೆ ನಾವು ಆತ್ಮಸ್ಥೈರ್ಯ ತುಂಬುದು ಅಗತ್ಯವಾಗಿದೆ ಎಂದು ಹೇಳಿದರು.