Tuesday, 7th December 2021

ಲೀಚನ್ ಸ್ಟನ್: ವಿಶ್ವಕ್ಕೊಂದು ಹೊಸ ಭರವಸೆ

Lichen sten

ತನ್ನಿಮಿತ್ತ

ವಿಜಯ್ ದರ್‌ಡ, ಹಿರಿಯ ಪತ್ರಕರ್ತ, ಅಧ್ಯಕ್ಷರು, ಲೋಕಮತ್ ಮಿಡಿಯಾ

ಮಹಿಳೆಯರ ವಿರುದ್ಧ ದೌರ್ಜನ್ಯದ ಕುರಿತು ೨೮ ವರ್ಷಗಳಿಂದ ಅಂತಾರಾಷ್ಟ್ರೀಯ ದಿನ ಆಚರಣೆಯಲ್ಲಿದೆ? ಏನಾದರೂ ಪರಿಣಾಮವಾಗಿದೆಯೇ? ವಾಸ್ತವ ವೆಂದರೆ ನಮ್ಮ ಜನಸಂಖ್ಯೆಯ ಶೇ.೫೦ ಭಾಗ ಇನ್ನೂ ಸ್ವಾತಂತ್ರ್ಯವಿಲ್ಲದೇ ಒದ್ದಾಡುತ್ತಿದೆ. ವಿಶ್ವದೆಲ್ಲೆಡೆ ಕಠಿಣವಾದ ಕಾನೂನು ಜಾರಿಯಲ್ಲಿದ್ದಾಗ್ಯೂ ಮಹಿಳೆಯರ ಕುರಿತಾಗಿ ಪುರುಷರ ಮನಃಸ್ಥಿತಿ ಇನ್ನೂ ಬದಲಾಗಿಲ್ಲ.

ನನ್ನ ಇತ್ತೀಚಿನ ಸ್ವಿಜರ್‌ಲೆಂಡ್ ಭೇಟಿಯ ವೇಳೆ ನಾನು ಪಕ್ಕದಲ್ಲಿರುವ ಪುಟ್ಟರಾಷ್ಟ್ರ ಲೀಚನ್‌ಸ್ಟನ್ ಗೂ ಭೇಟಿಕೊಟ್ಟಿದ್ದೆ. ಅಲ್ಲಿನ ಜನರನ್ನು ಮಾತನಾಡಿಸಿದ್ದೆ. ಯುರೋಪ್ ಖಂಡದ ಈ ಪುಟ್ಟ ರಾಷ್ಟ್ರದ ರೋಚಕ ಕಥೆಯೊಂದನ್ನು ಹೇಳುವ ಮುನ್ನ ಒಂದು ಸಂಗತಿ ನೆನಪಿಸ ಬಯಸುತ್ತೇನೆ. ಅದು ನವೆಂಬರ್ ೨೫ ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿವಸದ ಬಗ್ಗೆ. ಯು.ಎನ್ ಜನರಲ್ ಅಸೆಂಬ್ಲಿಯಲ್ಲಿ ೧೯೯೩ರಲ್ಲಿ ಅಂಗೀಕೃತವಾದ ಗೊತ್ತುವಳಿ ಯನ್ವಯ ಈ ದಿನದ ಆಚರಣೆ ಅಸ್ತಿತ್ವಕ್ಕೆ ಬಂತು. ಈ ಬಾರಿಯ ವಿಶೇಷವೆಂದರೆ ಈ ಆಚರಣೆ ಡಿಸೆಂಬರ್ ೧೦ರಂದು ನಡೆಯಲಿರುವ ಮಾನವಹಕ್ಕುಗಳ ದಿನದ ವರೆಗೂ ವಿಸ್ತರಣೆಯಾಗಿದೆ.

ಹೆಣ್ಣುಮಕ್ಕಳ ಮತ್ತು ಮಹಿಳೆ ಯರ ಮೇಲೆ ನಡೆಯುವ ಎಲ್ಲ ಬಗೆಯ ದೌರ್ಜನ್ಯಗಳನ್ನು ತಡೆಯುವುದು ಈ ಆಚರಣೆಯ ಹಿಂದಿರುವ ಉದ್ದೇಶ. ಮಹಿಳೆಯರು ತಮ್ಮ ಗುರಿಯನ್ನು ತಾವೇ ಸ್ವತಃ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಿದ್ದು ಯಾರೂ ಅವರ ಭಾವನೆ ಮತ್ತು ಹಕ್ಕುಗಳ ಮೇಲೆ ಆಕ್ರಮಣ ಮಾಡಕೂಡದು ಎಂಬುದು ಕೂಡ ಇದರ ಉದ್ದೇಶಗಳಲ್ಲೊಂದು. ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನಾಚರಣೆಯನ್ನು ನಾವು ನಿರಂತರ ೨೮ ವರ್ಷಗಳಿಂದ ಆಚರಿಸುತ್ತಲೇ ಇದ್ದೇವೆ. ಹೀಗಾಗಿ ಮಹಿಳೆಯರ ವಿರುದ್ಧದ ದೌರ್ಜನ್ಯದ ಪ್ರಮಾಣವೇನಾದರೂ ಕಡಮೆಯಾಗಿದೆಯೇ ಎಂಬುದನ್ನು ಈ ಹಂತದಲ್ಲಿ ಒರೆಗೆ ಹಚ್ಚಿ ನೋಡ ಬೇಕಾಗುತ್ತದೆ. ಜತೆಗೆ ಬಹುಮುಖ್ಯವಾಗಿ ಲೈಂಗಿಕ ದೌರ್ಜನ್ಯದ ಪ್ರಮಾಣ ಕಡಿಮೆಯಾಗಿದೆಯೇ ಎಂಬುದನ್ನು ಕೂಡ ಪರಿಗಣಿಸಬೇಕಿದೆ.

ಮಧ್ಯ ಯುರೋಪಿನ ಆಸ್ಟ್ರಿಯಾ ಮತ್ತು ಸ್ವಿಜರ್‌ಲೆಂಡ್ ನಡುವೆ ಇರುವ ಪುಟ್ಟ ರಾಷ್ಟ್ರ ಲಿಚನ್‌ಸ್ಟನ್‌ನ ಕಥೆಯನ್ನು ಇಲ್ಲಿ ನಿಮಗೆ ಹೇಳುವುದು ಸೂಕ್ತವೆನಿಸುತ್ತದೆ. ಮಹಿಳಾ ದೌರ್ಜನ್ಯಗಳ ಮೂಲೋತ್ಪಾಟನೆ ಮಾಡಬಹುದು ಎಂಬುದನ್ನು ಈ ಪುಟ್ಟರಾಷ್ಟ್ರ ವಿಶ್ವಕ್ಕೇ ತೋರಿಸಿಕೊಟ್ಟಿದೆ. ಈ ರಾಷ್ಟ್ರದ ಒಟ್ಟಾರೆ ಜನಸಂಖ್ಯೆ ೪೦ ಸಾವಿರಕ್ಕಿಂತ ಕಡಿಮೆ ಇದ್ದು ಅಲ್ಲಿ ೧೨೬ ಪುರುಷರಿಗೆ ೧೦೦ ಮಹಿಳೆಯರಿದ್ದಾರೆ. ಇಷ್ಟೊಂದು ಅಸಮ ಲಿಂಗಾನುಪಾತ ಇದ್ದರು ಸಹ ಅಲ್ಲಿ ೨೦೨೦ರಲ್ಲಿ
ಒಂದೇ ಒಂದು ಅತ್ಯಾಚಾರದ ಪ್ರಕರಣ ದಾಖಲಾಗಿಲ್ಲ.

ಲಿಂಗಾನುಪಾತದಲ್ಲಿರುವ ದೊಡ್ಡ ಅಸಮಾನತೆಯನ್ನು ಇಲ್ಲಿ ಮತ್ತೆ ಉಲ್ಲೇಖಿಸಬೇಕಿದೆ. ಲಿಚನ್‌ಸ್ಟನ್ ಹೊಸತೊಂದು ಕಠಿಣ ಕಾನೂನನ್ನು ಜಾರಿಗೆ ತಂದಿದ್ದು
ಅದು ಗರ್ಭಪಾತವನ್ನು ನಿಷೇಽಸಿದೆ. ಇಲ್ಲಿ ಪೋಲೀಸರು ಎಲ್ಲ ಬೀದಿಬೀದಿಗಳಲ್ಲಿ ಗಸ್ತು ಹೊಡೆಯುತ್ತಿದ್ದಾರೆಂಬುದು ಅತ್ಯಾಚಾರ ಪ್ರಕರಣಗಳು ನಡೆಯದೇ ಇರುವುದಕ್ಕೆ ಕಾರಣವಲ್ಲ. ವಾಸ್ತವ ಸಂಗತಿ ಎಂದರೆ ಇಡೀ ರಾಷ್ಟ್ರದ ೧೬೦ ಚದರ ಕಿಲೋಮೀಟರ್ ವ್ಯಾಪ್ತಿಯನ್ನು ನಿಭಾಯಿಸಲು ಅಲ್ಲಿ ಇರುವುದು ೧೨೫ ಪೋಲೀಸರು ಮಾತ್ರ. ಅದರಲ್ಲಿ ೯೦ ಅಽಕಾರಿಗಳೂ ಸೇರಿದ್ದಾರೆ.

ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆಗೆ ಲಿಚನ್‌ಸ್ಟನ್ ಒಂದು ಝೀರೋ ಟಾಲರೆನ್ಸ್ ಪಾಲಿಸಿಯನ್ನು ಜಾರಿಗೆ ತಂದಿದೆ. ಸಮಾಜದಲ್ಲಿ ಮಹಿಳೆಯರ ಪರವಾಗಿ ಗೌರವಾದರಗಳನ್ನು ದೃಢಪಡಿಸುವ ಕೆಲಸದಲ್ಲೂ ಅದು ಯಶಸ್ವಿಯಾಗಿದೆ. ಇದೆಲ್ಲದಕ್ಕೂ ಇನ್ನೊಂದು ಕಾರಣವೆಂದರೆ ಅಲ್ಲಿನ ಶೇ.೧೦೦ ಅಕ್ಷರಸ್ಥ ಜನಸಂಖ್ಯೆ. ಈ ರಾಷ್ಟ್ರ ದೌರ್ಜನ್ಯ ರಹಿತ ವಾತಾವರಣ ನಿರ್ಮಾಣ ಮಾಡುವ ಮೂಲಕ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ವಿಶ್ವಕ್ಕೇ ಒಂದು ಮಾದರಿಯನ್ನು ಸೃಷ್ಟಿಸಿ ತೋರಿಸಿದೆ.

ನಾವು ಸಾಮಾಜಿಕವಾಗಿ, ಸರಕಾರಿ ಮಟ್ಟದಲ್ಲಿ ಮತ್ತು ಖಾಸಗಿ ವಲಯದಲ್ಲಿ ನಿಶ್ಚಿತ ಧೋರಣೆಯನ್ನು ಹೊಂದಿದ್ದರೆ, ಯಾವುದೇ ವಿಚಾರದಲ್ಲಿ ಗೆಲುವು ಕಾಣದೇ ಇರುವುದು ಸಾಧ್ಯವೇ ಇಲ್ಲ. ಮಹಿಳೆಯರ ವಿರುದ್ಧದ ದೌರ್ಜನ್ಯದ ಕುರಿತಾಗಿ ನಾವು ಭಾರತೀಯರು ತುಂಬಾ ಗಂಭೀರ ಕಾಳಜಿಯನ್ನು ಹೊಂದಿದ್ದೇವೆ.
ಆದಾಗ್ಯೂ ನಮ್ಮಲ್ಲಿ ನಡೆಯುವ ದೌರ್ಜನ್ಯದ ಪ್ರಕರಣಗಳು ವಿಪರೀತವಾಗಿದೆ. ಈಗಲೂ ನಮ್ಮ ದೇಶದಲ್ಲಿ ಪ್ರತಿದಿನ ಸರಿಸುಮಾರು ೮೦ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ. ಇದಲ್ಲದೇ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು ಪ್ರತಿ ೩ ನಿಮಿಷಕ್ಕೊಂದರಂತೆ ನಡೆಯುತ್ತಲೇ ಇರುತ್ತದೆ. ಅಮೆರಿಕ, ರಷ್ಯಾ, ಚೈನಾ, ಜಪಾನ್ ಮತ್ತು ನಮ್ಮ ನೆರೆಹೊರೆಯ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶಗಳ ಪರಿಸ್ಥಿತಿಯನ್ನು ನಾನು ಸ್ಥೂಲವಾಗಿ ಅವಲೋಕನ ಮಾಡಿದ್ದೇನೆ. ಇಲ್ಲೆಲ್ಲೂ ಮಹಿಳೆಯರು ಸುರಕ್ಷಿತರಾಗಿಲ್ಲ. ನಮ್ಮ ದೇಶದಲ್ಲಂತೂ ಮಹಾಭಾರತದ ಕಾಲದಿಂದಲೂ ಮಹಿಳಾ ದೌರ್ಜನ್ಯದ  ಪ್ರಕರಣಗಳು ಸಾಕಷ್ಟು ನಡೆದಿವೆ, ನಡೆಯುತ್ತಲೇ ಇವೆ.

ಆದರೆ ಇತ್ತೀಚಿನ ದಿನಗಳಲ್ಲಿ ಅಪಘಾನಿಸ್ತಾನದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಬರ್ಬರ ದೌರ್ಜನ್ಯ ಪ್ರಕರಣಗಳು ಈ ಎಲ್ಲ ಎಲ್ಲೆ-ಮಿತಿಗಳನ್ನು
ಮೀರಿ ಮುಂದುವರೆದಿವೆ. ಅಲ್ಲಿನ ತಾಲಿಬಾನ್ ಆಡಳಿತ ಮಹಿಳೆಯರನ್ನು ಅತ್ಯಂತ ಕ್ರೂರ ಮತ್ತು ಬರ್ಬರ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ. ಆದಾಗ್ಯೂ ಇಡೀ ವಿಶ್ವ
ಮೂಕಪ್ರೇಕ್ಷಕನಾಗಿ ಅದನ್ನು ನೋಡುತ್ತ ಕುಳಿತಿದೆ. ನಾಗರಿಕತೆ ಹುಟ್ಟುವುದಕ್ಕೂ ಮೊದಲಿನ ದಿನಗಳಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳು ತಥಾಕಥಿತ ನಾಗರಿಕತೆ
ಇರುವ ಈ ದಿನಗಳಲ್ಲೂ ಎಗ್ಗುಸಿಗ್ಗಿಲ್ಲದೇ ಮುಂದುವರಿದಿವೆ, ಅನಾಥ ಮಹಿಳೆಯರೇ ಇದಕ್ಕೆ ಹೆಚ್ಚಾಗಿ ಬಲಿಪಶುಗಳಾಗುತ್ತಿದ್ದಾರೆ.

ಹೀಗಿರುವಾಗ ಇಡೀ ವಿಶ್ವ ನವೆಂಬರ್ ೨೫ರಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನಾಚರಣೆ ಆಚರಿಸುವುದರಲ್ಲಿ ಅರ್ಥದೆಯೇ? ಆ-ನ್ ಮಹಿಳೆಯರು ತಾಲಿಬಾನಿಗಳ ಅಟ್ಟಹಾಸದ ಪರಿಣಾಮವಾಗಿ ಕತ್ತಲ ಕೂಪದಲ್ಲಿ ನರಳುತ್ತಿದ್ದಾರೆ ಇಲ್ಲವೇ, ರಸ್ತೆಗಳಲ್ಲಿ ಮುಕ್ತವಾಗಿ ಓಡಾಡಲಾಗದ ಸ್ಥಿತಿಗೆ
ದಯನೀಯವಾಗಿ ಮರುಗುತ್ತಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ದಾಖಲಾಗಿರುವ ದೌರ್ಜನ್ಯ ಪ್ರಕರಣಗಳ ಅಂಕಿಅಂಶ ಆಧರಿಸಿ ಹೇಳುವುದಾದರೆ ಅಲ್ಲಿನ ಪ್ರತಿ ಮೂರನೇ ಮಳೆ ತನ್ನ ಜೀತದಲ್ಲಿ ಒಂದಿಲ್ಲೊಂದು ಬಗೆಯ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುತ್ತಾಳೆ.

ಅಲ್ಲಿನ ಬಾಲಕಿಯರು ತಮ್ಮ ಪರಿಚಿತ ವಲಯದಲ್ಲಿರುವ ಕೊಳಕು ಮನಃಸ್ಥಿತಿಯ ವ್ಯಕ್ತಿಗಳಿಗೆ ಲೈಂಗಿಕವಾಗಿ ಬಲಿಪಶುಗಳಾಗುತ್ತಾರೆ. ಇದಲ್ಲದೇ ಮಹಿಳೆ
ಯರನ್ನು ಹೊಡೆದು ಬಡಿದು ಹಿಂಸಿಸುವ ಪ್ರಕರಣಗಳೂ ಕೂಡ ಕಮ್ಮಿಯೇನಿಲ್ಲ. ಕೋವಿಡ್ ಸಾಂಕ್ರಾಮಿಕ ರೋಗದ ಕಾಲದಲ್ಲಿ ಮಹಿಳೆಯರ ವಿರುದ್ಧದ ಕ್ರೂರ ನಡವಳಿಕೆ ಅಮೆರಿಕದಲ್ಲಿ ಹೆಚ್ಚಾಗಿತ್ತು ಎಂಬುದನ್ನು ಸರ್ವೆ ಹೇಳುತ್ತಿದೆ. ಇಂತಹ ನಡವಳಿಕೆ ಎಲ್ಲ ರಾಷ್ಟ್ರಗಳಲ್ಲೂ ವ್ಯಾಪಕವಾಗಿ ನಡೆಯುತ್ತಲೇ ಇದೆ. ಯುನೈಟೆಡ್ ನೇಶನ್ಸ್ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ ಇಡೀ ವಿಶ್ವದಲ್ಲಿ ವಿವಾಹಿತ ಮಹಿಳೆಯರ ಪೈಕಿ ಶೇ.೫೨ ಮಾತ್ರ ತಮ್ಮ ಖಾಸಗಿ ಬದುಕನ್ನು ತಮ್ಮಿಷ್ಟದಂತೆ ರೂಪಿಸುವುದಕ್ಕೆ ಸಮರ್ಥರಾಗಿದ್ದಾರೆ.

ಇನ್ನುಳಿದ ಶೇ.೪೮ ಮಹಿಳೆಯರ ಬದುಕನ್ನು ಅವರ ಕುಟುಂಬದ ಸದಸ್ಯರು ನಿರ್ಧರಿಸುತ್ತಾರೆ. ಇನ್ನು ಹುಡುಗಿಯರ ವಿಚಾರಕ್ಕೆ ಬರುವುದಾದರೆ ವಿಶ್ವಾದ್ಯಂತ ಇಂದಿಗೂ ಬಹುತೇಕ ರಾಷ್ಟ್ರಗಳಲ್ಲಿ ಹುಡುಗಿಯರ ವಿವಾಹವನ್ನು ಅವರ ಅನುಮತಿ ಇಲ್ಲದೇ ಪೋಷಕರು ನಿರ್ಧರಿಸುತ್ತಾರೆ. ಹೀಗಾದಾಗ ಅಂಥವರ ವೈವಾಹಿಕ ಸ್ಥಿತಿ ಡೋಲಾಯಮಾನವಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರ ವಿರುದ್ಧದ ಸೈಬರ್ ಕ್ರೈಮ್‌ಗಳ ಸಂಖ್ಯೆಯೂ ಏರುಗತಿಯಲ್ಲಿದೆ.

ಯುನೈಟೆಡ್ ನೇಶನ್ಸ್ ಗೆ ಸಂಬಂಧಪಟ್ಟಂತೆ ಇನ್ನೊಂದು ಅಂಕಿಅಂಶವನ್ನು ನಿಮ್ಮ ಮುಂದೆ ತೆರೆದಿಡುವೆ. ೭೧% ರಷ್ಟು ಅಕ್ರಮ ಮಾನವಸಾಗಣೆ ಪ್ರಕರಣದ ಬಲಿಪಶುಗಳು ಇಂದಿಗೂ ಮಳೆಯರೇ ಆಗಿದ್ದಾರೆ. ಇಂತಹ ಮಳೆಯರ ಪೈಕಿ ಪ್ರತಿ ಮೂರರಲ್ಲಿ ಒಬ್ಬರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಇದೆಲ್ಲವೂ ದಾಖಲಾಗಿರುವ ಅಂಕಿಅಂಶ, ಕಟ್ಟುಕಥೆಯಲ್ಲ. ದಾಖಲಾಗದ ಅದೆಷ್ಟು ಪ್ರಕರಣಗಳಿವೆಯೋ ಭಗವಂತನೇ ಬಲ್ಲ. ವಾಸ್ತವವೆಂದರೆ ನಮ್ಮ ಜನಸಂಖ್ಯೆಯ ಶೇ.೫೦ ಭಾಗ ಇನ್ನೂ ಸ್ವಾತಂತ್ರ್ಯವಿಲ್ಲದೇ ಒದ್ದಾಡುತ್ತಿದೆ. ವಿಶ್ವದೆಲ್ಲೆಡೆ ಕಠಿಣವಾದ ಕಾನೂನು ಜಾರಿಯಲ್ಲಿದ್ದಾಗ್ಯೂ ಮಹಿಳೆಯರ ಕುರಿತಾಗಿ ಪುರುಷರ ಮನಃಸ್ಥಿತಿ
ಇನ್ನೂ ಬದಲಾಗಿಲ್ಲ. ಅವರು ಮಹಿಳೆಯರನ್ನು ಒತ್ತಡಕ್ಕೆ ಒಳಪಡಿಸುತ್ತಿದ್ದಾರೆ, ಮಹಿಳೆಯರು ಬಲಿಪಶುಗಳಾಗುತ್ತಲೇ ಇದ್ದಾರೆ. ಕಾನೂನಿನ ಹೊರತಾಗಿ, ಪುರುಷರ ಮನಸ್ಥಿತಿಯನ್ನು ಬದಲಾಸುವ ನಿಟ್ಟಿನಲ್ಲಿ ಒಂದು ಬಹುದೊಡ್ಡ ಆಂದೋಲನ ನಡೆಯಬೇಕಾದ ಅನಿವಾರ್ಯತೆ ಇದೆ.

ಮಳೆ ಎಂದರೆ ಆಕೆ ನಮ್ಮ ತಾ, ಸೋದರಿ, ಜೀವನಸಂಗಾತಿ ಎಂಬ ವಿಷಯದ ಕುರಿತಾದ ಗೌರವಭಾವ ಪ್ರತಿ ಪುರುಷರಲ್ಲಿಯೂ ಇರುವಂತೆ ಮಾಡಬೇಕಾ ಗಿರುವುದು ಇಂದಿನ ಅಗತ್ಯ. ಮಳೆ ಎಂದರೆ ಈ ಜಗತ್ತಿನಲ್ಲಿ ಭಗವಂತ ಸೃಷ್ಟಿಸಿರುವ ಒಂದು ಸುಂದರ ಅಭಿವ್ಯಕ್ತಿ. ಆಕೆಯನ್ನು ಗೌರವಿಸಿದರೆ ಭಗವಂತನನ್ನು
ಗೌರವಿಸಿದಂತೆ. ನಮ್ಮ ಮನಸಿನ ಆಂತರ್ಯವನ್ನು ವಸ್ತುನಿಷ್ಟವಾಗಿ ಪರಾಮರ್ಶೆ ಮಾಡಿದರೆ ಹೆಣ್ಣು ಈ ಭೂಯ ಮೇಲಿರುವ ಭಗವಂತನ ಸುಂದರ ಸ್ಟೃಯ ಪ್ರತಿರೂಪ ಎಂಬುದು ಅರಿವಾಗುತ್ತದೆ. ಆಕೆಯೇ ಈ ಜಗತ್ತಿನಲ್ಲಿ ಮರುಸ್ಟೃಯ ಶಕ್ತಿಹೊಂದಿರುವ ಮೂಲಶಕ್ತಿ. ದುರಾದೃಷ್ಟವೆಂದರೆ ಪುರುಷಪ್ರಧಾನ ಸಮಾಜ ಆಕೆಯನ್ನು ಂದಕ್ಕೆ ಸರಿಸಿ ಅಟ್ಟಹಾಸಗೈಯ್ಯುತ್ತಿದೆ. ಮಳೆಯರನ್ನು ಗೌರಸುವುದು ಭಗವಂತನನ್ನು ಗೌರಸುವುದು ಎರಡೂ ಒಂದೇ ಎಂಬುದನ್ನು ಪ್ರತಿಯೊಬ್ಬನೂ ಮನಗಾಣಬೇಕಿದೆ