Tuesday, 29th September 2020

ನಮ್ಮ ಬದುಕು ಬದಲಿಸಬಹುದು

ಶಶಾಂಕ್ ಮುದೂರಿ

ನಮ್ಮ ಜೀವನವನ್ನು ಸಂಪೂರ್ಣವಾಗಿ ವಿಭಿನ್ನವಾಗಿ, ಇನ್ನಷ್ಟು ಹಸನಾಗಿ ಕಾಣುವ ಒಂದು ಸಾಧ್ಯತೆ ಇರುವ ಕಾಲವೆಂದರೆ ಭವಿಷ್ಯ. ಆದರೆ, ಮುಂದೆ ಬರಲಿರುವ ಆ ಕಾಲಘಟ್ಟದಲ್ಲಿ ನಮ್ಮ ಬದುಕು ಇನ್ನಷ್ಟು ಹಸನಾಗಿರಬೇಕೆಂದರೆ, ಈಗಲೇ ಆ ಕುರಿತು ಭವಿಷ್ಯ ಕಾಣಬೇಕು. ಭವಿಷ್ಯದಲ್ಲಿ ನಾವು ಹೇಗೆ ಇರಬೇಕು ಎಂಬುದನ್ನು ಕಲ್ಪಿಸಿಕೊಂಡು, ಈಗಲೇ ಅದಕ್ಕೆ ಪೂರಕವಾದ
ಸಕಾರಾತ್ಮಕ ಹೆಜ್ಜೆೆಗಳನ್ನು ಇರಿಸಲು ಆರಂಭಿಸಬೇಕು.

ಇಂದಿನ ನಮ್ಮ ದೌರ್ಬಲ್ಯವೊಂದನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂದು ಚಿಂತಿಸಿ, ಕಾರ್ಯಪ್ರವೃತ್ತ ರಾದರೆ, ಭವಿಷ್ಯದಲ್ಲಿ ಅಂತಹ ದೌರ್ಬಲ್ಯವಿಲ್ಲದ ಜೀವನ ನಡೆಸಲು ನಮ್ಮಿಿಂದ ಸಾಧ್ಯ! ಇದು ನಿಜಕ್ಕೂ ಪ್ರಾಯೋಗಿಕ ಮತ್ತು ಯಶಸ್ಸಿನ ಒಂದು ಮೆಟ್ಟಿಲು. ಈ ರೀತಿಯ ಒಂದೊಂದೇ ಮೆಟ್ಟಿಲುಗಳನ್ನು ನಾವೇ ಇಂದಿನಿಂದಲೇ ರೂಪಿಸಿಕೊಳ್ಳಬೇಕು. ಇಂತಹ ಮಾರ್ಗ ಕ್ರಮಿಸಲು, ನಮ್ಮಲ್ಲಿ ಸ್ಫೂರ್ತಿ ತುಂಬಲು ಹಲವು ಸಾಧನಗಳಿವೆ. ಯಶಸ್ವಿ ವ್ಯಕ್ತಿಗಳ ದಿನಚರಿ ಅಧ್ಯಯನ, ಅಂತಹವರ ಭಾಷಣ ಕೇಳುವುದು, ಟೆಡ್ ಟಾಕ್ ವೀಕ್ಷಣೆ ಎಲ್ಲವನ್ನೂ ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು, ನಮ್ಮ ಯಶಸ್ಸಿನ ಮಾರ್ಗವನ್ನು ನಾವೇ ರೂಪಿಸಿಕೊಳ್ಳಬಹುದು. ಸಕಾರಾತ್ಮಕ ಭಾವನೆಗಳನ್ನು ನಮ್ಮಲ್ಲಿ ತುಂಬಿ, ಯಶಸ್ಸಿನ ದಾರಿಯನ್ನು ತೋರಿಸಿಕೊಡುವ ಹಲವು ಪರಿಣಿತರು ನಮ್ಮ ನಡುವೆ ಇದ್ದಾಾರೆ. ಅಂತಹ ಮಾರ್ಗ ದರ್ಶನ ನೀಡುವ, ಸ್ಫೂರ್ತಿ ತುಂಬುವ ಭಾಷಣ ಮತ್ತು ಪ್ರಾಯೋಗಿಕ ಟಿಪ್‌ಸ್‌ ನೀಡುವ ಮೂವರ ಮಾತುಗಳ ಸಂಗ್ರಹವನ್ನು ಇಲ್ಲಿ ಕೊಡಲಾಗಿದೆ

ಡೇವ್ ರ್ಯಾಮ್ಸೆ ಇವರು ಪಾಶ್ಚಾತ್ಯ ಜಗತ್ತಿನಲ್ಲಿ ಆರ್ಥಿಕ ಗುರು ಎಂದೇ ಹೆಸರು ಪಡೆದಿದ್ದಾರೆ. (ಜನನ 1960). ಮೂಲತಃ ಇವರು
ಅಮೆರಿಕದ ರೇಡಿಯೋ ಜಾಕಿ. ಯಶಸ್ಸಿನ ಕುರಿತು  ಪುಸ್ತಕಗಳನ್ನು ಬರೆಯುವುದು ಇವರ ಇನ್ನೊೊಂದು ಗಂಭೀರ ಹವ್ಯಾಸ. ಇವರು ರಚಿಸಿದ ಐದು ಪುಸ್ತಕಗಳು ನ್ಯೂಯಾರ್ಕ್ ಟೈಮ್‌ಸ್‌ ಬೆಸ್‌ಟ್‌ ಸೆಲರ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಆರ್ಥಿಕ ವಿಚಾರ ಗಳಲ್ಲಿ ಇವರ ಸಲಹೆ ಎಂದರೆ, ಸಾಲವಿಲ್ಲದೆ ಜೀವಿಸಲು ಕಲಿಯುವುದು. ಈ ಸಲಹೆಯನ್ನು ಕೆಲವರು ಒಪ್ಪುವುದಿಲ್ಲ, ಏಕೆಂದರೆ ಸಾಲ ಮಾಡಿ, ಅದನ್ನು ಸೂಕ್ತ ಕಡೆ ಇನ್ವೆೆಸ್‌ಟ್‌ ಮಾಡಿ, ಅದರಿಂದ ಲಾಭ ಗಳಿಸುವುದು ಈ ಆಧುನಿಕ ಜಗತ್ತಿನ ಯಶಸ್ಸಿನ ಸೂತ್ರಗಳಲ್ಲಿ ಒಂದು ಎಂದು  ಹಲವರು ತಿಳಿದಿದ್ದಾರೆ. ಆದರೆ ಡೇವ್ ರ್ಯಾಮ್ಸೆ, ಈ ಹಾದಿಯನ್ನು ಬಿಟ್ಟು, ವಿಭಿನ್ನ ದಾರಿಯಲ್ಲಿ ಸಾಗಿ ಯಶಸ್ಸು ಗಳಿಸಲು ಸಲಹೆ ಕೊಡುತ್ತಾರೆ.

ಅವರು ರ್ಯಾಾಮ್ಸೆ ಸೊಲ್ಯೂಷನ್‌ಸ್‌ ಎಂಬ ಸಂಸ್ಥೆೆಯನ್ನೂ ನಡೆಸುತ್ತಿದ್ದು, ಅವರ ಕೆಲವು ಸಲಹೆಗಳು ಈ ರೀತಿ ಇವೆ.
*ಸಾಲದಿಂದ ದೂರವಿರಿ – ಸಾಲ ಪಡೆಯದೇ, ನಿಮ್ಮ ಸ್ವಂತ ಉಳಿತಾಯದಿಂದ ಬೆಳೆಯಲು ಪ್ರಯತ್ನಿಸಿ.
*ಖರ್ಚುಗಳ ಬಗ್ಗೆೆ ಗಮನವಿರಲಿ – ಖರ್ಚು ಮಾಡಿ, ಆದರೆ, ಯಾವ ಉದ್ದೇಶಕ್ಕೆೆ ಹಣ ವೆಚ್ಚ ಮಾಡುತ್ತೇವೆ ಎಂಬುದನ್ನು
ಪಟ್ಟಿ ಮಾಡಿ, ಅಗತ್ಯ ಇದ್ದುದ್ಕಕೆ ಮಾತ್ರ ಹಣ ಚೆಲ್ಲಿ.
*ಉದ್ದೇಶವಿರಲಿ – ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವಲ್ಲಿ ಮುತುವರ್ಜಿ ಇರಲಿ. ನಿಗದಿತ ಉದ್ದೇಶಕ್ಕೆೆ ಮಾತ್ರ ಹಣ
ವೆಚ್ಚ ಮಾಡಿ.
*ಹೆಮ್ಮೆ ಇರಲಿ – ನಿಮ್ಮ ಬಗ್ಗೆೆ ನಿಮಗೆ ಹೆಮ್ಮೆ ಇರಲಿ. ನೀವು ಉದ್ಯಮವೊಂದನ್ನು ನಡೆಸುತ್ತಿರುವಾಗ, ಇತರರಿಗೆ ಕೆಲಸ
ಕೊಟ್ಟಿದ್ದೇನೆ ಮತ್ತು ಆ ಮೂಲಕ ಸಮಾಜಕ್ಕೆ ಸಹಾಯ ಮಾಡುತ್ತಿದ್ದೇನೆಂಬ ಹೆಮ್ಮೆ ಇರಲಿ.

ಜೇನ್ ಮೆಕ್ ಗೋನಿಗಲ್
ಇವರು ವಿಡಿಯೋ ಗೇಮ್ ವಿನ್ಯಾಸಕಾರರು ಮತ್ತು ಲೇಖಕಿ. (ಜನನ 1977) ಇವರು ಅಮೆರಿಕದವರು. ನಮ್ಮ ನಿಜಜೀವನದ ಸವಾಲುಗಳನ್ನು, ರಿಯಾಲಿಟಿ ಗೇಮಿಂಗ್ ಮೂಲಕ ಪರಿಹರಿಸಲು ಸಾಧ್ಯ ಎಂದು ಇವರು ತೋರಿಸಿಕೊಟ್ಟಿದ್ದಾರೆ. ವಿಡಿಯೋ ಗೇಮಿಂಗ್ ಮೂಲಕ ಜನರ ಜೀವನವನ್ನು ರಚನಾತ್ಮಕವಾಗಿ ಉತ್ತಮ ಪಡಿಸಬಹುದು ಎನ್ನುವ ಇವರು ಉತ್ತಮ ವಾಗ್ಮಿಯೂ ಹೌದು. ಟೆಡ್ ಟಾಕ್‌ನಲ್ಲಿ 2010ರಲ್ಲಿ ಈಕೆ ಮಾಡಿ ಭಾಷಣವನ್ನು ನಲವತ್ತು ಲಕ್ಷಕ್ಕೂ ಹೆಚ್ಚಿನ ಮಂದಿ ವೀಕ್ಷಿಸಿ ಸ್ಫೂರ್ತಿ ಪಡೆದಿದ್ದಾರೆ.
ಆ ಭಾಷಣದ ಹೆಸರು, ‘‘ಗೇಮಿಂಗ್ ಕ್ಯಾನ್ ಮೇಕ್ ಎ ಬೆಟರ್ ವರ್ಲ್‌ಡ್‌’’.  ಇವರ ಸಲಹೆಗಳೆಂದರೆ

* ಭವಿಷ್ಯದ ನಮ್ಮ ಉಡುಗೊರೆ ಎಂದರೆ ನಾವು ಮಾಡಬಹುದಾದ ರಚನಾತ್ಮಕ ಕೆಲಸ
* ಹೊಸದೇನನ್ನಾದರೂ ಸಾಧಿಸಲು ಮತ್ತು ಬದುಕಿನಲ್ಲಿ ಬದಲಾವಣೆಯನ್ನು ಕಾಣಲು, ಈ ಜಗತ್ತು ಹೇಗೆ ವಿಭಿನ್ನವಾಗಿರಲು ಸಾಧ್ಯ ಎಂಬುದನ್ನು ಕಲ್ಪಿಸಿಕೊಳ್ಳಬೇಕು.
* ನಮ್ಮ ಜೀವನದ ಎಲ್ಲವನ್ನೂ ವಿಭಿನ್ನವಾಗಿ ಭವಿಷ್ಯದಲ್ಲಿ ಕಾಣಬಹುದು.

ಟಾಮ್ ಬಿಲ್ಯು
ಇವರ ಕ್ವೆೆಸ್‌ಟ್‌ ನ್ಯೂಟ್ರಿಷನ್ ಎಂಬ ಸಂಸ್ಥೆೆಯ ಸಹ ಸಂಸ್ಥಾಪಕ. (ಜನನ 1976) ಅಮೆರಿದಲ್ಲಿರುವ ಇಂಪ್ಯಾಕ್‌ಟ್‌ ಥಿಯರಿ ಸಂಸ್ಥೆೆಯ ಸ್ಥಾಪಕ ಮತ್ತು ಸಿಇಒ. ಇವರು ಸ್ಫೂರ್ತಿ ತುಂಬುವ ಭಾಷಣಗಳನ್ನು ನೀಡುವಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ಅರ್ಥಪೂರ್ಣ ಕಂಟೆಂಟ್ ತಯಾರಿಸುವುದು ಹೇಗೆ ಮತ್ತು ಉದ್ಯಮದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವುದು
ಹೇಗೆ ಎಂಬುದಕ್ಕೆೆ ಇವರದೇ ಆದ ಹಲವು ಪರಿಹಾರಗಳನ್ನು ಕಂಡುಕೊಂಡಿದ್ದು, ಅದನ್ನು ಇತರರಿಗೆ ತಿಳಿ ಹೇಳುತ್ತಾರೆ. ಅವರ ವಿಚಾರಗಳ ಸಂಗ್ರಹವೆಂದರೆ,

*ಟೀಕೆಗಳನ್ನು ಎದುರಿಸಲು ಅಭಿನಂದನೆ ಬಳಸಿ – ಉದ್ಯಮವೊಂದನ್ನು ನಡೆಸುವ ಸಮಯದಲ್ಲಿ ಹಲವು ಟೀಕೆಗಳು ಎದುರಾಗ ಬಹುದು. ಟೀಕಿಸುವವರ ಉತ್ತಮ ಗುಣಗಳನ್ನು ಎತ್ತಿ ತೋರಿಸುತ್ತಾ, ಅವರ ಟೀಕೆಗಳು ಹೇಗೆ ರಚನಾತ್ಮವಾಗಿವೆ ಎಂದು ಅವರೆ ದುರೇ ಹೇಳಿದಾಗ, ಟೀಕಾಕಾರರ ಟೀಕೆಗಳ ಮೊನಚು ಕಡಿಮೆಯಾಗುತ್ತವೆ ಮತ್ತು ಅವರೂ ನಮ್ಮ ಕೆಲಸದಲ್ಲಿ ಕೈಜೋಡಿಸುತ್ತಾರೆ.

*ಒತ್ತಡದ ಸನ್ನಿವೇಶವನ್ನು ಪ್ರಗತಿಗೆ ಬಳಸಿಕೊಳ್ಳುವಿಕೆ – ಪ್ರತಿ ದಿನವೂ ನಾವು ಇನ್ನಷ್ಟು ಬೆಳೆಯಲು ದೊರೆತ ಅವಕಾಶ ಎಂದು ತಿಳಿದು, ನಿಮ್ಮನ್ನು ನೀವು ಉತ್ತಮಪಡಿಸಿಕೊಳ್ಳಿ. ಈ ಅಭ್ಯಾಸವಿದ್ದರೆ, ಗಲಿಬಿಲಿಯ ಕ್ಷಣಗಳು ನಿಮ್ಮ ಯಶಸ್ಸಿನ ಮೆಟ್ಟಿಲುಗಳಾಗಬಲ್ಲವು.

*ನಿಮ್ಮ ದೌರ್ಬಲ್ಯವನ್ನು ಯಶ ಪಡೆಯಲು ಉಪಯೋಗಿಸಿ – ನೀವು ಯಾವುದರಲ್ಲಿ ದುರ್ಬಲ ಎಂಬ ವಿಚಾರವನ್ನು ಯೋಚಿ ಸುತ್ತಾ ಕೂರಬೇಡಿ.

ನಿಮ್ಮಲ್ಲಿ ಇಲ್ಲದ ಕೌಶಲ್ಯವನ್ನು ಬೆಳೆಸಿಕೊಳ್ಳಲು ಏನನ್ನು ಮಾಡಬಹುದು ಎಂದು ಕ್ರಿಯಾತ್ಮಕವಾಗಿ ಯೋಚಿಸಿ. ಇದೇ ಯಶಸ್ಸಿನ ಸೋಪಾನ.

Leave a Reply

Your email address will not be published. Required fields are marked *