ತುಮಕೂರು: ತಿಪಟೂರಿನ ತ್ರಿಮೂರ್ತಿ ಚಿತ್ರಮಂದಿರದಲ್ಲಿ ರಾಬರ್ಟ್ ಚಿತ್ರದ ಬಿಡುಗಡೆಯಾದ ಹಿನ್ನೆಲೆಯಲ್ಲಿ ನಟ ದರ್ಶನ್ ಕಟೌಟ್ ಗೆ ಕೆಲ ಅಭಿಮಾನಿಗಳು ಮದ್ಯಾಭಿಷೇಕ ನಡೆಸಿ ಅತಿರೇಕದ ವರ್ತನೆ ತೋರಿದ್ದಾರೆ.
ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ಕೆಲ ಅಭಿಮಾನಿಗಳು ದರ್ಶನ್ ಕಟೌಟ್ ಗೆ ಬಿಯರಿನಿಂದ ಅಭಿಷೇಕ ನಡೆಸಿ ಮನಸೋ ಇಚ್ಚೆ ಕುಣಿದು ಅಮಾನುಷವಾಗಿ ವರ್ತಿಸಿದ್ದಾರೆ. ಇದರಿಂದಾಗಿ ಚಿತ್ರ ವೀಕ್ಷಣೆಗೆ ಆಗಮಿಸಿದ್ದ ಪ್ರೇಕ್ಷಕರು ಬೇಸರಗೊಂಡರು.