Saturday, 10th April 2021

ಪ್ರಿಯತಮೆ ಕೊಲೆ ಮಾಡಿದ್ದ ಪಾಗಲ್ ಪ್ರೇಮಿ ಅರೆಸ್ಟ್

ತುಮಕೂರು: ಪ್ರೀತಿ ಮಾಡಲು ಒಪ್ಪದ ಕಾರಣ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಶಿರಾ ತಾಲ್ಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಗೂಳ ಗ್ರಾಮದಲ್ಲಿ ಕಾವ್ಯ ಎಂಬಾಕೆ ಮನೆಯಿಂದ ಶಿರಾ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿ ಆರೋಪಿ ಕುರಿಗಾಹಿ ಈರಣ್ಣ ಎಂಬಾತನು ಬೈಕ್ ನಲ್ಲಿ ಬಂದು ಬೈಕ್ ನಿಲ್ಲಿಸಿ, ಕಾವ್ಯಳನ್ನು ದೊಡ್ಡಗುಳ ಕೆರೆಯ ಪಕ್ಕದಲ್ಲಿರುವ ಸೀಮೆ ಜಾಲಿಗಿಡಗಳು ಬೆಳೆದಿರುವ ಜಮೀನಿಗೆ ಎಳೆದು ಕೊಂಡು ಹೋಗಿ ತನ್ನ ಕೈನಲ್ಲಿದ್ದ ಕುಡುಗೋಲಿನಿಂದ ಆಕೆಯ ಮುಖ, ಕತ್ತು ಮತ್ತು ಕೈಗಳನ್ನು ಕೊಚ್ಚಿ ಕೊಲೆ ಮಾಡಿ ಕುಡು ಗೋಲಿನ ಸಮೇತ ಓಡಿ ಹೋಗಿದ್ದು ಈ ಸಂಬAಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಏ.6ರಂದು ಹಲ್ಕೂರು ಕೆರೆಯ ಅಂಗಳದಲ್ಲಿರುವ ಸೀಮೆ ಜಾಲಿ ಪೊದೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ಈರಣ್ಣ ನನ್ನು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ ಕುಡುಗೋಲು, ಕೆಎ-06-ಹೆಚ್.ಜಿ.1639 ನಂಬರ್‌ನ ಮೋಟಾರ್ ಸೈಕಲ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಬಂಧಿಸಲು ಯಶಸ್ವಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಎಸ್ಪಿ, ಎಎಸ್ಪಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *