Friday, 30th September 2022

ಶುಭೋದಯ ಪ್ರಿಂಟರ್ಸ್‌ ಮಾಲೀಕ ಎಂ. ಗಿರೀಶ್ ನಿಧನ

ಬೆಂಗಳೂರು: ಪುಸ್ತಕ ಪ್ರಕಾಶಕ ಹಾಗೂ ಶುಭೋದಯ ಪ್ರಿಂಟರ್ಸ್‌ ಮಾಲೀಕ ಎಂ. ಗಿರೀಶ್ (50) ಮಂಗಳವಾರ ನಿಧನರಾಗಿದ್ದಾರೆ.

ಸೋಮವಾರ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಅವರು ತೀವ್ರ ಗಾಯಗೊಂಡಿದ್ದರು. ಸಂಜೆವಾಣಿ, ಉದಯವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ನಂತರ ಸ್ವಂತ ಮುದ್ರಣ ಉದ್ಯಮವನ್ನು ಪ್ರಾರಂಭಿಸಿ ಯಶಸ್ವಿಯಾಗಿದ್ದರು. ಇವರು ಪತ್ನಿ-ಪುತ್ರಿಯನ್ನು ಅಗಲಿದ್ದಾರೆ.

 ಬನಶಂಕರಿ ಆರನೇ ಹಂತದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ಗಿರೀಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಬನಶಂಕರಿ ರುದ್ರಭೂಮಿ ಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.