Wednesday, 16th October 2019

ಮಳೆ ನಿಂತು ಹೋದ ಮೇಲೆ..

ಕಳೆದ ಒಂದು ವಾರದಿಂದ ಮಳೆ, ಪ್ರವಾಹದಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಎರಡು ದಿನಗಳಿಂದ ವರುಣನ ಅಬ್ಬರ ಕಡಿಮೆ ಆಗಿದ್ದರಿಂದ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಆದರೆ ವಾರ ಕಾಲ ಸುರಿದ ಮಳೆ, ಅಪಾಯದ ಪ್ರವಾಹದಿಂದ ಸಾಕಷ್ಟು ಅನಾಹುತ ಸಂಭವಿಸಿದ್ದು, ಇದು ಮುಂದುವರಿದಿದೆ. ಮಳೆ ಪ್ರವಾಹ ಸಂದರ್ಭದ ಒಟ್ಟಾಾರೆ ಚಿತ್ರಣ ಇಲ್ಲಿದೆ.

ಇನ್ನೂ ನಾಲ್ಕು ದಿನ ಮಳೆ !
ಈಗಾಗಲೇ ಭಾರಿ ಮಳೆ, ಪ್ರವಾಹಕ್ಕೆೆ ತತ್ತರಿಸಿರುವ ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನ ಕೂಡ ಮಳೆ ಮುಂದುವರೆಯಲಿದೆ. ಕರಾವಳಿ, ಮಲೆನಾಡು ಸೇರಿದಂತೆ ಹಲವು ಕಡೆ ಮಳೆಯಾಗಲಿದ್ದು, ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ರೆಡ್ ಆಲರ್ಟ್ ಘೋಷಣೆ ಮಾಡಲಾಗುವುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನೈಋತ್ಯ ಮಾರುತಗಳು ದಟ್ಟ ಮೋಡ ಸೃಷ್ಟಿಿಸಲಿದ್ದು, ಭಾರಿ ಗಾಳಿ ಉಂಟಾಗಲಿದೆ. ಈ ಮಳೆ ಮಾರುತಗಳು ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ ಸೇರಿದಂತೆ ರಾಜ್ಯದ ಕೇಂದ್ರ ಭಾಗಗಳಲ್ಲಿ ಹಾನಿಯುಂಟು ಮಾಡಲಿದೆ ಎಂದು ತಿಳಿಸಿದೆ.

 

Leave a Reply

Your email address will not be published. Required fields are marked *