Monday, 20th January 2020

ಮಾದೇಲಿ ನೈವೇದ್ಯದ ಗತ್ತು ಜಾತ್ರೆಯ ಗಮ್ಮತ್ತು

* ಅನಿತಾ ಎಸ್. ಶಿರಹಟ್ಟಿ, ತಿಕೋಟಾ
ಹಲವು ವಿಶೇಷಗಳನ್ನು ತನ್ನೂಡಲಲ್ಲಿಟ್ಟುಕೊಂಡಿರುವ ತಿಕೋಟಾ ಪಟ್ಟಣವು ಹಿಂದೂ-ಮುಸ್ಲಿಿಂ ಸಾಮರಸ್ಯದ ಕೇಂದ್ರ. ವರ್ಷಕ್ಕೊೊಮ್ಮೆೆ ಇಲ್ಲಿ ನಡೆಯುವ ಹಾಜಿ ಮಸ್ತಾಾನ್ ಉರುಸ್ ಹಿಂದೂ ಮುಸ್ಲಿಿಂಮರ ಭಾವೈಕ್ಯದ ಪ್ರತೀಕ. ಮಹಾರಾಷ್ಟ್ರದ ಕುರುಂದವಾಡ ಸಂಸ್ಥಾಾನದಲ್ಲಿ ತಿಕೋಟಾ ತಾಲೂಕು ಕೇಂದ್ರವಾಗಿತ್ತು. ಇದೀಗ 2018ರ ಜನವರಿಯಿಂದ ಮತ್ತೊೊಮ್ಮೆೆ ವಿಯಜಪುರ ಜಿಲ್ಲೆೆಯ ಒಂದು ತಾಲೂಕು ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ.

ಈ ಉರುಸ್ ನಡೆಯುವುದು ತಿಕೋಟಾ ಊರಿನ ಹೊರವಲಯದಲ್ಲಿರುವ ಹಾಜಿಸಾಹೇಬ್ ಮತ್ತು ಬಡಕಲ್ ಸಾಹೇಬ್ ದರ್ಗಾದಲ್ಲಿ. ಇದು ಹಿಂದೆ ಕುರುಂದವಾಡ ಸಂಸ್ಥಾಾನಕ್ಕೆೆ ಸೇರಿತ್ತು. ವಿಶಾಲ ಆವರಣದಲ್ಲಿರುವ ಈ ದರ್ಗಾದಲ್ಲಿ ದೀಪ ಹಚ್ಚುವುದು, ಊದುಬತ್ತಿಿ ಬೆಳಗುವುದು ಮೊದಲಾದ ಆಚರಣೆಗಳು ಇಂದಿಗೂ ಇದ್ದು, ಪುರಾತನ ಕಾಲದ ಇಲ್ಲಿದ್ದ ಪೂಜಾ ಪದ್ಧತಿಗಳನ್ನು ನೆನಪಿಸುತ್ತದೆ. ದರ್ಗಾದಲ್ಲಿ ದಸ್ತಗೀರ್ ತಿಂಗಳಲ್ಲಿ ಬಕ್ರೀದ್ ಆದ ಮೇಲೆ ಊರುಸ್ ನಡೆಯುತ್ತದೆ. ಹಿಂದೂ ಮತ್ತು ಮುಸಲ್ಮಾಾನರು ಉರುಸ್ ಸಂದರ್ಭದಲ್ಲಿ ಭಾಗವಹಿಸುತ್ತಾಾರೆ. ಈ ದರ್ಗಾವನ್ನು ಸ್ಥಳೀಯರು ಗುಡಿ ಎಂದೇ ಕರೆಯುವ ರೂಢಿಯಿದ್ದು, ಜಾತಿ ಮತ ಬೇಧವಿಲ್ಲದೇ ಎಲ್ಲರೂ ಇಲ್ಲಿ ಪೂಜೆ ಸಲ್ಲಿಸುವುದು ವಿಶೇಷ.

ಹಾಜಿಮಸ್ತಾನ್ ಸಾಹೇಬ್
ಬಡಕಲ್ ಸಾಹೇಬ ದರ್ಗಾದ ಪಕ್ಕದಲ್ಲಿ ಹಾಜಿ ಮಸ್ತಾಾನ್ ಸಾಹೇಬ್ ದರ್ಗಾ ಇದೆ. ಇದಕ್ಕೆೆ ಇರುವ ವಿಶಾಲ ಆವರಣದಲ್ಲಿ, ಅಲ್ಲಲ್ಲಿ ಚಾಳುಕ್ಯರ ವಾಸ್ತುಶೈಲಿ ನೆನಪಿಸುವ ಚಿಕ್ಕ ಚಿಕ್ಕ ಕಿರು ಸ್ತಂಭಗಳು ಇವೆ. ದರ್ಗಾದ ಎದುರಿಗೆ ಮರದಲ್ಲಿ ಕಟ್ಟಲಾಗಿರುವ ನಗಾರಿಖಾನೆ ಕಂಡು ಬರುತ್ತದೆ. ದರ್ಗಾಗಳ ಮೇಲ್ಛಾಾವಣಿಯಲ್ಲಿ ಅರ್ಧಗೋಳಾಕಾರದ ಗುಮ್ಮಟಗಳಿದ್ದು ನಾಲ್ಕು ಮೂಲೆಗಳಲ್ಲಿ ಕೋನಾಕಾರದ ಮಿನಾರ್‌ಗಳಿವೆ. ನಿವೇಶದ ಸುತ್ತಲೂ ಎತ್ತರವಾದ ಪ್ರಾಾಕಾರವಿದ್ದು ಒಳಭಾಗದಲ್ಲಿ ಮಂಟಪಗಳನ್ನು ನಿರ್ಮಿಸಲಾಗಿದ್ದು ಉರಸ್ ಸಂದರ್ಭದಲ್ಲಿ ಉಪಯೋಗಿಸಲಾಗುತ್ತದೆ. ಮುಖ್ಯದ್ವಾಾರದ ಎದುರಿಗೆ ಬೃಹದಾಕಾರದ ಕಲ್ಲಿನ ಬಾವಿಯಿದೆ. ಮುಂಭಾಗದಲ್ಲಿ ಎಡಭಾಗಕ್ಕೆೆ ತಾಜ್‌ಬೀಬಿಯ ದರ್ಗಾ ಇದೆ. ಇಲ್ಲಿ ಒಂದು ಕೊಣೆ ಇದೆ. ಅದು ಜಾತ್ರೆೆ ಸಮಯದಲ್ಲಿ ಅಂದರೆ ವರ್ಷದಲ್ಲಿ ಒಂದು ಸಲ ಪೀರ್‌ಶೆಟ್ಟಿಿಯ ಕುಟುಂಬದವರು ಬಂದು ಈ ಕೊಣೆ ತೆಗೆದು ಅವರ ಕುಟುಂಬದವರು ವಾಸವಾಗುವರು. ಜತೆಗೆ ಅವರಿಗೆ ಇಲ್ಲಿರುವ ‘ಗರ್ಭಗುಡಿ’ಗೆ ಪ್ರವೇಶ ಇದೆ. ವಿಶೇಷ ಎಂದರೆ, ಈ ದರ್ಗಾದಲ್ಲಿ ಗರ್ಭಗುಡಿಯೂ ಇದೆ! ಇವೆಲ್ಲವೂ ಪುರಾತನ ಕಾಲದಲ್ಲಿ ಇಲ್ಲಿದ್ದ ಸಂಪ್ರದಾಯದ ಪಳಿಯುಳಿಕೆಗಳಂತಿವೆ. ಈ ಎರಡೂ ದರ್ಗಾಗಳನ್ನು ಕಟ್ಟಿಿಸಿದವರು ಹಿಂದೂಗಳಾದ ಪೀರಶೆಟ್ಟಿಿ ಮನೆತನದವರು. ಜಾತ್ರೆೆಯಿಂದ ಪ್ರಥಮ ಗಂಧ (ಸಂದಲ)ಏರಿಸುವ ಗೌರವದ ಸ್ಥಾಾನ ಅವರಿಗಿದೆ. ಮೊದಲು ಬಡಕಲ್ಲ ಸಾಹೇಬರ ದರ್ಗಾಕ್ಕೆೆ ಹೋಗಿ ನಂತರ ಹಾಜಿ ಮಸ್ತಾಾನ ದರ್ಗಾಕ್ಕೆೆ ಹೋಗಿ ಹೋಗುವುದು ಪರಂಪರೆಯಾಗಿ ಇಂದಿಗೂ ಹಾಗೇ ಮುಂದುವರೆದುಕೊಂಡು ಬಂದಿದೆ.

ಬಡಕಲ್ ಸಾಹೇಬ
ಬಡಕಲ್ ಸಾಹೇಬರ ಸಮಾಧಿ ದರ್ಗಾದ ಪಕ್ಕದಲ್ಲಿದೆ. ದಿಗಂಬರರಾಗಿದ್ದ ಇವರ ನಿಜ ನಾಮ ಸಂಗೀನ್ ಕಾ ವಲಿ. ಇದರ ಶಿಷ್ಯ ನೂರಜಿ ಸಾಬ್ ಬಡಕಲ್ಲನಿಂದಾಗಿ ಬಡಕಲ್ಲ ಸಾಹೇಬ ಆಗಿದೆ. ಏಳು ನದಿ ನೀರನ್ನು ಒಂದೇ ದಿನದಲ್ಲಿ ತಂದು ಇಲ್ಲಿ ಮೇಲ್ಛಾಾವಣಿ ಕಟ್ಟಬೇಕೆಂಬ ಒಂದು ಮಾತಿದೆ; ಆದರೆ ಅದಿನ್ನೂ ಕೈಗೊಂಡಿಲ್ಲ. ರಾತ್ರಿಿ ಆಯಿತಂದರೇ ಬಡಕಲ್ ದರ್ಗಾದಲ್ಲಿ ಒಬ್ಬರೂ ಇರುವುದಿಲ್ಲ. ಅದೇನೋ ಒಂದು ಭಯ, ಭಕ್ತಿಿಯಿಂದಾಗಿ, ರಾತ್ರಿಿ ತಂಗಲು ನಿಷೇಧವಿದೆ. ಭಕ್ತರು ಉಳಿಯಬೇಕಾದ ಸಂದರ್ಭದಲ್ಲಿ ಹಾಜಿಮಸ್ತಾಾನ್ ದರ್ಗಾದಲ್ಲಿ ಉಳಿದುಕೊಳ್ಳುತ್ತಾಾರೆ.

ಹಿಂದೂಗಳಿಂದಲೂ ರೋಜಾ ಉಪವಾಸ
ಹಾಜಿ ಮಸ್ತಾಾನ್ ದರ್ಗಾದಲ್ಲಿ ಜಾತ್ರ ಅಥವಾ ಉರುಸ್ ನಡೆಯುವ ಸಂದರ್ಭದಲ್ಲಿ ಸುತ್ತ ಮುತ್ತಲಿನ ಜನರು 20 ದಿನಗಳ ಕಾಲ ಜನರು ರೋಜಾ (ಉಪವಾಸ) ಮಾಡುವರು. ವಿಶೇಷ ಎಂದರೆ ಮುಸ್ಲಿಿಮರ ಜತೆ, ಲಿಂಗಾಯತರು ಮತ್ತು ಇತರ ಹಿಂದೂ ಜನಾಂಗದವರು ಕಟ್ಟು ನಿಟ್ಟಿಿನ ನಿರಾಹಾರ ಉಪವಾಸ ಮಾಡುವುದು ವಿಶೇಷ. ಈ ಉಪವಾಸವು ರಂಜಾನ್ ಉಪವಾಸವನ್ನೇ ಪೂರ್ತಿಯಾಗಿ ಹೋಲುತ್ತದೆ ಮತ್ತು ಉಪವಾಸ ಮಾಡುವ ಹಿಂದುಗಳು ಸಹ ದಿನಪೂರ್ತಿ ನಿರಾಹಾರದಲ್ಲಿದ್ದು, ರಾತ್ರಿಿ ಮಾತ್ರ ಊಟ ಮಾಡುವರು. ಈ ವರ್ಷ ಆಗಸ್‌ಟ್‌ 22 ರಿಂದ 24ರವರೆಗೆ ಜಾತ್ರೆೆ ನಡೆಯುವುದು. ಉರುಸ್ (ಪುಣ್ಯತಿಥಿ)ನ ಮೊದಲ ದಿನ ಸಂದಲ್ (ಗಂಧ) ಹೊರಡುವುದು ಬ್ರಾಾಹ್ಮಣರಾದ ರಾಮರಾವ್ ದೇಸಾಯಿ ಮನೆಯಿಂದ ಮರುದಿನ ನೈವೇದ್ಯದ ಜತೆ ಗಲಿಪ್ (ವಸ್ತ್ರ) ಬರುವುದು ಲಿಂಗಾಯಿತರಾದ ಡಾ.ಮಲ್ಲನಗೌಡ ಪಾಟೀಲರ ಮನೆಯಿಂದ. ಮಾರನೇ ದಿನ ಜಾತ್ರೆೆ ಅದ್ಧೂರಿಯಾಗಿ ನಡೆಯುವುದು.
ಮೂರು ದಿನ ಸಂಸ್ಕೃತಿ ಕಾರ್ಯಕ್ರಮ ನಡೆಯಲಿವೆ. ಅಪಾರ ಜನ ಹಿಂದೂ-ಮುಸ್ಲಿಿಂ ಉರುಸ್‌ನಲ್ಲಿ ಭಾಗಿಯಾಗಿ ಸಂಭ್ರಮಿಸುತ್ತಾಾರೆ. ಯಾವ ಭೇದ ಭಾವವಿಲ್ಲದೇ ಶ್ರದ್ಧಾಾ-ಭಕ್ತಿಿಯಿಂದ ಆರಾಧಿಸುತ್ತಾಾರೆ. ಉರುಸ್‌ನಲ್ಲಿ ‘ಮಾದೇಲಿ’ ನೈವೇದ್ಯ ತುಂಬಾ ವಿಶೇಷವಾಗಿದೆ. ಗೋಧಿಯ ರವೆ ಮತ್ತು ಬೆಲ್ಲ ಬಳಸಿ ತಯಾರಿಸುವ ಮಾದೇಲಿ, ಬಹು ಹಿಂದಿನಿಂದಲೂ ಇಲ್ಲಿ ಜನಪ್ರಿಿಯ. ಈ ಉರುಸ್ ಸಮಯದಲ್ಲಿ ಕುರಿ ಬಲಿ ಕೊಡುವರು. ದೀಡ್ ನಮಸ್ಕಾಾರ ಪ್ರದಕ್ಷಿಿಣೆ, ಗಲಿಪ್ (ಪವಿತ್ರ ಬಟ್ಟೆೆ) ಸಮರ್ಪಣೆ, ನಾನಾ ವಿಧಾನದಿಂದ ಹರಕೆಗಳನ್ನು ತಿರೀಸುವರು.

ಸಂತರ ಹಿನ್ನೆೆಲೆ
ಈ ಇಬ್ಬರು ಸೂಫಿ-ಸಂತರು ಯಾವುದೋ ಒಂದು ಯುದ್ಧದ ಸಮಯದಲ್ಲಿ ಬೆದರಿ, ಇಲ್ಲಿಗೆ ಬಂದು ವಾಸ ಮಾಡುತ್ತಿಿದ್ದರು. ಒಂದು ದಿನ ಪೀರಶೆಟ್ಟಿಿ ಮನೆತನದವರು ಕುದುರೆಯ ಮೇಲೆ ಮುತ್ತು-ರತ್ನ ಮಾರಾಟ ಮಾಡಲು ಹೋರಟಾಗ ಈ ಸಂತರು ಎದುರಾಗಿ ಆ ಚೀಲದಲ್ಲಿ ಏನಿದೆ ಎಂದಾಗ, ಇದರಲ್ಲಿ ಕಲ್ಲು-ಮಣ್ಣು ಇದೆ ಅಂತ ಸುಳ್ಳು ಹೇಳಿ ಹೊರಟರು. ಮಾರುಕಟ್ಟೆೆಯಲ್ಲಿ ಮಾರಾಟ ಮಾಡಲು ಚೀಲಗಳನ್ನು ಬಿಚ್ಚಿಿದಾಗ ಅದರಲ್ಲಿ ಮುತ್ತು-ರತ್ನದ ಬದಲು ಕಲ್ಲು-ಮಣ್ಣು ಇದ್ದವು. ಕ್ಷಮೆ ಕೇಳಬೇಕೆಂದು ಮರಳಿ ಊರಿಗೆ ಬಂದಾಗ ಆ ಇಬ್ಬರು ಸೂಫಿ-ಸಂತರು ಹೋದರಂತೆ. ಕಲ್ಲು-ಮಣ್ಣು ಹೋಗಿ ಮುತ್ತು-ರತ್ನವಾಗಲಿ, ನಿಮ್ಮಿಿಬ್ಬರಿಗೆ ನಾವು ಪೂಜಾಸ್ಥಳ ಕಟ್ಟಿಿಸುತ್ತೇವೆ ಎಂದು ಪೀರಶೆಟ್ಟಿಿ ಮನೆತನದವರು ಹರಕೆ ಕಟ್ಟಿಿಕೊಂಡರು ಎಂಬ ಐತಿಹ್ಯ ಇದೆ.
ಹಾಜಿ ಮಸ್ತಾಾನ್ ಸ್ವ ಧರ್ಮದ ಬಗ್ಗೆೆ ಪ್ರೀತಿ ಮತ್ತು ಪರಧರ್ಮಗಳ ಬಗ್ಗೆೆ ಗೌರವವಿದ್ದ ಇಸ್ಲಾಾಂ ಸೂಫಿ ಸಂತ. ಇಸ್ಲಾಾಂ ಧರ್ಮದ ಪಂಚಸೂತ್ರಗಳಲ್ಲಿ ಕೊನೆಯಾದಾದ ಹಜ್ ಯಾತ್ರೆೆ ಇಂದಿನ ವೈಜ್ಞಾಾನಿಕ ಯುಗದಲ್ಲಿ ಸುಲಭ ಎನಿಸಿರಬಹುದು. ಅದರ ಹಿಂದಿನ ಕಾಲದಲ್ಲಿ ಸಾಮಾನ್ಯರಿಗೆ ಅಸಾಧ್ಯವಾದ ಕೆಲಸ. ಅದು ಹಾಜಿ ಮಸ್ತಾಾನ್ ಅವರಂಥ ಆಧ್ಯಾಾತ್ಮಿಿಕ ಸಾಧಕರಿಗೆ ಮಾತ್ರ ಸಾಧ್ಯವಾಗುತ್ತಿಿತ್ತು. ತಮ್ಮ ಯೋಗ ಸಾಧನೆಯಿಂದ ಶತಮಾನಗಳ ಹಿಂದೆಯೇ ಹಜ್ ಯಾತ್ರೆೆ ಮಾಡಿ ಬಂದ ಕೀರ್ತಿ ಇವರಿಗಿದೆ ಎಂಬುದು ಇಲ್ಲಿನ ಪ್ರತೀತಿ.

Leave a Reply

Your email address will not be published. Required fields are marked *