Friday, 3rd February 2023

ಜನವರಿ 31ರವರೆಗೆ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ವಿಸ್ತರಣೆ

ಮುಂಬೈ: ರೂಪಾಂತರಿ ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಹಾ ರಾಷ್ಟ್ರ ಸರ್ಕಾರ 2021 ಜನವರಿ 31ರವರೆಗೆ ರಾಜ್ಯದಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ವಿಸ್ತರಣೆ ಮಾಡಿದೆ.

ಕೋವಿಡ್-19 ವೈರಸ್ ಹರಡುವುದು ಮಹಾರಾಷ್ಟ್ರ ರಾಜ್ಯಕ್ಕೆ ಅಪಾಯಕಾರಿಯಾಗಿದೆ ಎಂದು ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ವೈರಸ್ ಹರಡುವುದನ್ನು ತಡೆಯಲು ಕೆಲವು ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾಂಕ್ರಾಮಿಕ ಕಾಯ್ದೆ 1897 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಲಾಕ್‌ಡೌನ್ ಅನ್ನು ಜನವರಿ 31 ರವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

ದೇಶದಲ್ಲಿ ಕೊರೋನಾದ ಹೊಸ ರೂಪಾಂತರಿ ತಳಿಗಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಕಳೆದ ತಿಂಗಳುಗಳಿಂದ ಮಹಾರಾಷ್ಟ್ರ ಸರ್ಕಾರ ಕೆಲವು ವಲಯಗಳ ಮೇಲಿನ ನಿರ್ಬಂಧ ಗಳನ್ನು ಸಡಿಲಗೊಳಿಸಿತ್ತು.

error: Content is protected !!