Tuesday, 17th September 2019

ಮಾಜಿ ಶಾಸಕ ಉಮೇಶ್ ಭಟ್ ಅವರ ಆತ್ಮಕ್ಕೆ ಶಾಂತಿ ಕೋರಿ ಶೃದ್ಧಾಂಜಲಿ ಅಭೆಯನ್ನು ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು


ಶಿರಸಿ:
ಬೆಂಗಳೂರಿನ ಮಲ್ಲೇಶ್ವರಂನಲ್ಲಿನ
ತಮ್ಮ ಸ್ನೇಹಿತನ‌ಮನೆಗೆ ಹೋದ ಸಂದರ್ಭದಲ್ಲಿ ಹೃದಯಾಘಾತದಿಂದ ನಿನ್ನೆ ಸಂಜೆ ಮೃತಪಟ್ಟ ಮಾಜಿ ಶಾಸಕ ಉಮೇಶ್ ಭಟ್ ಅವರ ಆತ್ಮಕ್ಕೆ ಶಾಂತಿ ಕೋರಿ ಶೃದ್ಧಾಂಜಲಿ ಅಭೆಯನ್ನು ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಉಮೇಶ್ ಭಟ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಉಮೇಶ್ ಭಟ್ ಅವರ ಆಕಸ್ಮಿಕ ಅಗಲುವಿಕೆ ಜಿಲ್ಲೆಗೆ ಹಾಗೂ ಕಾಂಗ್ರೆಸ್ ಗೆ ತುಂಬಲಾರದ ನಷ್ಟವಾಗಿದೆ. ಅವರಂತವರ ಮಾರ್ಗದರ್ಶನ ನಮಗೆ ಇನ್ನೂ ಬೇಕಿತ್ತು. ಆದರೆ ಅವರ ಕನಸನ್ನು ಸಾಕಾರಗೊಳಿಸುವತ್ತ ನಾವು ಕಾರ್ಯಪ್ರವೃತ್ತರಾಗುತ್ತೇವೆ ಎಂದರು.ಈ ಸಂದರ್ಭದಲ್ಲಿ
ಎಸ್ ಕೆ ಭಾಗ್ವತ್, ಸತೀಶ್ ನಾಯ್ಕ, ದೀಪಕ್ ದೊಡ್ಡೂರ್, ರಮೇಶ್ ದುಬಾಶಿ, ಬಸವರಾಜ್ ದೊಡ್ಮನಿ ಮುಂತಾದವರು ಉಪಸ್ಥಿತರಿದ್ದು, ಅಗಲಿದ ಚೇತನಕ್ಕೆ ಒಂದು ನಿಮಿಷದ ಮೌನಾಚರಿಸಲಾಯಿತು.

Leave a Reply

Your email address will not be published. Required fields are marked *