Tuesday, 7th July 2020

ಮನಸ್ಸಿದ್ದರೆ ಮಾರ್ಗ ಎಂಬ ಸಾಧಕರ ವರ್ಗ

*ಮಂಜುಳಾ. ಡಿ
ಗೇಟ್ ತೆಗೆದು, ಬಾಗಿಲು ದಾಟಿ ಒಳಗೆ ಅವಳ ಪಕ್ಕ ಕೂತರೂ ಈ ಲೋಕದವಳೇ ಅಲ್ಲವೇನೋ ಎಂಬಂತೆ ಎಡ ಕೈಲಿ ರಿಮೋಟ್ ಅದ್ಯಾಾವುದೋ ಭಾಷೆಯ ಚಾನಲ್.ಇನ್ನೊೊಂದು ಕೈಲಿ ಒಣಗಿದ ಅರ್ಧರ್ಧ ತಿಂದ ಊಟದ ತಟ್ಟೆೆ ಹಿಡಿದು ಟಿ ವಿ ತಟ್ಟೆೆ ಎರಡನ್ನೂ ಬಿಟ್ಟು ಇನ್ನೆೆಲ್ಲೋ ದಿಟ್ಟಿಿಸುತ್ತಾಾ ಕೂತಿದ್ದಾಳೆ. ಕೈ ಹಿಡಿದು ಕದಲಿಸಿದಾಗ ಬೆಚ್ಚಿಿದವಳಂತೆ ನನ್ನೆೆಡೆಗೆ ತಿರುಗಿದವಳೇ, ಮರಣ ಶಯ್ಯೆೆಯಲ್ಲಿದ್ದವರು ಕಿರುನಗೆ ಬೀರಿದಂತೆ ನಕ್ಕಳು. ಫೋನ್‌ನಲ್ಲಿ ಆಗಲೇ ನಾಲ್ಕಾಾರು ಬಾರಿ ಸಮಾಧಾನ ಹೇಳಿದ್ದರೂ ಆಕೆ ತಹಬದಿಗೆ ಬರದಿದ್ದದು ಅರಿವಾಗಿಯೇ ಭೇಟಿಗೆ ಬಂದದ್ದು. ನೋವು, ಹಿಂಸೆ ಆಕೃತಿಯಾಗಿ ಕೂತಂತೆ ಕಂಡಳು.

ಅತ್ತಾಾರೆ ಅತ್ತು ಬಿಡು ಹೊನಲು ಬರಲಿ ಎನ್ನುವ ಬೇಂದ್ರೆೆಯವರ ಸಾಲು ಒಮ್ಮೆೆ ಸುಳಿದು ಹೋಯಿತು. ನಗುವಿಗಿಂತ ಕಣ್ಣೀರು ಹೆಚ್ಚು ಪ್ರಶಸ್ತ. ಯಾರನ್ನೂ ನೋಡಿಯಾದರೂ ನಗು ಬೀರಬಹುದು. ಅಥವಾ ಯಾರೊಟ್ಟಿಿಗಾದರೂ ಒಂದೆರಡು ತಮಾಷೆ ಮಾತಾಡಿ ನಕ್ಕು ಬಿಡಬಹುದು. ಆದರೆ ಕಣ್ಣು ತುಂಬುವುದು ಅಥವಾ ಅತ್ತು ಹಗುರಾಗಲು ತೀರಾತಿ ತೀರ ಕೆಲವರಿಗಾಗಿಯೇ ತುಂಬುವುದು. ಮತ್ತು ಕೆಲ ಭುಜಗಳ ಆಸರೆಯಲ್ಲಿ ಮಾತ್ರವೇ ಮನದ ಅಳಲು ಕಣ್ಣೀರಾಗಲು ಸಾಧ್ಯ.

ನಡೆದದ್ದು ಇಷ್ಟು. ಶಿಸ್ತು-ಧ್ಯೇಯೋದ್ದೇಶ-ಮೃದು ಸ್ವಭಾವದ ಕುಟುಂಬದ ವಾತಾವರಣದಲ್ಲಿ ಬೆಳೆದ ಆಕೆ ಇರುವ ಹುದ್ದೆ. ಬಹುಶಃ ಆ ಹುದ್ದೆಗೆ ಶಾಲೆ-ಕಾಲೇಜುಗಳಲ್ಲಿ ಪಡೆದ ಮಾರ್ಕು-ಗ್ರೇಡ್. ತರಬೇತಿಯಲ್ಲಿ ಹೇಳಿದ ನಿಯಮಗಳ ಪಾಲನೆ ಕೈಪಿಡಿಗಿಂತ ರೂಢಿಯಾದ ನಿಯಮಗಳ ಪಾಲನೆ ಮತ್ತು ನಮ್ಮ ಟ್ಯಾಾಲೆಂಟ್ ಗಳಿಗಿಂತ ಹಂಚಿಕ ಬಗೆಗಿನ ಟ್ಯಾಾಲೆಂಟ್ ಸಾಧ್ಯವಾಗದೇ ಪ್ರೋೋಫೆಷನಲ್ ಜಲಸಿಯ ಹೈಟ್‌ಸ್‌. ರೂಲ್ಸ್ ಹೇಳಿ ಗೈಡ್ ಮಾಡಬೇಕಾದ ಮೇಲಾಧಿಕಾರಿ ಕೇಳಿದಷ್ಟು ನೀಡಲಿಲ್ಲವೆಂಬ ಕಾರಣಕ್ಕೆೆ ಇತ್ಯಾಾದಿಗಳಿಂದ ಅದೆಷ್ಟು ಕಂಗಾಲಾಗಿದ್ದಳೆಂದರೆ ಆರೋಗ್ಯ ತೀವ್ರವಾಗಿ ಹದಗೆಡಿಸಿಕೊಂಡು ಏಕಾಏಕಿ ರಜೆ ಪಡೆದು ಕೂತು ಬಿಟ್ಟಿಿದ್ದಾಳೆ. ಅದೆಷ್ಟು ಕನಸಿಟ್ಟಿಿದ್ದಳೋ ಅಡ್ಮಿಿನಿಸ್ಟ್ರೇಟೀವ್ ಸರ್ವೀಸ್ ಅಂತ.

ಟಿ ವಿ ಆಫ್ ಮಾಡಿ ಹಾಗೆ ವಾಕ್ ಗೆಂದು ಕೆಳಗಿಳಿಸಿದೆ. ಸಮಯ ಒಂಭತ್ತು ಕಾಲು. ಬಡಾವಣೆಯ ವಿಶಾಲ ರಸ್ತೆೆಗಳು ಅಲ್ಲಲ್ಲಿ ಒಂದೊಂದು ಕಾರು-ಬೈಕು ಬಿಟ್ಟರೆ ಜನಸಂಚಾರವೇ ಇಲ್ಲ. ಎರಡು ಬದಿ ಮರಗಳು. ಚಳಿಗಾಲದ ಕಳಚಿ ಬಿದ್ದ ಎಲೆಗಳ ಸರಸರ. ಹಾಗೆ ಒಂದಷ್ಟು ಹೆಜ್ಜೆೆಗಳ ನಂತರ ಬೇಕರಿಯೊಂದರಲ್ಲಿ ಎರಡು ಕಪ್ ಟೀ ಪಡೆದು ರಸ್ತೆೆ ಪಕ್ಕ ನಿಧಾನವಾಗಿ ಹೆಜ್ಜೆೆ ಹಾಕುತ್ತಿಿದ್ದರೆ, ಅವಳು ಮೆಲ್ಲಗೆ ಉಸುರಿದಳು ‘ಬರೀ ಅಂಧಕಾರ, ದಾರಿಗಳೇ ಕಾಣೋಲ್ಲ ’

ಹೆಜ್ಜೆೆ ನಿಲ್ಲಿಸಿ ಸ್ವಲ್ಪ ಜೋರಾಗಿ ಕೇಳಿದೆ. ಕೊನೆಗೆ ಏನಾಗಬಹುದು. ಅವಳು ತಟಸ್ಥಳಾದಳು. ಈ ಜಾಬ್ ಬಿಟ್ಟರೆ ಬದುಕು ಸಾಧ್ಯವೇ ಇಲ್ಲವಾ? ಅವರು ಮಾಡುವ ಆಪಾದನೆಗಳೆ ನಿಜವಲ್ಲ. ಸಾಕಷ್ಟು ಓದಿದ್ದೀಯ ಈ ಜಾಬ್‌ಗೆ ಮೊದಲು ಸಾಕಷ್ಟು ಫೀಲ್ಡ್ ನಲ್ಲಿ ಓಡಾಡಿದ್ದೀಯ. ಹಿಂದೆ ಕುಟುಂಬದ ಮಾರಲ್ ಸಪೋರ್ಟ್ ಇದೆ. ನಿನಗೆ ಬೇರೆ ಸಾವಿರಾರು ದಾರಿಗಳಿವೆ. ಒಂದೊಮ್ಮೆೆ ಯೋಚಿಸು ಎರಡು ತಿಂಗಳ ಹೊಟ್ಟೆೆ ಹೊತ್ತು ಹದಿನೇಳರ ವಯಸಿನಲ್ಲಿ ಕುಡಿಯುವ ಗಂಡನಿಂದ ಬಡಿಸಿಕೊಂಡು ಮನೆಯಿಂದ ಹೊರಹಾಕಿಸಿಕೊಂಡು ರೈಲ್ವೆೆ ಪ್ಲಾಾಟ್ ಫಾರಂ ಪಾಲಾದ ಸಿಂಧೂ ತಾಯಿ ಸಪ್ಕಾಾಲ್ ಓದಿದ್ದಳಾ? ಹೋಗಲಿ ತನ್ನವರೆಂದು ಕೂಗಲು ಒಬ್ಬರಾದರೂ ದಿಕ್ಕಿಿದ್ದರಾ? ಅದೆಷ್ಟು ಘೋರ ರಾತ್ರಿಿಗಳನ್ನು ಸ್ಮಶಾನದಲ್ಲಿ ಅಡಗಿ ಕಳೆದಳೋ! ಅಂಥ ಸ್ಥಿಿತಿಯಲ್ಲೂ ಅವಳಂಥ ಸಾವಿರಾರು ಅನಾಥರಿಗೆ ಬದುಕೇ ಇಲ್ಲದ ಅವಳು ಬದುಕಾಗಲಿಲ್ಲವಾ? ತೀರಾ ಚಿಕ್ಕ ವಯಸ್ಸಿಿಗೆ ಮದುವೆಯಾಗಿ ಎಲ್ಲಾ ಚೆನ್ನಾಾಗಿರುವಾಗ ಚೆನ್ನಾಾಗೇ ಇದ್ದ ಗಂಡ ಬೆನ್ನು ಮೂಳೆ ಮುರಿದುಕೊಂಡು ಹಾಸಿಗೆಗೆ ಬಿದ್ದಕೂಡಲೇ ಕೈಬಿಟ್ಟ ಪಾಕಿಸ್ತಾಾನದ ಮುನ್ಸಿಿಬಾ ಹಾಸಿಗೆ – ವ್ಹೀಲ್ ಚೇರ್‌ನಲ್ಲೇ ದೊಡ್ಡ ಕಲಾವಿದೆಯಾಗಿ ತನ್ನಂತವರ ಬದುಕ ಬೆಳಕಾಗಲಿಲ್ಲವಾ?

ಹತ್ತೊೊಂಭತ್ತರ ವಯಸ್ಸಿಿಗೆ ಮೂರು ಮಕ್ಕಳ ತಾಯಿಯಾಗಿ ಗಂಡನನ್ನು ಕಳೆದುಕೊಂಡು ಬೀದಿಗೆ ಬಿದ್ದ ಸುಭಾಷಿಣಿ ಮಿಸ್ತ್ರಿಿ ಮುಸುರೆ ವತಿಕ್ಕಿಿ, ಶೂ ಪಾಲೀಶ್, ಟಾಯ್ಲೆೆಂಟ್ ಕ್ಲೀನಿಂಗ್‌ನಿಂದ ಎಲ್ಲವನ್ನೂ ಗೌರವದಿಂದ ಮಾಡಿ ಕೊನೆಗೆ ಉಸಿರು-ಉಸಿರಿನಲ್ಲಿ ಧ್ಯಾಾನಿಸಿದ ಉಚಿತ ಆಸ್ಪತ್ರೆೆ ಸ್ಥಾಾಪಿಸಲಿಲ್ಲವೇ? ಬಾಲ್ಯವಿವಾಹ, ಕಿರುಕುಳ, ದೌರ್ಜನ್ಯ ಹತಾಶೆಯನ್ನೇ ಉಂಡ ಕಮಲಾ ಉದ್ಯಮಿಯಾಗಿ ಬೆಳೆದ ಪರಿ.

ಇಷ್ಟಕ್ಕೂ ಇಂಥ ಉದಾಹರಣೆಗಳನ್ನು ನಮಗೆಲ್ಲಾ ಹೇಳುತ್ತಿಿದ್ದವಳು ನೀನೇ. ಈಗ ಏನಾಯ್ತು? ಹೌದು ಕೆಲವೊಮ್ಮೆೆ ದಾರಿಗಳೇ ಉಳಿಯದಂತೆ ಅಂಧಕಾರ ಕವಿಯುತ್ತದೆ. ಅಲ್ಲಿಗೆ ನಿಲ್ಲಿಸಿದರೆ ಇಷ್ಟರವರಗೆ ನಡೆಸಿದ ಹೋರಾಟಕ್ಕೆೆ ಬಂದ ಬೆಲೆಯಾದರೂ ಏನು?
ಬದುಕಿನಲ್ಲಿ ಬಂದ ಕಷ್ಟಗಳು ಶಾಶ್ವತವಲ್ಲ. ಅದನ್ನು ಆತ್ಮವಿಶ್ವಾಾಸ ಮತ್ತು ಧೈರ್ಯದಿಂದ ಎದುರಿಸಿ ಸಾಧನೆಯತ್ತ ಮುನ್ನುಗ್ಗಬೇಕು. ಅವಮಾನಿಸಿದವರೇ ಸನ್ಮಾಾನಿಸುವಂತಾಗಬೇಕು. ನಗುವವರ ಮುಂದೆ ನಗೆಪಾಟಲು ಎಂಬಂತೆ ಬದುಕಾಗಬಾರದು.

Leave a Reply

Your email address will not be published. Required fields are marked *