Friday, 3rd February 2023

ಮಾನ್ವಿ ಪೋಲಿಸ್ ಠಾಣೆಗೆ ಮೊದಲ ಅಧಿಕಾರಿ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಕರವೇ ಸನ್ಮಾನ

ಮಾನ್ವಿ: ತಾಲ್ಲೂಕಿನ ಮಾನ್ವಿ ಪೊಲೀಸ್ ಠಾಣೆಯು ಮೊದಲು ಸರ್ಕಲ್ ವ್ಯಾಪ್ತಿಗೆ ಬರುತ್ತಿತ್ತು ಈಗ ಮೇಲ್ದರ್ಜೆಗೆ ಏರಿಸಿರುವ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ನಗರದ ಪೊಲೀಸ್‌ ಠಾಣೆ ನೂತನ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಆಗಮಿಸಿರುವ ಮಹಾದೇವ ಪಂಚಮುಖಿ ಅವ ರನ್ನು ಕಚೇರಿಯಲ್ಲಿ ಶಿವರಾಮೇ ಗೌಡರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕ ವತಿಯಿಂದ ಸನ್ಮಾನಿಸಲಾಯಿತು.

ಗುಲಬರ್ಗಾ ಜಿಲ್ಲೆಯ ಅಫಜಲಪೂರ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿದ ಮಹಾದೇವ ಪಂಚಮುಖಿ ಅವರು ಪಿ.ಐ ಆಗಿ ಸೇವೆ ಸಲ್ಲಿಸಿದ್ದು, ಇದೀಗ ನಗರದ ಮಾನ್ವಿ ಠಾಣೆಗೆ ಆಗಮಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಆನಂದಸ್ವಾಮಿ ಹಿರೇಮಠ, ಭೀಮಣ್ಣ ಮುದಗಲ್, ಮಹಾಂತೇಶ ಹೂಗಾರ, ಶ್ರೀಕಾಂತ್ ಗುತ್ತೇದಾರ್, ಚಂದ್ರು ನಾಯಕ, ಅಂಜಿ ನಾಯಕ್ ಮುಷ್ಟೂರು, ವಿಜಯ್ ಕುಮರ್ ಸಂಕೇಶ್ವರ್, ದೇವರಾಜ್ ನಾಯಕ, ದೀಪಕ್ ಕುಮಾರ, ನರಸಿಂಹ ಏರ್ ಟೆಲ್ ಸೇರಿದಂತೆ ಸಂಘಟನೆ ಕಾರ್ಯಕರ್ತರು ಸ್ವಾಗತಿಸಿದರು.

error: Content is protected !!