Monday, 30th January 2023

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮನೀಶ್ ಪಾಂಡೆ ಸಾರಥ್ಯ!

#RoyalChallengersBangalore

ನವದೆಹಲಿ : ವಿರಾಟ್ ಕೊಹ್ಲಿ ಬದಲಿಗೆ ಯುವ ಕ್ರಿಕೆಟಿಗ, ಕನ್ನಡಿಗ ಮನೀಶ್ ಪಾಂಡೆ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕರಾಗಲಿದ್ದಾರೆ ಎನ್ನಲಾಗಿದೆ.

ಭಾರತೀಯರೊಬ್ಬರು ಚೊಚ್ಚಲ ಐಪಿಎಲ್ ಶತಕ ಬಾರಿಸಿದ ದಾಖಲೆಯನ್ನ ಮನೀಶ್ ಪಾಂಡೆ ಹೊಂದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್, ಪುಣೆ ವಾರಿಯರ್ಸ್ ಇಂಡಿಯಾ ಮತ್ತು ಸನ್ ರೈಸರ್ಸ್ ಹೈದರಾಬಾದ್ʼನಂತಹ ಹಲವಾರು ಐಪಿಎಲ್ ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ.

ಮನೀಶ್ ಪಾಂಡೆ ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಂತಹ ದೇಶೀಯ ಪಂದ್ಯಾವಳಿಗಳಲ್ಲಿ ಕರ್ನಾಟಕ ತಂಡವನ್ನ ಮುನ್ನಡೆ ಸಿದ್ದಾರೆ. ಆರಂಭಿಕ ಆಟಗಾರ ಕೊಹ್ಲಿ 2021ರ ಐಪಿಎಲ್ ಮುಕ್ತಾಯದ ನಂತ್ರ ಆರ್‌ಸಿಬಿಯ ನಾಯಕತ್ವವನ್ನ ತ್ಯಜಿಸಲು ನಿರ್ಧರಿಸಿದ್ದರು.

ಮನೀಶ್‌ ಪಾಂಡೆ ನಾಯಕನ ಜವಾಬ್ದಾರಿಯ ಜೊತೆಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಈ ಮೂಲಕ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ. ಪಾಂಡೆ ಇದುವರೆಗೆ 154 ಐಪಿಎಲ್ ಪಂದ್ಯಗಳನ್ನ ಆಡಿದ್ದು, 30.68 ರ ಸರಾಸರಿಯಲ್ಲಿ 3560 ರನ್ ಗಳಿಸಿದ್ದಾರೆ.

error: Content is protected !!