Tuesday, 21st March 2023

ಇಂದಿನಿಂದ ಮಂತ್ರಾಲಯ ದರ್ಶನಕ್ಕೆ ಅವಕಾಶ

ರಾಯಚೂರು : ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆ ಶುರುವಾಗಿದ್ದು, ಇಂದಿನಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ ಬೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಗುರುರಾಘವೇಂದ್ರ ಸ್ವಾಮೀಯ ದರ್ಶನಕ್ಕೆ ಸಮಯ ನಿಗದಿ ಮಾಡಿರುವ ಶ್ರೀಮಠ, ನಿತ್ಯ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮತ್ತೆ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ.

ಶ್ರೀಮಠ ಆವರಣದಲ್ಲಿ ಕರೋನಾ ನಿಯಮ ಪಾಲನೆ ಕಡ್ಡಾಯವಾಗಿದ್ದು, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಬೇಕು. ಕರೋನಾ ನಿಯಮಗಳನ್ನು ಪಾಲಿಸಿ ರಾಯರ ದರ್ಶನ ಪಡೆಯುವಂತೆ ಆಡಳಿತ ಮಂಡಳಿ ಭಕ್ತರಿಗೆ ತಿಳಿಸಿದೆ.

error: Content is protected !!