Monday, 13th July 2020

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಬೆಂಗಳೂರು: ಕಳೆದ 10 ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ವ್ಯಕ್ತಿಿಯನ್ನು ಕೊಲೆ ಮಾಡಿರುವ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಾಪ್ತಿಿಯ ಶ್ರೀನಿವಾಸನಗರದಲ್ಲಿ ನಡೆದಿದೆ. ಸುದರ್ಶನ್ (20)ಮೃತ ದುರ್ದೈವಿ. ಸುದರ್ಶನ್ ಬ್ಯಾಾಟರಾಯನಪುರ, ಗಿರಿನಗರ, ಹನುಮಂತನಗರ ಠಾಣೆಗಳಲ್ಲಿ ಕಳ್ಳತನ, ಸುಲಿಗೆ ಇತ್ಯಾಾದಿ ಪ್ರಕರಣದ ಆರೋಪಿಯಾಗಿದ್ದ. ಬುಧವಾರ ಬೆಳಗ್ಗೆೆ 11 ಗಂಟೆ ಹೊತ್ತಿಿಗೆ ಮಾರಕಾಸ್ತ್ರಗಳಿಂದ ಕೊಚ್ಚಿಿ ಕೊಲೆ ಮಾಡಲಾಗಿದೆ. ಇನ್ನು ಯುವತಿಗೋಸ್ಕರ ಸುದರ್ಶನ್‌ನನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಈ ಹಿಂದೆ ಸುದರ್ಶನ್ ಹೆಸರು ರೌಡಿ ಶೀಟರ್ ಪಟ್ಟಿಿಯಲ್ಲಿದ್ದು, ಸನ್ನಡತೆಯ ಆಧಾರದ ಮೇಲೆ ಪೊಲೀಸರು ರೌಡಿಶೀಟರ್ ಪಟ್ಟಿಿಯಿಂದ ಕೈಬಿಟ್ಟಿಿದ್ದರು. ಘಟನೆ ಸಂಬಂಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *