Monday, 3rd October 2022

ಮರಾಠಿ ನಟ ಪ್ರದೀಪ್ ಪಟವರ್ಧನ್ ಹೃದಯಾಘಾತದಿಂದ ನಿಧನ

ಮುಂಬೈ: ಮರಾಠಿ ನಟ ಪ್ರದೀಪ್ ಪಟವರ್ಧನ್( 65 ವರ್ಷ) ಹೃದಯಾಘಾತ ದಿಂದ ಮಂಗಳವಾರ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಟವರ್ಧನ್ ದಕ್ಷಿಣ ಮುಂಬೈನ ಗಿರ್ಗಾಂವ್‌ನಲ್ಲಿರುವ ತಮ್ಮ ನಿವಾಸ ದಲ್ಲಿದ್ದರು. ಚಷ್ಮೆ ಬಹದ್ದಾರ್, ಏಕ್ ಶೋಧ್ ಮತ್ತು ಮೀ ಶಿವಾಜಿರಾಜೆ ಭೋಸ್ಲೆ ಬೋಲ್ಟಾಯ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಪ್ರದೀಪ್ ಹೆಸರುವಾಸಿ ಯಾಗಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪಟವರ್ಧನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

‘ಮರಾಠಿ ಚಿತ್ರರಂಗದಲ್ಲಿ ತಮ್ಮ ಆಕರ್ಷಕ ನಟನೆಯಿಂದ ಪ್ರೇಕ್ಷಕರ ಹೃದಯವನ್ನು ಆಳಿದ ಎವರ್ ಗ್ರೀನ್ ನಟ ಪ್ರದೀಪ್ ಪಟವರ್ಧನ್ ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಮರಾಠಿ ಕಲಾ ಜಗತ್ತು ಒಬ್ಬ ಮಹಾನ್ ಕಲಾವಿದನನ್ನು ಕಳೆದುಕೊಂಡಿದೆ’ ಎಂದು ಸಿಎಂ ಟ್ವಿಟ್ಟರ್‌ನಲ್ಲಿ ಮರಾಠಿಯಲ್ಲಿ ಬರೆದಿದ್ದಾರೆ.