Friday, 27th May 2022

ಮರುಭೂಮಿಯಲ್ಲಿ ರಾಜಹಂಸಗಳ ಕಲರವ

*ಕೆ ಪಿ ಸತ್ಯನಾರಾಯಣ

ದುಬೈ ನಗರವು ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿದ್ದು, ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ ನಗರ. ಅವುಗಳಲ್ಲಿ ರಸ್ ಅಲ್ ಖೋರ್ (ಕೊಲ್ಲಿಯ ಭೂಶಿರ) ಪಕ್ಷಿಧಾಮವು ಪ್ರಕೃತಿಪ್ರಿಯರ ಮನಸೆಳೆಯುತ್ತದೆ.

ದುಬೈ ನಗರ ಗಗನಚುಂಬಿ ಕಟ್ಟಡಗಳಿಗೆ, ಅಸಂಖ್ಯಾಾತ ಪ್ಯಾಾಪಾರೀ ಮಾಲ್‌ಗಳಿಗೆ ಪ್ರಖ್ಯಾಾತ. ಇಲ್ಲೊಂದು ಫ್ಲೆೆಮಿಂಗೋಗಳ ಪಾರ್ಕ್ ಇದೆ. ಅಲ್ಲಿಗೆ ಫ್ಲೆೆಮಿಂಗೋಗಳಲ್ಲದೆ ಇನ್ನೂ ಬೇರೆ ಬೇರೆ ಜಾತಿಯ ಸಾವಿರಾರು ಪಕ್ಷಿಗಳು ಬರುತ್ತವೆ ಎಂದು ಕೇಳಿದಾಗ ಆಶ್ಚರ್ಯವಾಯಿತು.

ದುಬೈ ನಗರದಿಂದ ದುಬೈ ಮಾಲ್ ಮತ್ತು ಪ್ರಪಂಚದ ಅತಿ ಎತ್ತರದ ಮಾನವ ನಿರ್ಮಿತ ಕಟ್ಟಡವಾದ ಬುರ್ಜ್ ಖಲೀಫಾ ದಾಟಿ ಸುಮಾರು ಎಂಟು ಮೈಲಿಗಳಷ್ಟು ಕ್ರಮಿಸಿದಾಗ ರಸ್ ಅಲ್ ಖೋರ್ ಪಕ್ಷಿಧಾಮವು ಕಣ್ಣಿಿಗೆ ಬೀಳುತ್ತದೆ. ಪೂರ್ವ ಆಫ್ರಿಿಕಾ ಮತ್ತು ದಕ್ಷಿಣ ಏಷ್ಯಾಾಗಳ ನಡುವೆ ಹಾರುವ ವಲಸೆ ಪಕ್ಷಿಗಳಿಗೆ ರಸ್ ಅಲ್ ಖೋರ್ ಪಕ್ಷಿಧಾಮವು ಒಂದು ತಂಗುದಾಣದಂತೆ ಇರುವುದರಿಂದ ಅಸಂಖ್ಯಾಾತ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ. ಸುಮಾರು ನೂರೈವತ್ತಕ್ಕೂ ಹೆಚ್ಚಿಿನ ಜಾತಿಯ ಪಕ್ಷಿಗಳನ್ನು ಇಲ್ಲಿ ಗುರುತಿಸಲಾಗಿದ್ದರೂ ಪ್ರವಾಸಿಗರ ಮನ ಸೆಳೆಯುವುದು ಇಲ್ಲಿ ವರ್ಷಪೂರ್ತಿ ಕಾಣಸಿಗುವ ಪಿಂಕ್ ಫ್ಲೆೆಮಿಂಗೋ ಅಥವಾ ರಾಜಹಂಸಗಳು. ಈ ಪಕ್ಷಿಧಾಮವು 6.2 ಚದರ ಕಿಲೋಮೀಟರುಗಳಷ್ಟು ವ್ಯಾಾಪಿಸಿಕೊಂಡಿದ್ದು ಹಕ್ಕಿಿಗಳಿಗೆ ಬೇಕಾದ ಮರಗಿಡಗಳು, ಜೌಗು ಪ್ರದೇಶ, ನೀರಿನ ಆಸರೆ ಇವೆಲ್ಲವನ್ನೂ ಹೊಂದಿದೆ.

1985ರಲ್ಲಿ ಈ ಜಲತಾಣವನ್ನು ಅಧಿಕೃತವಾಗಿ ಪಕ್ಷಿಧಾಮ ಎಂದು ಘೋಷಿಸಲಾಯಿತು. 1998ರಲ್ಲಿ ಇದನ್ನು ವಿನಾಶದ ಅಂಚಿನಲ್ಲಿರುವ ಕ್ಷೇತ್ರವೆಂದು ಗುರುತಿಸಲಾಗಿತ್ತಾಾದರೂ, 2003ರಲ್ಲಿ ರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ನಂತರ ಹಂತಹಂತವಾಗಿ ವಿವಿಧ ಅಭಿವೃದ್ಧಿಿ ಕಾರ್ಯಗಳನ್ನೂ ಕೈಗೊಳ್ಳಲಾಗುತ್ತಿಿದೆ. ಈಗ ಅಂತಾರಾಷ್ಟ್ರೀಯ ಪಕ್ಷಿ ಸಂಘಟನೆಯೂ ಈ ಪಕ್ಷಿಧಾಮವನ್ನು ಪ್ರಪಂಚದ ಮುಖ್ಯ ಪಕ್ಷಿಧಾಮಗಳಲ್ಲೊಂದು ಎಂದು ಗುರುತಿಸಿದೆ.
ಒಮ್ಮೆೆ ಇಪ್ಪತ್ತು ಮಂದಿಗೆ ಮಾತ್ರ ಪ್ರವೇಶ
ಪಕ್ಷಿಧಾಮದ ಬಳಿ ವಾಹನದಿಂದ ಇಳಿದ ಕೂಡಲೇ ಪಕ್ಷಿಧಾಮದ ನಿಯಮಾವಳಿಗಳನ್ನು ಸೂಚಿಸುವ ಫಲಕ ನಮ್ಮನ್ನು ಎದುರುಗೊಳ್ಳುತ್ತದೆ.

ಪಕ್ಕದಲ್ಲೇ ಇರುವ ಮಾಹಿತಿ ಕೇಂದ್ರದಲ್ಲಿ ನಮ್ಮ ಗುರುತು ಪತ್ರವನ್ನು ತೋರಿಸಿ, ಎರಡೂ ಕಡೆ ತಡಿಕೆ ಹಾಕಿ ಮಾಡಿರುವ ಮಾರ್ಗದಲ್ಲೇ ವೀಕ್ಷಣಾಲಯಕ್ಕೆೆ ಹೋಗಬೇಕು. ಈ ಪಕ್ಷಿಧಾಮದ ಸುತ್ತ ಬೇಲಿ ನಿರ್ಮಿಸಿದ್ದು, ಅಲ್ಲಿನ ಸಿಬ್ಬಂದಿ ಹೊರತು ಬೇರೇ ಯಾರಿಗೂ ಪ್ರವೇಶವಿಲ್ಲ. ಒಮ್ಮೆೆಗೆ ಸುಮಾರು ಇಪ್ಪತ್ತು ಮಂದಿಯಂತೆ ಒಳಗೆ ಬಿಡುತ್ತಾಾರೆ. ಆ ಕೊಠಡಿಯೊಳಗಿನಿಂದಲೇ ನಾವು ಫ್ಲೆೆಮಿಂಗೋಗಳನ್ನು ನೋಡಬೇಕು. ಉತ್ತಮವಾದ ದುರ್ಬೀನುಗಳನ್ನು ಅಲ್ಲಿ ಇರಿಸಿದ್ದು ಅವನ್ನೂ ಬಳಸಿಕೊಳ್ಳಬಹುದು. ಗುಂಪು ಗುಂಪು ಫ್ಲೆೆಮಿಂಗೋಗಳ ಹಾರಾಟ, ಚೆಲ್ಲಾಟ, ಗುದ್ದಾಟ, ಮುದ್ದಾಟ ನೋಡುವುದಕ್ಕೆೆ ಎರಡು ಕಣ್ಣು ಸಾಲದು. ಹೊತ್ತು ಹೋದದ್ದೇ ತಿಳಿಯುವುದಿಲ್ಲ. ಆದರೆ ಪ್ರವಾಸಿಗರು ಹೆಚ್ಚಾಾಗಿದ್ದರೆ ಸಮಯದ ಮಿತಿಯನ್ನು ಅನುಸರಿಸಬೇಕಾಗುವುದುಂಟು. ನೀರಿನಲ್ಲಿ ಜಲಚರಗಳ ರೂಪದಲ್ಲಿ ಸಹಜವಾಗಿ ಸಿಗುವ ಆಹಾರದ ಜತೆಗೆ, ಅಲ್ಲಿನ ಸಿಬ್ಬಂದಿ ಪ್ರತಿನಿತ್ಯ ಮಧ್ಯಾಾಹ್ನ ಫ್ಲೆೆಮಿಂಗೋಗಳಿಗೆ ಆಹಾರ ಹಾಕುತ್ತಾಾರೆ. ಹಾಗಾಗಿ ಫ್ಲೆೆಮಿಂಗೋಗಳಿಗೆ ಇದೊಂದು ಉತ್ತಮ ವಂಶಾಭಿವೃದ್ಧಿಿ ಸ್ಥಳವಾಗಿಯೂ ಪರಿಣಮಿಸಿದೆ.
ಈ ಪಕ್ಷಿಧಾಮಕ್ಕೆೆ ಪ್ರವೇಶ ಉಚಿತ. ಶನಿವಾರದಿಂದ ಗುರುವಾರದವರೆಗೆ ಬೆಳಿಗ್ಗೆೆ ಒಂಭತ್ತರಿಂದ ಸಂಜೆ ನಾಲ್ಕರವರೆಗೆ ವೀಕ್ಷಣೆಗೆ ಅವಕಾಶವಿದೆ. ಶುಕ್ರವಾರ ರಜಾದಿನ. ತುಂಬಾ ಅಚ್ಚುಕಟ್ಟಾಾಗಿ ನಿರ್ವಹಿಸಲ್ಪಟ್ಟಿಿರುವ ರೀತಿ ಅವರ ಪರಿಸರ ಕಾಳಜಿಯನ್ನು ತೋರಿಸುತ್ತದೆ. ರಸ್ ಅಲ್ ಖೋರ್ ಪಕ್ಷಿಧಾಮವು ಸಂಯುಕ್ತ ಅರಬ್ ರಾಷ್ಟ್ರದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಪರಂಪರೆಯ ಪ್ರಮುಖ ಭಾಗವಾಗಿ ಗುರುತಿಸಿಕೊಂಡಿದೆ. ದುಬೈ ನಗರದ ಫ್ಲೆೆಮಿಂಗೋಗಳ ಪಾರ್ಕ್ ಭೇಟಿ ನಮ್ಮ ಮನದಲ್ಲೊಂದು ಅವಿಸ್ಮರಣೀಯ ಅನುಭವವನ್ನು ಉಳಿಸಿ ಮತ್ತೊೊಮ್ಮೆೆ ಭೇಟಿ ಕೊಡಬೇಕೆಂಬ ಹಂಬಲವನ್ನು ಹುಟ್ಟುಹಾಕುತ್ತದೆ.